Punjab Bank Recruitment: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಉದ್ಯೋಗವಕಾಶ, ಆಸಕ್ತರು ಅರ್ಜಿ ಸಲ್ಲಿಸಿ.!

 

Bank Recruitment

ಸಾಮಾನ್ಯವಾಗಿ ಎಲ್ಲಾ ಯುವಕರಿಗೂ ಕೂಡ ಬ್ಯಾಂಕಿಂಗ್ ಹುದ್ದೆಗಳು ಇಷ್ಟವಾಗುತ್ತದೆ. ಕಡಿಮೆ ಕೆಲಸದ ಒತ್ತಡ ‌, ಬೆಳಗ್ಗೆ 10 ರಿಂದ 5 ಗಂಟೆ ಅವಧಿಯ ಕೆಲಸ, ಹೆಚ್ಚಿನ ರಜಾ ದಿನಗಳು, ಹೇಳಿಕೊಳ್ಳುವುದಕ್ಕೂ ಕೂಡ ಡೀಸೆಂಟ್ ಜಾಬ್ ಹೇಗೆ ಹತ್ತಾರು ಅವರದ್ದೇ ಆದ ಕಾರಣಗಳು ಇರುತ್ತವೆ. ಹೀಗಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹುದ್ದೆ ಗಿಟ್ಟಿಸಿಕೊಳ್ಳಬೇಕು ಎಂದು ಸಾಕಷ್ಟು ಜನರು ಸಮಯ ವ್ಯಯಿಸಿ ಅಧ್ಯಯನ ಕೂಡ ಮಾಡುತ್ತಿರುತ್ತಾರೆ.

WhatsApp Group Join Now
Telegram Group Join Now

ಇದಲ್ಲದೆ ಬ್ಯಾಂಕಿಂಗ್ ಕಡೆಯಿಂದಲೇ ಕೂಡ ಕೆಲವು ಹುದ್ದೆಗಳಿಗೆ ಭರ್ತಿ ಮಾಡಿಕೊಂಡು ತರಬೇತಿ ಕೂಡ ನೀಡಲಾಗುತ್ತದೆ ಇಂತಹ ತರಬೇತುದಾರ ಹುದ್ದೆಗಳಿಗೆ ಸೇರಿ ಬ್ಯಾಂಕ್ ಕ್ಷೇತ್ರದಲ್ಲಿ ಉತ್ತಮವಾದ ಭವಿಷ್ಯವನ್ನು ಕಟ್ಟಿಕೊಳ್ಳಬಹುದು ಈ ಬಗ್ಗೆ ಆಸಕ್ತಿ ಇರುವವರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಈಗ ನೋಟಿಫಿಕೇಶನ್ ಹೊರಟಿಸಿದೆ.

ಆಸಕ್ತರು ಈ ಸದಾವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಲ್ಲಿ ಎನ್ನುವ ಉದ್ದೇಶದಿಂದ ಈ ಲೇಖನದಲ್ಲಿ ನೇಮಕಾತಿ ಕುರಿತ ಪ್ರಮುಖ ಅಂಶಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಪೂರ್ತಿ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.

ನೇಮಕಾತಿ ಸಂಸ್ಥೆ:- ಪಂಜಾಬ್ ನ್ಯಾಷನಲ್ ಬ್ಯಾಂಕ್
ಹುದ್ದೆ ಹೆಸರು:- ಅಪ್ರೆಟಿಸ್ ಹುದ್ದೆಗಳು (ತರಬೇತುದಾರರು)
ಹುದ್ದೆಗಳ ವಿವರ:-
* ಭಾರತದಾತ್ಯಂತ – 2700 ಹುದ್ದೆಗಳು
* ಕರ್ನಾಟಕದಲ್ಲಿ – 22 ಹುದ್ದೆಗಳು

ಉದ್ಯೋಗ ಸ್ಥಳ:- ಭಾರತದ ವಿವಿಧ ಭಾಗಗಳಲ್ಲಿ ಇರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಶಾಖೆಗಳಲ್ಲಿ ನೇಮಕಗೊಳ್ಳಲು ಒಪ್ಪುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ವೇತನ ಶ್ರೇಣಿ:-

* ಆಯ್ಕೆ ಆಗುವ ಅಭ್ಯರ್ಥಿಗಳಿಗೆ ತರಬೇತಿ ಸಮಯದಲ್ಲಿ ಸ್ಟೈಪೆಂಡ್ ಕೂಡ ನೀಡಲಾಗುತ್ತದೆ
* ಗ್ರಾಮೀಣ ಭಾಗದ ಬ್ಯಾಂಕ್ ಶಾಖೆಗೆ ನೇಮಕಗೊಳ್ಳುವವರಿಗೆ ರೂ.10,000
* ನಗರ ಪ್ರದೇಶಗಳಲ್ಲಿ ನಿಯೋಜನೆಗೊಳ್ಳುವವರಿಗೆ ರೂ.12,000 * ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ನೇಮಕಗೊಳ್ಳುವವರಿಗೆ ರೂ.15,000

ಶೈಕ್ಷಣಿಕ ವಿದ್ಯಾರ್ಹತೆ:-
* ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಯಾವುದೇ ವಿಭಾಗದಲ್ಲಿ ಪದವಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 20 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 28 ವರ್ಷಗಳು
*  30-06-1996 ರಿಂದ 30-06-2004 ರ ಒಳಗೆ ಜನಿಸಿದವರು ಅರ್ಜಿ ಸಲ್ಲಿಸಬಹುದು

ವಯೋಮಿತಿ ಸಡಿಲಿಕೆ:-
* OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 3 ವರ್ಷಗಳು
* SC/ST ಮತ್ತು ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಲಿಕ್ಕೆ ಇರುತ್ತದೆ

ಅರ್ಜಿ ಸಲ್ಲಿಸುವ ವಿಧಾನ:-

* ಆನ್ಲೈನ್ ವಿಧಾನದಲ್ಲಿಯೇ ಅರ್ಜಿ ಸಲ್ಲಿಸಬೇಕು
* https://bfsissc.com/apprentice_form.php ವೆಬ್ ಸೈಟ್ ಗೆ ಹೋಗಿ, Apprenticeship Application Form ಎನ್ನುವ ಲಿಂಕ್ ಕ್ಲಿಕ್ ಮಾಡಿ. ಕೇಳಲಾಗುವ ವಿವರಗಳನ್ನು ತುಂಬಿಸಿ, ದಾಖಲೆಗಳನ್ನು ಸಲ್ಲಿಸಿ ಅರ್ಜಿ ಶುಲ್ಕವನ್ನು ಆನ್ಲೈನಲ್ಲಿಯೇ ಪಾವತಿ ಮಾಡಿ, ಅರ್ಜಿ ಸಲ್ಲಿಕೆ ಪೂರ್ತಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪಡೆದುಕೊಳ್ಳಿ.

ಅರ್ಜಿ ಶುಲ್ಕ:-

* ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಅಥವಾ UPI ಆಪ್ ಮೂಲಕ ಪಾವತಿ ಮಾಡಬಹುದು
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.800.
* ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ.600.
* PWD ಅಭ್ಯರ್ಥಿಗಳಿಗೆ ರೂ.400.

ಆಯ್ಕೆ ವಿಧಾನ:-
* ಆನ್ಲೈನಲ್ಲಿ ಕಂಪ್ಯೂಟರ್ ಬೇಸ್ಡ್ ಎಕ್ಸಾಮ್ ನಡೆಸಿ ಅರ್ಹರನ್ನು ಆಯ್ದುಕೊಳ್ಳಲಾಗುತ್ತದೆ.

ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಕ ದಿನಾಂಕ – 30 ಜೂನ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 14 ಜುಲೈ, 2024
* ಆನ್‌ಲೈನ್‌ ನಲ್ಲಿ ಪರೀಕ್ಷೆ ನಡೆಯುವ ದಿನಾಂಕ – 28 ಜುಲೈ, 2024.

ಪರೀಕ್ಷಾ ವಿಷಯ:-

* ಜೆನೆರಲ್ ಇಂಗ್ಲಿಷ್
* ಫೈನಾನ್ಷಿಯಲ್ ಅವಾರ್ನೆಸ್‌
* ಜೆನೆರಲ್ ಇಂಗ್ಲಿಷ್
* ಕ್ವಾಂಟಿಟೇಟಿವ್ ಅಂಡ್ ರೀಸನಿಂಗ್ ಆಪ್ಟಿಟ್ಯೂಡ್
* ಕಂಪ್ಯೂಟರ್ ನಾಲೆಡ್ಜ್‌
* ಈ ಮೇಲಿನ ವಿಭಾಗಗಳಿಂದ ಒಟ್ಟು 60 ನಿಮಿಷದ ಪರೀಕ್ಷೆಯನ್ನು 100 ಅಂಕಗಳಿಗೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment