Jobs: ಗ್ರಾಮ ಲೆಕ್ಕಿಗರು, ಭೂಮಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ.!

Jobs

ಸರ್ಕಾರಿ ಹುದ್ದೆ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಗೂ ಆತನ ಜೀವಮಾನದ ಕನಸು. ಕೆಲವು ವಿದ್ಯಾರ್ಥಿಗಳು ಉತ್ತಮ ಮಾರ್ಗದರ್ಶನದೊಂದಿಗೆ ಶಾಲಾ ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿಗೆ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನಹರಿಸಿ ಚಿಕ್ಕ ವಯಸ್ಸಿಗೆ ಸರ್ಕಾರಿ ನೌಕರರಾಗಿರುತ್ತಾರೆ.

ಹೀಗೆ ಕಡಿಮೆ ವಯಸ್ಸಿನಲ್ಲಿ ನೇಮಕವಾಗುವುದರಿಂದ ಹಣಕಾಸಿನ ಭದ್ರತೆ, ಕುಟುಂಬಕ್ಕೆ ಹೆಮ್ಮೆಯ ಜೊತೆಗೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಲು ಇದು ಅಡಿಪಾಯವಾಗುತ್ತದೆ ಎನ್ನುವ ಅಭಿಪ್ರಾಯ ಆದರೆ ಇನ್ನೂ ಕೆಲವರ ಜೀವನ ವಿಭಿನ್ನವಾಗಿರುತ್ತದೆ.

WhatsApp Group Join Now
Telegram Group Join Now

ಸಾಕಷ್ಟು ವರ್ಷಗಳ ಸಮಯ ವ್ಯರ್ಥವಾದ ಬಳಿಕ ಈ ಬಗ್ಗೆ ಒಂದು ಗಂಭೀರ ಚಿಂತನೆ ಮೂಡಿ ತಾವು ಕೂಡ ಸರ್ಕಾರಿ ಹುದ್ದೆ ಪಡೆಯಲೇಬೇಕು ಎಂದು ಕಠಿಣ ಶ್ರಮ ವಹಿಸಿ ಕಾಂಪಿಟೇಟ್ ಮಾಡುತ್ತಾರೆ ನೀವು ಕೂಡ ಈ ವರ್ಗಕ್ಕೆ ಸೇರಿದ್ದರೆ ನಿಮಗೆ ಕರ್ನಾಟಕ ಸರ್ಕಾರದ ವತಿಯಿಂದ ಸಿಹಿ ಸುದ್ದಿ ಇದೆ.

ಮಾನ್ಯ ಕಂದಾಯ ಸಚಿವರು ಕಂದಾಯ ಇಲಾಖೆಯಲ್ಲಿ ಮುಂಬರುವ ಸಾವಿರಾರು ಹುದ್ದೆಗಳ ನೇಮಕಾತಿ (Revenue Department Recruitment) ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಧೃಡಪಡಿಸಿದ್ದಾರೆ.

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡ ಸಚಿವ ಕೃಷ್ಣ ಬೈರೇಗೌಡರವರು (Revenue Minister Krishna Bairegowda) ಕಂದಾಯ ಇಲಾಖೆಯಲ್ಲಿ 364 ಸರ್ವೆ ADLR ಹುದ್ದೆಗಳ ನೇಮಕಾತಿಗೆ ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕಿರುವ ಬಗ್ಗೆ ಸಚಿವರು ಮಾತನಾಡಿದ್ದಾರೆ.

ಇದರೊಂದಿಗೆ ಇನ್ನಷ್ಟು ಸರ್ವೆಯರ್ ಗಳು ಅಗತ್ಯತೆ ಕೂಡ ಇದೆ ಈ ಬಗ್ಗೆ ಕೂಡ ಸಂಪುಟದೊಂದಿಗೆ ಚರ್ಚಿಸಿ ನೇಮಕಾತಿ ಬಗ್ಗೆ ಶೀಘ್ರದಲ್ಲಿಯೇ ಅಪ್ಡೇಟ್ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಸರ್ಕಾರವು ಪ್ರಗತಿಪರ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಮುಖ್ಯಮಂತ್ರಿಗಳು ಕಂದಾಯ ಇಲಾಖೆಗಳ ಸುಧಾರಣೆ ಹಾಗೂ ನೇಮಕಾತಿ ವಿಚಾರದ ಬಗ್ಗೆ ಬಹಳ ಮುತುವರ್ಜಿ ವಹಿಸಿದ್ದಾರೆ ಎಂದು ಮಾತನಾಡಿದ್ದಾರೆ.

ರಾಜ್ಯದ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಿ ಗ್ರಾಮೀಣ ಭಾಗದ ರೈತರ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಸದ್ಯಕ್ಕೆ ಕೊರತೆ ಉಂಟಾಗಿರುವ ಸರ್ವೆಯರ್ ಹುದ್ದೆಗಳಿಗೆ ಪೂರಕ ವ್ಯವಸ್ಥೆ ಮಾಡುವುದಕ್ಕಾಗಿ 1091 ಲೈಸೆನ್ಸ್ಡ್ ಸರ್ವೆಯರ್ ನೇಮಕ ಮಾಡಲು ಮುಂದಾಗಿದೆ.

ಇದರೊಂದಿಗೆ 1000 ಗ್ರಾಮ ಆಡಳಿತ ಅಧಿಕಾರಿಗಳ (VAO) ನೇಮಕಾತಿ ಪ್ರಕ್ರಿಯೆ ಕೂಡ ಚಾಲ್ತಿಯಲ್ಲಿದೆ ಇದರಿಂದಾಗಿ ಇನ್ನು ಮುಂದೆ ಗ್ರಾಮ ಪಂಚಾಯಿತಿ ಆಡಳಿತ ವಿಚಾರದಲ್ಲಿ ಸಾಕಷ್ಟು ಸುಧಾರಣೆ ಆಗಲಿದೆ ಎನ್ನುವ ಭರವಸೆ ಇದೆ, ಸರ್ಕಾರ ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದೆ ಎಂದು ಮಾತನಾಡಿದ್ದಾರೆ.

ನಮ್ಮ ಸರ್ಕಾರ ಗ್ರಾಮೀಣ ಭಾಗದ ಅದರಲ್ಲೂ ರೈತರ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ನಿಗಾ ವಹಿಸಿದೆ ಹೀಗಾಗಿ ಹಿಂದೆ ತಹಶೀಲ್ದಾರ್ ಕೋರ್ಟ್ ಗಳಲ್ಲಿ 212 ದಿನಗಳ ಕಾಲ ನಡೆಯುತ್ತಿದ್ದ ವ್ಯಾಜ್ಯಗಳು ಈಗ 76 ದಿನಗಳಲ್ಲಿ ಇತ್ಯರ್ಥವಾಗುತ್ತಿರುವುದು ಸಾಕ್ಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ನೇಮಕಾತಿ ಹಾಗೂ ಸುಧಾರಣಾ ಕ್ರಮಗಳು ಗ್ರಾಮೀಣ ಅಭಿವೃದ್ಧಿ ಹಾಗೂ ಈ ಮೂಲಕ ರಾಜ್ಯದ ಅಭಿವೃದ್ಧಿ ಉದ್ದೇಶದಿಂದ ಕೈಗೊಂಡಿರುವ ಕ್ರಮವಾಗಿದೆ. ಹಳ್ಳಿ ಮಟ್ಟದಿಂದ ಸರ್ಕಾರಿ ಯೋಜನೆಗಳ ಮತ್ತು ಸೇವೆಗಳ ಪರಿಣಾಮಾತ್ಮಕ ಕ್ರಮ ಕೈಗೊಳ್ಳಲು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಆಗಿದೆ ಇವು ಜನಸಾಮಾನ್ಯರಿಗೆ ಬಹಳಷ್ಟು ಅನುಕೂಲ ತರಲಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ನೇಮಕಾತಿ ಪ್ರಯೋಜನ ಜನಸಾಮಾನ್ಯರಿಗೆ ದೊರಕುವಂತಾಗಲಿ ಹಾಗೂ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಕೂಡ ಇದರಿಂದ ತಮ್ಮ ಕನಸುಗಳು ಕೈಗೂಡಲಿ ಎಂದು ನಾವು ಸಹಾ ಈ ಅಂಕಣದ ಮೂಲಕ ಹರಸುತ್ತಿದ್ದೇವೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment