Navy Recruitment:
ಕ್ರೀಡೆಯಲ್ಲಿ ಆಸಕ್ತಿ ಇತ್ತು ಸಾಧನೆ ಮಾಡಿರುವಂತಹ ಅಭ್ಯರ್ಥಿಗಳಿಗೆ ಕ್ರೀಡಾ ಕೋಟದಡಿ ಕೇಂದ್ರ ಸರ್ಕಾರದ ಹುದ್ದೆ ಪಡೆಯುವಂತಹ ಅವಕಾಶ ದೊರೆಯುತ್ತಿದೆ. ಭಾರತೀಯ ನೌಕಾಪಡೆಯಲ್ಲಿ ಕ್ರೀಡಾಕೂಟದಡಿ ನಾವಿಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ನೇಮಕಾತಿ ನಡೆಯುತ್ತಿದೆ ದೇಶದ ಪ್ರತಿಭಾವಂತ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.
ಹಾಗಾಗಿ ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಭಾರತೀಯ ನೌಕಾಪಡೆಯು ನೇಮಕಾತಿ ಬಗ್ಗೆ ಪ್ರಕಟಣೆಯಲ್ಲಿ ಯಾವೆಲ್ಲ ಪ್ರಮುಖ ಅಂಶಗಳನ್ನು ತಿಳಿಸಿದೆ ಎನ್ನುವುದರ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಬಹಳ ಕಟ್ಟುನಿಟ್ಟಾಗಿ ಈ ನೇಮಕಾತಿ ನಡೆಯಲಿತ್ತು ಅರ್ಹರಿಗಷ್ಟೇ ಅರ್ಜಿ ಸಲ್ಲಿಸಲು ಅವಕಾಶ ದೊರೆಯುವುದು. ಹಾಗಾಗಿ ಈ ಅಂಕಣವನ್ನು ಕೊನೆಯವರೆಗೂ ಓದಿ ಮತ್ತು ತಪ್ಪದೆ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ದೇಶದ ಪ್ರಜೆಯಾಗಿ ನಾವು ದೇಶದಿಂದ ಸಾಕಷ್ಟು ಸವಲತ್ತುಗಳನ್ನು ಪಡೆದುಕೊಂಡಿದ್ದೇವೆ. ಈಗ ನಾವು ದೇಶಕ್ಕಾಗಿ ಏನು ಮಾಡಿದ್ದೇವೆ ಎಂಬುದನ್ನು ಕೇಳಿಕೊಳ್ಳುವ ಸಮಯ. ಅದರಲ್ಲೂ ದೇಶದ ಯುವ ಜನತೆ ದೇಶಕ್ಕಾಗಿ ನೀಡಬಹುದಾದ ಅತ್ಯುತ್ತಮ ಕೊಡುಗೆ ಎಂದರೆ ದೇಶ ಸೇವೆ ಮಾಡುವುದು. ಭಾರತೀಯ ನೌಕಾಪಡೆ, ವಾಯುಪಡೆ ಅಥವಾ ಸೇವೆ ಸೇರುವ ಮೂಲಕ ಕೂಡ ಉದ್ಯೋಗದ ಜೊತೆ ದೇಶ ಸೇವೆ ಮಾಡಿದ ತೃಪ್ತಿಯು ಸಿಗುತ್ತದೆ.
ಈ ಬಗ್ಗೆ ಆಸಕ್ತಿ ಇದ್ದರೂ ಕೆಲವರಿಗಷ್ಟೇ ಅದೃಷ್ಟವೂ ಸಹ ಇರುವುದು. ಅಂತಹ ಅವಕಾಶವೊಂದು ದೇಶದ ಯುವ ಜನತೆಗೆ ಸಿಗುತ್ತಿದೆ ಈ ಬಾರಿ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಕೊಂಡು ಸಾಧನೆ ಮಾಡಿರುವಂತಹ ಪ್ರತಿಭೆಗಳಿಗೆ ಸುಲಭವಾಗಿ ನೌಕಾಪಡೆಯಲಿ ಹುದ್ದೆ ಗಿಟ್ಟಿಸಿಕೊಳ್ಳುವಂತಹ ಭಾಗ್ಯ ದೊರೆಯುತ್ತಿದೆ. ಈ ನೇಮಕಾತಿ ಕುರಿತ ಪೂರ್ತಿ ಮಾಹಿತಿ ತಿಳಿದುಕೊಂಡು ಸೂಚನೆ ಪ್ರಕಾರವಾಗಿ ಅರ್ಜಿ ಸಲ್ಲಿಸಿ ಪ್ರಯತ್ನಿಸಿ.
ನೇಮಕಾತಿ ಸಂಸ್ಥೆ:- ಭಾರತೀಯ ನೌಕಾಪಡೆ
ಉದ್ಯೋಗ ಸಂಸ್ಥೆ:- ಭಾರತೀಯ ನೌಕಾಪಡೆ
ಹುದ್ದೆ ಹೆಸರು:- ನಾವಿಕರ ಹುದ್ದೆಗಳು
ಉದ್ಯೋಗ ಸ್ಥಳ:- ಭಾರತದ ವಿವಿಧೆಡೆ
ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಮುಖ ಸಂಗತಿಗಳು:-
* 2024ನೇ ವರ್ಷದ 2ನೇ ಬ್ರಾಚ್ ನಲ್ಲಿ ಭಾರತೀಯ ನೌಕಾಪಡೆಯು ಕ್ರೀಡಾಕೋಟದಡಿ ನೇಮಕಾತಿ ಮಾಡಿಕೊಳ್ಳುತ್ತಿದೆ.
* ಕ್ರೀಡೆಯಲ್ಲಿ ಸಾಧನೆ ಮಾಡಿರುವ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
* 01-11-1999 ರಿಂದ 30.04.2007ರ ಒಳಗೆ ಜನಿಸಿದಂತಹ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
* ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ದ್ವಿತೀಯ PUC / ತತ್ಸಮಾನ
ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
* ಇತ್ತೀಚಿನ ರಾಷ್ಟ್ರೀಯ ಶ್ರೇಯಾಂಕದ ಪ್ರಕಾರ ಒಲಂಪಿಕ್ ಈವೆಂಟ್ ಗಳಲ್ಲಿ ಅಗ್ರ ಅರ್ಹ 50 ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ
* ನೌಕಾಯಾನದ ಬೋಟ್ ನ ILCA, ILCA6, 49ER, 49ER(FX) ತರಗತಿಗಳಲ್ಲಿ ಅಂತರಾಷ್ಟ್ರೀಯ ಅಥವಾ ಹಿರಿಯ ರಾಷ್ಟ್ರೀಯ ಪದಕ ವಿಜೇತರಾಗಿದ್ದರೆ ಅರ್ಜಿ ಸಲ್ಲಿಸಬಹುದು.
* ಪುರುಷ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಕ್ರೀಡೆಗಳು:- ಅಥ್ಲೆಟಿಕ್ಸ್, ಅಥ್ವಾಟಿಕ್ಸ್, ಬಾಸ್ಕೆಟ್ ಬಾಲ್, ಬಾಕ್ಸಿಂಗ್, ಕ್ರಿಕೆಟ್, ಈಕ್ವೇಸ್ಟ್ರಿಯನ್, ಫುಟ್ಬಾಲ್, ಫೆನ್ನಿಂಗ್, ಆಸ್ಟ್ರಿಟಿಕ್, ಹ್ಯಾಂಡ್ ಬಾಲ್, ಹಾಕಿ, ವಾಲಿಬಾಲ್ ವೆಯಿಟ್ ಲಿಫ್ಟಿಂಗ್, ವ್ರೆಸ್ಟಿಂಗ್, ಸ್ಕ್ವಾಷ್, ಗಾಲ್ಫ್, ಟೆನ್ನಿಸ್, ಕಾಯಾ ಕಿಂಗ್ ಮತ್ತು ಕ್ಯಾನೋಯಿಂಗ್, ರೋಯಿಂಗ್, ಶೂಟಿಂಗ್ ಮತ್ತು ಸ್ಕೆಲ್ಲಿಂಗ್
* ಮಹಿಳಾ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಕ್ರೀಡೆಗಳು:- ಅಥ್ಲೆಟಿಕ್ಸ್, ಅಕ್ವಾಟಿಕ್ಸ್, ಆರ್ಟಿಸ್ಟಿಕ್, ಜಿಮ್ನಾಸ್ಟಿಕ್, ಬಾಕ್ಸಿಂಗ್, ಫ್ರೆನ್ನಿಂಗ್, ವ್ರೆಸ್ಟಿಂಗ್, ವೇಟ್ ಲಿಫ್ಟಿಂಗ್,ಕ್ಯಾನೋಕಿಂಗ್, ರೋಯಿಂಗ್, ಶೂಟಿಂಗ್ ಮತ್ತು ಸೈಲಿಂಗ್
ಅರ್ಜಿ ಸಲ್ಲಿಸುವ ವಿಧಾನ:-
* ಆಸಕ್ತ ಅಭ್ಯರ್ಥಿಗಳು ಮೊದಲು ನೇರವಾಗಿ www.joinindianavy.gov.in ಈ ವೆಬ್ಸೈಟ್ ಗೆ ಭೇಟಿ ನೀಡಿ
* ಆನ್ಲೈನಲ್ಲಿ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಸರಿಯಾದ ಉತ್ತರಗಳನ್ನು ತುಂಬಿಸಿ ಕೇಳಲಾಗಿರುವ ಎಲ್ಲ ದಾಖಲೆಗಳ ಜೊತೆಗೆ ಈ ಕೆಳಕಂಡ ವಿಳಾಸಕ್ಕೆ ಅರ್ಜಿ ಸಲ್ಲಿಸಲು ತಿಳಿಸಿರುವ ಕೊನೆಯ ದಿನಾಂಕದ ಒಳಗಡೆ ಅಂಚೆ ಮೂಲಕ ಕಳುಹಿಸಿಕೊಡಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ:-
ಕಾರ್ಯದರ್ಶಿ,
ಭಾರತೀಯ ನೌಕಾಪಡೆಯ ಕ್ರೀಡಾ ನಿಯಂತ್ರಣ ಮಂಡಳಿ,
ನೌಕಾಪಡೆಯ ಪ್ರಧಾನ ಕಛೇರಿ,
ರಕ್ಷಣಾ ಸಚಿವಾಲಯ,
ಎರಡನೇ ಮಹಡಿ,
ಚಾಣಕ್ಯ ಭವನ, ಚಾಣಕ್ಯ ಪುರಿ,
ನವ ದೆಹಲಿ-110021.
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸಾಮಾನ್ಯ ಅಭ್ಯರ್ಥಿಗಳಿಗೆ 20-04-2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜಮ್ಮು ಮತ್ತು ಕಾಶ್ಮೀರ, ಲಡಾಕ್, ಅಂಡಮಾನ್ ನಿಕೋಬಾರ್ ಲಕ್ಷದ್ವೀಪಗಳು ಮತ್ತು ಮಿನಿ ಕೋಬ್ ದ್ವೀಪದ ಅಭ್ಯರ್ಥಿಗಳಿಗೆ 25-07-2024.