ಆಧಾರ್ ಕಾರ್ಡಿಗೆ ಎಷ್ಟು ಪ್ರಮುಖ ದಾಖಲೆ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತೇ ಇದೆ. ಮಗುವೊಂದನ್ನು ಶಾಲೆಗೆ ದಾಖಲಾತಿ ಮಾಡುವುದರಿಂದ ಹಿಡಿದು ವ್ಯಕ್ತಿಯೊಬ್ಬರ ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವ ವರೆಗೆ ಕೂಡ ಪ್ರತಿಯೊಂದು ಹಂತದಲ್ಲೂ ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ಆಧಾರ್ ಕಾರ್ಡ್ ದಾಖಲೆಯಾಗಿ ಕೇಳುತ್ತಾರೆ.
ಕೇವಲ ಸರ್ಕಾರದ ಚಟುವಟಿಕೆಗಳು ಮಾತ್ರವಲ್ಲದೆ ಸರ್ಕಾರೇತರವಾಗಿ ಕೂಡ ಅನೇಕ ಕಡೆಗಳಲ್ಲಿ ಆಧಾರ್ ಕಾರ್ಡನ್ನು ಒಂದು ಪ್ರಮುಖ ದಾಖಲೆಯಾಗಿ ಸಲ್ಲಿಸಬೇಕು. ಇಷ್ಟು ಪ್ರಮುಖ ದಾಖಲೆಯಾದ ಆಧಾರ್ ಕಾರ್ಡ್ ನಿಷ್ಕ್ರಿಯಗೊಂಡರೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ, ರೇಷನ್ ಕಾರ್ಡ್ ಪ್ಯಾನ್ ಕಾರ್ಡ್ ಕೂಡ ಸ್ಥಗಿತಗೊಳ್ಳಬಹುದು.
ಇದರಿಂದ ಪಿಂಚಣಿ, ಗ್ಯಾಸ್ ಸಬ್ಸಿಡಿ, ಗ್ಯಾರಂಟಿ ಯೋಜನೆಯ ಪ್ರಯೋಜನಗಳು ಇದ್ಯಾವುದೂ ಕೂಡ ಕೈ ತಪ್ಪಬಹುದು. ಹಾಗಾಗಿ ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ತಪ್ಪದೆ ಈ ಮಾಹಿತಿಯನ್ನು ಓದಿ ಸರಿಯಾಗಿ ಅರ್ಥ ಮಾಡಿಕೊಳ್ಳಿ. ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ಎನ್ನುವ ಸಂಸ್ಥೆಯು ದೇಶದ ಪ್ರತಿಯೊಬ್ಬ ನಾಗರಿಕರಿಗೂ 12 ಸಂಖ್ಯೆ ಕಾರ್ಡ್ ನೀಡಿರುತ್ತದೆ.
ಈ ಆಧಾರ್ ಕಾರ್ಡ್ ನಲ್ಲಿ ವ್ಯಕ್ತಿಯ ಹೆಸರು ಭಾವಚಿತ್ರ ಹುಟ್ಟಿದ ದಿನಾಂಕ, ಲಿಂಗ, ಪ್ರಸ್ತುತ ಮತ್ತು ಖಾಯಂ ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ಯೂನಿಕ್ ಆದ ಆಧಾರ್ ಸಂಖ್ಯೆ ಹಾಗೂ ಬಾರ್ ಕೋಡ್ ಇರುತ್ತದೆ. ಇದರೊಂದಿಗೆ ಆಧಾರ್ ವಿತರಿಸಿರುವ ದಿನಾಂಕವನ್ನು ಕೂಡ ನಮೂದಿಸಲಾಗಿರುತ್ತದೆ. ಇಂತಹ ಪ್ರಮುಖ ದಾಖಲೆಯನ್ನು ವಿತರಿಸುವ ಈ ಸಂಸ್ಥೆಯು ಕಳೆದ ವರ್ಷ ದೇಶದ ನಾಗರಿಕರಿಗೆ ಒಂದು ಸೂಚನೆ ನೀಡಿತ್ತು.
ಯಾರು ಆಧಾರ್ ಕಾರ್ಡ್ ಪಡೆದು ಹತ್ತು ವರ್ಷಗಳಾಗಿ ಒಮ್ಮೆಯು ಅಧಾರ್ ಅಪ್ಡೇಟ್ ಮಾಡಿಸಿಲ್ಲ ಅವರು ಕೂಡಲೇ ತಮ್ಮ ಯಾವುದೇ ಗುರುತಿನ ಪುರಾವೆ ಅಥವಾ ವಿಳಾಸ ಪುರಾವೆ ನೀಡಿ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಬೇಕು ಮತ್ತು ಉಚಿತವಾಗಿ ಪ್ರಕ್ರಿಯೆ ಪೂರ್ತಿಗೊಳಿಸಬಹುದು ಎನ್ನುವ ಪ್ರಕಟಣೆ ಹೊರಡಿಸಿತ್ತು. ಇದರ ಅನ್ವಯ ಕೋಟ್ಯಾಂತರ ಜನರು ಆಧಾರ್ ಅಪ್ಡೇಟ್ ಮಾಡಿಸಿಕೊಂಡಿದ್ದಾರೆ ಮತ್ತು ಕಳೆದ ಹತ್ತು ವರ್ಷಗಳಿಂದ ಸಾಕಷ್ಟು ಜನರು ತಮ್ಮದೇ ಆದ ಕಾರಣಗಳಿಂದ ಆಧಾರ್ ನವೀಕರಣಗೊಳಿಸಿಕೊಂಡಿದ್ದಾರೆ.
ಈ ರೀತಿ ಆಧಾರ್ ಅಪ್ಡೇಟ್ ಮಾಡಿಕೊಳ್ಳುವುದಕ್ಕೆ ನೀಡಿದ್ದ ಗಡುವನ್ನು ಕಳೆದೊಂದು ವರ್ಷದಿಂದ ಪದೇಪದೇ ವಿಸ್ತರಿಸಿ ಈಗ ಜೂನ್ 16ರವರೆಗೆ ಈಡೆ ಅವಕಾಶ ಎಂದು ಸಂಸ್ಥೆ ಎಚ್ಚರಿಸಿದೆ. ಈ ರೀತಿ ಆಧಾರ್ ನವೀಕರಣಕ್ಕೆ ಕೋರಿಕೊಳ್ಳಲು ಕಾರಣಗಳು ಕೂಡ ಇದೆ. ಯಾಕೆಂದರೆ ಕಳೆದ ಹತ್ತು ವರ್ಷಗಳಿಂದ ವ್ಯಕ್ತಿಯ ಮುಖ ಚಹರೆ ಸೇರಿದಂತೆ ಆತನ ಬಯೋಮೆಟ್ರಿಕ್ ಹಾಗೂ ಡಯಾಮೆಟ್ರಿಕ್ ಮಾಹಿತಿಗಳು ಹಾಗೂ ಮೊಬೈಲ್ ಸಂಖ್ಯೆ ಮತ್ತು ವಿಳಾಸಗಳು ಬದಲಾಗಿರುತ್ತದೆ.
ವ್ಯಕ್ತಿಯೋರ್ವನ ಅಧಿಕೃತ ಅಪ್ಡೇಟ್ ಸಿಗಬೇಕು ಎನ್ನುವ ಕಾರಣಕ್ಕಾಗಿ ಆಧಾರ್ ಕಾರ್ಡ್ ವಿತರಿಸುವುದು ಇದರಿಂದ ಮಾಹಿತಿ ಸಂಗ್ರಹಣೆಯಲ್ಲಿ ಜಟಿಲತೆ ಸೃಷ್ಟಿಯಾಗುತ್ತಿದೆ ಎನ್ನುವ ಕಾರಣದಿಂದ 10 ವರ್ಷಗಳಿಗೊಮ್ಮೆ ದೃಢೀಕರಣಕ್ಕಾಗಿ ಆಧಾರ್ ಅಪ್ಡೇಟ್ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಈ ಒಂದು ಕಾರಣದಿಂದ ಸರ್ಕಾರದ ನಿಯಮವನ್ನು ಪಾಲಿಸಿ ಯಾರು ಕಳೆದ ಹತ್ತು ವರ್ಷಗಳಿಂದ ಒಮ್ಮೆಯು ಅದರ ಅಪ್ಡೇಟ್ ಮಾಡಿಲ್ಲ ಅವರು ಈ ಕೂಡಲೇ ಅಪ್ಡೇಟ್ ಮಾಡಿಸಿಕೊಳ್ಳಬೇಕು. ನೇರವಾಗಿ UIDAI ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಥವಾ ಹತ್ತಿರದ ಆಧಾರ್ ಸೇವಾ ಕೇಂದ್ರಗಳಿಗೆ ಹೋಗಿ ಈ ಮೇಲೆ ತಿಳಿಸಿದಂತೆ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಜೊತೆಗೆ ತೆಗೆದುಕೊಂಡು ಹೋಗಿ ಅಧಾರ್ ಅಪ್ಡೇಟ್ ಮಾಡಿಸಬಹುದು.
ಆದರೆ ಇದೆಲ್ಲದರ ನಡುವೆ ಒಂದು ವದಂತಿಯೂ ಕೂಡ ಹರಿದಾಡುತ್ತಿದೆ. ಅದೇನೆಂದರೆ, ಜೂನ್ 14ರ ಉಚಿತ ಅವಕಾಶದ ಒಳಗೆ ಅಪ್ಡೇಟ್ ಮಾಡಿಸಿದವರ ಆಧಾರ್ ಕಾರ್ಡ್ ಗಳು ನಿಷ್ಕ್ರಿಯಗೊಳ್ಳುತ್ತವೆ ಎಂದು ಸುದ್ದಿ ಹರಿದಾಡುತ್ತಿವೆ ಆದರೆ ಇದು ಪೂರ್ತಿ ಸತ್ಯವಲ್ಲ. ಎಲ್ಲಾ ಆಧಾರ್ ಕಾರ್ಡ್ ಗಳು ಚಾಲ್ತಿಯಲ್ಲಿ ಇರುತ್ತವೆ ಆದರೆ ಅವುಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿರುತ್ತದೆ ನಂತರ ನಿಯಮದಂತೆ ನವೀಕರಣ ಮಾಡಿಕೊಂಡ ಮೇಲೆ ಚಾಲ್ತಿಗೆ ಬರುತ್ತವೆ.
ಆದರೆ ಜೂನ್ 16ರ ವರೆಗೆ ನೀಡಿರುವ ಉಚಿತ ಕಾಲಾವಕಾಶದ ನಂತರ ಆಧಾರ್ ಅಪ್ಡೇಟ್ ಮಾಡಿಸುವವರು ದಂಡ ಪಾವತಿ ಮಾಡಿ ರಿನಿವಲ್ ಮಾಡಿಸಿಕೊಳ್ಳಬೇಕಾದ ಸಂದರ್ಭ ಎದುರಾಗಬಹುದು. ಈ ಹಿಂದೆ ಕೂಡ ಪ್ಯಾನ್-ಆಧಾರ್ ಬ್ಯಾಂಕ್ ಲಿಂಕ್ ಸಂದರ್ಭದಲ್ಲಿ ಕೂಡ ಇದೇ ರೀತಿ ಗೊಂದಲ ಸೃಷ್ಟಿಯಾಗಿ ಈಗ ರೂ.1000 ದಂಡ ಸಮೇತ ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಜೂನ್ 16ರ ಒಳಗೆ ಆಧಾರ್ ಅಪ್ಡೇಟ್ ಮಾಡಿಸಿ.