Karnataka Bank:
ಕರ್ನಾಟಕ ರಾಜ್ಯದಾಧ್ಯಂತ ಇರುವ ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ , ನಿರುದ್ಯೋಗಿಗಳಿಗೆ ಅದರಲ್ಲೂ ಬ್ಯಾಂಕ್ ನಲ್ಲಿ ಉದ್ಯೋಗ ಮಾಡಬಯಸುವ ಎಲ್ಲರಿಗೂ ಈ ಲೇಖನದ ಮೂಲಕ ಒಂದು ಸಿಹಿ ಸುದ್ದಿಯನ್ನು ಹಂಚಿಕೊಳ್ಳ ಬಯಸುತ್ತಿದ್ದೇನೆ. ಕರ್ನಾಟಕ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ, ಇದಕ್ಕಾಗಿ ಅಧಿಸೂಚನೆ ಕೂಡ ಹೊರಡಿಸಿದೆ.
ಈ ಸುದ್ದಿ ಓದಿ:-BPL Ration Card Cancellation: ರಾಜ್ಯದಲ್ಲಿ 3 ಲಕ್ಷ ಬಿಪಿಎಲ್ ಕಾರ್ಡ್ ರದ್ದು: ನಿಮ್ಮ ಪಡಿತರ ಚೀಟಿ ಈ ಲಿಸ್ಟ್ ನಲ್ಲಿ ಇದಿಯಾ.? ಹೀಗೆ ಚೆಕ್ ಮಾಡಿ.!
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು ಎನ್ನುವುದು ಅನೇಕರ ಆಕಾಂಕ್ಷೆ ಹಾಗಾಗಿ ಆಸಕ್ತಿ ಇರುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ನಾವು ಸಹ ಈ ಲೇಖನದಲ್ಲಿ ಸದರಿ ಹುದ್ದೆಗಳ ಪೂರ್ತಿ ವಿವರ, ಅರ್ಜಿ ಸಲ್ಲಿಸಲು ಇರುವ ಮಾನದಂಡಗಳು ಏನು? ಅರ್ಜಿ ಸಲ್ಲಿಸುವುದು ಹೇಗೆ? ಎನ್ನುವ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ. ತಪ್ಪದೇ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ನೇಮಕಾತಿ ಸಂಸ್ಥೆ:- ಕರ್ನಾಟಕ ಬ್ಯಾಂಕ್
ಹುದ್ದೆ ಹೆಸರು:- ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 14 ಹುದ್ದೆಗಳು
ಹುದ್ದೆಗಳ ವಿವರ:-
* ಡೇಟಾ ಎಂಜಿನಿಯರ್- 11 ಹುದ್ದೆಗಳು
* ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್- 1 ಹುದ್ದೆ
* ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್- 1 ಹುದ್ದೆ
* ಫೈರ್ವೆಲ್ ಅಡ್ಮಿನಿಸ್ಟ್ರೇಟರ್- 1 ಹುದ್ದೆ
ಉದ್ಯೋಗ ಸ್ಥಳ:- ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಬೇಕಿರುತ್ತದೆ
ವೇತನ ಶ್ರೇಣಿ:- ಮಾಸಿಕವಾಗಿ…
* ಡೇಟಾ ಎಂಜಿನಿಯರ್- ರೂ.48,480 ರಿಂದ ರೂ.85,920
* ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್ – ರೂ.64,820 ರಿಂದ ರೂ.93,960
* ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್ – ರೂ.64,820 ರಿಂದ ರೂ.93,960
* ಫೈರ್ವೆಲ್ ಅಡ್ಮಿನಿಸ್ಟ್ರೇಟರ್ – ರೂ.64,820 ರಿಂದ ರೂ.93,960
ಶೈಕ್ಷಣಿಕ ವಿದ್ಯಾರ್ಹತೆ:-
* ಡೇಟಾ ಎಂಜಿನಿಯರ್ ಹುದ್ದೆಗಳಿಗೆ BSc, BCA, BE/B.Tec/ MCA, M.Tech ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ
* ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್ / ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್ / ಫೈರ್ವೆಲ್ ಅಡ್ಮಿನಿಸ್ಟ್ರೇಟರ್ ಹುದ್ದೆಗಳಿಗೆ BE/ B.Tec / MCA ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ವಯೋಮಿತಿ:-
* ಎಲ್ಲಾ ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಗರಿಷ್ಠ ವಯೋಮಿತಿ
1. ಡೇಟಾ ಎಂಜಿನಿಯರ್ – 30 ವರ್ಷಗಳು
2. ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್- 35 ವರ್ಷಗಳು
3. ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್- 35 ವರ್ಷಗಳು
4. ಫೈರ್ವೆಲ್ ಅಡ್ಮಿನಿಸ್ಟ್ರೇಟರ್- 35 ವರ್ಷಗಳು
* ಕೆಲವು ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಕೂಡ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ವಿಧಾನದಲ್ಲಿಯೇ ಅರ್ಜಿ ಸಲ್ಲಿಸಬೇಕು
* recruitment@ktkbank.com ಈ ಇ-ಮೇಲ್ ID ಗೆ ರೆಸ್ಯೂಮ್ ಕಳುಹಿಸುವ ಮೂಲಕ ಅರ್ಜಿ ಸಲ್ಲಿಸಬಹುದು
* ಹುದ್ದೆ ಸಂಬಂಧಿತ ಯಾವುದೇ ಮಾಹಿತಿ ಇದ್ದರೂ ಬ್ಯಾಂಕ್ ಕಡೆಯಿಂದ ನೀವು ನೀಡುವ ಸೂಕ್ತವಾದ ಇ-ಮೇಲ್ ಐಡಿಗೆ ಮಾಹಿತಿ ಬರುತ್ತದೆ.
ಈ ಸುದ್ದಿ ಓದಿ:-Loan: ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎಂದು ತಿಳಿಯಲು ನಿಮ್ಮ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ.!
ಆಯ್ಕೆ ವಿಧಾನ:-
* ನಿಗದಿಪಡಿಸಿರುವ ವಿದ್ಯಾರ್ಹತೆ, ಪಡೆದಿರುವ ಕೆಲಸದ ಅನುಭವ ಮತ್ತು ದಾಖಲೆಗಳ ಪರಿಶೀಲನೆ ಹಾಗೂ ನೇರ ಸಂದರ್ಶನ ನಡೆಸುವ ಮೂಲಕ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 26 ಜೂನ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 26 ಜುಲೈ, 2024