Scholarship
ಭಾರತದ ಪ್ರತಿಷ್ಠಿತ ಸ್ಟಾಕ್ ಬ್ರೋಕಿಂಗ್ ಕಂಪನಿ ಎನ್ನುವ ಖ್ಯಾತಿಗೆ ಒಳಗಾಗಿರುವ ಕೋಟಕ್ ಸೆಕ್ಯುರಿಟಿಸ್ ಲಿಮಿಟೆಡ್ (KSL) ಜನಸ್ನೇಹಿ ಕಾರ್ಯಕ್ರಮಗಳಲ್ಲೂ ಕೂಡ ತೊಡಗಿಕೊಂಡಿದೆ. ಆ ಪ್ರಕಾರವಾಗಿ ಈ ವರ್ಷ ಆರ್ಥಿಕವಾಗಿ ಹೊಂದುಳಿದಿರುವ ಕುಟುಂಬಗಳ ಪ್ರತಿಭಾವಂತ ವಿಶೇಷ ಚೇತನ (PwD) ವಿದ್ಯಾರ್ಥಿಗಳಿಗೆ ಕೋಟಕ್ ಸುರಕ್ಷಾ ವಿದ್ಯಾರ್ಥಿ ವೇತನ (Kotak Suraksha Scholarship) ನೀಡಲು ಮುಂದಾಗಿದೆ.
ಈ ಮೂಲಕ ಈ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಿ ಅವರ ಭವಿಷ್ಯವನ್ನು ಭದ್ರಗೊಳಿಸುವ ಗುರಿ ಹೊಂದಿದೆ. ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲಾ ದಾಖಲೆಗಳನ್ನು ನೀಡಬೇಕು ಮತ್ತು ಎಷ್ಟು ಸಹಾಯಧನ ಸಿಗುತ್ತದೆ ಎನ್ನುವ ಪೂರ್ತಿ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ. ಹಾಗೆಯೇ ಇಂತಹ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಅರ್ಜಿ ಸಲ್ಲಿಸಲು ಅರ್ಹತೆಗಳು:-
* ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಭಾರತೀಯನಾಗಿರಬೇಕು
* ವಿದ್ಯಾರ್ಥಿಯು ಅಂಗವಿಕಲನಾಗಿದ್ದು, ಸಂಬಂಧ ಪಟ್ಟ ದಾಖಲೆಗಳನ್ನು ಹೊಂದಿರಬೇಕು
* ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರಬೇಕು
* 9ನೇ ತರಗತಿ ಮೇಲ್ಪಟ್ಟು ವಿದ್ಯಾಭ್ಯಾಸ ನಡೆಸುತ್ತಿರುವಂತಹ ಮೇಲ್ಕಂಡ ಮಾನದಂಡಗಳನ್ನು ಪೂರೈಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
* ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಹಿಂದಿನ ವರ್ಷದ ಮುಖ್ಯ ಪರೀಕ್ಷೆಯಲ್ಲಿ 55% ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು
* ವಿದ್ಯಾರ್ಥಿಯ ಕುಟುಂಬದ ಆದಾಯವು ಎಲ್ಲಾ ಮೂಲಗಳಿಂದ ವಾರ್ಷಿಕವಾಗಿ 3.2 ಲಕ್ಷ ಮೀರಿರಬಾರದು.
ಸಿಗುವ ಸಹಾಯಧನ:-
* ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಸ್ಕಾಲರ್ಶಿಪ್ ನೀಡಲಾಗುತ್ತದೆ
* 9 – 12ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ರೂ.5,000
* ಸಾಮಾನ್ಯ ಪದವಿ ಮತ್ತು ವ್ಯತ್ತಿಪರ ಕೋರ್ಸ್ ಗಳಿಗೆ ವಾರ್ಷಿಕವಾಗಿ ರೂ. 1 ಲಕ್ಷ
ಬೇಕಾಗುವ ದಾಖಲೆಗಳು:-
* ವಿದ್ಯಾರ್ಥಿಯ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
* ಗುರುತಿನ ಚೀಟಿಯಾಗಿ (ಆಧಾರ್ ಕಾರ್ಡ್ ವೋಟರ್ ಐಡಿ ಅಥವಾ ರೇಷನ್ ಕಾರ್ಡ್ ಇತ್ಯಾದಿಗಳಲ್ಲಿ ಒಂದು)
* ಪ್ರಸಕ್ತ ಸಾಲಿಯಲ್ಲಿ ವಿದ್ಯಾಭ್ಯಾಸ ಪಡೆದಿರುವುದಕ್ಕೆ ಪುರಾವೆ (ಪ್ರವೇಶ ಶುಲ್ಕ ಪಾವತಿ ಮಾಡಿರುವ ರಸೀದಿ, ಕಾಲೇಜ್ ID ಕಾರ್ಡ್ ಇತ್ಯಾದಿಗಳಲ್ಲಿ ಒಂದು)
* SSLC ಮತ್ತು PUC ಅಂಕಪಟ್ಟಿ
* ಹಿಂದಿನ ವರ್ಷದ ಪರೀಕ್ಷೆಯ ಅಂಕಪಟ್ಟಿ
* ಕುಟುಂಬದ ಆದಾಯ ಪ್ರಮಾಣ ಪತ್ರ
* ಕೃಷಿ, ತೋಟಗಾರಿಕೆ ಮತ್ತು ಪಶು ವೈದ್ಯಕೀಯ ಮೂಲಗಳಿಂದ ಆದಾಯ ಹೊಂದಿರುವ ವ್ಯಕ್ತಿಗೆ ಸಂಬಂಧಿಸಿದ ಅಧಿಕಾರಿಗಳಿಂದ ಪ್ರಮಾಣ ಪತ್ರ
* BPL ರೇಷನ್ ಕಾರ್ಡ್
* ವಿದ್ಯಾರ್ಥಿಯ ಅಥವಾ ಪೋಷಕರ ಪಾಸ್ ಬುಕ್ ವಿವರ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ.
ಅರ್ಜಿ ಸಲ್ಲಿಸುವ ವಿಧಾನ:-
* ಆಸಕ್ತ ಅಭ್ಯರ್ಥಿಗಳು ಸ್ಟಡಿ ಫೋರ್ ಬಡಿ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು.
* ಅರ್ಜಿ ಸಲ್ಲಿಸುವ ಲಿಂಕ್:
https://www.buddy4study.com/page/kotak-suraksha-scholarship-program?utm_source=AllScholarship
* ಕೇಳದಾಗುವ ವಿವರಗಳನ್ನು ಭರ್ತಿ ಮಾಡಿ, ಪೂರಕ ದಾಖಲೆಗಳನ್ನು ಅಪ್ಲೋಡ್ ಮಾಡಿ
* ಅರ್ಜಿ ಯಶಸ್ವಿ ಆದಮೇಲೆ ರೆಫರೆನ್ಸ್ ಸಂಖ್ಯೆ ಪಡೆಯಿರಿ ಇದರ ಮೂಲಕ ಮುಂದೆ ಅರ್ಜಿ ಸ್ಟೇಟಸ್ ಟ್ರ್ಯಾಕ್ ಮಾಡಬಹುದು