SSLC ಪಾಸಾದವರಿಗೆ ಗುಡ್‌ ನ್ಯೂಸ್ KPTCL ನೇಮಕಾತಿ 2,000 ಹುದ್ದೆಗಳಿಗೆ ಅರ್ಜಿ ಆಹ್ವಾನ.!

Lineman

ಕರ್ನಾಟಕ ರಾಜ್ಯ ಇಂಧನ ಇಲಾಖೆ (Karnataka Energy Department)ಯಲ್ಲಿ ನೇಮಕಾತಿ ಪರ್ವ ಆರಂಭವಾಗಿದೆ. ಈಗಾಗಲೇ ಸಹಾಯಕ ಇಂಜಿನಿಯರ್ (ಎಇ) ಹಾಗೂ ಕಿರಿಯ ಇಂಜಿನಿಯರ್‌ಗಳ ನೇಮಕ ಮಾಡಿ ಕಾರ್ಯಾದೇಶ ನೀಡಲಾಗಿದೆ. ಇದೀಗ ಬರೋಬ್ಬರಿ 2,000 ಲೈನ್‌ಮೆನ್‌ಗಳ ಭರ್ತಿಗೆ ಭರದ ಸಿದ್ಧತೆ ನಡೆದಿದ್ದು; ಇದೇ ತಿಂಗಳಲ್ಲೇ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸುವುದಾಗಿ ಇಂಧನ ಸಚಿವ ಕೆ ಜೆ ಜಾರ್ಜ್ (Energy Minister K J George) ಅವರು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಓದಿ:- Guarantee Schemes: ಗೃಹಲಕ್ಷ್ಮಿ-ಗೃಹಜ್ಯೋತಿ ಫಲಾನುಭವಿಗಳಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ ಸರ್ಕಾರದ ಬಂಪರ್‌ ಘೋಷಣೆ.!

ರಾಜ್ಯಾದ್ಯಂತ ಇಂಧನ ಇಲಾಖೆಯ (Karnataka Energy Department) ವಿವಿಧ ಎಸ್ಕಾಂ ಗಳ ವ್ಯಾಪ್ತಿಯಲ್ಲಿ ಆದ್ಯತೆಗೆ ಅನುಸಾರ ಖಾಲಿ ಹುದ್ದೆಗಳ ಭರ್ತಿ ನಡೆಯಲಿದ್ದು; 10ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ಲೈನ್‌ಮೆನ್ ಹುದ್ದೆಗೆ ಬೇಕಾಗುವ ವಿದ್ಯಾರ್ಹತೆ, ಪರೀಕ್ಷೆ. ನೇಮಕ ಪ್ರಕ್ರಿಯೆ ಇತ್ಯಾದಿ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ…

WhatsApp Group Join Now
Telegram Group Join Now

ಯಾವಾಗ ಅಧಿಸೂಚನೆ ಪ್ರಕಟ?

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಂಧನ ಸಚಿವ ಕೆ ಜೆ ಜಾರ್ಜ್ ಅವರು ಈಗಾಗಲೇ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹಲವು ಖಾಲಿ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಾಧಿಕಾರಗಳಿಗೆ ಮತ್ತು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪೈಕಿ ಅಗ್ನಿಶಾಮಕ ದಳ, ಕೃಷಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯದ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು; ಇದೀಗ ಇಂಧನ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಮುಂದಾಗಿದೆ.

ಕರ್ನಾಟಕ ರಾಜ್ಯ ಇಂಧನ ಇಲಾಖೆಯಲ್ಲಿ ಲೈನ್‌ಮೆನ್ ಹುದ್ದೆಗಳು ಮಹತ್ವದ್ದಾಗಿದ್ದು, ದುರಸ್ತಿ, ನಿರಂತರ ವಿದ್ಯುತ್ ಸರಬರಾಜು ಪ್ರಕ್ರಿಯೆಯಲ್ಲಿ ಲೈನ್‌ಮೆನ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಹೀಗಾಗಿ ಒಟ್ಟಿಗೇ 2,000 ಲೈನ್‌ಮೆನ್ ಹುದ್ದೆಗಳ ಭರ್ತಿಗೆ ಇಂಧನ ಇಲಾಖೆ ಮುಂದಾಗಿದೆ. ನೇಮಕಾತಿ ಸಂಬ೦ಧ 15 ದಿನಗಳೊಳಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಇಂಧನ ಸಚಿವರು ಮಾಹಿತಿ ನೀಡಿದ್ದಾರೆ.

ಲೈನ್‌ಮೆನ್ ಹುದ್ದೆಗಳಿಗೆ ಅರ್ಹತೆಗಳೇನು.?

ಲೈನ್‌ಮೆನ್ ಹುದ್ದೆಗಳಿಗೆ ಬೇಕಾಗುವ ವಿದ್ಯಾರ್ಹತೆಗಳನ್ನು ನೋಡುವುದಾದರೆ, ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯಿAದ ನಡೆಸಲಾಗುವ SSLC ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆ ಪಾಸ್ ಮಾಡಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜೀ ಸಲ್ಲಿಸಬಹುದಾಗಿದೆ. ವಿದ್ಯಾರ್ಹತೆಯ ಜೊತೆಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಕನ್ನಡ ಭಾಷೆಯ ಸ್ಪಷ್ಟ ಜ್ಞಾನವಿರಬೇಕು. ಕಣ್ಣಿನ ದೃಷ್ಟಿ ಚೆನ್ನಾಗಿರಬೇಕು.

ಇನ್ನು ಈ ಹುದ್ದೆಗಳಿಗೆ ಬೇಕಾಗುವ ವಯಸ್ಸಿನ ಅರ್ಹತೆಯನ್ನು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ (ಯಾವುದೇ ಮೀಸಲಾತಿಗೆ ಒಳಪಡದ ಅಭ್ಯರ್ಥಿಗಳಿಗೆ) ನಿಗದಿಪಡಿಸಲಾಗಿದೆ. ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

ನೇಮಕಾತಿ ಪ್ರಕ್ರಿಯೆ ಹೇಗೆ?

ಲೈನ್‌ಮೆನ್ ಹುದ್ದೆಗಳ ನೇಮಕಾತಿಗೆ ವಿದ್ಯಾರ್ಹತೆಯ ಜೊತೆಗೆ ವಿವಿಧ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿದ್ದು; ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ರನ್ನಿಂಗ್, ಸ್ಕಿಪ್ಪಿಂಗ್, ಲೈಟುಕಂಬ ಹತ್ತುವುದು ಹಾಗೂ ರನ್ನಿಂಗ್ ರೇಸ್’ನಂತಹ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಮೂಲ ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆಗಳು ಇರುತ್ತವೆ.

ಮೇಲ್ಕಾಣಿಸಿದ ಎಲ್ಲಾ ರೀತಿಯ ಅರ್ಹತೆಯುಳ್ಳ ಆಸಕ್ತ ಅಭ್ಯರ್ಥಿಗಳು ಲೈನ್‌ಮೆನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಇಂಧನ ಸಚಿವರ ಮಾಹಿತಿ ಪ್ರಕಾರ ಮುಂದಿನ 15 ದಿನಗಳೊಳಗೆ ಅಥವಾ ಇದೇ ತಿಂಗಳ ಒಳಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment