KSRTC Jobs: 7th ಪಾಸ್ ಆದವರಿಗೆ KSRTC ಯಲ್ಲಿ ಉದ್ಯೋಗವಕಾಶ, ವೇತನ 23,700/- ಆಸಕ್ತರು ಅರ್ಜಿ ಸಲ್ಲಿಸಿ

KSRTC Jobs:  

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ರಾಜ್ಯದ ಬಹುತೇಕ ಡಿಪೋಗಳು ಸೇರಿದಂತೆ ಸುಮಾರು 13,000 ಕ್ಕಿಂತ ಹೆಚ್ಚು ಚಾಲಕ ಹುದ್ದೆಗಳು ಖಾಲಿ ಇವೆ ಎನ್ನುವ ಸುದ್ದಿ ಆಗಾಗ ಮಧ್ಯಮ ಹಾಗೂ ಪತ್ರಿಕೆಗಳಲ್ಲಿ ಸದ್ದು ಮಾಡುತ್ತಿರುತ್ತದೆ. KSRTC ಯಲ್ಲಿ ಶೀಘ್ರವೇ ಈ ಚಾಲಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಮತ್ತು ಅರ್ಹರಿಗೆ ಉದ್ಯೋಗವಕಾಶ ಕಲ್ಪಿಸಿ ಕೊಡುವಂತೆ ರಾಜ್ಯದ ಯುವ ಜನತೆ ಮನವಿ ಮಾಡುತ್ತಲೇ ಇದ್ದಾರೆ.

ಈಗಷ್ಟೇ ನಿರ್ವಾಹಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿರುವ ಸರ್ಕಾರವು ಶೀಘ್ರದಲ್ಲಿಯೇ ಈ ನೇಮಕಾತಿ ಪ್ರಕ್ರಿಯೆ ಪೂರ್ತಿಗೊಂಡ ಬಳಿಕ ಚಾಲಕ ಹುದ್ದೆಗಳಿಗೂ ಅರ್ಜಿ ಆಹ್ವಾನ ಮಾಡುವ ಸಾಧ್ಯತೆ ಇದೆ ಆದರೆ ಅಲ್ಲಿಯವರೆಗೂ ಚಾಲಕರ ಕೊರತೆ ಸಮಸ್ಯೆ ಎದುರಿಸಲಾಗದ ಪರಿಸ್ಥಿತಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

WhatsApp Group Join Now
Telegram Group Join Now

ಸದ್ಯಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಚಾಲಕರ ಬೇಡಿಕೆ ಇರುವ ಜಿಲ್ಲೆಗಳಲ್ಲಿ ಮಾತ್ರ ಈ ನೇಮಕಾತಿ ನಡೆಯಲಿದ್ದು ಇದರ ಸಂಬಂಧ ನಿಗಮದ ಕಡೆಯಿಂದ ಮಾರ್ಗಸೂಚಿಯನ್ನು ಒಳಗೊಂಡ ಅಧಿಕೃತ ಅಧಿಸೂಚನೆ ಬಿಡುಗಡೆ ಆಗಿದೆ. ಇದರಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಚಾಲಕ ಹುದ್ದೆಗಳಿಗೆ ಆಯ್ಕೆ ಆಗಲು ಬಯಸುವ ಅಭ್ಯರ್ಥಿಗಳು ಯಾವೆಲ್ಲ ಮನದಂಡಗಳನ್ನು ಹೊಂದಿರಬೇಕು? ವೇತನ ಶ್ರೇಣಿ ಎಷ್ಟಿರುತ್ತದೆ? ಅರ್ಜಿ ಸಲ್ಲಿಸುವುದು ಹೇಗೆ ಇತ್ಯಾದಿ ಪೂರ್ತಿ ಮಾಹಿತಿಯನ್ನು ವಿವರವಾಗಿ ತಿಳಿಸಲಾಗಿದೆ.

ನಾವು ಸಹ ಈ ಅಂಕಣದಲ್ಲಿ ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ನೇಮಕಾತಿ ಕುರಿತಂತೆ ಕೆಲ ಪ್ರಮುಖ ಸಂಗತಿಗಳನ್ನು ತಿಳಿಸುತ್ತಿದ್ದೇವೆ. ತಪ್ಪದೆ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ನೇಮಕಾತಿ ಸಂಸ್ಥೆ:- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)

ಹುದ್ದೆ ಹೆಸರು:- ಹೊರಗುತ್ತಿಗೆ ಆಧಾರದ ಮೇಲೆ ಚಾಲಕ ಹುದ್ದೆಗಳ

ಉದ್ಯೋಗ ಸ್ಥಳ:- ಸದ್ಯಕ್ಕೆ ಅತಿಹೆಚ್ಚಿನ ಸಂಖ್ಯೆಗಳಲ್ಲಿ ಚಾಲಕರ ಅವಶ್ಯಕತೆ ಇರುವ ಬೆಂಗಳೂರು, ರಾಮನಗರ ಮತ್ತು ಆನೇಕಲ್ ಡಿಪೋಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ

ವೇತನ ಶ್ರೇಣಿ:- 

* ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.23,700 ವೇತನ ನೀಡಲಾಗುತ್ತದೆ
* ಇದರೊಂದಿಗೆ PF / ESI ಸೌಲಭ್ಯ ಕೂಡ ಇರುತ್ತದೆ

ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಇನ್ನಿತರ ಕಂಡೀಶನ್ ಗಳು:-

* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿರಬೇಕು
* ಮಾನ್ಯತೆ ಪಡೆದ ವಾಹನ ಚಾಲನೆ ಪರವಾನಕಮಗಿ ಹೊಂದಿರಬೇಕು
* ಲಘು ಮೋಟಾರ್ ವಾಹನ ಚಾಲಕರಾಗಿ ಕನಿಷ್ಠ ಎರಡು ವರ್ಷಗಳ ಸೇವಾ ಅನುಭವ ಹೊಂದಿರಬೇಕು
* ಇದು ಹೊರಗುತ್ತಿಗೆ ಆಧಾರದ ನೇಮಕಾತಿ ಆಗಿದೆ. ಆದ್ದರಿಂದ ಹುದ್ದೆಗಳ ಮೇಲೆ ಅಭ್ಯರ್ಥಿಗಳಿಗೆ ಯಾವುದೇ ರೀತಿ ಹಕ್ಕು ಇರುವುದಿಲ್ಲ. ಖಾಯಂ ಹುದ್ದೆಗಳ ಭರ್ತಿ ಸಮಯದಲ್ಲಿ ಈ ಅಭ್ಯರ್ಥಿಗಳನ್ನು ತೆರವುಗೊಳಿಸಲಾಗುವುದು ಎಲುವ ಕಂಡೀಶನ್ ಕೂಡ ಒಬ್ಬರಬೇಕು.

ಅರ್ಜಿ ಸಲ್ಲಿಸುವ ವಿಧಾನ:-

* ಈ ಮೇಲ್ಕಂಡ ಮಾನದಂಡಗಳನ್ನು ಪೂರೈಸಿ ಅದಕ್ಕೆ ದಾಖಲೆಗಳನ್ನು ಸಲ್ಲಿಸುವ ವ್ಯಕ್ತಿಯ ಅರ್ಜಿಗಳು ಮಾತ್ರ ಮಾನ್ಯವಾಗುತ್ತದೆ.

ಆಯ್ಕೆ ವಿಧಾನ:-

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಚಾಲನ ತರಬೇತಿ ನೀಡಿ ಪರೀಕ್ಷೆ ನಡೆಸಿ ಸಂದರ್ಶನ ಹಾಗೂ ದಾಖಲೆಗಳ ಪರಿಶೀಲರ ಜೊತೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ

ಸಹಾಯವಾಣಿ ಸಂಖ್ಯೆಗಳು:-

* ಚಾಮರಾಜನಗರ KSRTC – 8050980889, 8618876846
* ರಾಮನಗರ ಮತ್ತು ಆನೇಕಲ್ KSRTC – 8090980889, 8618876846
* ಈ ಸಂಖ್ಯೆಗಳಿಗೆ ಕರೆ ಮಾಡಿ ನೇಮಕಾತಿ ಕುರಿತಂತೆ ಯಾವುದೇ ಅನುಮಾನಗಳಿದ್ದರೂ ಬಗೆ ಹರಿಸಿಕೊಳ್ಳಬಹುದು ಮತ್ತು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎನ್ನುವುದನ್ನು ಕೂಡ ತಿಳಿದುಕೊಳ್ಳಬಹುದು.

ಈ ಉದ್ಯೋಗ ಅವಕಾಶವು ಈ ಮೇರೆ ತಿಳಿಸಿದಂತಹ ಡಿಪೋ ಭಾಗದಲ್ಲಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಒಂದೊಳ್ಳೆ ಅವಕಾಶ ಎಂದೇ ಹೇಳಬಹುದು. ತಪ್ಪದೇ ಪ್ರತಿಯೊಬ್ಬ ಆಸಕ್ತ ಅಭ್ಯರ್ಥಿಯು ಅಥವಾ ಕೆಲಸದ ಅವಶ್ಯಕತೆ ಇರುವವರು ಈ ಸರಾಗವಾದ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆ ಆಗಿ ಮತ್ತು ನಿಮ್ಮ ಕುಟುಂಬದ ಪರಿಸ್ಥಿತಿಯನ್ನು ಬದಲಾಯಿಸಿಕೊಳ್ಳುವ ಅವಕಾಶವನ್ನು ಪಡೆದುಕೊಳ್ಳಿ.

ಪ್ರತಿಯೊಂದು ಕುಟುಂಬಕ್ಕೂ ಕೂಡ ಕೆಲಸದ ಅವಶ್ಯಕತೆ ಇರುತ್ತದೆ ವಿದ್ಯಾಭ್ಯಾಸ ಕಡಿಮೆ ಇರುವ ಕಾರಣಕ್ಕೆ ಕೆಲಸ ಸಿಗುವುದಿಲ್ಲ ಎಂದು ಕೊರಗುವ ಬದಲು ಈ ರೀತಿ ವಿಶೇಷ ತರಬೇತಿಗಳನ್ನು ಪಡೆದುಕೊಂಡು ನೀವು ಕೂಡ ಸರ್ಕಾರದ ಒಂದು ಭಾಗವಾಗಿ ಕೆಲಸ ನಿರ್ವಹಿಸಬಹುದು ಆದ್ದರಿಂದ ತಪ್ಪದೇ ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ ಮತ್ತು ಈ ಉದ್ಯೋಗ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಕು ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment