KSRTC: ಬಸ್ ದರ ಹೆಚ್ಚಳದ ಬಗ್ಗೆ ಮಹತ್ವದ ಘೋಷಣೆ ನೀಡಿದ ಸಾರಿಗೆ ಸಚಿವರು.!

KSRTC

ಬಸ್ ಪ್ರಯಾಣಿಕರಿಗೆ ಸಾರಿಗೆ ಸಚಿವರು ಸಿಹಿ ಸುದ್ದಿ ನೀಡಿದ್ದಾರೆ. ಬಸ್ ಪ್ರಯಾಣ ದರ ಏರಿಕೆ ಸದ್ಯಕ್ಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದು, ಬಸ್‌ನಲ್ಲಿ ಹಣ ಕೊಟ್ಟು ಪ್ರಯಾಣಿಸುವ ಪುರುಷರಿಗೆ ನೆಮ್ಮದಿಯ ಸುದ್ದಿ ಸಿಕ್ಕಂತಾಗಿದೆ. ಟಿಕೆಟ್‌ ದರ ಹೆಚ್ಚಿದರೂ ಇದರ ಎಫೆಕ್ಟ್‌ ಮಹಿಳೆಯರಿಗೆ ಇರೋದಿಲ್ಲ.

ಹೌದು, ಕೆಎಸ್‌ಆರ್‌ಟಿಸಿ(KSRTC) ಸಹಿತ ಎಲ್ಲಾ ನಾಲ್ಕು ನಿಗಮಗಳಲ್ಲಿ ಬಸ್‌ ಪ್ರಯಾಣ ದರ(Bus fare) ಏರಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ(Ramalingareddy) ಅವರು ಸ್ಪಷ್ಟಪಡಿಸಿದ್ದಾರೆ.

WhatsApp Group Join Now
Telegram Group Join Now

ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್‌.ಆರ್‌. ಶ್ರೀನಿವಾಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಶ್ರೀನಿವಾಸ್‌ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಇನ್ನೂ ಪ್ರಸ್ತಾವ ಬಂದಿಲ್ಲ. ಟಿಕೆಟ್‌ ದರ ಏರಿಸುವ ಚಿಂತನೆ ನಡೆಸಿಲ್ಲ’ ಎಂದು ಹೇಳಿದ್ದಾರೆ. ಸ್ಪಷ್ಟನೆ ನೀಡಿರುವ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದ್ದಾರೆ.

ಈ ಸುದ್ದಿ ಓದಿ:- Work From Home: SSLC ಪಾಸ್ ಆದವರಿಗೆ ಜಿಯೋ ಸಂಸ್ಥೆಯಿಂದ ವರ್ಕ್ ಫ್ರಮ್ ಹೋಂ ಕೆಲಸ.! ವೇತನ 30000/-

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಪ್ರಯಾಣ ದರ ಹೆಚ್ಚಿಸಲು ಚಿಂತನೆ ನಡೆದಿದೆ ಎಂದು ಶ್ರೀನಿವಾಸ್ ಶನಿವಾರವಷ್ಟೇ ಸುಳಿವು ನೀಡಿದ್ದರು. ಗುಬ್ಬಿ ತಾಲ್ಲೂಕಿನ ಮಣ್ಣೆಮ್ಮ ದೇವಸ್ಥಾನದಲ್ಲಿ ಶನಿವಾರ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಧನ ದರ(Fuel price), ವಾಹನ ಬಿಡಿ ಭಾಗ (Vehicle spare part)ಗಳ ಬೆಲೆ ಏರಿಕೆಗೂ ಸಿಬ್ಬಂದಿ ವೇತನ ವೆಚ್ಚದಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(State Road Transport Corporation) ನಷ್ಟ ಅನುಭವಿಸುತ್ತಿದೆ.

ಈ ನಷ್ಟ ಸರಿದೂಗಿಸಲು ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಹೇಳಿದ್ದರು ಕೆಎಸ್ ಆರ್ ಟಿಸಿ ಬಸ್ಸುಗಳ ಪ್ರಯಾಣ ದರ ಏರಿಕೆಯ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ.@BJP4Karnataka ನಾಯಕರು ಕಪೋಲಕಲ್ಪಿತ ವರದಿಗಳನ್ನು ಇಟ್ಟುಕೊಂಡು ಸುಳ್ಳು ಹಬ್ಬಿಸುವುದನ್ನು ಬಿಟ್ಟು, ಕಳೆದ 10 ವರ್ಷದಲ್ಲಿ ವಾಹನ ಬಿಡಿಭಾಗಗಳ ಬೆಲೆ ಏರಿಕೆಯಾಗಿದ್ದರ ಬಗ್ಗೆ ಇಂಧನ ತೈಲಗಳ ಬೆಲೆ ಏರಿಕೆಯ ಬಗ್ಗೆ, ರೈಲು ಪ್ರಯಾಣ ದರ ಏರಿಕೆಯ ಬಗ್ಗೆ ಉತ್ತರ ನೀಡಲಿ.

ಕೇಂದ್ರ ಸರ್ಕಾರದ ಬೆಲೆ ಏರಿಕೆಯ ನೀತಿಯಿಂದಾಗಿ ರಾಜ್ಯ ಸರ್ಕಾರಗಳ ಮೇಲೆ ಅನಿವಾರ್ಯ ಹೊರೆ ಆಗಿರುವ ಬಗ್ಗೆ ಜನತೆಗೆ ಉತ್ತರಿಸಲಿ ಎಂದಿದ್ದಾರೆ. ಈಗ ಈ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಬೇಕೆಂಬ ಹೇಳಿಕೆಗೆ ಸಚಿವರು ಅಸಮತಿ ಸೂಚಿಸಿದರು.ಅಧ್ಯಕ್ಷರಾಗಿ ಅವರು ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. ಆದರೆ,ಸಚಿವನಾಗಿ ನನ್ನ ಮುಂದೆ ಯಾವುದೇ ಪ್ರಸ್ತಾಪಗಳಿಲ್ಲ.

ಈ ಸುದ್ದಿ ಓದಿ:- Free Education: ಅಂಗನವಾಡಿ ಕೇಂದ್ರಗಳಲ್ಲೇ ಇನ್ಮುಂದೆ ಇಂಗ್ಲಿಷ್ ಮೀಡಿಯಂ LKG, UKG ತರಗತಿ ಆರಂಭ.!

ಒಂದು ವೇಳೆ ಅಂತಹ ಪ್ರಸ್ತಾಪಗಳು ಬಂದರೆ ಪರಿಶೀಲಿಸುವುದಾಗಿ ಹೇಳಿದರು ಈ ಮೂಲಕ ಬಸ್ ಪ್ರಯಾಣ ದರ ಏರಿಕೆಯ ಪ್ರಸ್ತಾಪವನ್ನು ಸಚಿವರು ತಳ್ಳಿ ಹಾಕಿದ್ದಾರೆ. ಪೆಟ್ರೋಲ್, ಡೀಸೆಲ್ ಮೇಲೆ ಮಾರಾಟ ತೆರಿಗೆ ಏರಿಕೆ ಮಾಡಿದ ಬಳಿಕ ಸಾರಿಗೆ ಸಂಸ್ಥೆಗಳಿಗೆ ನಷ್ಟವಾಗುತ್ತಿದೆ ಎಂಬ ವ್ಯಾಖ್ಯಾನಗಳು ಕೇಳಿ ಬಂದಿವೆ.

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ. ಬಿಜೆಪಿಯವರು ಹೇಳುತ್ತಿರುವಂತಹ ಹಗರಣ ನಡೆದಿರುವುದು 2021 ರಲ್ಲಿ. ಆಗ ಮುಖ್ಯಮಂತ್ರಿಯಾಗಿದ್ದುದು ಬಿ.ಎಸ್. ಯಡಿಯೂರಪ್ಪ ಅವರು. ಸಾರಿಗೆ ಸಚಿವರು, ಮುಡಾ ಅಧ್ಯಕ್ಷರಾಗಿದ್ದವರೂ ಕೂಡ ಬಿಜೆಪಿ ನಾಯಕರು. ಸಿದ್ದರಾಮಯ್ಯನವರು ತಮ್ಮ ಜಮೀನಿಗೆ ಪರಿಹಾರ ಕೇಳಿದ್ದಾರೆ.

ಬಿಜೆಪಿಯವರು ನಿಯಮ ಬಾಹಿರವಾಗಿ ನಿವೇಶನಗಳನ್ನು ಕೊಟ್ಟಿದ್ದರೆ ಅದು ಅವರೇ ಮಾಡಿದ ತಪ್ಪು. ಅದಕ್ಕೆ ನಮ್ಮ ಸರ್ಕಾರ ಹೊಣೆಯಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಪಕ್ಷ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಯಾವುದೇ ಆರೋಪಗಳು ಕೇಳಿಬಂದರೂ ತನಿಖೆ ನಡೆಸುತ್ತಿದ್ದೇವೆ. ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಹಗರಣದಲ್ಲಿ ಎಸ್ಐಟಿ ತನಿಖೆಗೆ ವಹಿಸಲಾಗಿದೆ. ಮುಡಾ ಹಗರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment