Labour Card
ಕಾರ್ಮಿಕ ಇಲಾಖೆಯಿಂದ ಹೊಸದಾಗಿ ಲೇಬರ್ ಕಾರ್ಡ್/ಕಾರ್ಮಿಕ ಕಾರ್ಡ್(Labour card) ಪಡೆಯಲು ಅರ್ಹ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಕಾರ್ಮಿಕ ಇಲಾಖೆಯಿಂದ ನಿಮ್ಮ ಉನ್ನತೀಕರಣಕ್ಕಾಗಿ ಅನೇಕ ಯೋಜನೆಗಳು ಜಾರಿಗೆ ಬರಲಿವೆ. ಈ ಯೋಜನೆಗಳ ಪ್ರಯೋಜನ ಪಡೆಯಲು ಕಾರ್ಮಿಕ ಕಾರ್ಡ್ (Labour Card Karnataka) ನೋಂದಣಿ ಕಡ್ಡಾಯವಾಗಿದೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರು ಅಸಂಘಟಿತ ವರ್ಗಕ್ಕೆ ಅರ್ಥಿಕ ಸಂಕಷ್ಟ ಎದುರಾದ ಸಮಯದಲ್ಲಿ ನೆರವಾಗಲು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮೂಲಕ ಅನೇಕ ಸಹಾಯಧನ ಯೋಜನೆಗಳನ್ನು ಅನುಷ್ಥಾನ ಮಾಡಲಾಗುತ್ತದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸಹಾಯಧನ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅಥವಾ ವಿವಿಧ ಯೋಜನೆಗಳ ಅರ್ಜಿಯನ್ನು ಕರೆದಾಗ ಅರ್ಜಿ ಸಲ್ಲಿಸಲು ಕಾರ್ಮಿಕರು ಕಡ್ಡಾಯವಾಗಿ ಲೇಬರ್ ಕಾರ್ಡ್ ಹೊಂದಿರಬೇಕಾಗುತ್ತದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (Karnataka Building and Other Construction Workers’ Welfare Board) ಮೂಲಕ ಕರ್ನಾಟಕ ಸರ್ಕಾರವು ಈ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಯೋಜನೆಗಳ ಲಾಭ ಪಡೆಯಲು ಕಾರ್ಮಿಕರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.
ಈ ಎಲ್ಲಾ ಕಾರಣಗಳಿಂದ ಪ್ರಸ್ತುತ ಕಾರ್ಮಿಕ ಮಂಡಳಿಯಿಂದ ಹೊಸದಾಗಿ ಲೇಬರ್ ಕಾರ್ಡ ಮಾಡಿಕೊಳ್ಳಲು ಅರ್ಹ ಫಲಾನುಭವಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಅಂಕಣದಲ್ಲಿ ಲೇಬರ್ ಕಾರ್ಡ್ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬವುದು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.
Labour card application-ಲೇಬರ್ ಕಾರ್ಡ್ ನೋಂದಣಿ ಅಭಿಯಾನ
ಪ್ರಸ್ತುತ ಕಾರ್ಮಿಕ ಇಲಾಖೆಯಿಂದ ಅರ್ಹ ಕಾರ್ಮಿಕರಿಗೆ ಮಂಡಳಿಯ ಯೋಜನೆಯ ಪ್ರಯೋಜನ ಒದಗಿಸಲು ಲೇಬರ್ ಕಾರ್ಡ್ ನೋಂದಣಿ ಅಭಿಯಾನವನ್ನು 30 ಡಿಸೆಂಬರ್ 2023 ರಿಂದ 30 ಡಿಸೆಂಬರ್ 2024 ರ ವರೆಗೆ ಮಾಡಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು
ಕಾರ್ಮಿಕ ಕಾರ್ಡ್ ಕೇವಲ ಗುರುತಿನ ಚೀಟಿಯಲ್ಲ, ಅದು ದುಡಿಯುವ ವರ್ಗದ ಭದ್ರಕೋಟೆ. ಈ ಕಾರ್ಡ್ ಧಾರಕರಿಗೆ ಲಭ್ಯವಿರುವ ಸೌಲಭ್ಯಗಳ ಪಟ್ಟಿ : ಅಪಘಾ.ತ ಪರಿಹಾರ: ದುರದೃಷ್ಟಕರ ಘಟನೆಗಳಲ್ಲಿ ಭದ್ರತೆ.
* ವೈದ್ಯಕೀಯ ಸಹಾಯಧನ: ಚಿಕಿತ್ಸೆಗೆ ಚಿಂತೆಯಿಲ್ಲ.
* ತಾಯಿ ಮಗು ಸಹಾಯ ಹಸ್ತ: ಜನನದ ಸಮಯದಲ್ಲಿ ಆರ್ಥಿಕ ನೆರವು.
* ಮದುವೆ ಸಹಾಯಧನ: ಹೊಸ ಜೀವನಕ್ಕೆ ಒಂದು ಕೈತುಂಬ ಭರವಸೆ.
* ದುರ್ಬಲತೆ ಪಿಂಚಣಿ: ವೃದ್ಧಾಪ್ಯದಲ್ಲಿ ಜೀವನ ನಡೆಸಲು ಒಂದು ಆಸರೆ.
* ಪಿಂಚಣಿ ಮುಂದುವರಿಕೆ: ಭವಿಷ್ಯದ ಭದ್ರತೆಗೆ ಖಾತರಿ.
* ಶೈಕ್ಷಣಿಕ ಸಹಾಯಧನ: ಮಕ್ಕಳ ಶಿಕ್ಷಣಕ್ಕೆ ಉತ್ತೇಜನ.
* ಹೆರಿಗೆ ಸೌಲಭ್ಯ: ಗರ್ಭಿಣಿ ಮಹಿಳೆಯರಿಗೆ ಆರೈಕೆ.
* ಅಂತ್ಯಕ್ರಿಯೆ ವೆಚ್ಚ: ದುಃಖದ ಸಮಯದಲ್ಲಿ ಒಂದು ನೆರವು.
* ಉಚಿತ ಸಾರಿಗೆ ಬಸ್ ಪಾಸ್: ಓಡಾಟಕ್ಕೆ ಯಾವುದೇ ಖರ್ಚಿಲ್ಲ.
* ಶ್ರಮಸಮರ್ಥ್ಯ ಟೂಲ್ ಕಿಟ್: ಕೆಲಸಕ್ಕೆ ಉಪಯುಕ್ತ ಸಾಧನಗಳ ಉಡುಗೊರೆ
ಲೇಬರ್ ಕಾರ್ಡ್ ಹೊಂದಲು ಬೇಕಾದ ಅರ್ಹತೆ
ನೋಂದಣಿ ಮಾಡುವ ಪೂರ್ವದಲ್ಲಿ 1 ವರ್ಷ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು.
ಲೇಬರ್ ಕಾರ್ಡ್ ಹೊಂದಲು ಬೇಕಾದ ಬೇಕಾಗಿರುವ ದಾಖಲೆಗಳು
* 90 ದಿನಗಳ ಉದ್ಯೋಗ ದೃಡೀಕರಣ ಪತ್ರ
* ಅರ್ಜಿದಾರ ಮತ್ತು ಅವಲಂಬಿತರ ಆಧಾರ ಕಾರ್ಡ್ (Aadhar card)
* ಅರ್ಜಿದಾರರ ಬ್ಯಾಂಕ್ ಪಾಸ್‌ಬುಕ್(Bank passbook )
* ಅರ್ಜಿದಾರರ ಆಧಾರ ಲಿಂಕ್ ಆಗಿರುವ ಮೊಬೈಲ್ ನಂಬರ್(Aadhar linked Mobile number)
* ಪೋಟೋ
ವಯೋಮಿತಿ
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳಲು ವಯೋಮಿತಿ 18 ರಿಂದ 60 ಮೀರಿರಬಾರದು.
ನೋಂದಣಿ ಮಾಡುವ ಕಚೇರಿಗಳು
ಹಿರಿಯ ಕಾರ್ಮಿಕ ನಿರೀಕ್ಷಿಕರು(Senior Labor Inspector) / ಕಾರ್ಮಿಕ ನಿರೀಕ್ಷಿಕರ ಕಚೇರಿ (Labor Inspector)
ನೋಂದಣಿ ಅಭಿಯಾನ
ಬೆಂಗಳೂರು ನಗರದಲ್ಲಿ 30 ನೇ ಡಿಸೆಂಬರ್ 2023 ರಿಂದ 30 ನೇ ಡಿಸೆಂಬರ್2024 ರವರೆಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಣಿ ಅಭಿಯಾನ ನಡೆಯಲಿದೆ.
Karmika cardಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?
ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ ಅಥವಾ ಕಾರ್ಮಿಕ ನಿರೀಕ್ಷಕರ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬವುದು.
Karmika elake-ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಿನ್ನೆಲೆ
ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರು ಅಸಂಘಟಿತ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಇಂತಹ ಕಾರ್ಮಿಕರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ಒಂದನೇ ಮಾರ್ಚ್ 1996 ರಿಂದ ಅನ್ವಯವಾಗುವಂತೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ, 1996 ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯ್ದೆ 1996 ಹಾಗೂ ಕೇಂದ್ರ ನಿಯಮಗಳು,
1998 ಅನ್ನು ಜಾರಿಗೆ ತಂದಿರುತ್ತದೆ. ಸದರಿ ಕಾಯ್ದೆಗಳನ್ನು ಯಥಾವತ್ತಾಗಿ ಜಾರಿಗೆ ತರುವ ಉದ್ದೇಶದಿಂದ 2006 ರಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕರ್ನಾಟಕ ನಿಯಮಗಳನ್ನು ರೂಪಿಸಿರುತ್ತದೆ. ಇದರ ಅನುಷ್ಠಾನಕ್ಕೆ 2007ರಲ್ಲಿ ರಾಜ್ಯ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ರಚಿಸಿರುತ್ತದೆ.
ಇನ್ನುಳಿದ ಭಾಗದ ಜನರು ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಗಳು ಮತ್ತು ಹಿರಿಯ ಕಾರ್ಮಿಕ ನಿರೀಕ್ಷಿಕರನ್ನು ಸಂಪರ್ಕಿಸಬಹುದು. ಸಹಾಯವಾಣಿ ಸಂಖ್ಯೆ 155214 ಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ತಿಳಿಯಬಹುದು.