Labor Card
ಕಾರ್ಮಿಕ ಕಾರ್ಡ್ ಹೊಂದಿದವರಿಗೆ ಮತ್ತು ಅವರ ಅವಲಂಬಿತದವರಿಗೆ 60 ಸಾವಿರಗಳ ಸಹಾಯಧನವನ್ನು ನೀಡಲಾಗುತ್ತಿರುವ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹೌದು, ಇಲಾಖೆಯ ವತಿಯಿಂದ ಕಾರ್ಮಿಕ ಕಾರ್ಡ್ ಹೊಂದಿದವರಿಗೆ ಮದುವೆ ಸಹಾಯ ಧನ (ಗೃಹಲಕ್ಷ್ಮೀ ಬಾಂಡ್) ವನ್ನು ನೀಡಲಾಗುತ್ತದೆ.
ಯಾರೆಲ್ಲ ಈ ಸಹಾಯಧನವನ್ನು ಪಡೆಯಬಹುದು?, ಇದಕ್ಕೆ ಅರ್ಜಿಯನ್ನು ಸಲ್ಲಿಸಲು ಬೇಕಾದ ಅರ್ಹತೆಗಳು ಯಾವುವು?, ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ?, ಯಾವ ಪೂರಕ ದಾಖಲೆಗಳು ಬೇಕಾಗುತ್ತವೆ?, ಎಂಬುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈಗಾಗಲೇ ನಾವೆಲ್ಲರೂ ಇಲಾಖೆಯ ವತಿಯಿಂದ ಕಾರ್ಮಿಕ ಕಾರ್ಡ್(Labor Card) ಹೊಂದಿದವರಿಗೆ ಅದೆಷ್ಟೋ ಯೋಜನೆಗಳ ಅಡಿಯಿಂದ ಸಹಾಯಧನವು(subsidy) ದೊರೆಯುತ್ತಿದೆ.
ಅಂತಹ ಯೋಜನೆಗಳಂತೆ ಗೃಹಲಕ್ಷ್ಮಿ ಬಾಂಡ್ ಯೋಜನೆಯು ಕೂಡ ಹೊಸದಾಗಿ ಸೇರ್ಪಡೆಯಾಗಿದೆ, ಈ ಯೋಜನೆಯ ಅಡಿಯಲ್ಲಿ ಕಾರ್ಮಿಕ ಕಾರ್ಡ್ ಹೊಂದಿದ ಕುಟುಂಬದವರಿಗೆ ಮದುವೆ ಮಾಡಲು 60,000 ಸಹಾಯಧನವನ್ನು ನೀಡಲಾಗುತ್ತಿದೆ. ನೋಂದಾಯಿತ ಕಟ್ಟಡ ಕಾರ್ಮಿಕರ ಮೊದಲ ಮದುವೆ ಅಥವಾ ಅವನ /ಅವಳ ಅವಲಂಭಿತರ ಮದುವೆಗೆ ನೀಡುವ ಸಹಾಯ ಧನ ಇದಾಗಿದೆ. ಇದರ ಕುರಿತಾದ ಹೆಚ್ಚಿನ ಮಾಹಿತಿ ಕೆಳಗಿನಂತಿವೆ.
ಏನಿದು ಮದುವೆ ಬಾಂಡ್, ಹೇಗೆ ಪಡೆಯಬೇಕು, ಎಲ್ಲಿ ವಿತರಣೆ ಮಾಡಿದರೆ ಎಲ್ಲ ಮಾಹಿತಿಯನ್ನು ನಿಮಗೆ ತೋರಿಸಿಕೊಡುತ್ತೇನೆ. ಇಲ್ಲಿದೆ ಮೊದಲು ಮಾಹಿತಿ ನೋಡಿ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಒಂದು ವೆಬ್‌ಸೈಟ್ ಇದೆ. ಈ ಒಂದು ವೆಬ್ಸೈಟ್ನ ಲಿಂಕ್ ಹೀಗಿದೆ ನೋಡಿ https://karbwwb.karnataka.gov.in/ ಕೊಟ್ಟಿದ್ದೇವೆ. ಕ್ಲಿಕ್ ಮಾಡಿ ನೋಡಬಹುದು.
ಒಂದು ವೇಳೆ ನಿಮಗೆ ಗೊತ್ತಾಗಲಿಲ್ಲವಾದರೆ, ಸಮೀಪ ಇರುವಂತಹ ಯಾವುದಾದರೂ ಇಂಟರ್ನೆಟ್ ಅಂಗಡಿಯಲ್ಲಿ ಹೋಗಿ ವಿಚಾರಣೆ ಮಾಡಬಹುದು ಮದುವೆ ಸಹಾಯಧನ ಗೃಹಲಕ್ಷ್ಮಿ ಬಾಂಡ್ ಕೂಡ ಅಂತಾರೆ. ಇದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾರ್ಡ್ ಹೊಂದಿರುವವರಿಗೆ ಸಿಗುತ್ತೆ ಮೊದಲನೇ ಮದುವೆ ನೀವೇನಾದರೂ 2 3 ಮದುವೆಯಾದ್ರೆ ಕೊಡಲ್ಲ. ಒಂದೇ ಮದುವೆಗೆ ಕೊಡೋದು ಒಂದನೇ ಮದುವೆಗೆ 60,000 ರೂಪಾಯಿಗಳ ಒಂದು ಸಹಾಯದನ ಸಿಗುತ್ತೆ.
ನೋಂದಾಯಿತ ಮಕ್ಕಳ ಅವಲಂಬಿತರು ನೋಂದಾಯಿತ ಮಕ್ಕಳಿಗೆ ಅಂದ್ರೆ ಇವಾಗ ನೋಡಿ ನಿಮ್ಮದು ಕಾರ್ಮಿಕ ಕಾರ್ಡ್ ಇದೆ. ನಿಮ್ಮ ಮಕ್ಕಳ ಒಂದು ಮದುವೆಗೂ ಕೂಡ ಇಲ್ಲಿ ಸಹಾಯಧನ ಸಿಗುತ್ತೆ. ₹60,000, 60,000 ರೂಪಾಯಿಗಳ ಸಹಾಯಧನ ಸಿಗುತ್ತೆ. ಇದಕ್ಕೆ ಬೇಕಾಗಿರುವ ದಾಖಲೆಗಳ ಮಾಹಿತಿ ಕೊಟ್ಟಿದ್ದಾರೆ. ಇದಕ್ಕೆ ಅನ್ವಯಿಸುವ ಅರ್ಜಿ ಯಾವ ರೀತಿ ಸಲ್ಲಿಸಬೇಕು? ಇಲ್ಲಿ ಅರ್ಜಿ ಸಲ್ಲಿಸುವ ವಿಧಾನವಿದೆ. ಬೇಕಾಗುವ ದಾಖಲೆಗಳು ಇವೆ. ಯಾವ ಯಾವ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.
ಇದಕ್ಕೆ ಬೇಕಾಗುವಂತಹ ಪತ್ರಗಳು ಯಾವ್ಯಾವು ಎಂದರೆ ಮೊದಲಿಗೆ ನಿಮ್ಮ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಹಾಗೂ ನಿಮ್ಮ ಜಾತಿ ಆದಾಯ ಆಮೇಲೆ ನಿಮ್ಮ ಲೇಬರ್ ಕಾರ್ಡ್ ಹಾಗೂ ಇದರ ಜೊತೆಗೆ ಬ್ಯಾಂಕ್ ಪಾಸ್ ಬುಕ್ ಇವೆಲ್ಲವನ್ನೂ ತೆಗೆದುಕೊಂಡು ಹೋಗಿ ನೀವು ನಿಮ್ಮ ಸಮೀಪ ಇರುವಂತಹ ಗ್ರಾಮ ವನ್ನ ಕೇಂದ್ರದಲ್ಲಿ ಹೋಗಿ ನೀವು ವಿಚಾರಸಬಹುದು. ಕಾರ್ಮಿಕ ಇಲಾಖೆ ಈ ಒಂದು ಟ್ವಿಟರ್ ಹ್ಯಾಂಡಲ್ ಇದೆ. ಇಲ್ಲಿ ಕೊಟ್ಟಿದ್ದಾರೆ.
ಹುಬ್ಬಳ್ಳಿಯ ಕಾರ್ಮಿಕ ಭವನದಲ್ಲಿ ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮದುವೆ ಬಾಂಡ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಕೂಡ ಉಪಸ್ಥಿತರಿದ್ದರು. ನೋಡಿ ಸ್ನೇಹಿತರೇ ಈ ರೀತಿಯಾಗಿ ಕಾರ್ಮಿಕ ಇಲಾಖೆಯ ವತಿಯಿಂದ ಮದುವೆ ಬಾಂಡ್ ನಿಮಗೆ ಸಿಗಲಿವೆ.
ಈ ಯೋಜನೆಗೆ(Scheme) ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಅರ್ಹತೆಗಳು :
* ನೋಂದಾಯಿತ ಕಟ್ಟಡ ಕಾರ್ಮಿಕನು ಮದುವೆಯ ಸಹಾಯ ಧನ ಪಡೆಯಲು ಮದುವೆಯಾದ ದಿನಾಂಕದಿಂದ ನೋಂದಣಿಯಾದ ದಿನಾಂಕದವರೆಗೆ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿರಬೇಕು.
* ನೋಂದಾಯಿತ ಕಟ್ಟಡ ಕಾರ್ಮಿಕನ ಕುಟುಂಬವು ಎರಡು ಬಾರಿ ಮಾತ್ರ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ. (ನೋಂದಾಯಿತ ಕಟ್ಟಡ ಕಾರ್ಮಿಕನ ಕುಟುಂಬದಲ್ಲಿ ಇರುವ ನೋಂದಾಯಿತ ನಿರ್ಮಾಣ ಕಾರ್ಮಿಕನ ಸದಸ್ಯರನ್ನು ಲೆಕ್ಕಿಸದೆ ಒಂದು ನಿರ್ದಿಷ್ಠವಾದ ಮದುವೆಗೆ ಒಂದೇ ಸಹಾಯ ಧನವಾಗಿ ಹಕ್ಕು ಸಾಧಿಸಬೇಕಾಗಿರುತ್ತದೆ).
* ನೋಂದಾಯಿತ ಕಟ್ಟಡ ಕಾರ್ಮಿಕನ ಮಗ ಅಥವಾ ಮಗಳು ಮದುವೆ ಸಹಾಯಧನವನ್ನು ಪಡೆಯಲು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ಹೊಂದಿರಬೇಕು.
* ವಿವಾಹ ನೋಂದಣಾಧಿಕಾರಿಯಿಂದ ಪಡೆದ ವಿವಾಹ ನೋಂದಣಾ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
ಮುಖ್ಯ ದಾಖಲೆಗಳು ಇಂತಿವೆ
* ಫಲಾನುಭವಿಯೆಂದು ನೊಂದಣೆಯಾಗಿ ಒಂದು ವರ್ಷದ ನಂತರ ಅರ್ಜಿಯನ್ನು ಸಲ್ಲಿಸುವುದು
* ಮಂಡಳಿಯಿಂದ ನೀಡಲಾದ ಮೂಲ ಗುರುತಿನ ಚೀಟಿ
* ಉದ್ಯೋಗ ದೃಡೀಕರಣ ಪತ್ರ
* ಬ್ಯಾಂಕ್ ಖಾತೆ ವಿವರಗಳು
* ವಿವಾಹ ನೋಂದಣಾಧಿಕಾರಿಗಳಿಂದ ಪಡೆದ ವಿವಾಹ ನೋಂದಣಾ ಪತ್ರ
* ಮದುವೆಯ ಆಮಂತ್ರಣ ಪತ್ರ
* ಮದುವೆ ಕರ್ನಾಟಕ ರಾಜ್ಯದ ಹೊರಗೆ ಜರುಗಿದ್ದಲ್ಲಿ ಅಫಿಡೆವಿಟ್ ಸಲ್ಲಿಸುವುದು
ರೇಷನ್ ಕಾರ್ಡ್
* ಮದುವೆಯಾಗಿ ಆರು ತಿಂಗಳೊಳಗೆ ಅರ್ಜಿಯನ್ನುಸಲ್ಲಿಸಬೇಕು.
ಅರ್ಜಿಯನ್ನು ಸಲ್ಲಿಸುವ ವಿಧಾನ ಹೀಗಿದೆ
ಹಂತ 1: ಅರ್ಜಿಯನ್ನು ಅಭ್ಯರ್ಥಿಗಳು ಸೇವಾ ಸಿಂಧುವಿನ ಮೂಲಕ ತಾವೇ ಸಲ್ಲಿಸಬಹುದು ಅಥವಾ ಹತ್ತಿರದ ಕಂಪ್ಯೂಟರ್ ಆನ್ಲೈನ್ ಸೆಂಟರ್ ಗಳಿಗೆ ತೆರಳಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹಂತ 2: ಅರ್ಜಿಯನ್ನು ಸಲ್ಲಿಸಿದ ನಂತರ ನಿಮಗೆ ಅರ್ಜಿ ಸಲ್ಲಿಸಿದ ಪ್ರತಿಯೊಂದು ನೀಡಲಾಗುತ್ತದೆ.
ಹಂತ 3: ಆ ಪ್ರತಿಯನ್ನು ನೀವು, ನಿಮ್ಮ ತಾಲೂಕಿನ ಕಾರ್ಮಿಕ ಕಚೇರಿಗೆ ತೆರಳಿ ಅರ್ಜಿಯನ್ನು ಮತ್ತು ದಾಖಲೆಗಳನ್ನು ಸಲ್ಲಿಸಬೇಕು.
ಹಂತ 4: ನಂತರ ಅದನ್ನು, ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ ನಡೆಸಲಾಗುತ್ತದೆ.
ಹಂತ 5: ಮುಂದುವರೆದು, ಕಾರ್ಮಿಕ ಅಧಿಕಾರಿಯವರಿಂದ ಪರಿಶೀಲನೆ ಮತ್ತು ಅನುಮೋದನೆ ಆಗುತ್ತದೆ.
ಹೀಗೆ ನೀವು 60,000ರೂಗಳನ್ನು ಇಲಾಖೆಯ ವತಿಯಿಂದ ನಿಮ್ಮ ಖಾತೆಗೆ ನೇರವಾಗಿ ಪಡೆದುಕೊಳ್ಳಬಹುದಾಗಿದೆ.