Labour Card: ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಸಿಗಲಿದೆ 60,000 ಸಹಾಯಧನ.!

Labour Card

ಕರ್ನಾಟಕ ರಾಜ್ಯದಲ್ಲಿರುವ ಕಟ್ಟಡ ನಿರ್ಮಾಣ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗಾಗಿ ಕಾರ್ಮಿಕ ಕಲ್ಯಾಣ ಮಂಡಳಿಯು ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳ ಪ್ರಯೋಜನ ಪಡೆಯುವುದಕ್ಕೆ ಮಂಡಳಿಯಲ್ಲಿ ಸದಸ್ಯರಾಗಿ ಕಾರ್ಮಿಕರ ಕಾರ್ಡ್ (Labour card) ಪಡೆದಿರಬೇಕಾದದ್ದು ಕಡ್ಡಾಯ.

ಕಾರ್ಮಿಕರ ಕಾರ್ಡ್ ಪಡೆದು ಸದಸ್ಯತ್ವ ಹೊಂದಿರುವಂತಹ ಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ಸರ್ಕಾರದಿಂದ ಹತ್ತಾರು ಯೋಜನೆಗಳ ಪ್ರಯೋಜನ ಸಿಗುತ್ತಿದೆ. ಆ ಕಾರ್ಮಿಕನ ಕುಟುಂಬದಲ್ಲಿ ಆಗುವ ಜನನದಿಂದ ಹಿಡಿದು ಮದುವೆ, ಶಿಕ್ಷಣ, ಆರೋಗ್ಯ, ಹೆರಿಗೆ, ಪಿಂಚಣಿ, ಮರಣ ಇತ್ಯಾದಿವರೆಗೂ ಕೂಡ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ.

WhatsApp Group Join Now
Telegram Group Join Now

ಆದರೆ ಇನ್ನು ನಮ್ಮಲ್ಲಿ ಅನೇಕ ಕಾರ್ಮಿಕರಿಗೆ ಈ ಬಗ್ಗೆ ಮಾಹಿತಿ ಇಲ್ಲದೆ ವಂಚಿತರಾಗುತ್ತಿದ್ದಾರೆ ಮತ್ತೊಂದೆಡೆ ಸರ್ಕಾರದಿಂದ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ರೂಪಿಸಲಾಗಿರುವ ಈ ಯೋಜನೆಗಳ ಪ್ರಯೋಜನ ಪಡೆಯಲು ಅನರ್ಹರು ಕೂಡ ನಕಲಿ ದಾಖಲೆಗಳನ್ನು ಸೃಷ್ಟಿಸಿ ಇಲಾಖೆಗೆ ವಂಚಿಸಿ ಕಾರ್ಮಿಕರ ಕಾರ್ಡ್ ಗಳನ್ನು ಹೊಂದಿ ಈ ಸವಲತ್ತುಗಳನ್ನು ಪಡೆದು ವಂಚಿಸುತ್ತಿದ್ದಾರೆ.

ಈ ಜಾಲವನ್ನು ಹಚ್ಚಲ್ಲಾಗಿದ್ದು, ಸರ್ಕಾರವು ಇಂತಹ ನಕಲಿ ಕಾರ್ಮಿಕರಿಗೆ ತಮ್ಮ ಲೇಬರ್ ಕಾರ್ಡುಗಳನ್ನು ಕೂಡಲೇ ಹಿಂತಿರುಗಿಸಲು ಸೂಚನೆ ಕೊಟ್ಟಿದೆ. ಒಂದು ವೇಳೆ ತಪ್ಪಿದಲ್ಲಿ ದಂಡ ಸಮೇತ ಶಿಕ್ಷೆ ವಿಧಿಸುವುದಾಗಿ ಕೂಡ ಎಚ್ಚರಿಸಿದೆ. ಹಾಗಾದರೆ ಸರ್ಕಾರದಿಂದ ಸಿಗುತ್ತಿರುವ ಸವಲತ್ತುಗಳು ಏನೇನು ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ…

ನೋಂದಾಯಿತ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು:-

* ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕನ ಪತ್ನಿ ಅಥವಾ ಲೇಬರ್ ಕಾರ್ಡ್ ಹೊಂದಿರುವ ಮಹಿಳಾ ಅಭ್ಯರ್ಥಿಯು ತನ್ನ ಮೊದಲ ಎರಡು ಮಗುವಿನ ಜನನದ ಸಂದರ್ಭದಲ್ಲಿ ರೂ.50,000 ಸಹಾಯಧನ ಪಡೆಯಬಹುದು.
* ಅಷ್ಟೇ ಅಲ್ಲದೆ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಟಿಕಾಂಶದ ಉದ್ದೇಶದಿಂದ ವಾರ್ಷಿಕವಾಗಿ ಐದು ವರ್ಷಗಳವರೆಗೆ ರೂ.6,000 ಸಹಾಯಧನ ಸಿಗಲಿದೆ.

* ಕಾರ್ಮಿಕರ ಮಕ್ಕಳಿಗೆ ಶೂನ್ಯ ವೆಚ್ಚದ ಶಿಕ್ಷಣ ಮತ್ತು ವಿದ್ಯಾಭ್ಯಾಸಕ್ಕೆ ಅಗತ್ಯವಾದ ಪರಿಕರಗಳುಳ್ಳ ಶಾಲಾ ಕಿಟ್, ಉಚಿತ ಲ್ಯಾಪ್ಟಾಪ್ ಮತ್ತು ವಿದ್ಯಾರ್ಥಿ ವೇತನ ಕೂಡ ಸಿಗುತ್ತದೆ
* ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಉಚಿತವಾಗಿ ಸರ್ಕಾರದಿಂದ ಟೂಲ್ಸ್ ಕಿಟ್ ಕೂಡ ಸಿಗುತ್ತದೆ.

* ಕಾರ್ಮಿಕರ ಕಾರ್ಡ್ ಹೊಂದಿರುವ ಪೋಷಕರು ತಮ್ಮ ಇಬ್ಬರು ಮಕ್ಕಳ ಮದುವೆ ಸಂದರ್ಭದಲ್ಲಿ ರೂ.60,000 ದವರೆಗೆ ನೆರವು ಪಡೆಯಲಿದ್ದಾರೆ
* ಬಿಜು ಸ್ವಾತ್ಯ ಕಲ್ಯಾಣ ಯೋಜನೆ ಮತ್ತು ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಉಚಿತ ಆರೋಗ್ಯ ವಿಮೆ ಪ್ರಯೋಜನ ಪಡೆಯುತ್ತಾರೆ
* ಮಕ್ಕಳಿಗೆ ಜೀವ ವಿಮೆ ಪ್ರಯೋಜನಗಳು ಸಿಗಲಿದೆ.

* ಕೌಶಲ್ಯಗಳನ್ನು ಸುಧಾರಿಸಲು ಸಹಾಯ ನೀಡಲಾಗುತ್ತದೆ
* ಕಾರ್ಮಿಕನಿಗೆ ಸೈಕಲ್ ಖರೀದಿಗೆ ಧನ ಸಹಾಯ ಮಾಡಲಾಗುತ್ತದೆ
* ನಿರ್ಮಾಣ ಶ್ರಮಿಕ ಪಕ್ಕಾ ಘರ್ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣಕ್ಕಾಗಿ ಸಾಲಗಳು ಮತ್ತು ಮುಂಗಡಗಳು ಸಿಗಲಿದೆ
* 3 ವರ್ಷದ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಕಾರ್ಮಿಕರಿಗೆ ರೂ.3000ದವರೆಗೆ ಪಿಂಚಣಿ ಸಿಗುತ್ತದೆ.

* ಪಿಂಚಣಿ ಸೌಲಭ್ಯದಡಿ ಕಾರ್ಮಿಕ ಒಂದುವೇಳೆ ಮೃ’ತಪಟ್ಟಿದ್ದರೆ ಮೃ’ತ ಕಾರ್ಮಿಕನ ಪತಿ ಅಥವಾ ಪತ್ನಿಗೆ ಆತನ ಮರಣದ ನಂತರವೂ ರೂ.1500 ಪಿಂಚಣಿ ಸಿಗುತ್ತದೆ.
* ದುರ್ಬಲತೆ ಪಿಂಚಣಿ ಯೋಜನೆಯಡಿ ಕಟ್ಟಡ ಕಾಮಗಾರಿ ಸಂದರ್ಭದಲ್ಲಿ ಅ’ಪ’ಘಾ’ತಗೊಂಡು ಅಥವಾ ಕಾಯಿಲೆಗಳಿಂದ ಭಾಗಶಃ ಅಥವಾ ಶಾಶ್ವತ ಅಂಗವಿಕಲತೆ ಹೊಂದಿದರೆ ಮಾಸಿಕ ರೂ.2,000 ಪಿಂಚಣಿ ಹಾಗೂ ದುರ್ಬಲತೆಗುಣವಾಗಿ 2 ಲಕ್ಷದವರೆಗೆ ಪರಿಹಾರ ಧನ ಸಿಗುತ್ತದೆ.

* ಕಾರ್ಮಿಕರ ಕಾರ್ಡ್ ಹೊಂದಿರುವ ಕಾರ್ಮಿಕ ಸಾವನ್ನಪ್ಪಿದ ಸಂದರ್ಭದಲ್ಲಿ ಅಂತ್ಯಕ್ರಿಯ ವೆಚ್ಚಕ್ಕಾಗಿ ರೂ.4,000 ಮತ್ತು ಅನುಗ್ರಹ ರಾಶಿ ಯೋಜನೆಯಡಿಯಲ್ಲಿ ಕುಟುಂಬಕ್ಕೆ ರೂ.71,000 ಸಹಾಯಧನ ಸಿಗುತ್ತದೆ
* ನೋಂದಾಯಿತ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಕೂಡ ಇದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment