Labour Card :
ಕರ್ನಾಟಕ ಕಟ್ಟದ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಯೋಜನೆಗಳ ಪ್ರಯೋಜನವನ್ನು ಪಡೆಯಲು ಕಾರ್ಮಿಕ ಕಾರ್ಡ (Labour Card) ಅನ್ನು ಪಡೆಯಲು ಅಥವಾ ಈಗಾಗಲೇ ಕಾರ್ಡ್ ಹೊಂದಿರುವವರು ನವೀಕರಣ ಮಾಡಿಕೊಳ್ಳಲು ಅರ್ಜಿ ಸಲ್ಲಿಸಲು ಅವಕಾಶವನ್ನು ರಾಜ್ಯ ಸರ್ಕಾರ ನೀಡಿದೆ. ಈ ಕಾರ್ಡ್ ಕಾರ್ಮಿಕರಿಗೆ ಹಲವಾರು ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಯೋಜನಗಳನ್ನು ನೀಡಲು ನಿಗದಿಯಾಗಿದೆ.
ಕಾರ್ಮಿಕ ಕಾರ್ಡ್ ಪಡೆಯಲು ಅಗತ್ಯ ಮಾಹಿತಿಗಳು
1. ಕಾರ್ಮಿಕ ಕಾರ್ಡ್ ಅರ್ಜಿ ಸಲ್ಲಿಸುವ ಸ್ಥಳ:
ಕಾರ್ಮಿಕ ಕಾರ್ಡ್ ಪಡೆಯಲು ಅರ್ಜಿಯನ್ನು ಸಮೀಪದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರಗಳಲ್ಲಿ ಸಲ್ಲಿಸಬಹುದು. ಅಲ್ಲದೆ, ಜಿಲ್ಲಾ ಕಾರ್ಮಿಕ ಕಚೇರಿಯಲ್ಲಿಯೂ ಈ ಸೇವೆ ಲಭ್ಯವಿದೆ.
2. ಅರ್ಹತಾ ಮಾನದಂಡಗಳು:
ಕಾರ್ಮಿಕ ಕಾರ್ಡ್ ಪಡೆಯಲು ಅರ್ಜಿದಾರರು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
- ಖಾಯಂ ನಿವಾಸಿ: ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ವಯೋಮಿತಿಯ ಹಂತ: ಅರ್ಜಿದಾರರ ವಯಸ್ಸು ಕನಿಷ್ಟ 18 ವರ್ಷ ಮತ್ತು ಗರಿಷ್ಠ 60 ವರ್ಷ ಆಗಿರಬೇಕು.
- ಉದ್ಯೋಗದ ಸ್ವರೂಪ: ಅರ್ಜಿದಾರರು ಕಟ್ಟಡ ಮತ್ತು ಇತರೆ ನಿರ್ಮಾಣ ಉದ್ಯೋಗದಲ್ಲಿ ಕೆಲಸ ಮಾಡುತ್ತಿರಬೇಕು.
- ನೋಂದಣಿ: ಅರ್ಜಿದಾರರು ಜಿಲ್ಲಾ ಕಾರ್ಮಿಕ ಕಚೇರಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿರಬೇಕು.
3. Labour Card Application ಗೆ ಅಗತ್ಯ ದಾಖಲೆಗಳು:
ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಅಗತ್ಯ:
- ಆಧಾರ್ ಕಾರ್ಡ್ (ಅರ್ಜಿದಾರ ಮತ್ತು ಕುಟುಂಬ ಸದಸ್ಯರ ಪ್ರತಿ)
- ಬ್ಯಾಂಕ್ ಪಾಸ್ ಬುಕ್
- ರೇಷನ್ ಕಾರ್ಡ್
- ಪಾಸ್ಪೋರ್ಟ್ ಅಳತೆಯ ಫೋಟೋ
- ಉದ್ಯೋಗ ದೃಢೀಕರಣ ಪ್ರಮಾಣ ಪತ್ರ
- ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ
- ಮತದಾರ ಗುರುತಿನ ಚೀಟಿ
ಕಾರ್ಮಿಕ ಕಾರ್ಡ್ನ ಪ್ರಯೋಜನಗಳು
ಈ ಕಾರ್ಡ್ ಹೊಂದಿರುವ ಫಲಾನುಭವಿಗಳು ವಿವಿಧ ಯೋಜನೆಗಳ ಸೌಲಭ್ಯ ಪಡೆಯಬಹುದು. ಪ್ರಮುಖ ಪ್ರಯೋಜನಗಳು ಇಂತಿವೆ:
- ಪಿಂಚಣಿ ಸೌಲಭ್ಯ: ವಯೋವೃದ್ಧ ಕಾರ್ಮಿಕರಿಗೆ ಮಾಸಿಕ ಪಿಂಚಣಿ ಲಭ್ಯ.
- ಅಪಘಾತ ಪರಿಹಾರ: ಕಾರ್ಮಿಕರು ಕೆಲಸ ಮಾಡುವ ವೇಳೆ ಅಪಘಾತಕ್ಕೀಡಾದಲ್ಲಿ ಪರಿಹಾರ ಲಭ್ಯ.
- ವೈದ್ಯಕೀಯ ಸಹಾಯಧನ: ಕಾರ್ಮಿಕರ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಉಚಿತ ಅಥವಾ ಸಬ್ಸಿಡಿ ದರದಲ್ಲಿ ವೈದ್ಯಕೀಯ ಚಿಕಿತ್ಸೆ ಲಭ್ಯ.
- ತಾಯಿ ಮಗು ಸಹಾಯ ಹಸ್ತ: ಗರ್ಭಿಣಿ ಕಾರ್ಮಿಕ ಮಹಿಳೆಯರಿಗೆ ಧನ ಸಹಾಯ.
- ಹೆರಿಗೆ ಸೌಲಭ್ಯ: ತಾಯಿ ಲಕ್ಷ್ಮೀ ಬಾಂಡ್ ಮೂಲಕ ಹೆರಿಗೆಗೆ ನೆರವು.
- ಮದುವೆ ಸಹಾಯಧನ: ಮನೆ ಲಕ್ಷ್ಮೀ ಬಾಂಡ್ ಯೋಜನೆಯಡಿಯಲ್ಲಿ ಮದುವೆಗೆ ಸಹಾಯಧನ.
- ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ: ಕಾರ್ಮಿಕ ಚಿಕಿತ್ಸಾ ಭಾಗ್ಯ ಯೋಜನೆಯಡಿ ಆರೋಗ್ಯ ಸೇವೆಗೆ ಹಣಕಾಸು ನೆರವು.
- ಶೈಕ್ಷಣಿಕ ಧನಸಹಾಯ: ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಸಹಾಯಧನ.
- ದುರ್ಬಲತೆ ಪಿಂಚಣಿ: ಶಾರದಿಯಾಗಿರುವ ಕಾರ್ಮಿಕರಿಗೆ ಮಾಸಿಕ ಪಿಂಚಣಿ.
- ಅಂತ್ಯಕ್ರಿಯೆ ವೆಚ್ಚಕ್ಕೆ ಸಹಾಯಧನ: ಅಂತ್ಯಕ್ರಿಯೆಗೆ ಆರ್ಥಿಕ ನೆರವು.
- BMTC ಬಸ್ ಪಾಸ್ ಸೌಲಭ್ಯ: BMTC ಬಸ್ ಪಾಸ್ ದೊರೆಯುವ ಅವಕಾಶ.
ಕಾರ್ಮಿಕ ಕಾರ್ಡ್ ನವೀಕರಣ ಪ್ರಕ್ರಿಯೆ
ಒಮ್ಮೆ ಕಾರ್ಮಿಕ ಕಾರ್ಡ್ ಪಡೆದ ಬಳಿಕ, ನಿಗದಿತ ಅವಧಿ ಕಳೆದ ನಂತರ ಅದನ್ನು ನವೀಕರಿಸಿಕೊಳ್ಳಬೇಕು. ಇದನ್ನು ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರಗಳಲ್ಲಿ ನೇರವಾಗಿ ತೆರಳಿ ಅರ್ಜಿ ಸಲ್ಲಿಸುವ ಮೂಲಕ ನವೀಕರಿಸಬಹುದಾಗಿದೆ.
ಈ ಕಾರ್ಡ್ ಕಾರ್ಮಿಕರಿಗೆ ಹಾಗೂ ಅವರ ಕುಟುಂಬಗಳಿಗೆ ಒದಗಿಸುವ ಹಲವು ಸೌಲಭ್ಯಗಳ ಕಾರಣದಿಂದಾಗಿ, ಅರ್ಹ ಕಾರ್ಮಿಕರು ಕಾರ್ಡ್ ಪಡೆಯಲು ಅಥವಾ ನವೀಕರಣ ಮಾಡಿಕೊಳ್ಳಲು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು.