Labour Card : ಕಾರ್ಮಿಕ ಕಾರ್ಡ್‌ ರಿನಿವಲ್ ಮಾಡಲು ಈ ದಾಖಲೆ ಕಡ್ಡಾಯ.!

Labour Card

ಕಾರ್ಮಿಕ ಇಲಾಖೆ (Department of Labor) ವತಿಯಿಂದ ಹಲವು ಯೋಜನೆಗಳನ್ನು ಕಾರ್ಮಿಕರಿಗಾಗಿ ಜಾರಿಗೆ ತರಲಾಗುತ್ತದೆ. ಆ ಯೋಜನೆಗಳ ಸೌಲಭ್ಯ ಪಡೆಯಲು ಕಾರ್ಮಿಕರು ನೋಂದಣಿ (Karnataka Labour Card) ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮೂಲಕ ಅನೇಕ ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ. ಅದಕ್ಕಾಗಿ ಕಡ್ಡಾಯವಾಗಿ ಕಾರ್ಮಿಕರು ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.

ಕಾರ್ಮಿಕ ಕಾರ್ಡ್‌ ಪ್ರಯೋಜನ

– ಅಪಘಾತ ಪರಿಹಾರ: ದುರದೃಷ್ಟಕರ ಘಟನೆಗಳಲ್ಲಿ ಭದ್ರತೆ.
– ವೈದ್ಯಕೀಯ ಸಹಾಯಧನ: ಚಿಕಿತ್ಸೆಗೆ ಚಿಂತೆಯಿಲ್ಲ.
– ತಾಯಿ ಮಗು ಸಹಾಯ ಹಸ್ತ: ಜನನದ ಸಮಯದಲ್ಲಿ ಆರ್ಥಿಕ ನೆರವು.
– ಮದುವೆ ಸಹಾಯಧನ: ಹೊಸ ಜೀವನಕ್ಕೆ ಒಂದು ಕೈತುಂಬ ಭರವಸೆ.
– ದುರ್ಬಲತೆ ಪಿಂಚಣಿ: ವೃದ್ಧಾಪ್ಯದಲ್ಲಿ ಜೀವನ ನಡೆಸಲು ಒಂದು ಆಸರೆ.

– ಪಿಂಚಣಿ ಮುಂದುವರಿಕೆ: ಭವಿಷ್ಯದ ಭದ್ರತೆಗೆ ಖಾತರಿ.
– ಶೈಕ್ಷಣಿಕ ಸಹಾಯಧನ: ಮಕ್ಕಳ ಶಿಕ್ಷಣಕ್ಕೆ ಉತ್ತೇಜನ.
– ಹೆರಿಗೆ ಸೌಲಭ್ಯ: ಗರ್ಭಿಣಿ ಮಹಿಳೆಯರಿಗೆ ಆರೈಕೆ.
– ಅಂತ್ಯಕ್ರಿಯೆ ವೆಚ್ಚ: ದುಃಖದ ಸಮಯದಲ್ಲಿ ಒಂದು ನೆರವು.
– ಉಚಿತ ಸಾರಿಗೆ ಬಸ್ ಪಾಸ್: ಓಡಾಟಕ್ಕೆ ಯಾವುದೇ ಖರ್ಚಿಲ್ಲ.
– ಶ್ರಮಸಮರ್ಥ್ಯ ಟೂಲ್ ಕಿಟ್: ಕೆಲಸಕ್ಕೆ ಉಪಯುಕ್ತ ಸಾಧನಗಳ ಉಡುಗೊರೆ.

ಕಾರ್ಮಿಕ ಕಾರ್ಡ್ ಅರ್ಹತೆ: ಅರ್ಜಿ ಸಲ್ಲಿಸಲು ಬಯಸುವ ಫಲಾನುಭವಿಗಳು ನೋಂದಣಿ ಪೂರ್ವದಲ್ಲಿ 12 ತಿಂಗಳಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ಮಾಡಿರಬೇಕು.

ಬೇಕಾಗುವ ದಾಖಲೆಗಳು

– 90 ದಿನಗಳ ಉದ್ಯೋಗ ದೃಢೀಕರಣ ಪತ್ರ,
– ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಪ್ರತಿ,
– ಅರ್ಜಿದಾರರ ಆಧಾರ್ ಕಾರ್ಡ್ʼಗೆ ಲಿಂಕ್‌ ಇರುವ ದೂರವಾಣಿ ಸಂಖ್ಯೆ
– ಅರ್ಜಿದಾರ ಹಾಗೂ ಅವಲಂಬಿತರ ಆಧಾರ್ ಕಾರ್ಡ್ ಪ್ರತಿ

ವಯೋಮಿತಿ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿಗಾಗಿ ವಯೋಮಿತಿಯು 18 ರಿಂದ 60 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.

ಇನ್ನೂ, ಈಗಾಗಲೇ ಕಾರ್ಮಿಕ ಕಾರ್ಡ್‌ ಪಡೆದಿರುವವರು, ಅದರಲ್ಲೇನಾದರೂ ಮಾಹಿತಿ ತಪ್ಪಿದ್ದಲ್ಲಿ ಅದನ್ನು ನವೀಕರಿಸಬಹುದಾಗಿದೆ. ನೋಂದಾಯಿತ ಕಟ್ಟಡ ಕಾರ್ಮಿಕರು ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ದೃಢೀಕರಣ ಪತ್ರ, ಮಂಡಳಿಯಿಂದ ವಿತರಿಸಿದ ಕಾರ್ಮಿಕ ಕಾರ್ಡ್ ಮತ್ತು ಆಧಾರ್ ಕಾರ್ಡ್ ಮೂಲಕ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ನವೀಕರಣ ಮಾಡಿಕೊಳ್ಳಬಹುದು.

ಕಾರ್ಮಿಕ ಕಾರ್ಡ್ ನೋಂದಣಿ ನವೀಕರಣ ಮಾಡಿಕೊಳ್ಳಲು ಅಗತ್ಯ ದಾಖಲೆಗಳು

– ಉದ್ಯೋಗ ದೃಢೀಕರಣ ಪತ್ರ
– ಸ್ವಯಂ ದೃಢೀಕರಣ ಪತ್ರ
– ಮಂಡಳಿಯಿಂದ ವಿತರಿಸಿದ ಕಾರ್ಮಿಕ ಕಾರ್ಡ್
– ಆಧಾರ್ ಕಾರ್ಡ್ ಪ್ರತಿ‌

ನೋಂದಣಿ ಮಾಡುವ ಕಚೇರಿಗಳು

ಹಿರಿಯ ಕಾರ್ಮಿಕ ನಿರೀಕ್ಷಿಕರು(Senior Labor Inspector) / ಕಾರ್ಮಿಕ ನಿರೀಕ್ಷಿಕರ ಕಚೇರಿ (Labor Inspector)

ಇಲಾಖೆಯ ವೆಬ್‌ಸೈಟ್‌ :
https://karbwwb.karnataka.gov.in

ನೋಂದಣಿ ಪ್ರಕ್ರಿಯೆಯಲ್ಲಿ ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಕಾರ್ಮಿಕ ಅಧಿಕಾರಿಗಳು & ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸಬಹುದು. ಹಾಗೆಯೇ ಸಹಾಯವಾಣಿ ಸಂಖ್ಯೆ 155214 ಕರೆ ಮಾಡಿ ಮಾಹಿತಿ ಪಡೆಯಬಹುದು. ಹಾಗೆಯೇ, ಯಾವುದೇ ಮಾಹಿತಿ ಬೇಕಿದ್ದಲ್ಲಿ ಇಲಾಖೆಯ ಪ್ರಮುಖ ಲಿಂಕ್‌ಗಳು ( website links ) ಲಭ್ಯವಿದೆ ಅವುಗಳಲಿಗೆ ಭೇಟಿ ನೀಡಿ ಮಾಹಿತಿ ತಿಳಿದು ಕೊಳ್ಳಬಹುದು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment