Labour: ಕಾರ್ಮಿಕರಿಗೆ ದೀಪಾವಳಿಯ ಬಂಪರ್ ಗಿಫ್ಟ್.! ಕೇಂದ್ರ ಸರ್ಕಾರದಿಂದ ಕಾರ್ಮಿಕರಿಗಾಗಿ ಹೊಸ ಯೋಜನೆ ಜಾರಿ.!

Labour

ದೀಪಾವಳಿ ಹಬ್ಬವು (Diwali spcl) ದೇಶದಾದ್ಯಂತ ಎಲ್ಲಾ ಭಾಗಗಳಲ್ಲಿಯೂ ಕೂಡ ಆಚರಿಸುವ ರಾಷ್ಟ್ರೀಯ ಹಬ್ಬವಾಗಿದೆ. ಇಂತಹ ವಿಶೇಷವಾದ ಸಂದರ್ಭದಲ್ಲಿ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ (Narendra Modi) ಅವರು ವಿಶೇಷ ಯೋಚ ಯೋಜನೆಗಳನ್ನು ಘೋಷಿಸುವ ಮೂಲಕ ಕೆಲ ಆಯ್ದ ವರ್ಗಗಳಿಗೆ ಹಬ್ಬದ ಸ್ತಂಭ್ರಮವನ್ನು ಡಬಲ್ ಮಾಡಿದ್ದಾರೆ.

ಇದರಲ್ಲಿ ಕಾರ್ಮಿಕ (Labours) ವಲಯದಲ್ಲಿ, ದುಡಿಯುತ್ತಿರುವವರಿಗಾಗಿಯೇ ಒಂದು ವಿಶೇಷ ಯೋಜನೆಯನ್ನು ಘೋಷಿಸಲಾಗಿದೆ. ದೇಶದಾದ್ಯಂತ ಅಸಂಘಟಿತ ವಲಯದಲ್ಲಿ ದುಡಿಯುವ 30 ಕೋಟಿಗಿಂತ ಹೆಚ್ಚು ಕಾರ್ಮಿಕರಿಗೆ ಈ ಯೋಜನೆಯಿಂದ ಅತಿ ಹೆಚ್ಚಿನ ಲಾಭ ಸಿಗುತ್ತಿದೆ. ಇದು ಯಾವ ಯೋಜನೆ? ಏನೆಲ್ಲಾ ಪ್ರಯೋಜನಗಳು ಸಿಗುತ್ತದೆ ಹಾಗೂ ಈ ಪ್ರಯೋಜನ ಪಡೆಯುವುದು ಹೇಗೆ? ಎನ್ನುವ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.

WhatsApp Group Join Now
Telegram Group Join Now

ಯೋಜನೆ ಹೆಸರು:- ಇ-ಶ್ರಮ್ ಒನ್ ಸ್ಟಾಪ್ ಸೊಲ್ಯೂಷನ್. (e-Shram one stamp Solution Scheme)

ಉದ್ದೇಶ:- ವಿವಿಧ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳನ್ನು ಸುಲಭವಾಗಿ ನಾವಿಗೇಟ್ ಮಾಡಲು ಈ ಯೋಜನೆ ಅನುಕೂಲಕರ ಎಂದು ಭಾವಿಸಲಾಗಿದೆ.

ಪ್ರಯೋಜನಗಳು:-

* ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕಾರ್ಮಿಕರು ಹಾಗೂ ಮಾಲೀಕರ ನಡುವೆ ವೇದಿಕೆಯಾಗಿ ಈ ಯೋಜನೆ ಬೆಂಬಲ ನೀಡುತ್ತದೆ.

* ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಾದ್ಯಂತ 12 ವಿಭಿನ್ನ ಯೋಜನೆಗಳಿಂದ ಮಾಹಿತಿಯನ್ನು ಈ ಯೋಜನೆಯು ಸಂಯೋಜಿಸುತ್ತದೆ. ಈ ಮೂಲಕ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಿಗೆ ಗುರುತಿಸುವಿಕೆ ಮತ್ತು ಅನುಷ್ಠಾನ ಪ್ರಕ್ರಿಯೆಗಳನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ಇದರ ಅರ್ಥ ಸರ್ಕಾರದ ಹಲವು ಯೋಜನೆಗಳಿಗೆ ಇ-ಶ್ರಮ್ ಒನ್ ಸ್ಟಾಪ್ ಒಂದು ವೇದಿಕೆಯ ಮೂಲಕ ಪರಿಹಾರ ನೀಡುವ ಉದ್ದೇಶ ಹೊಂದಿದೆ ಎಂದು ಭಾವಿಸಲಾಗಿದೆ.

* ಇದರ ಮೂಲಕ ಒನ್ ನೇಷನ್ ಒನ್ ರೇಷನ್, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಪ್ರಧಾನ ಮಂತ್ರಿ ಮನ್ ಧನ್ ಯೋಜನೆ, ರಾಷ್ಟ್ರೀಯ ವೃತ್ತಿ ಸೇವೆ ಸೇರಿದಂತೆ ಎಲ್ಲಾ ಯೋಜನೆಗಳನ್ನು ಒಟ್ಟುಗೂಡಿಸಿ ಈ ಯೋಚನೆಗಳಲ್ಲಿ ಉಂಟಾಗುವ ಎಲ್ಲಾ ಸಮಸ್ಯೆಗಳಿಗೂ ಒಂದೇ ವೇದಿಕೆಯಲ್ಲಿ ಪರಿಹಾರ ನೀಡುವ ಉದ್ದೇಶವಿದೆ ಮತ್ತು ಈ ಬಗೆಯ ಆನ್ ಬೋರ್ಡಿಂಗ್ ಸಹ ಲಭ್ಯವಿದೆ.

ಕಾರ್ಮಿಕರಿಗಾಗಿ ಹಲವು ಯೋಜನೆಗಳು ಮತ್ತು ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಅಂದಾಜಿನ ಪ್ರಕಾರ ಬಗ್ಗೆ 30 ಕೋಟಿಗಿಂತಲೂ ಹೆಚ್ಚಿನ ಕಾರ್ಮಿಕರಿಗಾಗಿ ಈ ಶ್ರಮ್ ಪೋರ್ಟಲ್(e-Shram Portal) ಓಪನ್ ಮಾಡಲಾಗಿದೆ.

ಮತ್ತು ವಿಶೇಷವಾದ ಇ-ಶ್ರಮ್ ಒಂದು ಸ್ಟಾಂಪ್ ಸಲ್ಯೂಷನ್ ಯೋಜನೆಯನ್ನು ಕೇಂದ್ರ ಕಾರ್ಮಿಕ ಮತ್ತು , ಉದ್ಯೋಗ ಹಾಗೂ ಯುವ ವ್ಯವಹಾರಗಳ ಮತ್ತು ನೂತನ ಕ್ರೀಡಾ ಸಚಿವರು ಕೂಡ ಆದ ಮನ್ಸುಖ್ ಮಾಂಡವೀಯ ಈ ಯೋಜನೆಗೆ ಚಾಲನೆ ನೀಡಿದ್ದಾರೆ.

ಇ-ಶ್ರಮ್ 2.0 ಎನ್ನುವ ಮತ್ತೊಂದು ಹೆಸರನ್ನು ಇದೇ ಯೋಜನೆಗೆ ಇಡಲಾಗಿದೆ. 30 ಕೋಟಿಗಿಂತಲೂ ಹೆಚ್ಚಿನ ಅಸಂಘಟಿತ ಕಾರ್ಮಿಕರಿಗಾಗಿ ತೆರೆಯಲಾಗಿರುವ ಈ ಯೋಜನೆ ಸಮಾಜದಲ್ಲಿ ಎಲ್ಲಾ ಕಾರ್ಮಿಕ ಫಲಾನುಭವಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಸಿಗುವ ಎಲ್ಲಾ ಸೌಲಭ್ಯಗಳು ಒಂದೇ ಸೂರಿನಡಿ ಸಿಗಬೇಕು ಎನ್ನುವ ಮಹತ್ವಕಾಂಕ್ಷೆಯನ್ನು ಈ ಯೋಜನೆಯ ಹೊಂದಿದೆ. ಇದೇ ದೀಪಾವಳಿ ದಿನದಿಂದ ಅಧಿಕೃತವಾಗಿ ಯೋಜನೆ ಚಾಲ್ತಿಗೂ ಕೂಡ ಬರಲಿದ್ದು ರಾಜ್ಯದ ಎಲ್ಲಾ ಕಾರ್ಮಿಕ ಬಂಧುಗಳಿಗೆ ಇದರಿಂದ ಅನುಕೂಲವಾಗಲಿ ಎಂದು ಬಯಸೋಣ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment