Land
ಭಾರತ ದೇಶವು ಮೂಲತಃ ಹಳ್ಳಿಗಳ ದೇಶವಾಗಿದೆ ಮತ್ತು ಹಳ್ಳಿಗಾಡಿನ ಜನರ ಮೊದಲ ಆದ್ಯತೆ ಕೃಷಿ (Agriculture) )ಹಾಗಾಗಿ ಕೃಷಿಯನ್ನು ಭಾರತದ ಆರ್ಥಿಕತೆಯ ಬೆನ್ನೆಲುಬು ಎಂದು ಕೂಡ ಕರೆಯಲಾಗಿದೆ. ಈ ಕೃಷಿ ಕ್ಷೇತ್ರವು ಅಭಿವೃದ್ಧಿ ಆದರೆ ದೇಶದ ಹಣಕಾಸಿನ ಪರಿಸ್ಥಿತಿ ಕೂಡ ಸುಧಾರಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (Central and State Governments) ಜಂಟಿಯಾಗಿ ಅನೇಕ ಯೋಜನೆಗಳನ್ನು ರೂಪಿಸಿ ಈ ನಿಟ್ಟಿನಲ್ಲಿ ಅನುಕೂಲತೆ ಮಾಡಿಕೊಟ್ಟಿವೆ.
ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ವಿತರಣೆ, ರಸಗೊಬ್ಬರ ವಿತರಣೆ ಮಾಡುವುದರಿಂದ ಹಿಡಿದು ಕೃಷಿ ಯಂತ್ರಗಳ ಖರೀದಿಗೆ ಸಾಲ, ಬೆಳೆ ಸಾಲ, ಬರ ಪರಿಹಾರ ಸೇರಿದಂತೆ ಸಾಕಷ್ಟು ಯೋಜನೆಗಳ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಎಲ್ಲದಕ್ಕಿಂತ ರೈತನಿಗೂ (Farmer) ಕೂಡ ಪ್ರೋತ್ಸಾಹ ಧನ ನೀಡುವಂತಹ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಇನ್ನೂ ವಿಶೇಷ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಾರ್ಷಿಕವಾಗಿ ರೈತರಿಗೆ ಮೂರು ಕಂತುಗಳಲ್ಲಿ ರೂ.6,000 ಸಹಾಯಧನವು ಪ್ರತಿ ಕಂತಿಗೆ ರೂ.2000 ನೇರವಾಗಿ DBT ಮೂಲಕ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ. ಕರ್ನಾಟಕದಲ್ಲಿ ಕಳೆದ ಬಾರಿ BJP ಸರ್ಕಾರವು ಆಡಳಿತದಲ್ಲಿದ್ದಾಗ CM ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (CM Kisan Samman Nidhi) ಕೂಡ ಎರಡು ಹೆಚ್ಚುವರಿ ಕಂತುಗಳ ಹಣ ಸಿಗುತ್ತಿತ್ತು.
ಒಟ್ಟು 5 ಕಂತುಗಳಲ್ಲಿ ರೂ.10,000 ಹಣ ಸಿಗುತ್ತಿತ್ತು. ಆದರೆ ಈಗ ಆ ಯೋಜನೆ ಸ್ಥಗಿತವಾಗಿದೆ ಆದರೆ ಇತರೆ ರಾಜ್ಯಗಳು ಇದನ್ನೇ ಮಾದರಿಯಾಗಿ ತೆಗೆದುಕೊಂಡು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.
ಇದರಲ್ಲಿ ಜಾರ್ಖಂಡ್ ರಾಜ್ಯದಲ್ಲಿ (Jharkhand) ಜಾರಿಯಲ್ಲಿರುವ ಆಶೀರ್ವಾದ್ ಯೋಜನೆಯನ್ನು (Ashirvadh Scheme) ಉದಾಹರಿಸಬಹುದು. ಜಾರ್ಖಾಂಡ್ ರಾಜ್ಯದ ರೈತನಿಗೆ ಪ್ರತಿ ಎಕರೆಗೆ ರೂ.5,000 ಪ್ರೋತ್ಸಾಹ ಧನ ನೀಡಲಾಗುತ್ತಿದೆ ವಾರ್ಷಿಕವಾಗಿ ಈ ಸಹಾಯಧನ ನೀಡಲಾಗುತ್ತಿದ್ದು, ಯೋಜನೆ ಕುರಿತ ಪೂರ್ತಿ ಮಾಹಿತಿ ಹೀಗಿದೆ ನೋಡಿ.
ಯೋಜನೆಯ ಹೆಸರು:- ಆಶೀರ್ವಾದ್ ಯೋಜನೆ
ಯೋಜನೆಯ ಉದ್ದೇಶ:-
ವಾರ್ಷಿಕವಾಗಿ ಎಕರೆಗೆ ರೂ.5000 ದಂತೆ ಸಹಾಯಧನ ನೀಡಿ ರೈತನಿಗೆ ಸಮಗ್ರ ಕೃಷಿ ಅಳವಡಿಸಿಕೊಳ್ಳಲು ನೆರವಾಗಿ ನಿಲ್ಲುವುದು ಈ ಮೂಲಕ ಕೃಷಿ ಕ್ಷೇತ್ರವನ್ನು ಕೃಷಿ ಕ್ಷೇತ್ರದಲ್ಲಿ ಉತ್ಪಾದನೆಯನ್ನು ಮತ್ತು ರೈತನ ಆರ್ಥಿಕತೆಯನ್ನು ಬಲಪಡಿಸುವುದು
ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
* ಬ್ಯಾಂಕ್ ಅಕೌಂಟ್ ಡೀಟೇಲ್ಸ್
* ಪಹಣಿ ಪತ್ರ
* ಪ್ಯಾನ್ ಕಾರ್ಡ್
* ಮೊಬೈಲ್ ಸಂಖ್ಯೆ
* ಭೂಮಿಗೆ ಸಂಬಂಧಿಸಿದ ದಾಖಲೆಗಳು
* ಇನ್ನಿತರ ಪ್ರಮುಖ ದಾಖಲೆಗಳು
ನಿಜಕ್ಕೂ ಇದು ಮಾದರಿ ಯೋಜನೆಯಾಗಿದ್ದು, ಕರ್ನಾಟಕದಲ್ಲಿ ಕೂಡ ಜಾರಿಗೆ ಬರಲಿದೆ ಎನ್ನುವುದು ಎಲ್ಲರ ಪ್ರಶ್ನೆ ಹೌದು. ಮುಂದಿನ ದಿನಗಳಲ್ಲಿ ಈ ಯೋಜನೆ ಕರ್ನಾಟಕ ರಾಜ್ಯದಲ್ಲಿ ಕೂಡ ವಿಸ್ತರಿಸಿದರೆ ಯಾವುದೇ ಅನುಮಾನ ಇಲ್ಲ. ಯಾಕೆಂದರೆ ರೈತನಿಗೆ ಹೆಚ್ಚಿನ ಆರ್ಥಿಕ ಭದ್ರತೆ ಇದ್ದಾಗ ಆತ ಇನ್ನೂ ಹೆಚ್ಚಿನ ಆಸಕ್ತಿಯಿಂದ ಒಲವನ್ನು ಕೃಷಿ ಕ್ಷೇತ್ರದಲ್ಲಿ ತೋರುತ್ತಾನೆ.
ಮತ್ತು ಬಂಡವಾಳ ಕೊರತೆಯಿಂದ ಹಿಂದೇಟು ಹಾಕುತ್ತಿರುವ ರೈತನಿಗೆ ಸಮಯಕ್ಕೆ ಸರಿಯಾಗಿ ಸರ್ಕಾರದಿಂದ ಈ ರೀತಿ ನೆರವು ಸಿಕ್ಕಿದರೆ ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಪ್ರಯೋಗಗಳನ್ನು ಮಾಡಲು ಸಾಧ್ಯವಾಗುತ್ತದೆ ಹಾಗಾಗಿ ಶೀಘ್ರದಲ್ಲಿ ಅನ್ವಯವಾಗಬಹುದು ಎನ್ನುವ ನಿರೀಕ್ಷೆ ಇದೆ ಆದರೆ ಸರ್ಕಾರಗಳು ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.