Land: ಜಮೀನು ಹೊಂದಿರುವವರಿಗೆ ಗುಡ್‌ ನ್ಯೂಸ್ ಇನ್ಮುಂದೆ ಭೂ ದಾಖಲೆಗಳಿಗಾಗಿ ಅಲೆದಾಡುವ ಅವಶ್ಯಕತೆ ಇಲ್ಲ.! ರೈತರಿಗಾಗಿ ಹೊಸ ಸೇವೆ ಆರಂಭ.!

Land:

ಜಮೀನು ಹೊಂದಿರುವ ಮಾಲೀಕರು ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಭದ್ರಪಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆಗಾಗ್ಗೆ ಪರಿಶೀಲಿಸಿಕೊಳ್ಳುವುದು ನೀವು ನೆನಪಿನಲ್ಲಿಡಬೇಕಾದ ಅಂಶ. ಕೃಷಿ ಜಮೀನಿಗೆ ಸಂಬಂಧಪಟ್ಟ ಅಧಿಕೃತ ದಾಖಲೆಗಳನ್ನು ನಿಮ್ಮ ತಾಲ್ಲೂಕಿನ ಕಂದಾಯ ಇಲಾಖೆ(revenue department) ತಹಶೀಲ್ದಾರ್ ಕಚೇರಿಯ ಭೂಮಾಪನ ಇಲಾಖೆಯ ಮೂಲಕ ನಿರ್ವಹಿಸಲಾಗುತ್ತದೆ.

ಜಮೀನು (land) ಹೊಂದಿರುವ ಪ್ರತಿಯೊಬ್ಬರು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಇಲ್ಲದಿದ್ದರೆ ಆ ಜಮೀನನ್ನು ಯಾರೂ ಬೇಕಾದರೂ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ನಿಮ್ಮ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವ ಸಾಧ್ಯತೆಯೂ ಇರುತ್ತದೆ. ಈ ನಡುವೆ ಒಂದು ವೇಳೆ ನಿಮ್ಮ ಜಮೀನಿನ ದಾಖಲೆಗಳು (Property Documents) ಕಳೆದು ಹೋಗಿದ್ದರೆ ನೀವು ಕಂದಾಯ ಇಲಾಖೆ ಕಚೇರಿಗೆ ಹೋಗಿ ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

ಕೃಷಿ ಜಮೀನಿಗೆ ಸಂಬಂಧಪಟ್ಟ ಅಧಿಕೃತ ದಾಖಲೆಗಳನ್ನು ನಿಮ್ಮ ತಾಲ್ಲೂಕಿನ ಕಂದಾಯ ಇಲಾಖೆ ತಹಶೀಲ್ದಾರ್ ಕಚೇರಿಯ ಭೂಮಾಪನ ಇಲಾಖೆಯ ಮೂಲಕ ನಿರ್ವಹಿಸಲಾಗುತ್ತದೆ. ಕಂದಾಯ ಇಲಾಖೆ ಕಚೇರಿಯಲ್ಲಿ ಯಾವ ಯಾವ ದಾಖಲೆಗಳು ಸಿಗುತ್ತವೆ, ಅದನ್ನು ಪಡೆಯಲು ಯಾವ ರೀತಿ ಅರ್ಜಿ ಸಲ್ಲಿಸಬೇಕು ಎನ್ನುವ ಮಾಹಿತಿ ಇಲ್ಲಿದೆ. ಭೂಮಾಪನ ಇಲಾಖೆಯಲ್ಲಿ ದೊರೆಯಬಹುದಾದ ಸೇವೆ ಮತ್ತು ದಾಖಲಾತಿಗಳನ್ನು ಪಡೆಯುವ ವಿಧಾನ ದಾಖಲಾತಿಗಳ ನಿರ್ವಹಣೆ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

ಭೂ ದಾಖಲೆಗಳಿಗೆ ಸಂಬಂಧಪಟ್ಟ ಮೂಲ ದಾಖಲಾತಿಗಳು ಯಾವುದೆಂದರೆ, ದರಖಾಸ್ತು, ಅಲಿನೇಶನ್, ಭೂ ಸ್ವಾಧೀನ ಹಾಗೂ ಪೋಡಿ ದಾಖಲೆಗಳನ್ನು ಭೂ ಮಾಪಕರು ಅಳತೆ ಮಾಡಿದ ನಂತರ ತಹಶೀಲ್ದಾರರು ದೃಢೀಕರಿಸಿದ ನಕ್ಷೆಗಳನ್ನು ಭೂ ದಾಖಲೆಯೊಳಗೆ ಬರುತ್ತವೆ.

ಇಷ್ಟೇ ಅಲ್ಲದೆ ಹದ್ದು ಬಸ್ತು ಪ್ರಕರಣಗಳಲ್ಲಿ ಸರ್ವೇ ಅಧಿಕಾರಿಗಳು ತಯಾರಿಸಿದ ನಕ್ಷೆಗಳು, ಮರುಭೂಮಾಪನ, ಮೊದಲನೇ ಹಾಗೂ ಎರಡನೇ ಮರು ವರ್ಗಿಕರಣದ ದಾಖಲಾತಿಗಳು ಸರ್ವೇನಂಬರ್‌ಗಳಿಗೆ ಸಂಬಂಧಪಟ್ಟ ಉತಾರ್ಗಳು ಸಹ ಭೂ ದಾಖಲೆಗಳಲ್ಲಿ ಬರುತ್ತವೆ.

ದರಖಾಸ್ತು…

ಸಾಮಾನ್ಯವಾಗಿ ಬಹುತೇಕ ಜನರಿಗೆ ಪೋಡಿ ಬಗ್ಗೆ ಗೊತ್ತಿರುತ್ತದೆ. ಒಬ್ಬರಿಗಿಂತ ಹೆಚ್ಚು ಜನರ ಹೆಸರು ಒಂದೇ ಸರ್ವೆ ನಂಬರ್ ನಲ್ಲಿದ್ದರೆ ಅದನ್ನು ತತ್ಕಾಲ್ ಪೋಡಿಗೆ ಅರ್ಜಿ ಸಲ್ಲಿಸಿ ಪ್ರತ್ಯೇಕವಾಗಿ ಪಹಣಿ ಮಾಡಿಸಿಕೊಳ್ಳಬಹುದು. ಆದರೆ ಪೋಡಿಯಲ್ಲಿಯೂ ನಾಲ್ಕು ವಿಧಗಳಿರುತ್ತವೆ. ತತ್ಕಾಲ್ ಪೋಡಿ, ದರ್ಖಾಸ್ ಪೋಡಿ, ಅಲಿನೇಷನ್ ಪೋಡಿ ಹಾಗೂ ಮುಟೇಷನ್ ಪೋಡಿ. ರೈತರ ಮಾಹಿತಿಗಾಗಿ ದರ್ಖಾಸ್ ಪೋಡಿಯ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ದರ್ಖಾಸ್ ಪೋಡಿಯನ್ನು ಸರ್ಕಾರದ ಜಮೀನು ಗಡಿಭಾಗ ಗುರುತಿಸಲು ಬಳಸುತ್ತಾರೆ. (ಉದಾಹರಣೆಗೆ ಗೋಮಾಳ, ಗಾಯರಾಣ, ಹುಲ್ಲುಬನ್ನಿ) ಅಥವಾ ಸರ್ಕಾರದ ಅಧೀನದಲ್ಲಿರುವ ಭೂಮಿಯಾಗಿರುತ್ತದೆ.

ಸಾರ್ವಜನಿಕರು ಇಲಾಖೆಗೆ ಸಲ್ಲಿಸಿದ ಅರ್ಜಿಗಳು ಮತ್ತು ಇಲಾಖಾ ಅಧಿಕಾರಿಗಳು ಸಾರ್ವಜನಿಕರಿಗೆ ನೀಡಿದ ತಿಳುವಳಿಕೆ ಪತ್ರಗಳ ಪ್ರತಿಗಳು, ಮರುಭೂಮಾಪನ ಟಿಪ್ಪಣಿಯ ಪ್ರತಿಗಳು. ಹದ್ದುಬಸ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ಮರಗಳು, ಬಾವಿ ಇತರೆ ಚಿಹ್ನೆಗಳನ್ನು ಮೂಡಿಸಿ ತಯಾರಿಸಿರುವ ನಕ್ಷೆಗಳ ಪ್ರತಿಗಳು (ನಿರ್ದಿಷ್ಟ ಕೋರಿಕೆ ಮೇರೆಗೆ).

ಮರು ಭೂಮಾಪನ ನಕಾಶೆಯ ಮೂಲಪ್ರತಿ (ಕಚೇರಿಯ ದಾಸ್ತಾನಿನಲ್ಲಿ ಇದ್ದರೆ). ಹಿಸ್ಸಾ ಸರ್ವೆ ಮತ್ತು ಮ್ಯುಟೇಷನ್ ಪೋಡಿ ಅಳತೆ ಸಮಯದಲ್ಲಿ ದಾಖಲಿಸಲಾದ ಹೆಸರುಗಳೊಂದಿಗೆ ಹಿಸ್ಸಾ ಸರ್ವೆಯ ಟಿಪ್ಪಣಿ, ಪಕ್ಕಾ ಮತ್ತು ಅಟ್ಲಾಸ್ ಗಳ ಪ್ರತಿ, ಹಿಸ್ಸಾ ಸರ್ವೆ / ಮ್ಯುಟೇಷನ್ ಪೋಡಿ ಅಳತೆ ಸಮಯದಲ್ಲಿ ಪಡೆಯಲಾದ ಹೆಸರುಗಳನ್ನೊಳಗೊಂಡಂತೆ (ನಮೂದಿಸಲಾಗಿರುವ ಹೆಸರುಗಳ ಬಗ್ಗೆ ಯಾವುದೇ ಜವಾಬ್ದಾರಿಯಲ್ಲ ಎಂಬ ಸೂಕ್ತ ಷರಾದೊಂದಿಗೆ) ಹಿಸ್ಸಾ ಸರ್ವೆ ದಾಖಲಾತಿಗಳಾದ:

* ಟಿಪ್ಪಣಿ,
* ಪಕ್ಕಾ ಮತ್ತು ಅಟ್ಲಾಸುಗಳು.
* ದರಖಾಸ್ತು,
* ಅಲಿನೇಷನ್,
* ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದ ಟಿಪ್ಪಣಿ, ಪಕ್ಕಾ ಮತ್ತು ಅಟ್ಲಾಸ್ ಗಳ ಪ್ರತಿಗಳು.

ಭೂಮಾಪಕರು(land records) ಹೊರಡಿಸಲಾಗಿರುವ ಹದ್ದುಬಸ್ತು ಪ್ರಕರಣಗಳ ನಿರ್ಣಯಗಳು ತಹಶೀಲ್ದಾರ್ ಗಳು ಹೊರಡಿಸಿದ ಹದ್ದುಬಸ್ತು ಪ್ರಕರಣಗಳ ಮೇಲ್ಮನವಿ ನಿರ್ಣಯಗಳು. ಕರ್ನಾಟಕ ಭೂಕಂದಾಯ ಅಧಿನಿಯಮ ಮತ್ತು ನಿಯಮಾವಳಿಗಳನ್ವಯ (ನಗರಮಾಪನ ಅಧಿಕಾರಿಗಳು / ನಗರಮಾಪನ ವಿಚಾರಣಾಧಿಕಾರಿಗಳು) ಕೈಗೊಂಡ ಮೇಲ್ಮನವಿ ತೀರ್ಪುಗಳು.

ನಗರಮಾಪನ ದಾಖಲಾತಿಗಳು

1) ಪಿ ಆರ್ ಕಾರ್ಡಗಳು.
2) ಪಿ ಟಿ ಶೀಟು ನಕಲುಗಳು
3) ನಗರಮಾಪನ ವಿಚಾರಣಾಧಿಕಾರಿಗಳು ವಿಚಾರಣೆ ನಂತರ ನೀಡಿದ ಹಿಂಬರಹ.
4) ವಿಚಾರಣಾ ವಹಿಯ ನಕಲು.
5) ಸ್ಥಳೀಯ ಕ್ಷೇತ್ರದ ನಕಾಶೆ.
6) ಕ್ಷೇತ್ರ ಅಳತೆ ಪುಸ್ತಕ
7) ಭೂಮಾಪನ / ವಿಚಾರಣೆ ಸಮಯದಲ್ಲಿ ಪಡೆದ ಹೇಳಿಕೆಗಳು.
8) ನಗರಮಾಪನದ ವಿಚಾರಣಾಧಿಕಾರಿಗಳ ಆದೇಶದ ನಕಲು
9) ನಗರಮಾಪನದ ವಿಚಾರಣಾಧಿಕಾರಿಗಳ ತೀರ್ಪುಗಳು.

ಜಮೀನಿನ ದಾಖಲೆ ಡೌನ್ಲೋಡ್ ಮಾಡಿಕೊಳ್ಳಿ

ರೈತರು (farmers) ತಮ್ಮ ಜಮೀನಿಗೆ ಸಂಬಂಧಪಟ್ಟ ದಾಖಲೆಗಳನ್ನು ಈಗ ಆನ್ಲೈನ್ ಮೂಲಕವೂ ಪಡೆದುಕೊಳ್ಳಬಹುದು. ರೈತರು ತಮ್ಮ ದಾಖಲೆಗಳನ್ನು ಪಡೆದುಕೊಳ್ಳಲು ಡೌನ್ಲೋಡ್ ಸರ್ವೇ ಡಾಕ್ಯೂಮೆಂಟ್ ಈ ಲಿಂಕ್ಗೆ ಭೇಟಿ ನೀಡಬೇಕು. ಅಲ್ಲಿ ನಿಮ್ಮ ಜಮೀನಿನ ಸರ್ವೇ ನಂಬರ್, ಹಾಗೂ ಅಲ್ಲಿ ಕೇಳಲಾಗುವ ಮಾಹಿತಿ ಭರ್ತಿ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ನಿಮ್ಮ ಜಮೀನಿಗೆ ಸಂಬಂಧಪಟ್ಟ ಸರ್ವೆ ದಾಖಲಾತಿಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ವಿಧಾನ…

ರೈತರು ನಿಮ್ಮ ಜಮೀನಿಗೆ ಸಂಬಂಧಪಟ್ಟ ಸರ್ವೆ ದಾಖಲಾತಿಗಳನ್ನು Download Survey documents ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಮ್ಯುಟೇಶನ್ (MR) ಎಂದರೇನು ?

ಮ್ಯುಟೇಶನ್ ಪ್ರಾಪರ್ಟಿಗೆ ಸಂಬಂಧಿಸಿದಂತೆ ವರ್ಗಾವಣೆಯನ್ನು ಅಂದರೆ ಯಾರಿಂದ ಯಾರಿಗೆ ಪ್ರಾಪರ್ಟಿ ವರ್ಗಾವಣೆಯಾಗಿದೆ ಎಂಬುದನ್ನು ತಿಳಿಸುವ ಹಾಗೂ ಅದು ಹೇಗೆ ವರ್ಗಾವಣೆಯಾಗಿದೆ ಎಂಬುದನ್ನು ವಿವರಿಸುವ ರೆವೆನ್ಯೂ ದಾಖಲೆಯಾಗಿರುತ್ತದೆ. ಇದು ಗಿಫ್ಟ್, ಸೇಲ್, ವಿಲ್ ಮತ್ತು ಉತ್ತರಾಧಿಕಾರತ್ವ ಇತ್ಯಾದಿ ರೀತಿಯಲ್ಲಿ ವರ್ಗಾವಣೆಯಾಗುವ ಆಸ್ತಿಯ ಬಗ್ಗೆ ತಿಳಿಸುತ್ತದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment