Loan
ಈಗ ಇಂಟರ್ನೆಟ್ ಸೌಲಭ್ಯ ಹಾಗೂ ಸ್ಮಾರ್ಟ್ ಫೋನ್ ಒಂದಿದ್ದರೆ ಸಾಕು ಜಗತ್ತಿನ ಯಾವುದೇ ಮೂಲೆಯ ವಿಚಾರವನ್ನು ಕೂಡ ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲದೆ ನಮ್ಮ ಹಣಕಾಸಿನ ವಹಿವಾಟು, ವೃತ್ತಿ ಸೇರಿ ಎಲ್ಲವೂ ಆನ್ಲೈನ್ ನಲ್ಲಿಯೇ ನಡೆಯುತ್ತದೆ. ಇಂತಹದೊಂದು ಹೊಸ ಕ್ರಾಂತಿಗೆ ಜಗತ್ತೇ ಹೊಂದಿಕೊಂಡಿದ್ದು ಎಲ್ಲ ರಂಗಗಳ ವಿಚಾರಧಾರೆಯನ್ನು ಕೂಡ ಬೆರಳ ತುದಿಯಲ್ಲಿ ತಿಳಿದುಕೊಳ್ಳಬಹುದಾಗಿದೆ.
ಈ ಸುದ್ದಿ ಓದಿ:- Bank Recruitment: DCC ಬ್ಯಾಂಕ್ ನಲ್ಲಿ FDA ಹುದ್ದೆಗಳ ನೇಮಕಾತಿ.! ಆಸಕ್ತರು ಅರ್ಜಿ ಸಲ್ಲಿಸಿ.! ವೇತನ: 56,655/-
ಇದಕ್ಕೆ ಕೃಷಿ ಕ್ಷೇತ್ರವು ಹೊರತೇನಲ್ಲ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿರುವ ರೈತನು ಕೂಡ ಆನ್ಲೈನ್ ನಲ್ಲಿ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಇದರಲ್ಲೊಂದು ಮೊಬೈಲ್ ನಲ್ಲಿಯೇ ಜಮೀನಿನ ಸರ್ವೆ ನಂಬರ್ ಹಾಕುವ ಮೂಲಕ ಸದರಿ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎನ್ನುವುದನ್ನು ತಿಳಿದುಕೊಳ್ಳುವುದು. ಸರ್ಕಾರದ ಯಾವ ವೆಬ್ಸೈಟ್ ಮೂಲಕ ತಿಳಿದುಕೊಳ್ಳಬೇಕು? ಇದು ಹೇಗೆ? ಎನ್ನುವುದರ ವಿವರ ಹೀಗಿದೆ ನೋಡಿ.
ಮೊಬೈಲ್ ನಂಬರ್ ಹಾಕಿ ಜಮೀನಿನ ಸಾಲದ ವಿವರ ತಿಳಿದುಕೊಳ್ಳುವ ವಿಧಾನ:-
* https://landrecords.karnataka.gov.in/service2/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಕರ್ನಾಟಕ ಸರ್ಕಾರದ ಭೂಮಿ ತಂತ್ರಾಂಶ ಓಪನ್ ಆಗುತ್ತದೆ.
* ಮುಖಪುಟದಲ್ಲಿ ಓಪನ್ ಆಗುವ ಇಂಟರ್ಫೇಸ್ ನಲ್ಲಿ ಹಲವಾರು ಪ್ರಶ್ನೆಗಳು ಇರುತ್ತವೆ
* ಇದರಲ್ಲಿ ಮುಖ್ಯವಾಗಿ ಮೊದಲಿಗೆ ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಬೇಕಿರುತ್ತದೆ. ನಂತರ ನಿಮ್ಮ ತಾಲೂಕು, ನಂತರ ಹೋಬಳಿ ಹಾಗೂ ಗ್ರಾಮ ಸೆಲೆಕ್ಟ್ ಮಾಡಿ ಆ ಗ್ರಾಮದಲ್ಲಿ ಇರುವ ನಿಮ್ಮ ಸರ್ವೇ ನಂಬರ್ ದಾಖಲಿಸಿ, Go ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
* ಇಷ್ಟು ಮಾಡಿದ ನಂತರ ಇದು ಯಶಸ್ವಿ ಆದಮೇಲೆ ಮತ್ತೊಂದು ಇಂಟರ್ಫೇಸ್ ಓಪನ್ ಆಗುತ್ತದೆ
* ಈಗ ಇದರಲ್ಲಿ ನೀಡಲಾಗಿರುವ ಆಪ್ಷನ್ ಗಳಲ್ಲಿ ನಿಮ್ಮ ಜಮೀನಿಗೆ ಸಂಬಂಧಪಟ್ಟ ಹಾಗೆ ಸರಿಯಾದ ವಿವರಗಳನ್ನು ಭರ್ತಿ ಮಾಡಬೇಕು Surnoc, Hissa No, Period, year ಕೇಳಲಾಗಿರುತ್ತದೆ ಇದರಲ್ಲಿ ನೀವು ಕ್ರಮವಾಗಿ ನಿಮ್ಮ ಜಮೀನಿನ ಸರ್ನೋಕ್ (*), ನಿಮ್ಮ ಜಮೀನಿನ ಹಿಸ್ಸಾ ಸಂಖ್ಯೆ, ಯಾವ ವರ್ಷದಿಂದ ಯಾವ ವರ್ಷದವರೆಗೆ ನೀವು ಪಡೆದಿದ್ದ ಸಾಲದ ವಿವರ ತಿಳಿದುಕೊಳ್ಳಲು ಬಯಸುತ್ತಿದ್ದೀರಾ ಅದನ್ನು ನಮೂದಿಸಿ ನಂತರ ಕೊನೆಯಲ್ಲಿ ಈ ಆರ್ಥಿಕ ವರ್ಷ (2024-25) ಸೆಲೆಕ್ಟ್ ಮಾಡಿ fetch details ಮೇಲೆ ಕ್ಲಿಕ್ ಮಾಡಿ
* ತಕ್ಷಣ ಜಮೀನಿನ ಪಹಣಿ ತೆರೆದುಕೊಳ್ಳುತ್ತದೆ
* ಇದರಲ್ಲಿ ಮ್ಯುಟೇಶನ್ ನಲ್ಲಿ ಒಂದನೇ ಕಾಲಂನಲ್ಲಿ ಸರ್ವೆ ನಂಬರ್, ಹಿಸ್ಸಾಂ ನಂಬರ್ ಮತ್ತು ಮಾಲೀಕರ ಹೆಸರು ಇರುತ್ತದೆ ಎರಡನೇ ಕಾಲಂನಲ್ಲಿ ಸರ್ವೆ ನಂಬರ್, ಕರಾಬು ಜಮೀನ ಕಂದಾಯ ವಿವರ ಹಾಗೂ ಜಮೀನಿನ ಮಣ್ಣಿನ ನಮೂನೆ ಹೇಗೆ ಎಂಬ ಮಾಹಿತಿ ಇರುತ್ತದೆ. ಸದರಿ ಸರ್ವೆ ನಂಬರ್ ನಲ್ಲಿ ಯಾವ ಮಾಲೀಕರಿಗೆ ಎಷ್ಟು ಎಕರೆ ಜಮೀನು ಇದೆ ಸ್ವಾಧೀನದಾರರ ಹೆಸರು ಮತ್ತು ಆ ಜಮೀನಿನ ವಿಸ್ತೀರ್ಣದ ಮಾಹಿತಿ ಕೂಡ ಇರುತ್ತದೆ.
* ಹಾಗೆಯೇ 11ನೇ ಕಾಲಂ ಋಣಗಳ ಕಾಲಂ ಆಗಿರುತ್ತದೆ. ಅಂದರೆ ಸಾಲದ ವಿವರ ಈ ಕಾಲಂ ನಲ್ಲಿ ಇರುತ್ತದೆ.
* ಯಾವ ಬ್ಯಾಂಕಿನಿಂದ ಎಷ್ಟು ಸಾಲ ಪಡೆಯಲಾಗಿದೆ ಎನ್ನುವ ವಿವರ ಸಮೇತ ಮಾಹಿತಿ ಇರುತ್ತದೆ. ಈ ಮಾಹಿತಿಯು ಅನೇಕ ರೈತರ ಪಾಲಿಕೆ ಬಹಳ ಉಪಯುಕ್ತವಾಗಿದೆ. ಹಾಗಾಗಿ ತಪ್ಪದೆ ಈ ಮಾಹಿತಿಯನ್ನು ಹೆಚ್ಚಿನ ರೈತರೊಡನೆ ಶೇರ್ ಮಾಡಿ.