Land: ಕೇವಲ 7 ದಿನಗಳಲ್ಲಿ ನಿಮ್ಮ ಹೆಸರಿಗೆ ಜಮೀನು ಮಾಡಿಸಿಕೊಳ್ಳಬಹುದು.!

Land

ಈ ಹಿಂದೆ ಒಬ್ಬ ವ್ಯಕ್ತಿಯ ಹೆಸರಿನಲ್ಲಿದ್ದ ಜಮೀನು ಮತ್ತೊಬ್ಬರ ಹೆಸರಿಗೆ ವರ್ಗಾವಣೆ ಆಗಲು 30 ದಿನಗಳ ಸಮಯ ತೆಗೆದುಕೊಳ್ಳುತ್ತಿತ್ತು. ಈ ಅವಕಾಶವನ್ನು ತಕರಾರು ಅರ್ಜಿ ಸಲ್ಲಿಸುವವರು ಕೆಲವೊಮ್ಮೆ ಸದುಪಯೋಗಪಡಿಸಿಕೊಂಡರೆ ಕೆಲವರು ಬೇಕೆಂದಲೇ ಕಿ’ತಾ’ಪ’ತಿ ಮಾಡುತ್ತಿದ್ದರು.

ಇದರಿಂದ ಆಸ್ತಿಗೆ ಸಂಬಂಧಪಟ್ಟ ಮಾಲೀಕರಿಗೆ ಆಗುತ್ತಿದ್ದ ಸಮಸ್ಯೆ ತಪ್ಪಿಸಲು ಮತ್ತು ಸರ್ಕಾರ ಬೊಕ್ಕಸಕ್ಕೆ ಆದಾಯ ಹೆಚ್ಚಾಗುವಂತೆ ಮಾಡಿ ಇಲಾಖೆಗಳ ಕೆಲಸದ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ, 30 ದಿನಗಳವರೆಗೆ ಕಚೇರಿಗಳಿಗೆ ಅಳೆಯುವ ರೈತನ ಕಷ್ಟ ಕಡಿಮೆ ಮಾಡುವ ನಿಟ್ಟಿನಿಂದಲೂ 7 ದಿನದಲ್ಲಿ ಮ್ಯೂಟೇಶನ್ ಮಾಡುವಂತೆ ಸರ್ಕಾರ ಆದೇಶ ನೀಡಿದೆ.

WhatsApp Group Join Now
Telegram Group Join Now

ಒಬ್ಬ ವ್ಯಕ್ತಿಯ ಹೆಸರಿನಲ್ಲಿ ನೋಂದಣಿ ಆದ ಆಸ್ತಿಯು ರಿಜಿಸ್ಟರ್ ಆದ ದಿನದಿಂದ ಹೆಸರಿಗೆ ದಾಖಲೆ ಆಗುವ ಸಮಯವನ್ನು ಮ್ಯುಟೇಶನ್ ಅವಧಿ ಎಂದು ಕರೆಯುತ್ತಾರೆ. ಈ ವಿಚಾರವು ಪ್ರತಿಯೊಬ್ಬ ರೈತನಿಗೂ ಕೂಡ ಅನುಕೂಲವಾಗುತ್ತದೆ ಹಾಗಾಗಿ ಇದರ ಕುರಿತು ಕೆಲ ಪ್ರಮುಖ ಅಂಶವನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ಮೊದಲಿಗೆ ಆಸ್ತಿಯು ಯಾವೆಲ್ಲ ವಿಧಾನದ ಮೂಲಕ ಒಬ್ಬರ ಹೆಸರಿಂದ ಮತ್ತೊಬ್ಬರ ಹೆಸರಿಗೆ ವರ್ಗಾವಣೆ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯ. ಕ್ರಯ, ದಾನ, ವಿಭಾಗ ಮತ್ತು ಪೌತಿ ಖಾತೆ ಈ ನಾಲ್ಕು ವಿಧಾನದ ಮೂಲಕ ಒಬ್ಬ ವ್ಯಕ್ತಿಯ ಹೆಸರಿನಲ್ಲಿರುವ ಆಸ್ತಿಯು ಮತ್ತೊಬ್ಬರಿಗೆ ವರ್ಗಾವಣೆ ಆಗುತ್ತದೆ.

1. ಕ್ರಯ ವಿಧಾನ:-

ಕ್ರಯ ಎಂದರೆ ಆಸ್ತಿ ಸೇಲ್ ಆಗಿದೆ ಎಂದೇ ಅರ್ಥ. ಮಾರಾಟವಾದ ವ್ಯಕ್ತಿಯಿಂದ ಕೊಂಡುಕೊಂಡ ವ್ಯಕ್ತಿಗೆ ಆಸ್ತಿ ಹಕ್ಕು ವರ್ಗಾವಣೆ ಆಗುತ್ತದೆ ಇದು ಹಿಂದೆ 30 ದಿನಗಳು ತಗಲುತ್ತಿತ್ತು. ಈಗ ಏಳು ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ತಿಗೊಳಿಸಬಹುದು ಎಂದು ಆದೇಶಿಸಲಾಗಿದೆ.

2. ದಾನ ಮತ್ತು ವಿಭಾಗ ವಿಧಾನ:-

ಒಂದು ಕುಟುಂಬದೊಳಗೆ ಆಸ್ತಿ ವರ್ಗಾವಣೆ ಆಗುವ ವಿಧಾನ ಎಂದು ಕೂಡ ಇದನ್ನು ಹೇಳಬಹುದು. ಯಾಕೆಂದರೆ ಕುಟುಂಬದಲ್ಲಿ ಒಬ್ಬ ವ್ಯಕ್ತಿಯು ಮತ್ತೊಬ್ಬರ ಹೆಸರಿಗೆ ತಮ್ಮ ಸ್ವಯಾರ್ಜಿತ ಆಸ್ತಿಯನ್ನು ಕೊಡುವುದು ಅಥವಾ ಪಿತ್ರಾರ್ಜಿತ ಆಸ್ತಿಯನ್ನು ಕೂಡು ಕುಟುಂಬವು ವಿಭಾಗ ಮಾಡಿಕೊಂಡಾಗ ಈ ರೀತಿ ತಂದೆ ಹೆಸರಿನಲ್ಲಿದ್ದ ಆಸ್ತಿಯು, ಎಲ್ಲರ ಹೆಸರಿಗೂ ವರ್ಗಾವಣೆ ಆಗುತ್ತದೆ. ಇದಕ್ಕೂ ಕೂಡ ಹಿಂದೆ 30 ದಿನಗಳು ತಗಲುತ್ತಿತ್ತು. ಈಗ ಇದನ್ನು ಏಳು ದಿನಗಳಲ್ಲಿ ಮ್ಯೂಟೇಷನ್ ಮಾಡಲು ಸೂಚಿಸಲಾಗಿದೆ.

3. ಪೌತಿ ಖಾತೆ:-

ಉದಾಹರಣೆಗೆ ತಂದೆಯ ಹೆಸರಿನಲ್ಲಿ ಆಸ್ತಿ ಇದ್ದು ಆಸ್ತಿ ವಿಭಾಗ ಆಗುವ ಮುನ್ನವೇ ತಂದೆ ಮರಣ ಪಟ್ಟಿದರೆ ಪೌತಿ ಖಾತೆ ವಿಧಾನದ ಮೂಲಕ ಆಸ್ತಿಯನ್ನು ವರ್ಗಾವಣೆ ಮಾಡಲಾಗುತ್ತದೆ. ಆಗ ಮೊದಲಿಗೆ ಕುಟುಂಬದಲ್ಲಿರುವ ಹಿರಿಯ ಮಗನ ಹೆಸರಿಗೆ ಆಸ್ತಿ ವರ್ಗಾವಣೆ ಆಗುತ್ತದೆ ಆತನ ನಂತರ ಪತ್ನಿ ಅಥವಾ ಹಿರಿಯ ಮಗನ ಹೆಸರಿಗೆ ಆಸ್ತಿ ಹಕ್ಕು ವರ್ಗಾವಣೆ ಆಗಿ ನಂತರ ಎಲ್ಲರೂ ತಮ್ಮ ಪಾಲನ್ನು ಪಡೆದುಕೊಳ್ಳುತ್ತಾರೆ. ಇದಕ್ಕೂ ಕೂಡ ಈ ಹಿಂದೆ 30 ದಿನಗಳ ಕಾಲ ಹಿಡಿಯುತ್ತಿತ್ತು, ಈಗ ಇದನ್ನು 15ನೇ ದಿನದೊಳಗೆ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ.

ನಿಯಮ ಬದಲಾವಣೆ ಆಗಿರುವುದರಿಂದ ಆಗುವ ಪ್ರಯೋಜನಗಳೇನು? ಮತ್ತು ಸಮಸ್ಯೆಗಳೇನು?:-

* ತಕರಾರು ಸಲ್ಲಿಸಲು ಸಮಯವಕಾಶ ಕಡಿಮೆ ಆಗುತ್ತದೆ, ಸಮಯ ಸಿಕ್ಕರು ಆ ಸಮಯದೊಳಗೆ ಎಲ್ಲಾ ದಾಖಲೆಗಳನ್ನು ಹೊಂದಿಸುವುದಕ್ಕೆ ಬಹಳ ಕಷ್ಟ.
* ಸಮಯವಕಾಶ ಕಡಿಮೆ ಇರುವುದರಿಂದ ಮೋ’ಸ, ವಂ’ಚ’ನೆ ಮಾಡಿ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಬಹುದು ಎಂದು ಊಹಿಸಲಾಗಿದೆ.
* ಈ ಎಲ್ಲಾ ಕಾರಣಗಳಿಂದಾಗಿ ಕೋರ್ಟ್ ಗಳಲ್ಲಿ ಕೇಸ್ ಗಳು ಹೆಚ್ಚಾಗಬಹುದು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment