LIC ಕಡೆಯಿಂದ ವಿದ್ಯಾರ್ಥಿಗಳಿಗೆ 40,000 ಉಚಿತ ಸ್ಕಾಲರ್ ಶಿಪ್.! ಅರ್ಜಿ ಸಲ್ಲಿಸಿ.!

LIC

ಹಲವಾರು ವರ್ಷಗಳಿಂದ ಭಾರತೀಯರ ನಂಬಿಕೆಯ ವಿಮೆ (Inusurance Company) ಸಂಸ್ಥೆಯಾಗಿರುವ ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಈಗ ತನ್ನ ಗೋಲ್ಡನ್ ಜುಬಿಲಿ ಸಂಭ್ರಮದಲ್ಲಿದೆ. ಇದೇ ಸಂದರ್ಭದಲ್ಲಿ ದೇಶದ ವಿದ್ಯಾರ್ಥಿಗಳ ಸಲುವಾಗಿ ಘೋಷಣೆಯೊಂದನ್ನು ಮಾಡಿದ್ದು.

2023-24 ರಲ್ಲಿ LIC ಗೋಲ್ಡನ್ ಜುಬಿಲಿ ಸ್ಕಾಲರ್‌ಶಿಪ್ (LIC Golden Jubilee Scholarship ) ನೀಡಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸುವುದಕ್ಕೆ ಅರ್ಹತಾ ಮಾನದಂಡಗಳಿದ್ದು ಇದರ ಕುರಿತ ಮಾಹಿತಿ, ಬೇಕಾಗುವ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಸಂಪೂರ್ಣ ವಿವರ ಹೀಗಿದೆ ನೋಡಿ.

WhatsApp Group Join Now
Telegram Group Join Now
ಅರ್ಜಿ ಸಲ್ಲಿಸಲು ಅರ್ಹತೆಗಳು:-

* 12ನೇ ತರಗತಿ ಮೇಲ್ಪಟ್ಟ ವೈದ್ಯಕೀಯ, ಇಂಜಿನಿಯರಿಂಗ್, ಯಾವುದೇ ವಿಭಾಗದಲ್ಲಿ ಪದವಿಪೂರ್ವ, ಇಂಟಿಗ್ರೇಟೆಡ್ ಕೋರ್ಸ್‌ಗಳು, ಯಾವುದೇ ಕ್ಷೇತ್ರದಲ್ಲಿ ಡಿಪ್ಲೊಮಾ ಕೋರ್ಸ್‌ಗಳು ಅಥವಾ ಇತರ ಸಮಾನ ಕೋರ್ಸ್‌ಗಳು, ಸರ್ಕಾರಿ ಮಾನ್ಯತೆ ಪಡೆದ ಕಾಲೇಜು ಸಂಸ್ಥೆಗಳು ಅಥವಾ ಕೈಗಾರಿಕಾ ತರಬೇತಿ ಸಂಸ್ಥೆಗಳ ITI ಮೂಲಕ ವೃತ್ತಿಪರ ಕೋರ್ಸ್‌ಗಳನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಈ ಅನುದಾನವನ್ನು ನೀಡಲಾಗುತ್ತದೆ.

* 2022-23ನೇ ಶೈಕ್ಷಣಿಕ ವರ್ಷದಲ್ಲಿ ಎದುರಿಸಿದ ಹಿಂದಿನ ಪರೀಕ್ಷೆಯಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
* ವಿದ್ಯಾರ್ಥಿಗಳ ಪೋಷಕರು/ಪಾಲಕರ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ. 2,50,000 ಮೀರಿರಬಾರದು.

ವಿದ್ಯಾರ್ಥಿ ವೇತನದ ವಿವರ:- ಎರಡು ವಿಧವಾಗಿ ಸ್ಕಾಲರ್ಶಿಪ್ ದೊರೆಯಲಿದೆ

1. ಜನರಲ್ ಸ್ಕಾಲರ್ಶಿಪ್:-

12ನೇ ತರಗತಿ ( Second PUC ) ಅಥವಾ ತತ್ಸಮಾನ ಕೋರ್ಸ್‌ ಮುಗಿಸಿ ಮೆಡಿಕಲ್‌, ಎಂಜಿನಿಯರಿಂಗ್‌, ಪದವಿ ಅಥವಾ ಯಾವುದೇ ವೃತ್ತಿಪರ ಕೋರ್ಸ್‌ಗಳಲ್ಲಿ ಶಿಕ್ಷಣ ಮುಂದುವರಿಸುತ್ತಿರುವವರು ಅರ್ಜಿ ಸಲ್ಲಿಸಬಹುದು ಮತ್ತು 10ನೇ ತರಗತಿ ನಂತರದ ಹಾಗೂ ‌ITI ನಂತರದ ಸಾಮಾನ್ಯ ವೃತ್ತಿಪರ ಕೋರ್ಸ್ ಗಳಾದ ಡಿಪ್ಲೋಮಾ ಕೋರ್ಸ್‌ಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರು ಅರ್ಜಿ ಸಲ್ಲಿಸಬಹುದು.

* ಮೆಡಿಸಿನ್‌ ಕೋರ್ಸ್‌ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 3 ಕಂತುಗಳಲ್ಲಿ ರೂ.40,000
* ಎಂಜಿನಿಯರಿಂಗ್‌ ಕೋರ್ಸ್‌ ವಿದ್ಯಾರ್ಥಿಗಳಿಗೆ 3 ಕಂತುಗಳಲ್ಲಿ ರೂ.30,000
* ಪದವಿ, ಡಿಪ್ಲೋಮಾ ಮತ್ತು ಇದೇ ಮಾದರಿಯ ವೃತ್ತಿಪರ ಕೋರ್ಸ್‌ಗಳನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 3 ಕಂತುಗಳಲ್ಲಿ ರೂ.20,000

2. ಹೆಣ್ಣು ಮಕ್ಕಳ ವಿಶೇಷ ಸ್ಕಾಲರ್ಶಿಪ್:-

ಹತ್ತನೇ ತರಗತಿಯಲ್ಲಿ ತೇರ್ಗಡೆಯಾಗಿ ದ್ವಿತೀಯ PUC ಅಭ್ಯಾಸ ಮಾಡುತ್ತಿದ್ದರು ಅಥವಾ PUC ಬದಲು ಡಿಪ್ಲೋಮಾ ಕೋರ್ಸ್‌ ಓದುತ್ತಿರುವ ವಿದ್ಯಾರ್ಥಿನಿಯರು ಈ ವಿಭಾಗದಲ್ಲಿ ಅರ್ಜಿ ಸಲ್ಲಿಸಬಹುದು.
* 3 ಕಂತುಗಳಲ್ಲಿ ರೂ.15,000 ಸ್ಕಾಲರ್ಶಿಪ್ ಸಿಗುತ್ತದೆ.

ಬೇಕಾಗುವ ದಾಖಲೆಗಳು:-

* ಆಧಾರ್ ಕಾರ್ಡ್
* ವಿದ್ಯಾರ್ಥಿಯ ಕಳೆದ ವರ್ಷದ ಅಂಕಪಟ್ಟಿ ಜೊತೆಗೆ SSLC ಮತ್ತು PUC ಅಂಕಪಟ್ಟಿ
* ಪ್ರಸ್ತುತವಾಗಿ ವಿದ್ಯಾಭ್ಯಾಸ ಪಡೆಯುತ್ತಿರುವ ಕಾಲೇಜಿನಿಂದ ದಾಖಲಾತಿಗೆ ಸಂಬಂಧಿಸಿದ ಯಾವುದಾದರೂ ಪುರಾವೆ
* ಇನ್ಕಮ್ ಸರ್ಟಿಫಿಕೇಟ್
* ಪಾಸ್ ಬುಕ್ ವಿವರ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ

ಅರ್ಜಿ ಸಲ್ಲಿಸುವ ವಿಧಾನ:-

https://www.buddy4study.com/scholarship/lic-golden-jubilee-scholarship ವೆಬ್ ಸೈಟ್ ಗೆ ಭೇಟಿ ನೀಡಿ ಕೊಟ್ಟಿರುವ ಸೂಚನೆಗಳ ಪ್ರಕಾರವಾಗಿ ಅರ್ಜಿ ಸಲ್ಲಿಸಿ.
* ಯಾವುದೇ CSC ಕೇಂದ್ರಗಳಲ್ಲಿ ಕೂಡ ಅರ್ಜಿ ಸಲ್ಲಿಸಬಹುದು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 14 ಜನವರಿ, 2024.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment