LIC ಬಂಪರ್ ಪಾಲಿಸಿ, ಕೇವಲ 5 ವರ್ಷ ಪ್ರೀಮಿಯಂ ಕಟ್ಟಿದ್ರೆ ಸಾಕು ಜೀವನ ಪೂರ್ತಿ ಆದಾಯ ಬರುತ್ತೆ.! ನಿಮ್ಮವರಿಗಾಗಿ ನಿಮಗಾಗಿ ಲೈಫ್ ಸೆಕ್ಯೂರ್

LIC

(Life Insurance Corparation of India) ದೇಶದ ನಾಗರಿಕರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. LIC ಯು ಚಿಕ್ಕ ವಯಸ್ಸಿನ ಅಪ್ರಾಪ್ತ ಮಕ್ಕಳಿಂದ ಹಿಡಿದು ವೃದ್ಧರವರಿಗೆ ಹಲವು ಯೋಜನೆಗಳನ್ನು ರೂಪಿಸಿ ಜನಮಾನಸದಲ್ಲಿ ಉತ್ತಮ ವಿಮೆ ಕಂಪನಿ ಎನ್ನುವ ಸ್ಥಾನಗಿಟ್ಟಿಸಿಕೊಂಡಿದೆ. LIC ಯ ಹಲವು ಯೋಜನೆಗಳ ಪ್ರಯೋಜನವನ್ನು ಕಳೆದ ಐದಾರು ದಶಕಗಳಿಂದ ಭಾರತೀಯರು ಪಡೆಯುತ್ತಲೇ ಬಂದಿದ್ದಾರೆ.

ಈಗ ಇವುಗಳ ಜೊತೆಗೆ ಮತ್ತೊಂದು ಹೊಸ ಯೋಜನೆ ಸೇರ್ಪಡೆಯಾಗುತ್ತಿದೆ. LIC ಜೀವನ್ ಉತ್ಸವ್ (LIC Jeevan Utsav) ಎಂಬ ಹೊಸ ಯೋಜನೆ ಕ್ಕಾಗಿ ಪರಿಚಯಿಸಿದ್ದು ಇದೇ ನವೆಂಬರ್ 29 ರಿಂದ ಖರೀದಿಗೆ ಲಭ್ಯವಿದೆ. ಈ ಯೋಜನೆಯಿಂದ ಎಂದಿನಂತೆ ಅತ್ಯುತ್ತಮ ರಿಟರ್ನ್ಸ್ ಪಡೆಯಬಹುದಾಗಿದೆ. LIC ಜೀವನ್ ಉತ್ಸವ್ ಯೋಜನೆ ಕುರಿತ ಕೆಲ ಪ್ರಮುಖ ಮಾಹಿತಿ ಹೀಗಿದೆ ನೋಡಿ.

WhatsApp Group Join Now
Telegram Group Join Now

* LIC ಬಹುತೇಕ ಪಾಲಿಸಿಗಳಂತೆ ಯೋಜನೆ ಮೆಚ್ಯುರ್ ಆದಾಗ ರಿಟರ್ನ್ಸ್ ವೇಳೆಯಲ್ಲಿ 10 ಪ್ರತಿಶತ ವಾರ್ಷಿಕ ಆದಾಯವನ್ನು ನೀಡುತ್ತದೆ.
* ಅಪ್ರಾಪ್ತ ವಯಸ್ಕರು, ಪುರುಷರು ಮತ್ತು ಮಹಿಳೆಯರು ಹೀಗೆ ಗರಿಷ್ಟ 65 ವಯಸ್ಸಿನ ವರೆಗಿನ ಯಾವುದೇ ಭಾರತೀಯ ನಾಗರಿಕನು ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದು.
* ಪಾಲಿಸಿಯನ್ನು ತೆಗೆದುಕೊಳ್ಳುವ ಕನಿಷ್ಠ ವಯಸ್ಸು 90 ದಿನಗಳು, ಮತ್ತು ಪಾಲಿಸಿ ಪಾವತಿಗೆ ಗರಿಷ್ಠ ವಯಸ್ಸು 75 ವರ್ಷಗಳು.

* 5 ವರ್ಷದಿಂದ 16 ವರ್ಷಗಳವರೆಗೆ ನಿಮ್ಮ ಆಯ್ಕೆ ವರ್ಷಗಳ ವರೆಗೆ ಪ್ರೀಮಿಯಂ (premium ) ಪಾವತಿಸಬೇಕು.
* ಕನಿಷ್ಠ ವಿಮಾ ಮೊತ್ತ ರೂ.5 ಲಕ್ಷಗಳು, ಕಾಯುವ ಅವಧಿಯು ಆಯ್ಕೆಮಾಡಿದ ಅವಧಿಯನ್ನು ಅವಲಂಬಿಸಿರುತ್ತದೆ.
* ನೀವು 5 ವರ್ಷಗಳ ಪ್ರೀಮಿಯಂ ಪಾವತಿ ಅವಧಿಯನ್ನು ಆರಿಸಿದರೆ ನೀವು 5 ವರ್ಷಗಳವರೆಗೆ ಕಾಯಬೇಕಾಗುತ್ತದೆ, ಒಂದು ವೇಳೆ 6 ವರ್ಷಗಳನ್ನು ಆಯ್ಕೆ ಮಾಡಿದರೆ 4 ವರ್ಷಗಳು ಹಾಗೂ 7 ವರ್ಷ ಆಯ್ಕೆಯಾದರೆ 3 ವರ್ಷ, 8-16 ವರ್ಷಗಳ ಪ್ರೀಮಿಯಂ ಪಾವತಿ ಅವಧಿಯನ್ನು ಆರಿಸಿದರೆ 2 ವರ್ಷಗಳವರೆಗೆ ಕಾಯಬೇಕು.

* ಕಂಪನಿ ನಿಗದಿಪಡಿಸಿದ ಕಾಯುವ ಅವಧಿಯ ನಂತರ, ನೀವು ವಾರ್ಷಿಕವಾಗಿ ವಿಮಾ ಮೊತ್ತದ 10% ರ ದರದಲ್ಲಿ LIC ಯಿಂದ ಜೀವಮಾನದ ಆದಾಯವನ್ನು ಪಡೆಯಬಹುದು ನೀವು ಬದುಕಿರುವವರೆಗೆ ಜೀವ ವಿಮೆ ಖಾತರಿಪಡಿಸುತ್ತದೆ.

* ಈ ಪಾಲಿಸಿಯ ಮೂಲ ವಿಮಾ ಮೊತ್ತ ರೂ. 5,00,000. ನಿಮ್ಮ ಪ್ರಕಾರ 5 ವರ್ಷಗಳಿಂದ 16 ವರ್ಷಗಳವರೆಗೆ ಪ್ರೀಮಿಯಂ ಅವಧಿಯನ್ನು ನೀವು ಆಯ್ಕೆ ಮಾಡಬಹುದು. ಉದಾಹರಣೆಗೆ, ನೀವು 5 ವರ್ಷಗಳ ಅವಧಿಯನ್ನು ಆರಿಸಿಕೊಂಡಿದ್ದೀರಿ ಎಂದು ಭಾವಿಸೋಣ. ನಂತರ ಪ್ರತಿ ವರ್ಷ ಸುಮಾರು 1.16 ಲಕ್ಷಗಳು ಪ್ರೀಮಿಯಂನಂತೆ ಪಾವತಿಸಿ.

ಪ್ರೀಮಿಯಂ ಅವಧಿಯನ್ನು ಪೂರ್ತಿ ಮಾಡಿದ ನಂತರ, ನಾವು ಇನ್ನೂ 5 ವರ್ಷಗಳವರೆಗೆ ಕಾದರೆ ಅದರ ಮುಂದಿನ ವರ್ಷದಿಂದ ಅಂದರೆ ನೀವು ಪಾಲಿಸಿಯನ್ನು ತೆಗೆದುಕೊಂಡ 11 ನೇ ವರ್ಷದಿಂದ, ನೀವು ಪ್ರತಿ ವರ್ಷ ವಿಮಾ ಮೊತ್ತದ 10 ಪ್ರತಿಶತವನ್ನು ಪಡೆಯುತ್ತೀರಿ.

ನೀವು ರೂ. 5 ಲಕ್ಷ ಪಾಲಿಸಿ ಖರೀದಿ ಮಾಡಿದ್ದರಿಂದ ಅದರಲ್ಲಿ ಪ್ರತಿ ವರ್ಷ ರೂ.50,000 ನಿಮಗೆ ಬರುತ್ತದೆ. ಈ ಮೊತ್ತವು ನೀವು ಬದುಕಿರುವವರೆಗೆ ಬರುತ್ತದೆ. ಇದನ್ನು ಪ್ರತಿ ವರ್ಷ ವರ್ಷದ ಕೊನೆಯಲ್ಲಿ ನೀವು ನೀವು ನೀಡುವ ಬ್ಯಾಂಕ್ ಖಾತೆಗೆ ಪಡೆಯಬಹುದು.

* ಈ ಮೊತ್ತವನ್ನು LIC ನಲ್ಲಿಯೇ ಇರಿಸುವ ಆಪ್ಷನ್ ಕೂಡ ಇದೆ, ನೀವು ಅದನ್ನು ಆರಿಸಿಕೊಂಡರೆ ಚಕ್ರಬಡ್ಡಿಯು 5.5% ರ ದರದಲ್ಲಿ ಸೇರಿಕೊಳ್ಳುತ್ತದೆ. ಈ ಮೊತ್ತವನ್ನು ಡ್ರಾ ಮಾಡದೆ ಬಿಟ್ಟರೆ, ಚಕ್ರಬಡ್ಡಿಯ ಪರಿಣಾಮದ ಅಡಿಯಲ್ಲಿ ದೊಡ್ಡ ಪ್ರಮಾಣದ ಹಣವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ.

* ಠೇವಣಿ ಮಾಡಿದ ಮೊತ್ತದ 75 ಪ್ರತಿಶತವನ್ನು ಹಿಂಪಡೆದು, ಇನ್ನುಳಿದ ಉಳಿದ ಮೊತ್ತಕ್ಕೆ ಬಡ್ಡಿ ಪಡೆಯುವ ಆಪ್ಷನ್ ಇದೆ.
* ನಾಮಿನಿ (Nominee) ಫೆಸಿಲಿಟಿ ಕೂಡ ಇದ್ದು ಮರಣದ ಸಂದರ್ಭದಲ್ಲಿ, ಸಂಚಿತ ಮೊತ್ತ ಮತ್ತು ಮರಣದ ಪ್ರಯೋಜನಗಳನ್ನು ನಾಮಿನಿಗೆ ನೀಡಲಾಗುತ್ತದೆ

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment