LIC
(Life insurance Corporation of India) ಭಾರತದಲ್ಲಿ ಬೃಹತ್ ಸಂಖ್ಯೆಯಲ್ಲಿ ಗ್ರಾಹಕರನ್ನು ಹೊಂದಿರುವ ನಂಬಿಕಸ್ಥ ವಿಮಾ ಸಂಸ್ಥೆಯಾಗಿದೆ. LIC ಇದುವರೆಗೆ ಜೀವ ವಿಮೆಗಳಿಗೆ ಹೆಸರಾಗಿತ್ತು. ಈಗ ಈ ಯೋಜನೆಗಳು ಮಾತ್ರವಲ್ಲದೆ ತನ್ನ ಗ್ರಾಹಕರ ಅಭಿರುಚಿ ಹಾಗೂ ಅವಶ್ಯಕತೆಗಳಿಗೆ ಅನುಗುಣವಾಗಿ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ.
ಇಂದು LIC ಯಲ್ಲಿ ಹತ್ತಾರು ಬಗೆಯ ಯೋಜನೆಗಳಿದ್ದು ಇತ್ತೀಚಿಗೆ ಇನ್ನೊಂದು ಹೊಸ ಯೋಜನೆ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದೆ. LIC ಯ ಈ ಜೀವನ್ ಉತ್ಸವ್ (Jeevan Utsav) ಎಂಬ ಹೊಸ ಯೋಜನೆ ತನ್ನಲ್ಲಿ ಹೂಡಿಕೆ ಮಾಡುವ ಗ್ರಾಹಕನಿಗೆ ಪ್ರತಿ ವರ್ಷ ಒಂದು ಲಕ್ಷದವರೆಗೆ ಪಿಂಚಣಿ ಪಡೆಯುವ ಸೌಲಭ್ಯವನ್ನು ಖಾತರಿ ಪಡಿಸುತ್ತದೆ. ಈ ಯೋಜನೆಗೆ ವಿಶೇಷತೆಗಳು ಏನು? ಪ್ರೀಮಿಯಂ ಎಷ್ಟು ಕಟ್ಟಬೇಕು? ಇನ್ನಿತರ ಕಂಡಿಷನ್ ಗಳು ಏನು? ಇತ್ಯಾದಿ ವಿವರಿದ ಬಗ್ಗೆ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.
ಈ ಸುದ್ದಿ ಓದಿ:- ಕಡಿಮೆ ಹಸುಗಳಿಂದ ದಿನಕ್ಕೆ 300 ಲೀಟರ್ ಹಾಲು, ಕನಿಷ್ಠ ಒಂದು ಲಕ್ಷ ಆದಾಯ ಗ್ಯಾರಂಟಿ.!
ಯೋಜನೆ ಹೆಸರು:- LIC ಜೀವನ್ ಉತ್ಸವ್ ಯೋಜನೆ
* ಭಾರತೀಯ ನಾಗರಿಕನಾದ ಯಾವುದೇ ವ್ಯಕ್ತಿ ಈ ಯೋಜನೆ ಖರೀದಿಸಬಹುದು.
* ಈ ಪಾಲಿಸಿಯು ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್, ವೈಯಕ್ತಿಕ ಉಳಿತಾಯ ಸಂಪೂರ್ಣ ಜೀವ ವಿಮಾ ಯೋಜನೆಯಾಗಿದೆ. ಈ ವಿಷಯವನ್ನು ಸ್ವತಃ LIC ಕಂಪನಿ ಅಧಿಕೃತವಾಗಿ ಘೋಷಿಸಿದೆ. ಕಂಪನಿಯು ಶೇರ್ ಮಾರ್ಕೆಟ್ ಗೆ ನೀಡಿದ ಮಾಹಿತಿಗಳಲ್ಲಿ ಇದನ್ನು ಬಹಿರಂಗಪಡಿಸಿದೆ.
* ಇದು ಪೂರ್ಣ ಪ್ರಮಾಣದ ಜೀವ ವಿಮೆ ಯೋಜನೆ ಹಾಗೂ ಪ್ರತಿ ತಿಂಗಳು ಆದಾಯವನ್ನು ನೀಡಿರುವ ಪ್ರಯೋಜನ ಪಾವತಿ ಯೋಜನೆಯು ಕೂಡ ಹೌದು
* 5 – 12 ವರ್ಷಗಳವರೆಗೆ ಪ್ರೀಮಿಯಂ ಕಟ್ಟುವ ಅವಕಾಶಗಳಿವೆ, ಗ್ರಾಹಕನು ತನ್ನ ಪರಿಸ್ಥಿತಿಗೆ ಅನುಗುಣವಾಗಿ ಅವಧಿಯಲ್ಲಿ ಆರಿಸಿಕೊಳ್ಳಬಹುದು. ಪ್ರೀಮಿಯಂ ಪಾವತಿಸುವ ಅವಧಿಯಲ್ಲಿ ಗ್ಯಾರಂಟಿ ರಿಟರ್ನ್ಸ್ ಹೆಚ್ಚಳಕ್ಕೆ ಅವಕಾಶವಿದೆ.
ಈ ಸುದ್ದಿ ಓದಿ:- ಸಶಸ್ತ್ರ ಪೊಲೀಸ್ ಪಡೆ ನೇಮಕಾತಿ, ಬರೋಬ್ಬರಿ 506 ಹುದ್ದೆಗಳ ಭರ್ತಿ, ವೇತನ 1,77,500 ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ.!
* ಈ ಯೋಜನೆಯನ್ನು ಖರೀದಿಸುವ ಗ್ರಾಹಕನು ನಿಯಮಿತ ಆದಾಯದ ಲಾಭ ಮತ್ತು ಫ್ಲೆಕ್ಸಿ ಆದಾಯದ ಲಾಭವನ್ನು ಪಡೆಯಬಹುದು
* ಈ ಯೋಜನೆ ಕನಿಷ್ಠ ಮೂಲ ವಿಮಾ ಮೊತ್ತ ರೂ.5 ಲಕ್ಷ
* ಯೋಜನೆಯ ಪ್ರಯೋಜನದ ಬಗ್ಗೆ ಹೇಳುವುದಾದರೆ ಈ ಯೋಜನೆಯ ಮೆಚುರಿಟಿ ಅವಧಿ ಮುಗಿದಬಳಕ ಗ್ರಾಹಕನ ತನ್ನ ಹೂಡಿಕೆಯ LIC ವಿಮಾ ಮೊತ್ತದ 10% ಪ್ರಯೋಜನ ಪಡೆಯಬಹುದು
* ನಾಮಿನಿ ಫೆಸಿಲಿಟಿ ಕೂಡ ಇದೆ ಒಂದು ವೇಳೆ ಯೋಜನೆ ಖರೀದಿಸಿದ ವ್ಯಕ್ತಿಯು ಅಕಾಲಿಕ ಮೃ’ತ್ಯುಗೆ ಒಳಗಾದರೆ ಆತ ಸೂಚಿಸಿದ್ದ ನಾಮಿನಿಗೆ ಈ ಯೋಜನೆಯ ಮೂಲ ವಿಮಾ ಮೊತ್ತ ಅಥವಾ ವಾರ್ಷಿಕ ಪ್ರೀಮಿಯಂ ನ ಏಳರಷ್ಟು ಹಣವನ್ನು ನೀಡಲಾಗುತ್ತದೆ.
ಈ ಸುದ್ದಿ ಓದಿ:- ಕೇವಲ 12,500 ಹೂಡಿಕೆ ಮಾಡಿ ಸಾಕು 1 ಕೋಟಿ ಸಿಗುತ್ತೆ ಪೋಸ್ಟ್ ಆಫೀಸ್ ಬೆಸ್ಟ್ ಸ್ಕೀಮ್ ಇದು.!
* ಈ ಯೋಜನೆಯ ಮುಖ್ಯ ಆಕರ್ಷಣೆಯೆಂದರೆ ಮೆಚ್ಯುರಿಟಿ ನಂತರ ರೂ.1 ಲಕ್ಷ ಪಿಂಚಣಿ ಸಿಗುತ್ತದೆ ಎನ್ನುವುದು. ಉದಾಹರಣೆಯೊಂದಿಗೆ ಹೇಳುವುದಾದರೆ ನೀವೀಗ 25 ವರ್ಷದ ವ್ಯಕ್ತಿಯಾಗಿದ್ದು ರೂ.10 ಲಕ್ಷ ವಿಮಾ ಮೊತ್ತಕ್ಕೆ ಈ ಪಾಲಿಸಿ ಖರೀದಿಸಿ 12 ವರ್ಷಗಳು ಅವಧಿಯನ್ನು ಆಯ್ಕೆ ಮಾಡಿದ್ದರೆ 36 ವರ್ಷಗಳವರೆಗೆ ಪ್ರಿಮೀಯಂ ಕಟ್ಟಿರುತ್ತೀರಿ.
ಮೊದಲ ವರ್ಷ ರೂ.92,535 (+GST 4.5%) ಹಾಗೂ ಎರಡನೇ ವರ್ಷದಿಂದ 12 ವರ್ಷದವರೆಗೆ ರೂ.90,542 (+GST 2.25%) ಪಾವತಿಸಿ ತನ್ನ ಯೋಜನೆಯನ್ನು ಸರಿಯಾಗಿ ಪೂರೈಸಿದರೆ ವ್ಯಕ್ತಿ 37ನೇ ವಯಸ್ಸಿನಲ್ಲಿದ್ದಾಗ ಈ ಸ್ಕೀಮ್ ಮೆಚ್ಯೂರ್ ಆಗುತ್ತದೆ. ಆತನಿಗೆ 39 ವರ್ಷ ತುಂಬಿದ ನಂತರ ಈ ಯೋಜನೆಯಿಂದ ಪ್ರತಿ ವರ್ಷ ಒಂದು ಲಕ್ಷ ಪೆನ್ಷನ್ ಪಡೆಯಬಹುದು ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ LIC ಕಚೇರಿಗೆ ಭೇಟಿ ನೀಡಿ.