LIC ಹೊಸ ಸ್ಕೀಮ್ ಕೇವಲ 121 ರೂಪಾಯಿ ಹೂಡಿಕೆ ಮಾಡಿ ಸಾಕು 27 ಲಕ್ಷ ಸಿಗಲಿದೆ.!

LIC

ನಮ್ಮ ದೇಶದಲ್ಲಿ ಹೆಣ್ಣು ಮಗು (Girl Child) ಹುಟ್ಟಿದ ತಕ್ಷಣ ಸಂತಸ ಪಡುವುದರ ಜೊತೆಗೆ ಹೆತ್ತವರಿಗೆ ಜವಾಬ್ದಾರಿಯು ಹೆಚ್ಚಾಗುತ್ತದೆ. ಯಾಕೆಂದರೆ ಈಗಿನ ಕಾಲದಲ್ಲಿ ಪುರುಷನಷ್ಟೇ ಸಮಾನವಾಗಿ ಹೆಣ್ಣುಮಕ್ಕಳಿಗೂ ಕೂಡ ವಿದ್ಯಾಭ್ಯಾಸ ಕೊಡಿಸಬೇಕು ಅದು ಅವರ ಹಕ್ಕು.

ಹಾಗೆ ಪ್ರತಿ ತಂದೆ ತಾಯಿಗೂ ತಮ್ಮ ಮಗಳು ಯಾವುದೇ ಗಂಡು ಮಗನಿಗಿಂತ ಕಡಿಮೆ ಇಲ್ಲದಂತೆ ಸಾಧನೆ ಮಾಡಬೇಕು. ಅವಳ ಪ್ರತಿ ಹಂತದಲ್ಲೂ ನಾವು ಅವಳಿಗೆ ಪ್ರೋತ್ಸಾಹ ನೀಡಬೇಕು ಎನ್ನುವ ಮಹಾದಾಸೆ ಇರುತ್ತದೆ ಆದರೆ ಎಲ್ಲರ ಮನೆಯ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರುವುದಿಲ್ಲ ಮತ್ತು ಆ ಮಗು ಬೆಳೆದ ನಂತರ 15 20 ವರ್ಷಗಳ ಮೇಲೆ ಪರಿಸ್ಥಿತಿ ಹೇಗೋ ಬದಲಾಗಿರುತ್ತದೆಯೋ ಆ ಸಮಯದಲ್ಲಿ ಅವರ ಕೈಯಲ್ಲಿ ಶಕ್ತಿ ಇರುತ್ತದೆಯೋ ಇಲ್ಲವೋ.

WhatsApp Group Join Now
Telegram Group Join Now

ಹೀಗಾಗಿ ಆ ಸಮಯದಲ್ಲಿ ಹಣಕಾಸಿನ ಅನಾನುಕೂಲತೆ ಆಗಬಾರದು ಎನ್ನುವ ಉದ್ದೇಶದಿಂದ ಮಗು ಚಿಕ್ಕವಯಸ್ಸಿನಲ್ಲಿ ಇರುವಾಗಲೇ ಮಗು ಹೆಸರಿನಲ್ಲಿ ಹೂಡಿಕೆ ಮಾಡುವುದು ಒಂದು ಒಳ್ಳೆಯ ಆಲೋಚನೆ. ದೇಶದ ಅನೇಕ ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥೆಗಳು ಈ ರೀತಿಯ ಅನೇಕ ಯೋಜನೆಗಳನ್ನು ಪರಿಚಯಿಸಿದೆ.

ಮತ್ತು ಭಾರತದ ನಂಬಿಕಸ್ಥ ವಿಮಾ ಸಂಸ್ಥೆ ಆಗಿರುವ LIC ಕೂಡ ಹೆಣ್ಣು ಮಕ್ಕಳ ಪೋಷಕರಿಗಾಗಿ LIC ಕನ್ನದಾನ ಯೋಜನೆ (LIC Kanyadan Policy) ಎನ್ನುವ ಯೋಜನೆ ಯನ್ನು ಪರಿಚಯಿಸಿದೆ. ಇದು ಹೆಣ್ಣು ಮಕ್ಕಳಿಗಾಗಿ ರೂಪಿಸಿರುವ ವಿಶೇಷ ಯೋಜನೆಗಳಾಗಿದ್ದು, ಈ ಯೋಜನೆಯ ವಿಶೇಷತೆಗಳು ಏನು? ಏನೆಲ್ಲಾ ಕಂಡಿಷನ್ ಇದೆ? ಇತ್ಯಾದಿ ವಿವರ ಹೀಗಿದೆ ನೋಡಿ.

ಯೋಜನೆಯ ಹೆಸರು:- LIC ಕನ್ಯಾದಾನ ಪಾಲಿಸಿ
ಯೋಜನೆ ಕುರಿತಾದ ಕೆಲ ಪ್ರಮುಖ ಸಂಗತಿಗಳು:-

* ಹೆಣ್ಣು ಮಗುವಿನ ಹೆಸರಿನಲ್ಲಿ ತಂದೆ-ತಾಯಿ ಈ ಯೋಜನೆಯನ್ನು ಖರೀದಿಸುತ್ತಾರೆ. ಪೋಷಕರ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 50 ವರ್ಷಗಳಾಗಿರಬೇಕು ಮತ್ತು ಮಗುವಿಗೆ ಕನಿಷ್ಠ 1 ವರ್ಷ ವಯಸ್ಸಾಗಿರಬೇಕು.
* ಕನಿಷ್ಠ ವಿಮಾ ಮೊತ್ತ ರೂ 1 ಲಕ್ಷ, ಹಾಗೂ ಗರಿಷ್ಠ ಯಾವುದೇ ಮಿತಿ ಇರುವುದಿಲ್ಲ. (ಮೂಲ ವಿಮಾ ಮೊತ್ತವು 10,000 ಗುಣಕಗಳಲ್ಲಿರುತ್ತದೆ)

* ಯೋಜನೆಯ ಮೆಚುರಿಟಿ ಅವಧಿ 13 ವರ್ಷಗಳು ಅಥವಾ 25 ವರ್ಷಗಳು ಇರುತ್ತದೆ ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಪ್ರೀಮಿಯಂ ಪಾವತಿ ಆಯ್ಕೆಗಳು
* 25 ವರ್ಷಗಳನ್ನು ಆರಿಸಿದರೆ ಕೊನೆಯ 3 ವರ್ಷ ಪ್ರೀಮಿಯಂ ಪಾವತಿಸುವ ಅವಶ್ಯಕತೆ ಇರುವುದಿಲ್ಲ 22 ವರ್ಷಗಳವರೆಗೆ ಮಾತ್ರ ಕಟ್ಟಬೇಕು ಮತ್ತು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕವಾಗಿ ಪ್ರೀಮಿಯಂ ಪಾವತಿಸಬಹುದು.

* ಮೆಚುರಿಟಿ ಮೊತ್ತದ ಬಗ್ಗೆ ಹೇಳುವುದಾದರೆ ಉದಾಹರಣೆಗೆ ನೀವು ಪ್ರತಿ ದಿನ ರೂ.121 ಉಳಿಸುವುದಾದರೆ, ಮಾಸಿಕ ವೆಚ್ಚ ಸುಮಾರು 3600 ರೂ.ಆಗುತ್ತದೆ. ನೀವು ಅಗ್ಗದ ಪಾಲಿಸಿಯನ್ನು ಸಹ ಆಯ್ಕೆ ಮಾಡಬಹುದು, ಆದರೆ ಕೊನೆಯಲ್ಲಿ ನೀವು ಕಡಿಮೆ ಹಣವನ್ನು ಪಡೆಯುತ್ತೀರಿ.

ನೀವು 25 ವರ್ಷಗಳವರೆಗೆ ಪ್ರತಿದಿನ 121 ರೂ ಉಳಿಸಿದರೆ, ಕೊನೆಯಲ್ಲಿ ನಿಮಗೆ ಒಟ್ಟು 27 ಲಕ್ಷ ರೂ. ಹಣ ಸಿಗುತ್ತದೆ.
* ಒಂದು ವೇಳೆ ದು’ರಾ’ದೃ’ಷ್ಟ’ವಶಾತ್ ವಿಮೆ ಮಾಡಿಸಿದ ಪೋಷಕರ ಅಕಾಲಿಕ ಮ’ರ’ಣವಾದರೆ ಉಳಿದ ಪ್ರೀಮಿಯಂಗಳನ್ನು ಮನ್ನಾ ಮಾಡಲಾಗುತ್ತದೆ. ಮತ್ತು ಪೋಷಕರ ಆಕಸ್ಮಿಕ ಮ’ರ’ಣ’ದ ಸಂದರ್ಭದಲ್ಲಿ ತಕ್ಷಣವೇ 10 ಲಕ್ಷ ರೂ. ಪರಿಹಾರ ನೀಡುತ್ತದೆ.

ಈ ಯೋಜನೆ ಖರೀದಿಸಲು ಬೇಕಾಗುವ ದಾಖಲೆಗಳು:

1. ಪೋಷಕರ ಆಧಾರ್ ಕಾರ್ಡ್
2. ಮಗುವಿನ ಆಧಾರ್ ಕಾರ್ಡ್
3. ಮಗುವಿನ ಜನನ ಪ್ರಮಾಣ ಪತ್ರ
4. ಇತ್ತೀಚಿನ ಭಾವಚಿತ್ರ
5. ಸಹಿ
6. ವಿಳಾಸಪುರಾವೆ
7. ಬ್ಯಾಂಕ್ ಖಾತೆ ವಿವರ
8. ಇನ್ನಿತರ ಪ್ರಮುಖ ದಾಖಲೆಗಳು
* ಯೋಜನೆ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಹತ್ತಿರದ LIC ಶಾಖೆಗೆ ಭೇಟಿ ಕೊಡಿ

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment