LIC ಹೊಸ ಸ್ಕೀಮ್, 25 ಲಕ್ಷ ಸಿಗುವ ಯೋಜನೆ.!

LIC

LIC (Life Insurance Corporation of India) ಭಾರತದ ನಂಬಿಕಾರ್ಹ ವಿಮಾ ಸಂಸ್ಥೆಯಾಗಿದೆ. ಕಳೆದ ಹಲವು ದಶಕಗಳಿಂದ ಭಾರತದಾದ್ಯಂತ ಕೋಟ್ಯಾಂತರ ಸಂಖ್ಯೆಗಳಲ್ಲಿ ಗ್ರಾಹಕರನ್ನು ಉಳಿಸಿ ಕೊಂಡಿರುವ LIC ಇಂದಿಗೂ ಕೂಡ ಮಾರುಕಟ್ಟೆಯಲ್ಲಿ ತನ್ನ ಸ್ಥಾನಮಾನವನ್ನು ಗಟ್ಟಿಯಾಗಿ ಸ್ಥಿರಗೊಳಿಸಿದೆ.

ಇದಕ್ಕೆ ಕಾರಣ ಕಾಲ ಕಾಲಕ್ಕೆ ಅನುಗುಣವಾಗಿ ಗ್ರಾಹಕರ ಆಸಕ್ತಿ ಅನುಕೂಲತೆ ಹಾಗೂ ಅಭಿರುಚಿಗಳಿಗೆ ಅನುಗುಣವಾಗಿ ಹೊಸ ಮಾದರಿಯ ಯೋಜನೆಗಳನ್ನು ಪರಿಚಯಿಸುತ್ತಿರುವುದು. ಹೀಗಾಗಿ ಇಂದಿಗೂ ಜನಸಾಮಾನ್ಯರಿಗೆ LIC ಯಲ್ಲಿ ಹೂಡಿಕೆ ಮಾಡುವುದರಿಂದ ದೀರ್ಘಕಾರದಲ್ಲಿ ಖಚಿತವಾಗಿ ಉತ್ತಮ ಬಡ್ಡಿದರೊಂದಿಗಿನ ಲಾಭದ ಜೊತೆಗೆ ನಮ್ಮ ಹೂಡಿಕೆಗೆ ಅಷ್ಟೇ ಭದ್ರತೆ ಇರುತ್ತದೆ ಎನ್ನುವ ನಂಬಿಕೆ ಇರುವುದು.

WhatsApp Group Join Now
Telegram Group Join Now

ಇದರೊಂದಿಗೆ ಜೀವ ವಿಮೆ, ಬೋನಸ್, ಸಾಲ ಸೌಲಭ್ಯಹಾಗೂ ಇನ್ನಿತರ ಸೌಕರ್ಯಗಳು LIC ಪಾಲಿಸಿಗಳತ್ತ ಜಲಸಾಮಾನ್ಯರನ್ನು ಸೆಳೆಯುವ ಅಂಶಗಳಾಗಿವೆ. ಇಷ್ಟೆಲ್ಲ ತಿಳಿದುಕೊಂಡ ಬಳಿಕ ನೀವು ಕೂಡ LIC ಪಾಲಿಸಿ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ LIC ಪರಿಚಯಿಸಿರುವ ಹೊಸ ಜೀವನ್ ಆನಂದ್ (Jeevan Anand Policy) ಯೋಜನೆಯ ಬಗ್ಗೆ ತಿಳಿದುಕೊಂಡು ಮುಂದುವರೆಯಿರಿ.

ಯಾಕೆಂದರೆ ಈ ಯೋಜನೆಯಲ್ಲಿ ದಿನಕ್ಕೆ ಕನಿಷ್ಠ ರೂ.45 ಹೂಡಿಕೆ ಮಾಡಿದರೆ ಸಾಕು, ಅಂತಿಮವಾಗಿ ಪಾಲಿಸಿ ಮೆಚುರಿಟಿ ಬಳಿಕ 25 ಲಕ್ಷ ಹಿಂಪಡೆಯುವ ಅವಕಾಶ ಸಿಗುತ್ತಿದೆ. ಈ ಯೋಜನೆ ಕುರಿತ ಪೂರ್ತಿ ಮಾಹಿತಿಗಾಗಿ ಅಂಕಣವನ್ನು ಕೊನೆಯವರೆಗೂ ಓದಿ.

ಯೋಜನೆಯ ಹೆಸರು:- LIC ಜೀವನ್ ಆನಂದ್ ಯೋಜನೆ

ಯೋಜನೆಯ ಕುರಿತ ಪ್ರಮುಖ ಸಂಗತಿಗಳು:-

* 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿಯು ಈ ಪಾಲಿಸಿ ಖರೀದಿಸಬಹುದು, ಪಾಲಿಸಿ ಖರೀದಿಗೆ ಗರಿಷ್ಠ ವಯೋಮಿತಿ 50 ವರ್ಷಗಳು
* ಯೋಜನೆಯ ಮೆಚುರಿಟಿ ಅವಧಿ 15 ರಿಂದ 35 ವರ್ಷಗಳು
* ವಾರ್ಷಿಕ, ಅರ್ಧ-ವಾರ್ಷಿಕ, ತ್ರೈಮಾಸಿಕವಾಗಿ ಪ್ರೀಮಿಯಂ ಪಾವತಿಸಲು ಆಯ್ಕೆಗಳಿರುತ್ತದೆ ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಚೂಸ್ ಮಾಡಬಹುದು.

* ಮೂರು ವರ್ಷಗಳ ಪ್ರೀಮಿಯಂ ಪಾವತಿಸಿದ ನಂತರ ಸಾಲ ಸೌಲಭ್ಯ ಇರುತ್ತದೆ. ಒಂದು ವೇಳೆ ಪಾಲಿಸಿ ರಿಟರ್ನ್ ಮಾಡುವುದಾದರೆ ಮೂರು ವರ್ಷಗಳ ಪ್ರೀಮಿಯಂ ಪಾವತಿಸಿದ ನಂತರ ಸರಂಡರ್ ಮಾಡಿ ನಿಯಮಗಳ ಪ್ರಕಾರವಾಗಿ ನಿಮಗೆ ಸಲ್ಲಬೇಕಾದ ಹಣ ಪಡೆಯಬಹುದು
* ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಮತ್ತು ಸೆಕ್ಷನ್ 10 (10 ಡಿ) ಅಡಿಯಲ್ಲಿ ವಿನಾಯಿತಿ ಲಭ್ಯವಿದೆ.

* ಮುಖ್ಯವಾಗಿ LIC ಆನಂದ್ ಯೋಜನೆಯ ವಿಶೇಷದ ಬಗ್ಗೆ ವಿವರಿಸುವುದಾದರೆ, ಅತಿ ಹೆಚ್ಚು ಬೋನಸ್ ಗಳನ್ನು ಹೊಂದಿರುವ ಪಾಲಿಸಿ ಎಂದ ಖ್ಯಾತಿಯಾಗಿದೆ ವಾರ್ಷಿಕವಾಗಿ ಬೋನಸ್ ನೀಡಲಾಗುತ್ತದೆ ಮೆಚುರಿಟಿ ಅವಧಿವರೆಗೂ ಪಾಲಿಸಿ ನಡೆಸಿ ಕೊಂಡು ಒಬ್ಬ ವ್ಯಕ್ತಿಯ ಬೋನಸ್ ಮೊತ್ತವೇ ರೂ.8.60 ಲಿಂಕ್ ವಾಗಿರುತ್ತದೆ, ಅಂತಿಮ ಬೋನಸ್ ಕೊಡುಗೆ ಸೇರಿದರೆ ರೂ.11.50 ಲಕ್ಷ ಆಗುತ್ತದೆ.

* ಒಮ್ಮೆ ಈ ಯೋಜನೆ ಖರೀದಿಸಿದರೆ ಮೆಚುರಿಟಿ ಅವಧಿ ಮುಗಿದ ಬಳಿಕ ಕೂಡ ವ್ಯಕ್ತಿಯ ಜೀವಿತಾವಧಿವರೆಗೂ ಜೀವವಿಮೆ ಜಾತಿಯಲ್ಲಿ ಇರುತ್ತದೆ ಎನ್ನುವುದು ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ
* ಅಪಘಾತವಾಗಿ ವ್ಯಕ್ತಿ ಸಾ’ವನ್ನಪ್ಪಿದರೆ ರೂ.5 ಲಕ್ಷದವರೆಗೆ ಕುಟುಂಬಕ್ಕೆ ವಿಮೆ ಹಣ ದೊರೆಯುತ್ತದೆ, ಅಥವಾ ಯಾವುದೇ ಅಪಘಾತದಿಂದ ಶಾಶ್ವತ ಅಂಗವೈಕಲ್ಯ ಉಂಟಾದರೂ ಕೂಡ ಕಂಪನಿ ವಿಮೆ ಹಣ ನೀಡುತ್ತದೆ.

* ಇತ್ಯಾದಿ ಎಲ್ಲಾ ಕಾರಣದಿಂದಾಗಿ ಜೀವನ್ ಆನಂದ್ ಪಾಲಿಸಿ ಬೆಸ್ಟ್ ಆಗಿದೆ, ಹೆಚ್ಚಿನ ಮಾಹಿತಿಗಾಗಿ ಹತ್ತಿರದ LIC ಶಾಖೆಗೆ ಭೇಟಿ ನೀಡಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment