LIC
LIC ಭಾರತೀಯರಿಗೆ ಒಂದು ನಂಬಿಕಾರ್ಹ ಹೂಡಿಕೆ ಸಂಸ್ಥೆಯಾಗಿದೆ. ಪ್ರತಿ ಮನೆಗಳಲ್ಲೂ ಕೂಡ LIC ಪಾಲಿಸಿ ಹೊಂದಿರುವವರು ನಿಮಗೆ ಕಾಣ ಸಿಗುತ್ತಾರೆ. ಜೀವ ವಿಮೆ ಸೌಲಭ್ಯದೊಂದಿಗೆ ಉಳಿತಾಯಕ್ಕೆ ಭದ್ರತೆ ಹಾಗೂ ಹೂಡಿಕೆಗೆ ಹೆಚ್ಚಿನ ಲಾಭ ಪಡೆಯುವುದಕ್ಕೆ LIC ಬೆಸ್ಟ್ ಎನ್ನುವುದೇ ಬಡ ಹಾಗೂ ಮಧ್ಯಮ ವರ್ಗದ ಜನತೆಯ ಅಭಿಪ್ರಾಯ.
ಹೀಗಾಗಿ LIC ಕಾಲ ಕಾಲಕ್ಕೆ ತನ್ನ ಗ್ರಾಹಕರಿಗೆ ಅನುಕೂಲವಾಗುವಂತೆ ನಿಯಮಗಳನ್ನು ಪರಿಷ್ಕರಿಸಿ ಹಾಗೂ ಹೊಸ ಯೋಜನೆಗಳನ್ನು ಪರಿಚಯಿಸಿ ಅನುಕೂಲತೆ ಮಾಡಿಕೊಡುತ್ತಿದೆ. ಅಂತೆಯೇ ಇತ್ತೀಚೆಗೆ LIC ಯ ಪ್ರಮುಖ ವಿಮೆ ನಿಯಮಗಳು ಬದಲಾಗಿದೆ, ಈ ಸಂಬಂಧಿತ ವಿವರ ಹೀಗಿದೆ ನೋಡಿ.
ಒಮ್ಮೆ ಪಾಲಿಸಿ ಖರೀದಿಸಿದ ಮೇಲೆ ಗ್ರಾಹಕರು ಅದರ ಮೆಚುರಿಟಿ ಅವಧಿವರೆಗೂ ಕೂಡ ಪ್ರೀಮಿಯಂ ಪಾವತಿಸಿಕೊಂಡು ನಿರ್ವಹಿಸಿಕೊಂಡು ಹೋಗುವ ಆಸಕ್ತಿ ಉಳಿಸಿಕೊಂಡಿರುವುದಿಲ್ಲ ಹಾಗೂ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಕೂಡ ಪ್ರೀಮಿಯಂ ಕಟ್ಟಲು ಸಾಧ್ಯವಾಗದೇ ಅರ್ಧಕ್ಕೆ ನಿಲ್ಲಿಸಿರುತ್ತಾರೆ.
ಇಂತಹ ಸಂದರ್ಭಗಳಲ್ಲಿ ನೀವು ಪಾಲಿಸಿ ಸರಂಡರ್ ಮಾಡುವುದರಿಂದ ನಿಮಗಾಗುವ ನಷ್ಟದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು. ಇದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 2024 ರಿಂದ ಅನ್ವಯವಾಗುವಂತೆ ಹೊಸ ನಿಯಮ ಜಾರಿಗೆ ತಂದು ಈ ಹಿಂದೆಂದಿಗಿಂತಲೂ ಗ್ರಾಹಕನಿಗೆ ಹೆಚ್ಚು ಲಾಭ ಮಾಡಿಕೊಡಲಾಗಿದೆ.
ಪಾಲಿಸಿಯ ಮೆಚುರಿಟಿ ಅವಧಿ ಪೂರ್ಣವಾಗುವ ಮುನ್ನವೇ ಅದರ ಪ್ರೀಮಿಯಂ ಪಾವತಿಸಲಾಗಿದೆ ಸ್ಥಗಿತಗೊಳಿಸಿ ಕಂಪನಿಗೆ ಪಾಲಿಸಿ ಹಿಂತಿರುಗಿಸುವುದನ್ನು ಸರಂಡರ್ ಎನ್ನುತ್ತಾರೆ. ಅನೇಕರು ತಮ್ಮ ಪಾಲಿಸಿ ಸ್ಥಗಿತಗೊಳಿಸಿ ಸುಮ್ಮನಾಗುತ್ತಾರೆ ಅದರ ಬದಲು ಸರಂಡರ್ ಮಾಡುವುದರಿಂದ ತಾವು ಹೂಡಿಕೆ ಮಾಡಿದ ಹಣದ ಅಲ್ಪ ಪ್ರಮಾಣವಾದರೂ (ಸರಂಡರ್ ಮೌಲ್ಯ) ಹಿಂಪಡೆಯಬಹುದು.
ಇಂತಹ ಸನ್ನಿವೇಶದಲ್ಲಿ ಪ್ರೀಮಿಯಂ ಮೊತ್ತ, ಪ್ರೀಮಿಯಂ ಪಾವತಿಸಿರುವ ಅವಧಿ ಹಾಗೂ ಪಾಲಿಸಿಯ ಅವಧಿ ಈ ಮೂರು ಕೂಡ ಪ್ರಮುಖ ಪಾತ್ರ ವಹಿಸುತ್ತವೆ. ಈ ಹಿಂದೆ ಇದ್ದ ನಿಯಮಗಳ ಪ್ರಕಾರವಾಗಿ ಈ ರೀತಿ ಸ್ಥಗಿತಗೊಂಡ ಪಾಲಿಸಿಗಳು ಲ್ಯಾಪ್ಸ್ ಆಗುತ್ತಿದ್ದವು ಅಥವಾ ಸರಂಡರ್ ಮಾಡಿದ ವೇಳೆ 30%-50% ಮಾತ್ರ ಹಣವನ್ನು ಹಿಂಪಡೆಯಬಹುದಿತ್ತು.
ಆದರೀಗ ಜೀವ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಬದಲಾಯಿಸಿದ ನಿಯಮದ ಪ್ರಕಾರವಾಗಿ
1 ವರ್ಷ ಪ್ರೀಮಿಯಂ ಪಾವತಿಸಿ ಅಥವಾ 1 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಪ್ರೀಮಿಯಂ ಪಾವತಿಸಿ ಸರಂಡರ್ ಮಾಡಿದ್ದರೂ ಸಹಾ 80%-85% ಪಡೆಯಬಹುದಾಗಿದೆ
ಯಾವಾಗ ಸರಂಡರ್ ಮಾಡಬಹುದು?
* ಸಿಂಗಲ್ ಪ್ರೀಮಿಯಂ ಪ್ಲಾನ್ ಪಾಲಿಸಿಗಳನ್ನು 1 ವರ್ಷದ ನಂತರ ಸರಂಡರ್ ಮಾಡಬಹುದು
* 10 ವರ್ಷಕ್ಕಿಂತ ಕಡಿಮೆ ಅವಧಿಯ ಪಾಲಿಸಿಗಳನ್ನು ಕನಿಷ್ಠ 2 ವರ್ಷಗಳ ನಂತರ ಸರಂಡರ್ ಮಾಡಬಹುದು
* 10 ವರ್ಷಕ್ಕಿಂತ ಹೆಚ್ಚಿನ ಅವಧಿಯ ಪಾಲಿಸಿಗಳನ್ನು 3 ವರ್ಷಗಳ ನಂತರ ಸರಂಡರ್ ಮಾಡಬಹುದು
ಬೇಕಾಗುವ ದಾಖಲೆಗಳು:-
* ಪಾಲಿಸಿ ಒರಿಜಿನಲ್ ಬಾಂಡ್
* ಸರಂಡರ್ ಮಾಡುವುದಕ್ಕಾಗಿ ಮನವಿ ಪತ್ರ ಬರೆದು ಸಲ್ಲಿಸಬೇಕು
* ಕಚೇರಿಯಿಂದ ನೀಡುವ LIC ಫಾರ್ಮ್
* ನಿಮ್ಮ ಬ್ಯಾಂಕ್ ಖಾತೆ ವಿವರಕ್ಕಾಗಿ NEFT Form
* ಬ್ಯಾಂಕ್ ಅಕೌಂಟ್ ಡೀಟೇಲ್ಸ್
* ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಪಡೆದಿರುವ ಯಾವುದಾದರೂ ಒಂದು ಅಧಿಕೃತ ಗುರುತಿನ ಚೀಟಿ
* ರದ್ದುಕೊಂಡ ಒಂದು ಚೆಕ್ ಲೀಫ್
ಸರಂಡರ್ ಮಾಡುವ ವಿಧಾನ:-
* ಈ ಮೇಲೆ ತಿಳಿಸಿದ ಎಲ್ಲ ದಾಖಲೆ ಪ್ರತಿಗಳೊಂದಿಗೆ LIC ಕಚೇರಿಗೆ ಭೇಟಿ ನೀಡಿ ಸರಂಡರ್ ಮಾಡಬಹುದು, ಈ ಸಮಯದಲ್ಲಿ ನಿಮ್ಮ ಏಜೆಂಟ್ ಸಹಾಯವನ್ನು ಕೂಡ ಪಡೆಯಿರಿ.