Loan ಜಮೀನು ಖರೀದಿಗೆ ಸರ್ಕಾರದಿಂದ 25 ಲಕ್ಷ ಸಾಲ ಸೌಲಭ್ಯ.! 12 ಲಕ್ಷ ಉಚಿತ.!

Loan

ದೇಶಕ್ಕೆ ಸ್ವತಂತ್ರ ಬಂದು 75 ವರ್ಷಕ್ಕೆ ಸಮೀಪಿಸಿದ್ದರು ದೇಶದಲ್ಲಿ ಬಡತನ ಹಾಗೂ ಆಸ್ತಿಯ ಸಮಾನ ಹಂಚಿಕೆ ಸಾಧ್ಯವಾಗಿಲ್ಲ. ಕೆಲವರ ಬಳಿ ಅವಶ್ಯಕತೆಗಿಂತ ಹೆಚ್ಚು ಆಸ್ತಿ ಇದ್ದರೆ, ಅಗತ್ಯವಿರುವ ಎಷ್ಟೋ ಮಂದಿ ಇದರಿಂದ ವಂಚಿತರಾಗಿದ್ದಾರೆ. ಆದ್ದರಿಂದ ಎಲ್ಲರಿಗೂ ಕೂಡ ಆಸ್ತಿ ಖರೀದಿ ಸಾಧ್ಯವಾಗಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಒಂದು ಹೊಸ ಯೋಜನೆಗೆ ಕೈ ಹಾಕಿದೆ.

ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಈ ಯೋಜನೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದ್ದು ಈ ಯೋಜನೆ ಮೂಲಕ ಆಯ್ದ ವರ್ಗದ ಮಹಿಳೆಯರಿಗೆ ಆಸ್ತಿ ಖರೀರಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ ಮತ್ತು ಈ ಸಾಲದಲ್ಲಿ ಅರ್ಧದಷ್ಟು ಸಬ್ಸಿಡಿ ಕೂಡ ನೀಡಲಾಗುತ್ತಿದೆ ಎನ್ನುವುದು ಇನ್ನಷ್ಟು ವಿಶೇಷ. ಹಾಗಾದರೆ ಈ ಯೋಜನೆಗೆ ಯಾರು ಅರ್ಹರು? ಏನೆಲ್ಲ ದಾಖಲೆಗಳು ಬೇಕಾಗುತ್ತದೆ? ಅರ್ಜಿ ಸಲ್ಲಿಸುವುದು ಹೇಗೆ? ಇತ್ಯಾದಿ ವಿವರಕ್ಕಾಗಿ ಅಂಕಣವನ್ನು ಕೊನೆಯವರೆಗೂ ಓದಿ.

WhatsApp Group Join Now
Telegram Group Join Now
ಯೋಜನೆಯ ಹೆಸರು:- ಭೂ ಒಡೆತನ ಯೋಜನೆ 2024-25

ಯೋಜನೆಯ ಉದ್ದೇಶ:-
ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ವರ್ಗಗಳ ಮಹಿಳೆಯರಿಗೆ ಆಸ್ತಿ ಖರೀದಿಗೆ ಪ್ರೋತ್ಸಾಹಿಸುವುದು ಈ ಮೂಲಕ ಅವರ ಬದುಕಿಗೆ ಭದ್ರತೆ ಒದಗಿಸಿಕೊಡುವುದು.

ಅರ್ಜಿ ಸಲ್ಲಿಸಲು ಕಂಡಿಷನ್ ಗಳು:-

* ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಈ ಯೋಜನೆ ರೂಪಿಸಲಾಗಿದ್ದು ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರುವ ಮಹಿಳೆಯರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ
* ಅರ್ಜಿ ಸಲ್ಲಿಸುವ ಮಹಿಳೆಯ ಕುಟುಂಬದ ಯಾವ ಒಬ್ಬ ಸದಸ್ಯರ ಹೆಸರಲ್ಲೂ ಕೃಷಿ ಭೂಮಿ ಇರಬಾರದು, ಕೃಷಿ ರಹಿತ ಕುಟುಂಬಗಳಿಗಷ್ಟೇ ಈ ಯೋಜನೆ ಮೀಸಲು.

* ಅರ್ಜಿ ಸಲ್ಲಿಸುವ ಮಹಿಳೆಯ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು
* ಕುಟುಂಬದ ವಾರ್ಷಿಕ ಆದಾಯವು ಹಳ್ಳಿಗಾಡಿನವರಿಗೆ ರೂ.1.5 ಲಕ್ಷ ಹಾಗೂ ನಗರ ಪ್ರದೇಶದವರೆಗೆ ರೂ.2 ಲಕ್ಷದ ಮಿತಿಯ ಒಳಗಿರಬೇಕು
* ಯೋಜನೆಗೆ ದಾಖಲೆಗಳಾಗಿ ಕೇಳಲ್ಪಡುವ ಎಲ್ಲಾ ಮಾಹಿತಿಗಳನ್ನು ಒದಗಿಸಬೇಕು

* ಈ ಕೆಳಗೆ ತಿಳಿಸಲಾಗುವ ನಿಗಮಗಳ ವ್ಯಾಪ್ತಿಗೆ ಬರುವ ಕೃಷಿ ಭೂಮಿ ರಹಿತ ಕೃಷಿ ಕಾರ್ಮಿಕ ಮಹಿಳೆ ಅರ್ಜಿ ಸಲ್ಲಿಸಲು ಅರ್ಹಳು
1. ಡಾ, ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ
2. ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
3. ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ
4. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮ
5. ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ
6. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ

ಸಿಗುವ ಪ್ರಯೋಜನಗಳು :-

* ಆಸ್ತಿ ಖರೀದಿ ಘಟಕ ವೆಚ್ಚದ 50% ಸಹಾಯಧನ ಹಾಗೂ ಉಳಿದ 50% ಹಣವನ್ನು ವಾರ್ಷಿಕ 6% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗಲಿದೆ
* ಉದಾಹರಣೆಗೆ ರೂ.25 ಲಕ್ಷ ಘಟಕ ವೆಚ್ಚದ ಆಸ್ತಿ ಖರೀರಿಗೆ ರೂ.12.5 ಲಕ್ಷ ಸಬ್ಸಿಡಿ ಹಾಗೂ ಉಳಿದ ರೂ.12.5 ಲಕ್ಷ ಹಣವನ್ನು 6% ವಾರ್ಷಿಕ ಬಡ್ಡಿ ದರದನ್ವಯ ಸುಲಭ ಕಂತುಗಳಲ್ಲಿ ತೀರಿಸುವ ಷರತ್ತಿಗೆ ಒಳಪಟ್ಟು ಸಾಲ ನೀಡಲಾಗುತ್ತದೆ.

ಬೇಕಾಗುವ ದಾಖಲೆಗಳು:-

* ಭೂ ರಹಿತ ಮಹಿಳಾ ಕೃಷಿ ಕಾರ್ಮಿಕ ಪ್ರಮಾಣ ಪತ್ರ
* ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗಕ್ಕೆ ಸೇರಿದ ಮಹಿಳೆಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಆಧಾರ್ ಕಾರ್ಡ್
* ಕುಟುಂಬದ ಪಡಿತರ ಚೀಟಿ
* ಇತ್ತೀಚಿನ ಭಾವಚಿತ್ರ
* ಇನ್ನಿತರ ಪ್ರಮುಖ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:-

* ಆನ್‌ಲೈನಲ್ಲಿ ಸೇವಾ ಸಿಂಧು ಪೊರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು
* ಹತ್ತಿರದ ಯಾವುದೇ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಸಲ್ಲಿಸಬಹುದು
* ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 10 ಅಕ್ಟೋಬರ್, 2024

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-

* ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ನಿಗಮದ ವೆಬ್ಸೈಟ್ ವಿಳಾಸಕ್ಕೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿ ಪಡೆಯಬಹುದು
* ಸಹಾಯವಾಣಿ 9482300400
*

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment