Education Loan:
ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಮದುವೆ ಆದ ನಂತರವೂ ಓದಿನಲ್ಲಿ ಆಸಕ್ತಿ ಇರುತ್ತದೆ. ವಿದ್ಯಾಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ನಡುವೆ ವಿವಾಹವಾಗಿದ್ದರಿಂದ ಅಥವಾ ವಿವಾಹದ ನಂತರ ಬಿಡುವಿದೆ ಎಂದು ಓದಲು ಬಯಸಿರಬಹುದು ಉದ್ಯೋಗ ಮಾಡಲು ಬಯಸಿದ್ದರೂ ಜ್ಞಾನಾರ್ಜನೆಗಾಗಿ ಮತ್ತು ಈಗಿನ ಕಾಲದಲ್ಲಿ ಪತಿ ಪತ್ನಿ ಇಬ್ಬರಿಗೂ ದುಡಿಮೆ ಅನಿವಾರ್ಯವಾದ್ದರಿಂದ ಭವಿಷ್ಯದ ಹಿತದೃಷ್ಟಿಯಿಂದ ಹೀಗೆ ಯಾವುದೇ ಕಾರಣದಿಂದ ಓದಲು ಬಯಸಿದ್ದರು ಅದಕ್ಕೆ ಆಕೆಯ ಸಂಗಾತಿ ಸಹಕಾರ ನೀಡಲು ಬಯಸಿದ್ದರೆ ನಿಮಗೆ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ ಇದೆ.
ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಹಣಕಾಸಿನ ಅಗತ್ಯತೆ ಕೂಡ ಇರುತ್ತದೆ. ಅದರಲ್ಲೂ ಕೆಲವರು ವೃತ್ತಿಪರ ಕೋರ್ಸ್ ಗಳನ್ನು ಆರಿಸಿಕೊಂಡರೆ ದೊಡ್ಡ ಮೊತ್ತದ ಹಣವನ್ನೇ ಹೊಂದಿಸಬೇಕಾದ ಹೊರೆ ಪತಿ ಹಗಲೇರಿರುತ್ತದೆ. ಆರ್ಥಿಕವಾಗಿ ಅನುಕೂಲತೆ ಇಲ್ಲ ಎನ್ನುವ ಕಾರಣಕ್ಕೆ ಕನಸನ್ನು ಕೈ ಬಿಡದೆ ಪತ್ನಿಗೆ ಎಜುಕೇಶನ್ ಲೋನ್ ಮೂಲಕ ವಿದ್ಯಾಭ್ಯಾಸ ಮುಂದುವರಿಸಲು ಪ್ರೋತ್ಸಾಹ ನೀಡಿದ್ದರೆ ಸರ್ಕಾರದ ಕಡೆಯಿಂದ ಇವರಿಗೆಲ್ಲಾ ಗುಡ್ ನ್ಯೂಸ್ ಇದೆ.
ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಎಲ್ಲರೂ ಕೂಡ ತಮ್ಮ ಸಂಗಾತಿಯು ಕೂಡ ಒಂದು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು, ಪ್ರತಿಷ್ಠಿತ ಸ್ಥಾನ ತಲುಪಬೇಕು ಎಂದೆ ಆಸೆ ಪಡುತ್ತಾರೆ. ಇದಕ್ಕೆ ವಿದ್ಯಾಭ್ಯಾಸ ಬುನಾದಿ ಇದ್ದ ಹಾಗೆ, ಇಂತಹ ಉತ್ತಮ ಮನಸ್ಥಿತಿ ಉಳ್ಳ ಪತಿಯಂದಿರ ಆರ್ಥಿಕ ಹೊರೆ ಇಳಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಹೆಂಡತಿಯ ಎಜುಕೇಶನ್ ಗೆ ಬೆನ್ನೆಲುಬಾಗಿ ನಿಂತ ಗಂಡಂದಿರಿಗೆ ಸಿಗುತ್ತಿರುವಂತಹ ಸರ್ಕಾರದ ಈ ಅನುಕೂಲತೆ ಏನು ಎಂಬ ಮಾಹಿತಿ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.
ಬ್ಯಾಂಕ್ ಗಳಲ್ಲಿ ಯಾವುದೇ ಸಾಲ ತೆಗೆದುಕೊಂಡರೂ ಬಡ್ಡಿ ಕಟ್ಟಲೇ ಬೇಕಿರುತ್ತದೆ. ಅಲ್ಲದೆ ವರ್ಷದಿಂದ ವರ್ಷಕ್ಕೆ ಬ್ಯಾಂಕ್ ನಿಯಮಗಳು ಬದಲಾಗಿ ಎಲ್ಲಾ ಬಗೆಯ ಸಾಲಗಳ ಬಡ್ಡಿದರ ಹೆಚ್ಚುತ್ತಾ ಹೋಗುತ್ತದೆ. ಆದರೆ ನೀವೇನಾದರೂ ನಿಮ್ಮ ಪತ್ನಿ ಹೆಸರಿನಲ್ಲಿ ಎಜುಕೇಶನ್ ಲೋನ್ ಪಡೆದಿದ್ದರೆ ಹೀಗೆ ಪದೇ ಪದೇ ಶೈಕ್ಷಣಿಕ ಸಾಲದ ಮೇಲಿನ ಬಡ್ಡಿದರ ಹೆಚ್ಚಾಗುವುದಿಲ್ಲ ಜೊತೆಗೆ ನೀವು ಕಟ್ಟುವ ಬಡ್ಡಿದರದ ಮೇಲೆ ನೀವು ತೆರಿಗೆ ವಿನಾಯಿತಿ ಕೂಡ ಪಡೆಯುತ್ತೀರಿ.
ಸಾಮಾನ್ಯವಾಗಿ 8 ವರ್ಷಗಳ ವರೆಗಿನ ಲೋನ್ ಗಳ ಬಡ್ಡಿದರದ ಮೇಲೆ ಈ ತೆರಿಗೆ ವಿನಾಯಿತಿಯನ್ನು ಪಡೆದುಕೊಳ್ಳ ಬಹುದಾಗಿರುತ್ತದೆ. ಸ್ವತಃ ಆದಾಯ ತೆರಿಗೆ ಸೆಕ್ಷನ್ 80ರ ನಿಯಮದಡಿ ಇಲಾಖೆಯೇ ಹೆಂಡತಿಯ ಹೆಸರಿನ ಮೇಲೆ ಮಾಡಿರುವ ಈ ಎಜುಕೇಶನ್ ಲೋನ್ ನ ಮೇಲೆ ಕಟ್ಟ ಬೇಕಾಗಿರುವ ಬಡ್ಡಿಯ ತೆರಿಗೆಯ ಮೇಲೆ ರಿಯಾಯಿತಿ ಪಡೆಯಬಹುದು ಎಂದು ತಿಳಿಸಿದೆ.
ಈ ಮೇಲೆ ತಿಳಿಸಿದಂತೆ 8 ವರ್ಷಗಳ ವರೆಗಿನ ಲೋನ್ ಮೇಲೆ ಮಾತ್ರವೇ ಹೀಗೆ ಬಡ್ಡಿದರದ ಮೇಲಿನ ತೆರಿಗೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಅದರಲ್ಲೂ ಸಹಾ ನೀವು ದೇಶದ ಪ್ರತಿಷ್ಠಿತ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕ್ ಗಳು ಅಥವಾ ಸರ್ಕಾರದಿಂದ ಅನುಮತಿ ಪಡೆದು ಕಾರ್ಯನಿರ್ವಹಿಸುತ್ತಿರುವ ಫೈನಾನ್ಸಿಯಲ್ ಇನ್ಸ್ಟಿಟ್ಯೂಟ್ ಗಳಲ್ಲಿ ಶಿಕ್ಷಣ ಸಾಲ ಪಡೆದುಕೊಂಡಿದ್ದರೆ ಮಾತ್ರ ನಿಮಗೆ ಈ ಅನುಕೂಲತೆ ಸಿಗುವುದು.
ನೀವು ಕೂಡ ಈ ರೀತಿ ನಿಮ್ಮ ಪತ್ನಿ ಹೆಸರಿನಲ್ಲಿ ಎಜುಕೇಶನ್ ಲೋನ್ ಪಡೆದಿದ್ದರೆ ನಿಮಗೂ ಈ ಅನುಕೂಲತೆ ಸಿಗುತ್ತಿದೆಯೇ ಎಂದೇ ಕೂಡಲೇ ನಿಮ್ಮ ಬ್ಯಾಂಕಿನ ಅಧಿಕಾರಿಗಳಿಂದ ಮಾಹಿತಿಯನ್ನು ಕೇಳಿ ಪಡೆಯಿರಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಇತರರೊಡನೆಯೂ ಹಂಚಿಕೊಳ್ಳಿ.