Metro Recruitment
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (Bangalore Metro Rail Corporation Limited – BMRCL) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆ (Job)ಗಳ ನೇಮಕಾತಿ ಪ್ರಕ್ರಿಯೆ (Recruitment Process) ಆರಂಭಿಸಿದೆ. ಈ ಪ್ರಯುಕ್ತ ಅರ್ಹ ಅಭ್ಯರ್ಥಿ (Eligible candidate)ಗಳಿಂದ ಅರ್ಜಿ (Application)ಗಳನ್ನು ಆಹ್ವಾನಿಸಿದೆ.
ಆಸಕ್ತ ಅಭ್ಯರ್ಥಿಗಳು ಅನ್‌ಲೈನ್ (Online) ಮತ್ತು ಆಫ್‌ಲೈನ್ (Offline) ಮೂಲಕ ಸೆಪ್ಟಂಬರ್ 25 ರೊಳಗೆ ಅರ್ಜಿ ಸಲ್ಲಿಸುವಂತೆ ಅಧಿಸೂಚನೆ (Notification)ಯಲ್ಲಿ ತಿಳಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಲ್ಲಿ ಒಟ್ಟು 5 ಜನರಲ್ ಮ್ಯಾನೇಜರ್ ಹುದ್ದೆ (Post of General Manager)ಗಳು ಖಾಲಿ ಇವೆ.
ಆಸಕ್ತ ಅರ್ಹ ಅರ್ಭರ್ಥಿಗಳು ಕೈ ತುಂಬ ವೇತನ (Salary) ಪಡೆಯಲು ಇಚ್ಚಿಸಿದಲ್ಲಿ ಈ ಕೂಡಲೇ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವವರಿಗೆ ರಾಜಧಾನಿಯಲ್ಲಿ ಪೋಸ್ಟಿಂಗ್ ಸಿಗಲಿದೆ. ಆದ್ದರಿಂದ ಅರ್ಜಿ ಸಲ್ಲಿಸುವವರು ನೇಮಕಾತಿ, ಅರ್ಜಿ ಶುಲ್ಕ, ಮಾಸಿಕ ವೇತನ, ಆಯ್ಕೆ ವಿಧಾನ ಸೇರಿದಂತೆ ಮಾಹಿತಿ ಇಲ್ಲಿದೆ.
ನೇಮಕಾತಿ ಪ್ರಕ್ರಿಯೆ ಪೂರ್ಣ ಮಾಹಿತಿ
– ನೇಮಕಾತಿ ಸಂಸ್ಥೆ: ಬಿಎಂಆರ್‌ಸಿಎಲ್
– ಹುದ್ದೆ ಹೆಸರು: ಜನರಲ್ ಮ್ಯಾನೇಜರ್
– ಒಟ್ಟು ಹುದ್ದೆ: ಐದು
– ಪೋಸ್ಟಿಂಗ್: ಬೆಂಗಳೂರು
– ಮಾಸಿಕ ವೇತನ: 2 ಲಕ್ಷ ರೂಪಾಯಿ.
ಹುದ್ದೆಗಳ ಇತರ ಮಾಹಿತಿ ನೋಡುವುದಾದರೆ, ಒಟ್ಟು ಐದು ಪ್ರಧಾನ ವ್ಯವಸ್ಥಾಪಕ ಹುದ್ದೆಗಳ ಪೈಕಿ ಎರಡು ಕಾಂಟ್ರ್ಯಾಕ್ಟ್/ಸ್ಟೋರ್ಸ್ ಹುದ್ದೆಗಳು, ಉಳಿದಂತೆ ಟ್ರ್ಯಾಕ್ಷನ್, ಪಿ ವೇ ಮತ್ತು ಸಿಗ್ನಲಿಂಗ್ ವಿಭಾಗದಲ್ಲಿ ತಲಾ ಒಂದು ಹುದ್ದೆಗಳು ಖಾಲಿ ಇವೆ.
ಶೈಕ್ಷಣಿಕ ಅರ್ಹತೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್. ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್, ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ, ಎಲೆಕ್ಟ್ರಿಕಲ್ ಟೆಕ್ನಾಲಜಿ, ಟೆಕ್ನಿಕಲ್ ಆಂಡ್ ಕಮ್ಯುನಿಕೇಶನ್/ ಕಂಪ್ಯೂಟರ್ ಸೈನ್ಸ್/ ಟೆಲಿಕಾಮ್ಯುನಿಕೇಶನ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಸೂಕ್ತ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು.
ವಯಸ್ಸಿನ ಮಿತಿ
ನಮ್ಮ ಮೆಟ್ರೋ ಹೊರಡಿಸಿರುವ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 58 ವರ್ಷ ದಾಟಿರಬಾರದು. ಜಾತಿ ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ. ಅನುಭವವು ಪರಿಗಣಿಸಲಾಗುತ್ತದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯನ್ನು ಪರಿಶೀಲಿಸಲಾಗುತ್ತದೆ. ನಂತರ ಸೇವೆಯ ಅನುಭವ ನೋಡಿಕೊಂಡು ಸಂದರ್ಶನ ಮುಖೇನ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ತಿಂಗಳ ವೇತನ, ಪೋಸ್ಟಿಂಗ್
ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ಹೇಳುವಂತೆ ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕ 2,06,250 ರೂಪಾಯಿ ವೇತನ ಸಹಿತವಾಗಿ ಬೆಂಗಳೂರಿನಲ್ಲಿಯೇ ಪೋಸ್ಟಿಂಗ್ ನೀಡಲಾಗುತ್ತದೆ.
ಆನ್‌ಲೈನ್, ಆಫ್‌ಲೈನ್ ಅರ್ಜಿ ಸಲ್ಲಿಕೆಗೆ ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳ ಸಹಿತ ಇಲ್ಲಿನ ವಿಳಾಸ ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, 3ನೇ ಮಹಡಿ, BMTC ಕಾಂಪ್ಲೆಕ್ಸ್, ಕೆ.ಎಚ್. ರಸ್ತೆ ಶಾಂತಿನಗರ, ಬೆಂಗಳೂರು-560027 ಇಲ್ಲಿಗೆ ಶೀಘ್ರವೇ ಕಳುಹಿಸಬೇಕು.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಸೆಪ್ಟಂಬರ್ 25ರೊಳಗೆ (https://projectrecruit.bmrc.co.in/frmApplFillTab.aspx?ND=83) ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ https://www.bmrc.co.in/?utm_source=DH-MoreFromPub&utm_medium=DH-app&utm_campaign=DH ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.