ಮೆಟ್ರೋ ನೇಮಕಾತಿ ವೇತನ 82,660/- ಆಸಕ್ತರು ಅರ್ಜಿ ಸಲ್ಲಿಸಿ.!

 

ರಾಜ್ಯದಾದ್ಯಂತ ಇರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ಒಂದು ಸಿಹಿ ಸುದ್ದಿ ಇದೆ. ಅದರಲ್ಲೂ ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವ ನಿರುದ್ಯೋಗಿಗಳಿಗೆ ಅಥವಾ ಸರ್ಕಾರಿ ಹುದ್ದೆ ಪಡೆಯಬೇಕು ಎನ್ನುವ ಪ್ರಬದ ಇಚ್ಛೆಯಿಂದ ಪ್ರಯಸುತ್ತಿರುವ ಆಕಾಂಕ್ಷಿಗಳಿಗೆ ಬೆಂಗಳೂರಿನ BMRCL ಕಡೆಯಿಂದ ನೇಮಕಾತಿ ಕುರಿತು ಗುಡ್ ನ್ಯೂಸ್ ಇದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL recruitment) ತನ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.

WhatsApp Group Join Now
Telegram Group Join Now

ಇದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಹಂಚಿಕೊಂಡಿದೆ. ನಾವು ಸಹ ಆಕಾಂಕ್ಷಿಗಳಿಗೆ ಅನುಕೂಲತೆ ಮಾಡಿಕೊಡುವ ಉದ್ದೇಶದಿಂದ ಇಂದು ಈ ಅಂಕಣದ ಮೂಲಕ ನೋಟಿಫಿಕೇಶನ್ ನಲ್ಲಿ ಈ ಹುದ್ದೆಗಳ ಕುರಿತಂತೆ ತಿಳಿಸಿರುವ ಎಲ್ಲಾ ಪ್ರಮುಖ ಮಾಹಿತಿಗಳನ್ನು ಹಂಚಿಕೊಳ್ಳಬಯಸುತ್ತಿದ್ದೇವೆ. ತಪ್ಪದೆ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ನೇಮಕಾತಿ ಸಂಸ್ಥೆ:- ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL)

ಹುದ್ದೆ ಹೆಸರು:- ವಿವಿಧ ಹುದ್ದೆಗಳು

ಹುದ್ದೆಗಳ ವಿವರ:-
* ಸ್ಟೇಷನ್ ಕಂಟ್ರೋಲರ್ – 69 ಹುದ್ದೆಗಳು
* ಟ್ರೈನ್ ಆಪರೇಟರ್ – 27 ಹುದ್ದೆಗಳು

ಒಟ್ಟು ಹುದ್ದೆಗಳ ಸಂಖ್ಯೆ:- 96 ಹುದ್ದೆಗಳು

ಉದ್ಯೋಗ ಸ್ಥಳ:- ಬೆಂಗಳೂರು

ವೇತನ ಶ್ರೇಣಿ:-

ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಆಯಾ ಹುದ್ದೆಗಳಿಗೆ ಅನುಕೂಲವಾಗಿ ರೂ.35,000 ದಿಂದ ರೂ.82,660 ಮಾಸಿಕ ವೇತನ ನಿಗದಿ ಪಡಿಸಲಾಗಿದೆ
* BMRCL ನಿಯಮಾವಳಿ ಪ್ರಕಾರವಾಗಿ ಇನ್ನಿತರ ಸೌಲಭ್ಯಗಳು ಕೂಡ ದೊರೆಯುತ್ತವೆ

* ಶೈಕ್ಷಣಿಕ ವಿದ್ಯಾರ್ಹತೆ
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ SSLC ಉತ್ತೀರ್ಣರಾಗಿರಬೇಕು
* ನಿರ್ದಿಷ್ಟಪಡಿಸಿದ ಬ್ರಾಂಚ್ ನಲ್ಲಿ ಮೂರು ವರ್ಷಗಳ ಕಾಲ ಡಿಪ್ಲೋಮಾ ಅಭ್ಯಾಸ ಮಾಡಿರಬೇಕು

ವಯೋಮಿತಿ:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 21 ವರ್ಷಗಳು
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 45 ವರ್ಷಗಳು

ವಯೋಮಿತಿ ಸಡಿಲಿಕೆ:-
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ (SC/ST) ಸೇರಿದ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇರುತ್ತದೆ
* ಮಾಜಿ ಸೈನಿಕರಿಗೆ ಸಹ 5 ವರ್ಷಗಳ ಸಡಿಲಿಕೆ ಇರುತ್ತದೆ
* ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ (OBC) 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:-

* ಆನ್ಲೈನ್ ವಿಧಾನದಲ್ಲಿಯೇ ಅರ್ಜಿ ಸಲ್ಲಿಸಬೇಕು
* BMRCL ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
* ನೇಮಕಾತಿ ವಿಭಾಗಕ್ಕೆ ತೆರಳಿ ಅರ್ಜಿ ಸಲ್ಲಿಸಲು ಸೂಚಿಸಿರುವ ಲಿಂಕ್ ಗಾಗಿ ಹುಡುಕಾಡಿ
* ಲಿಂಕ್ ಕ್ಲಿಕ್ ಮಾಡಿ ಕೆಳಗಾಗಿರುವ ಎಲ್ಲಾ ಕಡ್ಡಾಯ ವಿವರಗಳನ್ನು ಸರಿಯಾದ ಮಾಹಿತಿಗಳೊಂದಿಗೆ ಸರಿಯಾದ ವಿಧಾನದಲ್ಲಿ ನೀಡಿರುವ ಸೂಚನೆಯ ಪ್ರಕಾರವಾಗಿ ಭರ್ತಿ ಮಾಡಿ
* ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ಪೀಕೃತಿ ಪ್ರತಿ ಪಡೆದುಕೊಳ್ಳಬೇಕು
* ಈ ಪ್ರಿಂಟ್ ಔಟ್ ಜೊತೆ ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆಗೆ ಸಂಬಂಧಪಟ್ಟ ಎಲ್ಲಾ ಪೂರಕ ದಾಖಲೆಗಳನ್ನು ಲಗತ್ತಿಸಿ ಬೆಂಗಳೂರಿನಲ್ಲಿರುವ BMRCL ಅಧಿಕೃತ ಕಛೇರಿ ವಿಳಾಸಕ್ಕೆ ಸೂಚನೆಯಲ್ಲಿ ತಿಳಿಸಿರುವ ಕಡೆಯ ದಿನಾಂಕದೊಳಗೆ ಅಂಚೆ ಮೂಲಕ ತಲುಪಿಸಬೇಕು.

ಅರ್ಜಿ ಶುಲ್ಕ:- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವ ಅಭ್ಯರ್ಥಿಗೂ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ

ಆಯ್ಕೆ ವಿಧಾನ:-

* ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ
* ಈ ಹಂತದಲ್ಲಿ ಆಯ್ಕೆ ಆದ ಅಭ್ಯರ್ಥಿಗಳಿಗೆ ಕೌಶಲ್ಯ ಪರೀಕ್ಷೆ ಇರುತ್ತದೆ
* ಕೌಶಲ್ಯ ಪರೀಕ್ಷೆ ನಡೆದ ನಂತರ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ನೀಡಲಾಗುವುದು ಮತ್ತು ಅವರಿಗೆ ಮತ್ತೊಂದು ಸುತ್ತಿನ ನೇರ ಸಂದರ್ಶನ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿ ಅರ್ಹರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 14 ಜೂನ್, 2023
* ಅರ್ಜಿ ಸಲ್ಲಿಸಲು ಕಡೆಯ ದಿನಾಂಕ – 10 ಜುಲೈ, 2024
* ಹಾರ್ಡ್ ಕಾಪಿಯನ್ನು ಅಂಚೆ ಮೂಲಕ ತಲುಪಿಸಲು ಕಡೆಯ ದಿನಾಂಕ – 15 ನೇ ಜುಲೈ, 2024.

ವೆಬ್ಸೈಟ್ ವಿಳಾಸ:-
ಈ ನೇಮಕಾತಿ ಕುರಿತಂತೆ ಯಾವುದೇ ಹೆಚ್ಚಿನ ಮಾಹಿತಿ ಬೇಕಿದ್ದರೂ ಅಥವಾ ಅರ್ಜಿ ಸಲ್ಲಿಸಲು ಮತ್ತು ಹಾರ್ಡ್ ಕಾಪಿ‌ ರವಾನಿಸಲು ಬೇಕಾದ ಅಂಚೆ ವಿಳಾಸ ಅಥವಾ ಇನ್ಯಾವುದೂ ಹೆಚ್ಚಿನ ಮಾಹಿತಿ ಬೇಕಿದ್ದರೆ ತಿಳಿದುಕೊಳ್ಳಲು (BMRCL) ವೆಬ್ಸೈಟ್ ಭೇಟಿ ಕೊಡಿ

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment