Mobile repair training
ರೈತರು ಎಷ್ಟೇ ಕಷ್ಟಪಟ್ಟರೂ, ಎಷ್ಟೇ ನಿಷ್ಠೆಯಿಂದ ಕೆಲಸ ಮಾಡಿದರೂ ಕೂಡ ಅವರು ಅಂದುಕೊಂಡ ಹಾಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಇದಂತೂ ಸತ್ಯ. ಏಕೆಂದರೆ, ಕೃಷಿ(agriculture) ನಮ್ಮ ದೇಶದ ಮೂಲ ಉದ್ಯೋಗ, ಉದ್ಯಮವೇ ಆಗಿದ್ದರು ಸಹ, ಕೃಷಿ ಕೆಲಸ ಮಾಡುವವರಿಗೆ ಉತ್ತಮ ಆದಾಯ(Good income) ಇಲ್ಲ. ಹಾಗಾಗಿ, ಸರ್ಕಾರ(Govt) ರೈತರನ್ನು ಸಪೋರ್ಟ್ ಮಾಡುವ ಸಲುವಾಗಿ ಹಲವು ಯೋಜನೆ(scheme)ಗಳನ್ನು ಜಾರಿಗೆ ತಂದು, ಅದರ ಮೂಲಕ ರೈತರಿಗೆ ಅರ್ಥಿಕವಾಗಿ ಸಹಾಯ(Help financially) ಮಾಡುತ್ತದೆ.
ಈ ಮೂಲಕ ರೈತರು ಕಷ್ಟಪಡದ ಹಾಗೆ ಆದಷ್ಟು ಸಹಾಯ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ(Central Govt) ಮತ್ತು ರಾಜ್ಯ ಸರ್ಕಾರ(State Govt) ಎರಡು ಕೂಡ ರೈತರ ಪರವಾಗಿ ಅನೇಕ ಯೋಜನೆಗಳನ್ನೇ ಜಾರಿಗೆ ತಂದಿದೆ. ಕೃಷಿ ಕೆಲಸಕ್ಕೆ ಸಪೋರ್ಟ್ ಮಾಡುವುದರ ಜೊತೆಗೆ, ರೈತರು ತಮ್ಮದೇ ಆದ ಸ್ವಂತ ಉದ್ಯೋಗ(own business) ಶುರು ಮಾಡಿ, ಅದರ ಮೂಲಕ ಉತ್ತಮವಾದ ಲಾಭ ಗಳಿಸಲು ಸಹಾಯ ಮಾಡಬೇಕು ಎನ್ನುವುದು ಕೂಡ ಸರ್ಕಾರದ ಉದ್ದೇಶ ಆಗಿದ್ದು, ಅದಕ್ಕಾಗಿಯೂ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
ರೈತರು ಹಳ್ಳಿಯಲ್ಲೇ ಇದ್ದುಕೊಂಡು, ಕೃಷಿಯ ಜೊತೆಗೆ ಹೆಚ್ಚು ಹಣಕಾಸು ಗಳಿಕೆ ಮಾಡಬಹುದಾದ ಕೆಲವು ಕೆಲಸಗಳಿವೆ, ಅವುಗಳನ್ನು ಮಾಡಲು ಸರ್ಕಾರ ಪ್ರೋತ್ಸಾಹ ಕೊಡುತ್ತಿದೆ. ಅಂಥ ಕೆಲಸಗಳಲ್ಲಿ ಕುರಿ ಸಾಕಾಣಿಕೆ ಕೂಡ ಒಂದು. ಈಗ ಕುರಿಗಳ ಮಾಂಸಕ್ಕೆ ಬಹಳ ಬೇಡಿಕೆ ಇದೆ. ಈ ಕಾರಣಕ್ಕೆ ಕುರಿ ಸಾಕಾಣಿಕೆ(sheep farming)ಗೆ ಭಾರಿ ಬೇಡಿಕೆ ಇದ್ದು, ಇದೀಗ ಸರ್ಕಾರವು ಕುರಿ ಸಾಕಾಣಿಕೆ ಮಾಡುವುದಕ್ಕೆ ತರಬೇತಿ, ಕೊಡುವುದಕ್ಕಾಗಿ ಅರ್ಜಿಯನ್ನು ಆಹ್ವಾನಿಸಿದೆ. ರೈತರು ಈ ಒಂದು ಸೌಲಭ್ಯಕ್ಕೆ ಅಪ್ಲೈ ಮಾಡುವುದು ಹೇಗೆ ಎಂದು ಪೂರ್ತಿಯಾಗಿ ತಿಳಿಯೋಣ..
ಉಚಿತ ವಸತಿ ಜೊತೆಗೆ ಕುರಿ ಸಾಕಾಣಿಕೆ ಟ್ರೇನಿಂಗ್
ಇದೀಗ ಸರ್ಕಾರವು ಹೊಸದಾಗಿ ಕುರಿ ಮತ್ತು ಕೋಳಿ ಸಾಕಾಣಿಕೆ ತರಬೇತಿ ಶುರು ಮಾಡಲಿದೆ. ಈ ತರಬೇತಿ ಆಗಸ್ಟ್ 20 ರಿಂದ ಆಗಸ್ಟ್ 29ರ ವರೆಗೂ ನಡೆಯಲಿದೆ. ಹಳ್ಳಿಯಲ್ಲಿದ್ದು, ಯಾರೆಲ್ಲಾ ಯಾವುದೇ ಉದ್ಯೋಗ ಮಾಡುತ್ತಿಲ್ಲವೋ ಅಂಥ ಯುವಕರು ಈ ತರಬೇತಿ ಕೊಡಲಾಗುತ್ತದೆ. 18 ರಿಂದ 45 ವರ್ಷಗಳ ಒಳಗಿನವರು ಈ ಒಂದು ತರಬೇತಿ ಪಡೆಯಲು ಅರ್ಹರಾಗುತ್ತಾರೆ. ಆಸಕ್ತಿ ಇರುವ ಯುವಕರು 9110865650 ಈ ನಂಬರ್ ಗೆ ಕರೆಮಾಡಿ, ತರಬೇತಿಗೆ ಮೊದಲೇ ರಿನಿಸ್ಟರ್ ಮಾಡಿಸಿಕೊಳ್ಳಬಹುದು.
ಕುರಿ ಸಾಕಾಣಿಕೆಗೆ ಯಾವ ಯಾವ ದಾಖಲೆ ಬೇಕು?
ಕುರಿ ಸಾಕಾಣಿಕೆ ಮಾಡಲು ಬಯಸುವವರಿಗೆ ಆಸಕ್ತಿ ಇರಬೇಕು. ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ರೇಶನ್ ಕಾರ್ಡ್ ಇರಬೇಕು. ರೈತರ ಬಳಿ ಮೊಬೈಲ್ ನಂಬರ್ ಇರಬೇಕು. ಆಸಕ್ತ ರೈತರು ನಿಗದಿತ ನಮೂನೆಯ ಅರ್ಜಿಯನ್ನು ಭರ್ತಿಮಾಡಿ ಅರ್ಜಿ ಸಲ್ಲಿಸಬೇಕು.
ಕುರಿ ಸಾಕಾಣಿಕೆಯಲ್ಲಿ ಆಸಕ್ತಿ ಇದೆಯೇ?
ಪಶು ಸಾಕಾಣಿಕೆಯಲ್ಲಿ ಆಸಕ್ತಿಇರುವವರು ನಿಮ್ಮ ಜಿಲ್ಲೆಯಲ್ಲಿ ಯಾವಾಗ ಕುರಿ ಮೇಕೆ ಸಾಕಾಣಿಕೆ ತರಬೇತಿ ನೀಡಲಾಗುವುದು ಎಂಬುದರ ಕುರಿತು ಮಾಹಿತಿ ನೀಲು ಉಚಿತ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಹೌದು, ಈ ಉಚಿತ ಸಹಾಯವಾಣಿ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ. ಪ್ರಾಣಿ ಕಲ್ಯಾಣ ಸಹಾಯವಾಣಿ ನಂಬರ್ ಗೆ ಕರೆ ಮಾಡಿದ ಸಾಕು, ನಿಮಗೆ ಎಲ್ಲಾ ಮಾಹಿತಿ ಸಿಗಲಿದೆ. ಪ್ರಾಣಿ ಕಲ್ಯಾಣ ಸಹಾಯವಾಣಿ ನಂಬರ್ 8277 100 200 ಗೆ ಕರೆ ಮಾಡಿ ನೀವು ಮಾಹಿತಿ ಪಡೆಯಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದು ಯಾವ ಯಾವ ಸೌಲಭ್ಯ ಪಡೆಯಬಹುದು?
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದು ಹೈನುಗಾರಿಕೆ, ಕುರಿ, ಮೇಕೆ, ಕೋಳಿ, ಹಂದಿ ಮತ್ತು ಮೊಲ ಸಾಕಾಣಿಕೆ ಕಸಬುಗಳಲ್ಲಿ ತೊಡಗಿಸಿಕೊಂಡ ರೈತರಿಗೆ ಅಲ್ಪಾವಧಿಯ ದುಡಿಯುವ ಬಂಡವಾಳಕ್ಕೆ ಆರ್ಥಿಕ ನೆರವು ನೀಡುವ ಸುದ್ದೇಶ ಹೊಂದಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಬಡ್ಡಿ ರಿಯಾಯಿತಿ ಸೌಲಭ್ಯವು 3 ಲಕ್ಷ ರೂಪಾಯಿಯವರೆಗೆ ದೊರೆಯುತ್ತದೆ. ಪ್ರತಿ ರೈತರಿಗೆ 1.60 ಲಕ್ಷಸಾಲ ಸೌಲಭ್ಯವನ್ನು ಯಾವುದೇ ಭದ್ರತೆಯಿಲ್ಲದೆ ಪಡೆಯುವ ಅವಕಾಶವಿರುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ನಿಂದ ಪಡೆಯುವ ಸಾಲಕ್ಕೆ ಶೇ. 2 ರಷ್ಟು ಸಹಾಯಧನ ನೀಡಲಾಗುವುದು. ಈ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ಹೆಚ್ಚುವರಿಯಾಗಿ ವಾರ್ಷಿಕ ಶೇ. 3 ರ ಷ್ಟು ಬಡ್ಡಿ ಸಹಾಯಧನ ಸೌಲಭ್ಯ ಸಹ ಪಡೆಯಬಹುದು. ಉದ್ಯಮ ಶೀಲ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮೀಣ ಕೋಳಿ ಉದ್ಯಮಶೀಲತೆ, ಕುರಿ, ಮೇಕೆ, ಹಂದಿ ಸಾಕಾಣಿಕೆ ಮತ್ತು ರಸಮೇವು ಉತ್ಪಾದನೆ ಘಟಕಗಳನ್ನು ಆರಂಭಿಸಲು ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ.
ಮೊಬೈಲ್ ರಿಪೇರಿ ತರಬೇತಿ (mobile repair training)
ಹಾವೇರಿ ಜಿಲ್ಲೆಯವರಿಗೆ ಮಾತ್ರ 20-8-2024, 18-9-2024 ರಿಂದ 30 ದಿನಗಳ ಕಾಲ “ಮೊಬೈಲ್ ರಿಪೇರಿ” ತರಬೇತಿಯನ್ನು ಆಯೋಜಿಸಲಾಗುತ್ತಿದೆ. 18 ರಿಂದ 45 ವಯಸ್ಸಿನ ಗ್ರಾಮೀಣ ನಿರುದ್ಯೋಗ ಯುವಕರಿಗೆ ಊಟ, ವಸತಿಯೊಂದಿಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುವುದು. ಆಸಕ್ತರು ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರುಗಳನ್ನು ಮುಂಚಿತವಾಗಿ ನೊಂದಾಯಿಸಿಕೊಳ್ಳಬಹುದು.
8660219375