Modi ಮಹಿಳೆಯರಿಗಾಗಿ ಮೋದಿ ಹೊಸ ಯೋಜನೆ 5000 ಸಹಾಯಧನ ಸಿಗಲಿದೆ.!

Modi

ಮಹಿಳೆಯರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ರೂಪಿಸಿವೆ, ಇದರಲ್ಲಿ ನೇರವಾಗಿ ಹಣದ ಸಹಾಯ ನೀಡುವಂತಹ ಯೋಜನೆಗಳು ಕೂಡ ಇವೆ. ಅವುಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನೀಡುತ್ತಿರುವ ಗೃಹಲಕ್ಷ್ಮಿ ಹಣ, ಅನ್ನ ಭಾಗ್ಯ ಹಣ, ಇವುಗಳ ಜೊತೆಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆ ಹಣ ಮತ್ತು ಮಹಿಳೆಯರಿಗಾಗಿ ವಿಶೇಷವಾಗಿ ಹೆಚ್ಚಿನ ಬಡ್ಡಿದರ ನೀಡುವಂತಹ ಮಹಿಳಾ ಸಮ್ಮನ್ ನಿಧಿ ಠೇವಣಿ ಯೋಜನೆ ಇತ್ಯಾದಿಗಳನ್ನು ವಿವರಿಸಬಹುದು.

ಈಗ ಇವೆಲ್ಲದರ ಜೊತೆಗೆ ರೇಷನ್ ಕಾರ್ಡ್ (Ration card) ಹೊಂದಿರುವ ಕುಟುಂಬಗಳ ಮಹಿಳೆಯರಿಗೆ ಅವರ ತಾಯ್ತನದ ಸಿರಿಯನ್ನು ಅನುಭವಿಸಲು ಈ ಸಮಯದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಪಡೆದುಕೊಳ್ಳಲು ಅಥವಾ ವೈದ್ಯಕೀಯ ಖರ್ಚು ವೆಚ್ಚಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ನೇರವಾಗಿ ಸಹಾಯಧನ ನೀಡುತ್ತಿರುವ ಮತ್ತೊಂದು ಯೋಜನೆಯಾದ ಪ್ರಧಾನಮಂತ್ರಿ ಮಾತೃ ವಂದನ ಯೋಜನೆ (PM Matru Vandana Yojane) ಕೂಡ ಸೇರುತ್ತಿದೆ.

WhatsApp Group Join Now
Telegram Group Join Now
ಈ ಸುದ್ದಿ ಓದಿ:- ಜಮೀನಿನಲ್ಲಿ ಲೈಟ್ ಕಂಬ ಅಥವಾ TC ಇದ್ದರವರಿಗೆ ಹೊಸ ರೂಲ್ಸ್.!

ಈ ಯೋಜನೆ ಮೂಲಕ ಗರ್ಭಿಣಿ ಸ್ತ್ರೀಯರು ರೂ.5000 ಹಣವನ್ನು DBT ಮೂಲಕ ತನ್ನ ಬ್ಯಾಂಕ್ ಖಾತೆಗೆ ಪಡೆಯಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು? ಯಾವ ಹಂತಗಳಲ್ಲಿ ಹಣ ವರ್ಗಾವಣೆ ಆಗುತ್ತದೆ ಮತ್ತು ಎಲ್ಲಿ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು ಎನ್ನುವ ಪೂರ್ತಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.

ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ, ಲಕ್ಷಾಂತರ ಕುಟುಂಬಗಳಿಗೆ ಈ ಮಾಹಿತಿ ನೆರವಾಗಲಿ ಎನ್ನುವುದೇ ನಮ್ಮ ಅಂಕಣದ ಆಶಯ.

ಈ ಸುದ್ದಿ ಓದಿ:- ತವರಿನ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಯಾವಾಗ ಭಾಗ ಸಿಗುವುದಿಲ್ಲ ಗೊತ್ತಾ.? ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!
ಯೋಜನೆಯ ಹೆಸರು:- ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ

ಬೇಕಾಗುವ ದಾಖಲೆಗಳು:-

* ತಾಯಿ ಕಾರ್ಡ್ (MCP ಕಾರ್ಡ್ – ತಾಯಿ ಮತ್ತು ಮಕ್ಕಳ ಸಂರಕ್ಷಣಾ ಕಾರ್ಡ್ ಸಲ್ಲಿಸಬೇಕು)
* ಭರ್ತಿ ಮಾಡಿದ ಫಾರ್ಮ್ – 1ಎ
* ಫಲಾನುಭವಿಯ ಗುರುತಿನ ಪುರಾವೆ
* ಫಲಾನುಭವಿ ಪತಿಯ ಆಧಾರ್ ಕಾರ್ಡ್ ಅಥವಾ ಇನ್ಯಾವುದೇ ಗುರುತಿನ ಪುರಾವೆ
* ಬ್ಯಾಂಕ್ ಅಥವಾ ಅಂಚೆ ಕಚೇರಿ ಪಾಸ್ ಬುಕ್ ಇವರ

ಸಿಗುವ ಅನುದಾನ:-

* ಒಟ್ಟು ರೂ.5000 ಅನುದಾನ ಸಿಗುತ್ತದೆ
* ಮೊದಲನೇ ಕಂತಿನಲ್ಲಿ 150 ದಿನದ ಒಳಗಾಗಿ ರಿಜಿಸ್ಟ್ರೇಷನ್ ಆದ ತಕ್ಷಣ ರೂ.1000
* ಆರು ತಿಂಗಳ ಸಂದರ್ಭದಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿದಾಗ ಎರಡನೇ ಕಂತಿನಲ್ಲಿ ರೂ.2000
* ಮಗು ಜನಿಸಿದ ನಂತರ ಮಗುವಿಗೆ ಎಲ್ಲಾ ಚುಚ್ಚುಮದ್ದುಗಳನ್ನು ನೀಡಿದ ಬಳಿಕ ದಾಖಲೆಗಳನ್ನು ಸಲ್ಲಿಸಿದ ತಕ್ಷಣ ಮೂರನೇ ಕಂತಿನಲ್ಲಿ ರೂ.2000 ವರ್ಗಾವಣೆ ಆಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:-

* ಗರ್ಭಿಣಿ ಸ್ತ್ರೀಯರು ತಮ್ಮ ಸುತ್ತಮುತ್ತಲ ಅಂಗನವಾಡಿ ಕಾರ್ಯಕರ್ತೆಯರ ಬಳಿ ಅಥವಾ ಆಶಾ ಕಾರ್ಯಕರ್ತರ ಬಳಿ ಈ ಯೋಜನೆಗೆ ಅರ್ಜಿ ಸಲ್ಲಿಸಿ, ಈ ಮೇಲೆ ತಿಳಿಸಿದ ಎಲ್ಲ ದಾಖಲೆ ಪ್ರತಿಗಳನ್ನು ಕೂಡ ಸಲ್ಲಿಸಬೇಕು.

* ಮಹಿಳೆಯರು ಆ ನಿರ್ದಿಷ್ಟ ರಾಜ್ಯ ಅಥವಾ ಯುಟಿ ಅನುಷ್ಠಾನಗೊಳಿಸಿರುವ ಇಲಾಖೆಯನ್ನು ಅವಲಂಬಿಸಿ ಕಾರ್ಯನಿರ್ವಹಿಸುವ ಅಂಗನವಾಡಿ ಕೇಂದ್ರ (AWC) ಅಥವಾ ಅನುಮೋದಿತ ಆರೋಗ್ಯ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು.

ಈ ಸುದ್ದಿ ಓದಿ:- ಕರ್ನಾಟಕ ರೇಷ್ಮೆ ಇಲಾಖೆ ನೇಮಕಾತಿ, ವೇತನ 56,600/- ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!

* ಫಾರ್ಮ್ ಎ ನಲ್ಲಿ ಕೇಳಿರುವ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕು ತನ್ನ ಹಾಗೂ ಪತಿ ವಿವರ, ಬ್ಯಾಂಕ್ ಖಾತೆ ವಿವರ, ಸಂಬಂಧಪಟ್ಟ ಗುರುತಿನ ಚೀಟಿಗಳ ಸಂಖ್ಯೆಗಳು ಮತ್ತು ಮೊಬೈಲ್ ಸಂಖ್ಯೆ ಇತ್ಯಾದಿಗಳು ಸರಿಯಾಗಿ ನಮೂದಿಸಿರಬೇಕು. * ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಅಥವಾ ಆಶಾ ಕಾರ್ಯಕರ್ತೆಯರು ನಿಮಗೆ ನೆರವಾಗಿ ಮಾರ್ಗದರ್ಶನ ನೀಡುತ್ತಾರೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment