Money
ನಾವು ಹೂಡಿಕೆ ಮಾಡಿದ ಹಣಕ್ಕೆ ಎಷ್ಟು ಲಾಭ ಸಿಗುತ್ತದೆ ಎನ್ನುವುದರ ಆಧಾರದ ಮೇಲೆಯೇ ನಾವು ಇನ್ವೆಸ್ಟ್ಮೆಂಟ್ ಸ್ಕೀಮ್ ಗಳನ್ನು (Investment Schemes) ಆರಿಸಿಕೊಳ್ಳುವುದು. ಅತಿ ಹೆಚ್ಚು ಲಾಭ ಮಾತ್ರವಲ್ಲದೆ ಹೂಡಿಕೆ ಮಾಡಿದ ಹಣ ಡಬಲ್ ಆಗಿಬಿಡುತ್ತದೆ ಎಂದರೆ ಇನ್ನೂ ಹೆಚ್ಚಿನ ಖುಷಿ.
ಈ ರೀತಿ ಹಣ ದುಪ್ಪಟ್ಟು ಮಾಡಿಕೊಳ್ಳುವ ಮಾರ್ಗಗಳು ಅನೇಕವಿದ್ದರೂ ಸುರಕ್ಷತೆ ವಿಚಾರದಲ್ಲಿ ನಮ್ಮ ಹಣಕ್ಕೆ ಎಷ್ಟು ಆರ್ಥಿಕ ಭದ್ರತೆ ಇದೆ ಹಾಗೂ ಖಂಡಿತವಾಗಿಯೂ ನಿಶ್ಚಿತ ಆದಾಯ ಬರುವ ಭರವಸೆ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಕೂಡ ಹೂಡಿಕೆ ಮಾಡುವಾಗ ಬಹಳ ಮುಖ್ಯವಾದ ವಿಷಯ. ಹಾಗಾಗಿ ಇಂದು ಈ ಅಂಕಣದಲ್ಲಿ ಹೂಡಿಕೆಯನ್ನು ಡಬಲ್ ಮಾಡಿಕೊಳ್ಳುವ ಮತ್ತು ಯಾವ ಮಾರ್ಗದಲ್ಲಿ ಇದು ಅತ್ಯಂತ ಸೇಫ್ ಎನ್ನುವುದರ ಕುರಿತು ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ.
1. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸ್ಕೀಮ್ (PPF):-
* ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ ಹಣವು 15 ವರ್ಷದಲ್ಲಿ 7.1% ಬಡ್ಡಿ ದರದಲ್ಲಿ ದ್ವಿಗುಣಗೊಳ್ಳುತ್ತದೆ.
* ನೀವು ನಂತರವೂ ಮುಂದುವರಿಸಲು ಇಚ್ಛಿಸಿದರೆ ಮುಂದಿನ 5 ವರ್ಷಗಳವರೆಗೆ ವಿಸ್ತರಿಸಬಹುದು, ಆ ಅವಧಿಗೆ ಅನ್ವಯವಾಗುವ ಹೆಚ್ಚಿನ ಬಡ್ಡಿ ದರವನ್ನು ಪಡೆಯುತ್ತೀರಿ.
* ಉದಾಹರಣೆಗೆ ವಿದ್ಯಾಭ್ಯಾಸದ ಉದ್ದೇಶದಿಂದ ನೀವು ಹೂಡಿಕೆ ಮಾಡಲು ಇಚ್ಚಿಸಿದರೆ ಅಥವಾ ನಿಮ್ಮ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಲು ಇಚ್ಛಿಸಿದರೆ, 15 ವರ್ಷಕ್ಕೆ ನಿಮ್ಮ ಹೂಡಿಕೆ ಎರಡರಷ್ಟು ಹಣ ಪಡೆಯಬಹುದು ಮತ್ತು ಪ್ರತಿ ತಿಂಗಳು ನೀವು ಪ್ರೀಮಿಯಂಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಾ ಬರಬೇಕು.
* ವಾರ್ಷಿಕವಾಗಿ ಗರಿಷ್ಠ 1.5 ಲಕ್ಷದವರೆಗೆ PPF ನಲ್ಲಿ ಹೂಡಿಕೆ ಮಾಡಬಹುದು.
* ಈ ಯೋಜನೆಯಲ್ಲಿ ಹಿಂಪಡೆಯಬಹುದಾದ ಗರಿಷ್ಠ ಮೊತ್ತ 55 ಲಕ್ಷ ಅಂದರೆ ನಿಮ್ಮ ಹೂಡಿಕೆಯ ಗರಿಷ್ಠ ಮೊತ್ತ 27 ಲಕ್ಷ.
* ಯಾವುದೇ ಅಂಚೆ ಕಚೇರಿ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನೀವು ಈ ಯೋಜನೆಯನ್ನು ಖರೀದಿಸಬಹುದು ಮತ್ತು ನೂರಕ್ಕೆ ನೂರರಷ್ಟು ಈ ಹಣಕ್ಕೆ ಸರ್ಕಾರವೇ ಗ್ಯಾರಂಟಿಯಾಗಿ ಇರುತ್ತದೆ.
2. ಕಿಸಾನ್ ವಿಕಾಸ್ ಪತ್ರ (KVP):-
* ಇದು ಕೂಡ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಯಾವುದೇ ಅಂಚೆ ಕಚೇರಿಗಳಲ್ಲಿ ಕಿಸಾನ್ ವಿಕಾಸ್ ಪತ್ರ ಯೋಜನೆಯಡಿ ಹಣವನ್ನು ಹೂಡಿಕೆ ಮಾಡಬಹುದು, ಸರ್ಕಾರವೇ ಈ ಹಣಕ್ಕೆ ಗ್ಯಾರಂಟಿ ಆಗಿರುತ್ತದೆ ಹಾಗಾಗಿ ನಿಮ್ಮ ಹಣಕ್ಕೆ ಭದ್ರತೆ ಮತ್ತು ಖಚಿತವಾದ ರಿಟರ್ನ್ಸ್ ಕೂಡ ನಿರೀಕ್ಷಿಸಬಹುದು.
* ಹತ್ತು ವರ್ಷಗಳಲ್ಲಿ ಅಂದರೆ 120 ತಿಂಗಳಿನಲ್ಲಿ ನಿಮ್ಮ ಹಣವು ದ್ವಿಗುಣಗೊಳ್ಳುತ್ತದೆ.
* ಕಿಸಾನ್ ವಿಕಾಸ್ ಪತ್ರ ಯೋಜನೆಯಡಿ ಗರಿಷ್ಠ ಯಾವುದೇ ಮಿತಿ ಇಲ್ಲದೆ ನೀವು ಎಷ್ಟು ಹಣವನ್ನಾದರೂ ಹೂಡಿಕೆ ಮಾಡಬಹುದು, ಆದರೆ ನೀವು PPF ಯೋಜನೆ ರೀತಿ ಪ್ರತಿ ತಿಂಗಳು ಪ್ರೀಮಿಯಂ ಗಳನ್ನು ಪಾವತಿಸಲು ಅವಕಾಶ ಇರುವುದಿಲ್ಲ. ನೀವು ಕಿಸಾನ್ ವಿಕಾಸ್ ಪತ್ರ ಖರೀದಿಸುವ ವೇಳೆಯಲ್ಲಿಯೇ ಒಮ್ಮೆಲೇ ಹಣವನ್ನು ಡೆಪಾಸಿಟ್ ಮಾಡಬೇಕು.
* ಒಮ್ಮೆ ಕಿಸಾನ್ ವಿಕಾಸ್ ಪತ್ರ ಖರೀದಿಸಿದ ಮೇಲೆ ಮತ್ತೊಮ್ಮೆ ಹಣ ಬಂದಾಗ ಈ ಯೋಜನೆಯಡಿ ಹೂಡಿಕೆ ಮಾಡಬೇಕು ಎಂದರೆ ಮತ್ತೊಂದು ಕಿಸಾನ್ ವಿಕಾಸ ಪತ್ರ ಮಾಡಿಸಬೇಕು, ಹಳೆಯ ಯೋಜನೆಗೆ ಸೇರಿಸುವ ಅವಕಾಶ ಇರುವುದಿಲ್ಲ.
3. ಮ್ಯೂಚುಯಲ್ ಫಂಡ್ ಗಳು (Mutual Funds):-
* ಮ್ಯೂಚುವಲ್ ಫಂಡ್ ಗಳು ಕೂಡ ಬಹಳ ವೇಗವಾಗಿ ಹಣವನ್ನು ದ್ವಿಗುಣ ಅಥವಾ ಅದಕ್ಕಿಂತ ಲಾಭ ಮಾಡಿಕೊಳ್ಳುವ ಮಾರ್ಗವಾಗಿದೆ.
* ಆದರೆ ಇದರಲ್ಲಿ ರಿಸ್ಕ್ ಫ್ಯಾಕ್ಟರ್ ಹೆಚ್ಚಿಗೆ ಇರುತ್ತದೆ. ಯಾಕೆಂದರೆ ವಿಪರೀತವಾದ ಏರಿಳಿತಗಳು ಆಗುವುದರಿಂದ ನಿಮ್ಮ ಹಣ ಯಾವುದೇ ಇಂಪ್ರೂವ್ಮೆಂಟ್ ಆಗದೆ ಹಲವು ವರ್ಷಗಳವರೆಗೆ ಹಾಗೆ ಇರಬಹುದು ಅಥವಾ ನಿಮ್ಮ ಹಣವೇ ಕಡಿತಗೊಳ್ಳಬಹುದು. ಹೀಗಾಗಿ ಹೂಡಿಕೆ ಹಣಕ್ಕೆ ಗ್ಯಾರೆಂಟಿ ಇರುತ್ತದೆ ಅಥವಾ ಖಚಿತವಾಗಿ ಲಾಭ ಬರುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ.