Montessori:- 5,000 ಟೀಚರ್ ಗಳ ನೇಮಕಾತಿಗೆ ಅಧಿಸೂಚನೆ PUC ಪಾಸ್ ಆದವರು ಅರ್ಜಿ ಸಲ್ಲಿಸಿ.!

Montessori

ನೂತನ ಶಿಕ್ಷಣ ನೀತಿ ಪ್ರಕಾರವಾಗಿ ಈ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ LKG – UKG ತರಗತಿಗಳನ್ನು ಆರಂಭಿಸಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಅಂಗನವಾಡಿ ಸಿಬ್ಬಂದಿಗಳ ಕಡೆಯಿಂದ ಒತ್ತಡ ಹೆಚ್ಚಾದ ಬಳಿಕ ಸರ್ಕಾರವು ಅಂಗನವಾಡಿ ಕೇಂದ್ರಗಳಲ್ಲಿಯೇ LKG – UKG ತರಗತಿಗಳನ್ನು ನಡೆಸಲು ಅನುಮತಿ ಮಾಡಿಕೊಟ್ಟಿದೆ. ಇದಕ್ಕೆ ಸರ್ಕಾರಿ ಮಾಂಟೆಸ್ಸರಿ (Government Montessori) ಎಂದು ನಾಮಕರಣ ಕೂಡ ಮಾಡಲಾಗಿದೆ.

ಇದರಿಂದ ಇಲಾಖೆಗೆ ಕೊಂಚ ಜವಾಬ್ದಾರಿ ಕೂಡ ಹೆಚ್ಚಾಗಿದೆ ಮತ್ತು ಈ ಜವಾಬ್ದಾರಿ ಹುದ್ದೆಗಳಿಗೆ ಅರ್ಹ ತರಬೇತಿದಾರರುಗಳನ್ನು ಶಿಕ್ಷಕರಾಗಿ ನೇಮಕಾತಿ ಮಾಡಿಕೊಳ್ಳಬೇಕಾಗಿದೆ. ಹೀಗಾಗಿ ರಾಜ್ಯದಲ್ಲಿ ಬಹುತೇಕರಿಗೆ ಹುದ್ದೆ ದೊರಕುವ ಅವಕಾಶ ಇದೆ. ಈ ಬಗ್ಗೆ ಸರ್ಕಾರ ಕೈಕೊಂಡಿರುವ ತೀರ್ಮಾನವೇನು? ಎಷ್ಟು ಹುದ್ದೆಗಳು? ಯಾರು ಅರ್ಹರು? ಪಡೆಯುವುದು ಹೇಗೆ? ಪೂರ್ತಿ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.

WhatsApp Group Join Now
Telegram Group Join Now

ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ (women and Wellfare department Minister Lakshmi Hebbalkar) ಅವರೇ ಸರ್ಕಾರಿ ಮಾಂಟೆಸ್ಸರಿ ಟೀಚರ್ಸ್ (teachers) ನೇಮಕಾತಿ ವಿಷಯದ ಕುರಿತು ಪ್ರಸ್ತಾಪ ಮಾಡಿದ್ದಾರೆ. ನೇರವಾಗಿ ಹುದ್ದೆಗಳ ನೇಮಕಾತಿ ವಿಚಾರದ ಬಗ್ಗೆ ಸಚಿವರು ಹೇಳಿದ ನುಡಿಗಳೆಂದರೆ.

ಈ ಸುದ್ದಿ ಓದಿ:- Gold & Silver Price Today: ಬಜೆಟ್ ಬೆನ್ನಲ್ಲೇ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ.! ಇಂದಿನ ಬೆಲೆ ಎಷ್ಟಿದೆ ಇಲ್ಲಿ ನೋಡಿ.!

ಈಗಾಗಲೇ ಇಲಾಖೆಯಲ್ಲಿ ಸ್ನಾತಕೋತ್ತರ ಪದವಿ, ಪದವಿ, PUC, SSLC ಪೂರೈಸಿದಂತಹ ಅನೇಕ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ ಇವರನ್ನೇ ಮಾಂಟೇಸ್ಸರಿ ಟೀಚರ್ ಗಳಾಗಿ ಬಡ್ತಿ ಮಾಡಲಾಗುವುದು. ಒಂದು ವೇಳೆ ಕೊರತೆ ಕಂಡುಬಂದಲ್ಲಿ ಈ ಹುದ್ದೆಗಳಿಗೆ ಅರ್ಹರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ಮುಂದುವರೆದು ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡ ಸಚಿವೆ ಈ ಸರ್ಕಾರಿ ಮಾಂಟೆಸ್ಸರಿ ಯೋಜನೆಯು ಪ್ರಾಥಮಿಕ ಹಂತವಾಗಿ ಬೆಂಗಳೂರಿನ 250 ಅಂಗನವಾಡಿ ಕೇಂದ್ರಗಳಲ್ಲಿ ಜಾರಿಗೆ ಬಂದಿದೆ. ಜುಲೈ 22 ರಿಂದಲೇ ರಾಜ್ಯದ ಆಯ್ದ ಕೇಂದ್ರಗಳಲ್ಲಿ ಸರ್ಕಾರಿ LKG ಮತ್ತು UKG ಪೂರ್ವ ಪ್ರಾಥಮಿಕ ತರಗತಿಗಳು ಆರಂಭವಾಗಿವೆ.

ಶೀಘ್ರದಲ್ಲಿಯೇ ರಾಜ್ಯದಾದ್ಯಂತ ಇರುವ ಎಲ್ಲಾ 5000 ಅಂಗನವಾಡಿ ಕೇಂದ್ರಗಳಲ್ಲಿ ಕೂಡ ತರಗತಿಗಳು ನಡೆಯಲಿದೆ, ಸರ್ಕಾರದ ಈ ಯೋಜನೆಯಿಂದ ಇನ್ನು ಮುಂದೆ ಉಚಿತವಾಗಿ LKG ಮತ್ತು UKG ತರಗತಿಗಳನ್ನು ಅಂಗನವಾಡಿಯಲ್ಲಿಯೇ‌ ಕಲಿಯಬಹುದು ಎಂದು ಸಚಿವೆ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸುದ್ದಿ ಓದಿ:- Bank Loan Surety: ನೀವು ಜಾಮೀನು ನೀಡಿದ್ದ ವ್ಯಕ್ತಿ ಸಾಲ ತೀರಿಸದೇ ಹೋದ್ರೆ ಏನಾಗುತ್ತೆ ಗೊತ್ತ.? ಇಲ್ಲಿದೆ ಬ್ಯಾಂಕ್ ರೂಲ್ಸ್

ಈ ಮೊದಲೇ ಸರ್ಕಾರವು LKG-UKG ತರಗತಿಗಳನ್ನು ಸರ್ಕಾರಿ ಶಾಲೆಗಳಲ್ಲಿ ಆರಂಭಿಸಲು ತೀರ್ಮಾನಿಸಿದಾಗ ಟೀಚರ್ ಹುದ್ದೆಗಳಿಗೆ ಕೆಲವು ಮಾನದಂಡಗಳನ್ನು ನಿಗದಿಪಡಿಸಿತ್ತು. ಒಂದು ವೇಳೆ ಅಂಗನವಾಡಿ ಕೇಂದ್ರಗಳಲ್ಲಿ ನಡೆಯುವ ತರಗತಿಗಳಿಗೆ ಶಿಕ್ಷಕರ ಕೊರತೆ ಕಂಡುಬಂದಲ್ಲಿ ಇದೇ ಮನದಂಡಗಳ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ.

ಈ ಹಿಂದೆ ನಿಗದಿಪಡಿಸಿದ್ದ ಮಾನದಂಡಗಳು:-

* 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು
* NCTE ಇಂದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಎರಡು ಅಥವಾ ಎರಡು ವರ್ಷಗಳಕ್ಕಿಂತ ಕಡಿಮೆ ಅವಧಿಯ ಡಿಪ್ಲೋಮಾ ಇನ್ ನರ್ಸರಿ ಟೀಚರ್ಸ್ ಎಜುಕೇಶನ್ ಅಥವಾ ಪ್ರಿ ಸ್ಕೂಲ್ ಎಜುಕೇಶನ್ ಅಥವಾ ಅರ್ಲಿ ಚೈಲ್ಡ್ಹುಡ್ ಎಜುಕೇಶನ್ ಪ್ರೋಗ್ರಾಮ್ (DEC.ed) ಅಥವಾ ನರ್ಸರಿಯಲ್ಲಿ B.ed ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿತ್ತು.
* ಒಂದು ವೇಳೆ ಈ ಮೇಲೆ ತಿಳಿಸಿದಂತಹ ತರಬೇತಿ ಪಡೆಯಲು ಆಗದಿದ್ದವರು PUCಯಲ್ಲಿ ಕನಿಷ್ಠ 50% ಅಂಕಗಳಿಗೆ ಕಡಿಮೆ ಇಲ್ಲದಂತೆ ಉತ್ತೀರ್ಣರಾಗಿ ಮತ್ತು NCTE ಇಂದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ d.ed ಉತ್ತೀರ್ಣರಾಗಿದ್ದರೆ ಅರ್ಜಿ ಸಲ್ಲಿಸಬಹುದಾಗಿತ್ತು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment