DA Hike
ದೇಶದ ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು(Central Government Employees) ಮತ್ತು ಪಿಂಚಣಿದಾರರಿಗೆ(Pensioners) ದೊಡ್ಡ ಹೊಡೆತ ಬಿದ್ದಿದೆ.18 ತಿಂಗಳ ಬಾಕಿ ಡಿಎ(DA) ಬಗ್ಗೆ ಕೇಂದ್ರ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಿದೆ.
ನಿತ್ಯದ ಹಣದುಬ್ಬರವನ್ನು(Inflation) ಸರಿಹೊಂದಿಸಿಕೊಂಡು ಹೋಗಲು ನೆರವಾಗುವಂತೆ ಸರ್ಕಾರ ವರ್ಷಕ್ಕೆ ಎರಡು ಬಾರಿ ಸರ್ಕಾರಿ ನೌಕರರ ತುಟ್ಟಿಭತ್ಯೆ(Government employee’s allowance) ಹೆಚ್ಚಳ ಮಾಡುತ್ತದೆ. ತುಟ್ಟಿಭತ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಸರ್ಕಾರಿ ನೌಕರರ ವೇತನದಲ್ಲಿ(Salary) ಕೂಡಾ ಬದಲಾವಣೆಯಾಗುತ್ತದೆ.
ಇದೀಗ ಸರ್ಕಾರಿ ನೌಕರರು ಜುಲೈ ತಿಂಗಳ ತುಟ್ಟಿಭತ್ಯೆ(allowance) ಹೆಚ್ಚಳದ ಘೋಷಣೆಗಾಗಿ ಕಾಯುತ್ತಿದ್ದಾರೆ. ಇನ್ನೇನು ಇವತ್ತಲ್ಲ ನಾಳೆ ಈ ಹೆಚ್ಚಳ ಘೋಷಣೆಯಾಗಲಿದೆ ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ. ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಎಐಸಿಪಿಐ ಸೂಚ್ಯಂಕ ಸಂಖ್ಯೆ(AICPI index no) ಆಧಾರದ ಮೇಲೆ ಈ ಬಾರಿ ತುಟ್ಟಿಭತ್ಯೆ 3% ಅಥವಾ 4 ರಷ್ಟು ಹೆಚ್ಚಾಗಬಹುದು ಎನ್ನುವ ನಿರೀಕ್ಷೆ ಇದೆ.
ಈ ಸುದ್ದಿ ಓದಿ:- Labor Card ಕಾರ್ಮಿಕ ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್: ನಿಮಗೆ ಸಿಗಲಿದೆ 60,000 ಸಹಾಯಧನ.!
ಈ ನಿರೀಕ್ಷೆಯ ಮಧ್ಯೆಯೇ ಸರ್ಕಾರ ಇದೀಗ ಶಾಕಿಂಗ್ ನಿರ್ಧಾರ ಪ್ರಕಟಿಸಿದೆ. 18 ತಿಂಗಳ ಬಾಕಿ ತುಟ್ಟಿಭತ್ಯೆ ಬಗ್ಗೆ ಸರ್ಕಾರ ತನ್ನ ನಿರ್ಧಾರ ಹೇಳಿದೆ. ಬಾಕಿ ಡಿಎ ಪಾವತಿಸಲು ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿದೆ. ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ,ರಾಜ್ಯಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.
ಕರೋನಾ ಸಂದರ್ಭದಲ್ಲಿ ಸರ್ಕಾರ ತಡೆ ಹಿಡಿದಿದ್ದ 18 ತಿಂಗಳ ಡಿಎ/ಡಿಆರ್ ಅನ್ನು ಬಿಡುಗಡೆ ಮಾಡುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕರೋನಾ ಅವಧಿಯಲ್ಲಿ ಸರ್ಕಾರಿ ನೌಕರರ 18 ತಿಂಗಳ ತುಟ್ಟಿಭತ್ಯೆ ಪಾವತಿಯನ್ನು ಸರ್ಕಾರ ನಿಲ್ಲಿಸಿತ್ತು.ಈ ಬಾಕಿ ಡಿಎ ಹಣವನ್ನು ನೀಡಬೇಕೆಂದು ಕೇಂದ್ರ ನೌಕರರು ಬಹಳ ದಿನಗಳಿಂದ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಇದೀಗ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಿದ್ದು, 1 ಕೋಟಿ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಶಾಕ್ ನೀಡಿದೆ.
ವರ್ಷಂಪ್ರತಿಯಂತೆ ಈ ಬಾರಿ ಕೂಡ ತುಟ್ಟಿಭತ್ಯೆ (ಡಿಎ) ಹೆಚ್ಚಳದ ನಿರೀಕ್ಷೆಯಲ್ಲಿದ್ದರು ಕೇಂದ್ರ ಸರ್ಕಾರಿ ನೌರರು. ಆದರೆ, ಕೇಂದ್ರ ಸರ್ಕಾರ ಈ ಬಗ್ಗೆ ಪ್ರಕಟಣೆ ಶಾಕಿಂಕ್ ಮಾಹಿತಿ ನೀಡಿದೆ. ನೌಕರರ ನಿರೀಕ್ಷೆ ಪ್ರಕಾರ ಇದೇ ತಿಂಗಳು ಅಂದರೆ ಅಕ್ಟೋಬರ್‌ನಲ್ಲೇ ತುಟ್ಟಿಭತ್ಯೆ (ಡಿಎ) ಹೆಚ್ಚಳವಾಗಬಹುದು ಎಂದು ನಿರೀಕ್ಷಿಸಿದ್ದರು.
ವಿವಿಧ ಮಾಧ್ಯಮ ವರದಿಗಳೂ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ) ಹೆಚ್ಚಳ ಇದೇ ತಿಂಗಳು ಘೋಷಣೆಯಾಗಬಹುದು ಎಂದು ಮಾಹಿತಿ ನೀಡಿದ್ದವು. ಆದರೆ, ಆ ಆಸೆ ಹುಸಿಯಾಗಿದೆ. ಕಳೆದ ವರ್ಷ ಅಂದರೆ, 2023ರಲ್ಲಿ ಕೂಡ ಅಕ್ಟೋಬರ್ ತಿಂಗಳಲ್ಲೇ ಕೇಂದ್ರ ಸರ್ಕಾರಿ ನೌಕರರ ಡಿಎ ಹೆಚ್ಚಳ ಪ್ರಕಟವಾಗಿತ್ತು.
ಈ ಸುದ್ದಿ ಓದಿ:- HSRP: ಮೊಬೈಲ್ ಮೂಲಕವೇ HSRP ನಂಬರ್ ಪ್ಲೇಟ್ ಪಡೆಯುವ ವಿಧಾನ.! ನಿಮ್ಮ ಮನೆ ಬಾಗಿಲಿಗೆ ಬರಲಿದೆ.!
ತುಟ್ಟಿಭತ್ಯೆ (ಡಿಎ) ಎನ್ನುವುದು ಉದ್ಯೋಗಿಗಳಿಗೆ ಅವರ ಜೀವನ ವೆಚ್ಚದ ಮೇಲೆ ಹಣದುಬ್ಬರದ ಪರಿಣಾಮವನ್ನು ಸರಿದೂಗಿಸಲು ಪಾವತಿಸುವ ಮೂಲ ವೇತನದ ಶೇಕಡಾವಾರು ಮೊತ್ತ. ಇದನ್ನು ನಿಯತವಾಗಿ ಸರಿಹೊಂದಿಸಲಾಗುತ್ತದೆ, ಸಾಮಾನ್ಯವಾಗಿ ಪ್ರತಿ ಆರು ತಿಂಗಳಿಗೊಮ್ಮೆ, ಜೀವನ ವೆಚ್ಚದ ಸೂಚ್ಯಂಕದಲ್ಲಿನ ಬದಲಾವಣೆಗಳನ್ನು ಗಣನೆಗೆ ತೆಗೆದುಕೊಂಡು ಈ ಹೆಚ್ಚಳವನ್ನು ಸರ್ಕಾರ ಪ್ರಕಟಿಸುತ್ತದೆ.
ಡಿಎ ಹೆಚ್ಚಳವು ಹಣದುಬ್ಬರ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚವನ್ನು ಸರಿದೂಗಿಸಲು ಆಯಾ ನೌಕರರ ಮೂಲ ವೇತನದ ಶೇಕಡಾವಾರು ಮೊತ್ತವಾಗಿದ್ದು, ವರ್ಷಕ್ಕೆ ಎರಡು ಸಲ ಹೆಚ್ಚಳ ಪ್ರಕಟಿಸುತ್ತದೆ. ವರದಿಯ ಪ್ರಕಾರ, 30,000 ರೂಪಾಯಿ ವೇತನ ಇದ್ದವರಿಗೆ ಮೂಲ ವೇತನ 18,000 ರೂಪಾಯಿ ಎಂದಾದರೆ, ಅವರ ಡಿಎ ಮೊತ್ತ 9,000 ರೂಪಾಯಿ. ಅಂದರೆ, ಅದು ಈಗ ಅವರ ಮೂಲ ವೇತನದ ಶೇಕಡ 50 ರಷ್ಟು ಇದೆ.