LPG
ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳು ನಮ್ಮ ಬದುಕನ್ನು ಬಹಳ ಸಲೀಸು ಮಾಡಿಕೊಟ್ಟಿದೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಹಾಗೆ ನಾವು ಕೂಡ ಅಪ್ಡೇಟ್ ಆಗಿ ಜೀವನವನ್ನು ಇನ್ನಷ್ಟು ಸ್ಮಾರ್ಟ್ ಮಾಡಿಕೊಳ್ಳಬೇಕು. ಈ ಬಗ್ಗೆ ಸರ್ಕಾರಗಳು ಕೂಡ ಯೋಚಿಸುತ್ತವೆ ಮತ್ತು ಅವಶ್ಯಕತೆ ಇದ್ದಾಗ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಕೂಡ ಇಡುತ್ತವೆ. ಇದಕ್ಕೆ ಪ್ರಧಾನಮಂತ್ರಿ ಜನ್ ಧನ್ ಖಾತೆ ಯೋಜನೆ ಮತ್ತು ಪ್ರಧಾನಮಂತ್ರಿ ಉಜ್ವಲ್ ಯೋಜನೆ ಇತ್ಯಾದಿಗಳನ್ನು ಉದಾಹರಣೆಯಾಗಿ ಕೊಡಬಹುದು.
ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಿಂದ ದೇಶದಲ್ಲಿ ಕೋಟ್ಯಾಂತರ ಹೆಣ್ಣು ಮಕ್ಕಳು ಹೊಗೆ ಮುಕ್ತ ವಾತಾವರಣದಲ್ಲಿ ಅಡುಗೆ ಮಾಡುವಂತಹ ಅನುಕೂಲತೆ ದೊರೆಯಿತು, ಇದರಿಂದ ಸಮಯ ಉಳಿತಾಯ ಆಗುವುದರ ಜೊತೆಗೆ ಮಹಿಳೆಯರ ಆರೋಗ್ಯದ ರಕ್ಷಣೆ ಮತ್ತು ಪರಿಸರದ ಸಂರಕ್ಷಣೆ ಕೂಡ ಆಗುತ್ತಿದೆ. ಉಚಿತ ಗ್ಯಾಸ್ ಕಲೆಕ್ಷನ್ ಜೊತೆಗೆ ಸರ್ಕಾರದಿಂದ ವಾರ್ಷಿಕವಾಗಿ 12 ಸಿಲಿಂಡರ್ ಗಳ ಬುಕಿಂಗ್ ಮೇಲೆ ಸಬ್ಸಿಡಿ ಕೂಡ ಸಿಗುತ್ತಿದೆ.
ಈ ಸುದ್ದಿ ಓದಿ:-ಕೇವಲ 17 ಲಕ್ಷ ಹಣದಲ್ಲಿ ಶಾಪ್ ಜೊತೆಗೆ 2BHK, ಇದು ಸಾಧ್ಯವೇ ಎಂದು ಆಶ್ಚರ್ಯ ಪಡುವ ರೀತಿಯಲ್ಲಿ ಮನೆ ಕಟ್ಟಿದ್ದಾರೆ ಇಲ್ಲಿದೆ ನೋಡಿ ಡೀಟೇಲ್ಸ್.!
ಇದೆಲ್ಲವೂ ಸತ್ಯ ಹಾಗೂ ಸ್ವಾಗತಾರ್ಹ. ಆದರೆ ಈ ರೀತಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದ ಮಹಿಳೆಯರು ಆಗ ಸರ್ಕಾರ ನೀಡುವ ನಿಯಮಗಳು ಹಾಗೂ ಸೂಚನೆಗಳನ್ನು ಕೂಡ ಇದೇ ರೀತಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲವಾದಲ್ಲಿ ಅಪಾಯ ತಪ್ಪಿದಲ್ಲ. ಅದಕ್ಕಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ ಗ್ಯಾಸ್ ಕಲೆಕ್ಷನ್ ಪಡೆದಿರುವ ಮಹಿಳೆಯರು ಸೇರಿದಂತೆ ಎಲ್ಲಾ ಗ್ಯಾಸ್ ಬಳಕೆದಾರರಿಗೂ ಕೂಡ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಗ್ಯಾಸ್ ಬಳಕೆ ಮಾಡುವವರು ಸುರಕ್ಷಿತ ಉದ್ದೇಶದಿಂದಾಗಿ ಪದೇ ಪದೇ ಸರ್ಕಾರ ಮತ್ತು ಗ್ಯಾಸ್ ಕಂಪನಿಗಳು ಈ ಬಗ್ಗೆ ಎಚ್ಚರಿಸುತ್ತಾ ಇರುತ್ತವೆ. ಈ ಬಾರಿ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿರುವ ಅಂಶವೇನೆಂದರೆ ಗ್ಯಾಸ್ ಬಳಕೆದಾರರು ತಮ್ಮ ಮನೆಗಳಲ್ಲಿ ಅನಿಲ ಸೋರಿಕೆ ಆಗುತ್ತಿರುವುದನ್ನು ನಿರ್ಲಕ್ಷಿಸಬಾರದು.
ಈ ಸುದ್ದಿ ಓದಿ:-2.99 ಲಕ್ಷಕ್ಕೆ ನಿಮ್ಮ ಮನೆಗೆ ಈ ರೀತಿ ಅದ್ದೂರಿಯಾಗಿ ವರ್ಕ್ ಮಾಡಿಕೊಡುತ್ತಾರೆ.! ಕಡಿಮೆ ಹಣಕ್ಕೆ ಬೆಸ್ಟ್ ಇಂಟೀರಿಯರ್ ಡಿಸೈನ್.!
ಕಳಪೆ ಗುಣಮಟ್ಟದ ರೆಗ್ಯುಲೇಟರ್ ಅಥವಾ ರೇಗುಲೇಟರ್ ನಿರಂತರ ಬಳಕೆಯಿಂದ ಅದು ಡ್ಯಾಮೇಜ್ ಆಗಿರುವ ಸಾಧ್ಯತೆ ಇರುತ್ತದೆ ಹಾಗಾಗಿ ಸಿಲಿಂಡರ್ ಪೈಪ್ ಗಳಲ್ಲಿ ಅನಿಲ ಸೋರಿಕೆ ಆಗುತ್ತಿದೆಯೇ ಎನ್ನುವುದನ್ನು ಸ್ಲೀಪಿಂಗ್ ಪ್ರಕ್ರಿಯೆ ಮೂಲಕ ಪರೀಕ್ಷಿಸಬೇಕು. (ಸೋರಿಕೆ ಆಗುತ್ತಿರುವ ಜಾಗಕ್ಕೆ ಸಾಬೂನು ಮಿಶ್ರಿತ ನೀರನ್ನು ಹಾಕಿ ಆ ಜಾಗದಲ್ಲಿ ಗುಳ್ಳೆಗಳು ಇದ್ದರೆ ನಿಮ್ಮ ಅನಿಲ ಸೋರಿಕೆ ಆಗುತ್ತಿದೆ ಎಂದರ್ಥ).
ಇದನ್ನು ಕನ್ಫರ್ಮ್ ಮಾಡಿಕೊಂಡು ತಕ್ಷಣ ಡಿಸ್ಟ್ರಿಬ್ಯೂಟರ್ ಮನೆಗೆ ಕರೆಸಿ ಸರಿಪಡಿಸಿಕೊಳ್ಳಬೇಕು. ಇದರೊಂದಿಗೆ ಸಿಲಿಂಡರ್ ಎಕ್ಸ್ಪರಿ ಡೇಟ್ ಬಗ್ಗೆ ಕೂಡ ಗೃಹಿಣಿಯರು ತಿಳಿದುಕೊಂಡಿರಬೇಕು ಎಂದು ತಿಳಿಸಲಾಗಿದೆ. ವಸ್ತುಗಳಿಗೆ ಮ್ಯಾನುಫ್ಯಾಕ್ಚರ್ ಡೇಟ್ ಇರುವ ರೀತಿಯೇ ಸಿಲಿಂಡರ್ ಗೂ ಕೂಡ ಇರುತ್ತದೆ.
ಈ ಸುದ್ದಿ ಓದಿ:-ಸವರನ್ ಗೋಲ್ಡ್ ಬಾಂಡ್ ಖರೀದಿ ಎಷ್ಟು ಲಾಭದಾಯಕ ಗೊತ್ತಾ.? ಚಿನ್ನಕ್ಕೆ ಭದ್ರತೆ ಜೊತೆಗೆ ಖಚಿತ ಲಾಭ ಕೂಡ.!
ಇದನ್ನು ಸಿಲಿಂಡರ್ ಮೇಲೆಯೇ ಬರೆಯಲಾಗಿರುತ್ತದೆ. ಆ ದಿನಾಂಕದ ಬಳಿಕ ಇವುಗಳನ್ನು ಬಳಸಿದರೆ ಅಪಾಯ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗಾಗಿ ಪ್ರತಿ ಬಾರಿ ಸಿಲಿಂಡರ್ ಡೆಲಿವರಿ ತೆಗೆದುಕೊಳ್ಳುವ ಸಮಯದಲ್ಲಿ ಇದನ್ನು ಗಮನಿಸಿ ಮತ್ತು ಆ ದಿನಾಂಕದೊಳಗೆ ಬಳಸುವುದು ಉತ್ತಮ ಅದನ್ನು ಈ ರೀತಿ ಕಂಡುಹಿಡಿಯಬಹುದು.
* ಸಿಲಿಂಡರ್ ಮೇಲೆ ಅಲ್ಫಬೇಟಿಕ್ ಸಂಕೇತ ತಿಂಗಳನ್ನು ಹಾಗೂ ಸಂಖ್ಯೆಯಲ್ಲಿ ಬರೆದಿರುವ ಸಂಕೇತವು ವರ್ಷವನ್ನು ಸೂಚಿಸುತ್ತದೆ.
* A ಅಂದರೆ ಜನವರಿಯಿಂದ ಮಾರ್ಚ್ ತಿಂಗಳು ಎಂಬುದಾಗಿ ಅರ್ಥ
* B ಎಂದರೆ ಏಪ್ರಿಲ್ ನಿಂದ ಜೂನ್ ತಿಂಗಳ ವರೆಗೆ ಎಂಬುದಾಗಿ ಅರ್ಥ
* C ಎಂದರೆ ಜುಲೈನಿಂದ ಸೆಪ್ಟೆಂಬರ್ ತಿಂಗಳು ಎಂಬುದಾಗಿ ಅರ್ಥವಾಗಿದೆ.
ಈ ಸುದ್ದಿ ಓದಿ:-ಕೇವಲ 399 ರೂಪಾಯಿಗೆ ಸಿಗಲಿದೆ 10 ಲಕ್ಷ ಇನ್ಸೂರೆನ್ಸ್, ಇದು ಅಂಚೆ ಕಚೇರಿಯ ಬಂಪರ್ ಆಫರ್.!
* D ಎಂದರೆ ಅಕ್ಟೋಬರ್ ದಿಂದ ಡಿಸೆಂಬರ್ ತಿಂಗಳು ಎಂಬುದಾಗಿದೆ.
* ಉದಾಹರಣೆಗೆ ನಿಮ್ಮ ಗ್ಯಾಸ್ ಸಿಲಿಂಡರ್ ನಲ್ಲಿ B -25 ಎಂಬುದಾಗಿ ಬರೆದಿದೆ ಅಂದರೆ ನಿಮ್ಮ LPG ಗ್ಯಾಸ್ ಸಿಲಿಂಡರ್ ನ್ನು 2025ರ ಏಪ್ರಿಲ್ ನಿಂದ ಜೂನ್ ತಿಂಗಳವರೆಗೆ ಮಾತ್ರ ಬಳಸಲು ಯೋಗ್ಯ, ನಂತರ ಎಕ್ಸ್ಪೈರಿ ಆಗುತ್ತದೆ ಎಂದು ಅರ್ಥವಾಗಿದೆ.