cheque
ಬ್ಯಾಂಕ್ ಖಾತೆಗಳ ಮೂಲಕ ತಮ್ಮ ವ್ಯವಹಾರ ಚಟುವಟಿಕೆ ನಡೆಸುವವರು ಸಾಮಾನ್ಯವಾಗಿ ನಗದು ಹಣದ ಬದಲು ದೊಡ್ಡ ಮೊತ್ತದ ಹಣ ವ್ಯವಹಾರ ನಡೆಸಲು ಚೆಕ್ (cheque) ನೀಡುತ್ತಾರೆ. ಚೆಕ್ ಅನ್ನು ಕನಿಷ್ಠ ಮೊತ್ತದಿಂದ ಅವರ ಖಾತೆಯಲ್ಲಿ ಹಣ ಇರುವ ಮೊತ್ತದವರೆಗೆ ಗರಿಷ್ಠ ಎಷ್ಟು ಬೇಕಾದರೂ ಬರೆದು ಕೊಡಬಹುದು.
ಚೆಕ್ ಪಡೆದವರು ಅದನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ಹಣ ಪಡೆಯಬಹುದು ಆದರೆ ಇದರಲ್ಲಿ ಎಷ್ಟು ಅನುಕೂಲತೆ ಇದೆಯೋ ಅಷ್ಟೇ ಅನಾನುಕೂಲತೆ ಕೂಡ ಉಂಟಾಗುತ್ತಿದೆ. ಯಾಕೆಂದರೆ ಕೆಲವರು ಮೋ’ಸ ಮಾಡಲೆಂದೇ ಇದನ್ನು ಬಳಸುತ್ತಿದ್ದಾರೆ. ತಮ್ಮ ಖಾತೆಯಲ್ಲಿ ಹಣ ಇಲ್ಲದೆ ಇದ್ದರೂ ಕೂಡ ಚೆಕ್ ನೀಡಿ ಚೆಕ್ ಬೌನ್ಸ್ (Cheque bounce) ಪ್ರಕರಣ ದಲ್ಲಿ ಸಿಲುಕುತ್ತಿದ್ದಾರೆ.
ದಿನದಿಂದ ದಿನಕ್ಕೆ ಚೆಕ್ ಬೌನ್ಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುತ್ತದೆ ಎಂದು ಇದಕ್ಕೆ ಕಡಿವಾಣ ಹಾಕುವ ಸಲುವಾಗಿ RBI ಹೊಸ ನಿಯಮವನ್ನು ಹೇರಿದೆ. ಇದು ದೇಶದ ಎಲ್ಲಾ ಬ್ಯಾಂಕ್ ಗಳು ಹಾಗೂ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿ ಚೆಕ್ ಪಡೆದು ಆ ಮೂಲಕ ಹಣಕಾಸು ವಹಿವಾಟು ಮಾಡಿಸುವ ಪ್ರತಿಯೊಬ್ಬರಿಗೂ ಅನ್ವಯ ಆಗಲಿದೆ.
ಆದ್ದರಿಂದ ಇನ್ನು ಮುಂದೆ ಯಾವುದೇ ಗ್ರಾಹಕ ತನ್ನ ಬ್ಯಾಂಕ್ ಖಾತೆಗೆ ಪಡೆದಿರುವ ಚೆಕ್ ನ್ನು ಮತ್ತೊಬ್ಬರಿಗೆ ಸಹಿ ಮಾಡಿ ಹಣ ತುಂಬಿಸಿ ಬರೆದುಕೊಡುವ ಮುನ್ನ ತನ್ನ ಖಾತೆಯಲ್ಲಿ ಎಷ್ಟು ಹಣ ಇದೆ ಎನ್ನುವುದನ್ನು ದೃಢಪಡಿಸಿಕೊಂಡು ಚೆಕ್ ನೀಡಬೇಕು. ಬದಲಾಗಿರುವ ಹೊಸ ನಿಯಮದ ಪ್ರಕಾರ ಒಂದು ವೇಳೆ ವ್ಯಕ್ತಿಯೊಬ್ಬ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೆ ಚೆಕ್ ನೀಡಿದರೆ ಆತನ ಯಾವುದೇ ಬ್ಯಾಂಕ್ ಖಾತೆಯಲ್ಲಿ ಹಣ ಇದ್ದರೂ ಕೂಡ ಅದರಿಂದ ಹಣ ಕಡಿತಗೊಳಿಸಲಾಗುತ್ತದೆ.
ಈಗ ಎಲ್ಲ ಬ್ಯಾಂಕ್ ಖಾತೆಗಳಿಗೂ ಆಧಾರ್ ಲಿಂಕ್ ಮಾಡಿಸಿರುವುದರಿಂದ ಇದು ಸಾಧ್ಯವಾಗುತ್ತದೆ. ಉದಾಹರಣೆಗೆ, ನೀವು ಕೆನರಾ ಬ್ಯಾಂಕ್ ಖಾತೆ ಹೊಂದಿ ಆ ಖಾತೆಯಲ್ಲಿ ಹಣ ಇಲ್ಲದಿದ್ದರೂ ಚೆಕ್ ನೀಡಿದ್ದರೆ ನಿಮ್ಮದೇ ICICI, SBI ಇತರೆ ಇನ್ಯಾವುದೇ ಬ್ಯಾಂಕ್ ಖಾತೆಯಲ್ಲಿ ಹಣ ಇದ್ದರೆ ಆ ಖಾತೆಯಿಂದ ಹಣ ಖಡಿತಗೊಳಿಸಬಹುದು ಎಂದು ಹಣಕಾಸು ಸಚಿವಾಲಯವು ಚೆಕ್ ಬೌನ್ಸ್ ನಿಯಮದಡಿ ಹೊಸ ನಿಯಮ ಸೇರಿಸಿದೆ.
ಒಂದು ವೇಳೆ ನಿಮ್ಮ ಯಾವುದೇ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೇ ಹೋದಾಗ ಅದು ಚೆಕ್ ಬೌನ್ಸ್ ಆಗುತ್ತದೆ ಅಂತಹ ಪ್ರಕರಣಗಳಲ್ಲಿ ಶಿಕ್ಷೆಗೆ ಅವಕಾಶವಿದೆ. ಚೆಕ್ ಬೌನ್ಸ್ ಸಮಸ್ಯೆ ಆದಾಗ ಸಮಸ್ಯೆ ಎದುರಿಸಿದ ವ್ಯಕ್ತಿ ದೂರು ದಾಖಲಿಸಿ ಆರೋಪ ಸಾಬೀತಾದರೆ ಖಾತೆಯಲ್ಲಿ ಹಣ ಇಲ್ಲದಿದ್ದರೂ ಚೆಕ್ ಕೊಟ್ಟ ವ್ಯಕ್ತಿಯು ಆ ತ’ಪ್ಪಿಗಾಗಿ ಎರಡು ವರ್ಷ ದಂಡ ಸಮೇತ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಇದರೊಂದಿಗೆ ಆರ್ಥಿಕವಾಗಿ ಕೂಡ ಇನ್ನಷ್ಟು ನ’ಷ್ಟವನ್ನು ಅನುಭವಿಸುತ್ತೀರಿ. ಹೊಸ ನಿಯಮದ ಪ್ರಕಾರ ಒಮ್ಮೆ ಚೆಕ್ ಬೌನ್ಸ್ ಆದರೆ ನೀವು ಬೇರೆ ಹೊಸ ಖಾತೆಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ. ಚೆಕ್ ಬೌನ್ಸ್ ನಿಂದ ನೀವು ಸಾಲದ ಡಿಫಾಲ್ಟರ್ ಆಗಿ ಕಾಣುತ್ತೀರಿ ಮತ್ತು ನಿಮ್ಮ CIBIL ಸ್ಕೋರ್ ಇಳಿಮುಖವಾಗುತ್ತದೆ.
ಇದರಿಂದ ನಿಮಗೆ ನಂತರದ ದಿನಗಳಲ್ಲಿ ಬ್ಯಾಂಕ್ ಸಾಲಗಳು ಸಿಗಲು ಕ’ಷ್ಟವಾಗುತ್ತದೆ. ಹಾಗಾಗಿ ಇನ್ನು ಮುಂದೆ ಈ ವಿಚಾರಗಳಲ್ಲಿ ಬಹಳ ಎಚ್ಚರಿಕೆಯಿಂದ ಇರಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಶೇರ್ ಮಾಡಿ.