Free bus
ರಾಜ್ಯ ಸರ್ಕಾರ(State Govt)ದ ಐದು ಗ್ಯಾರಂಟಿ(Five guarantees)ಗಳಲ್ಲಿ ಮಹಿಳೆಯರಿಗೆ ಪ್ರಿಯವಾದ ಯೋಜನೆಗಳನ್ನು ಜಾರಿ ಮಾಡಿದೆ. ಅವುಗಳಲ್ಲಿ ಶಕ್ತಿ ಯೋಜನೆ(Shakthi scheme) ಕೂಡ ಒಂದು. ಈ ಯೋಜನೆಯ ಮೂಲಕ ರಾಜ್ಯದ KSRTC ಬಸ್‌ಗಳಲ್ಲಿ ಉಚಿತವಾಗಿ ಓಡಾಡುತ್ತಿದ್ದಾರೆ. ಅದೆಷ್ಟೋ ಮಹಿಳೆಯರು ಈ ಯೋಜನೆ ಮೂಲಕ ತಾವು ಅಂದುಕೊಂಡ ಸ್ಥಳಗಳಿಗೆ ಭೇಟಿ ನೀಡಿ ತಮ್ಮ ಕನಸುಗಳನ್ನು ನನಸು ಮಾಡಿಕೊಂಡಿದ್ದಾರೆ.
ಮಹಿಳೆಯರು ಇಷ್ಟು ದಿನ ಕೆಎಸ್ಆರ್ಟಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ರು. ಆದರೆ, ಇದೀಗ KSRTCಯಲ್ಲಿ ಉಚಿತ ಪ್ರಯಾಣ ಮಾಡುವಂತಹ ಮಹಿಳೆಯರಿಗೆ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಇದರ ಬಗ್ಗೆ ಮಹಿಳೆಯರು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಇಂದಿನ ಈ ಲೇಖನದಲ್ಲಿ ಈ ಬಗ್ಗೆ ತಿಳಿಸಿಕೊಡಲಾಗಿದ್ದು, ಕೊನೆವರೆಗೂ ಮಿಸ್ ಮಾಡದೇ ಓದಿ…
ಏನಿದು KSRTCಯ ಹೊಸ ರೂಲ್ಸ್?
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(Karnataka State Road Transport Corporation- KSRTC) ದ ಮುಖ್ಯ ಸಂಚಾರ ವ್ಯವಸ್ಥಾಪಕರು, ಇತ್ತೀಚಿಗೆ ಒಂದು ಹೊಸ ಆದೇಶವನ್ನು ಹೊರಡಿಸಿದ್ದಾರೆ. ಅದೇನೆಂದರೆ, ಉಚಿತ ಟಿಕೆಟ್ ಪಡೆದು ಬಸ್ನಲ್ಲಿ ಪ್ರಯಾಣ ಮಾಡುವ ಮಹಿಳೆಯರಿಗೆ ತಮ್ಮ ಟಿಕೆಟ್ ಅನ್ನು ಏನಾದರೂ ಕಳೆದುಕೊಂಡರೆ ಬಸ್ಸಿನ ನಿರ್ವಾಹಕರ ಮೇಲೆ ದಂಡ ಹಾಕಲಾಗುವುದು ಎಂಬ ಮಾಹಿತಿಗಳು ತಿಳಿದು ಬಂದಿದೆ.
ಶಕ್ತಿ ಯೋಜನೆಯಡಿ ಮಹಿಳೆಯರು ಕೊಡಲಾಗುವ ಪಿಂಕ್ ಟಿಕೆಟ್ ಗಳನ್ನು ಏನಾದರೂ ಮಹಿಳೆಯರು ಅಕಸ್ಮಾತಾಗಿ ಅವುಗಳನ್ನು ಕಳೆದುಕೊಂಡರೆ ಅದರ ಪ್ರತಿ ಟಿಕೆಟಿಗೂ ಕೂಡ ಹತ್ತು ರೂಪಾಯಿಗಳ ದಂಡಗಳನ್ನು ನಿರ್ವಾಹಕರಾಗಿ ಹಾಕಲಾಗುತ್ತದೆ ಎಂದು ತಿಳಿದು ಬಂದಿರುತ್ತದೆ.
ಈ ಸುದ್ದಿ ಓದಿ:- LIC Recruitment: PUC ಪಾಸ್ ಆದವರಿಗೆ LIC ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಶಕ್ತಿ ಯೋಜನೆಯಿಂದಾಗಿ ಪ್ರತಿ ಬಸ್ಸಿನಲ್ಲೂ ಕೂಡ ಅತ್ಯಂತ ಒತ್ತಡದಿಂದ ಕೆಲಸವನ್ನು ಮಾಡುತ್ತಿರುವ ನೌಕರರಿಗೆ ಮತ್ತಷ್ಟು ಸಮಸ್ಯೆಯನ್ನು ತರುವ ಅಧಿಸೂಚನೆ ಇದು ಆಗಿರುತ್ತದೆ ಎಂದು ಇದಕ್ಕೆ ತುಂಬಾ ವಿರೋಧ ವ್ಯಕ್ತವಾಗುತ್ತಿದೆ ಎಂಬ ಮಾಹಿತಿಗಳು ಕೇಳಿಬಂದಿವೆ. ನಿರ್ವಾಹಕರು ಇಲ್ಲಿ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಟಿಕೇಟು ವಿತರಣೆಯನ್ನು ಮಾಡುವ ಸಂದರ್ಭದಲ್ಲಿ.
ಅವರು ಬಳಸುವ ಟಿಕೆಟ್ ವಿತರಣೆಯನ್ನು ಮಾಡುವ ಯಂತ್ರ ಏನಾದರೂ ಹಾಳಾದರೆ ಪ್ರಯಾಣಿಕರಿಗೆ ಟಿಕೆಟ್ ವಿತರಿಸಲು ಟಿಕೆಟ್ ಗಳನ್ನು ಮುಂಗಡವಾಗಿ ಮೊದಲಿಗೆ ಪ್ರಿಂಟ್ ಮಾಡಿ ಇಟ್ಟಿರಲಾಗುತ್ತದೆ. ಆದರೆ, ಆ ಟಿಕೆಟ್ಗಳಲ್ಲಿ ಘಟಕ ಮತ್ತು ವಿಭಾಗ ಹಾಗೂ ಎಲ್ಲಿಂದ ಮತ್ತು ಎಲ್ಲಿಗೆ ಎಂಬ ಆಯ್ಕೆಗಳನ್ನು ನಿರ್ವಾಹಕರು ಭರ್ತಿ ಮಾಡಿ ಸಹಿ ಹಾಕಿ ನೀಡಬೇಕಾಗುತ್ತದೆ.
ಏನಿದು ಪಿಂಕ್ ಟಿಕೆಟ್?
ಶಕ್ತಿ ಯೋಜನೆಯಡಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿರುವ ಮಹಿಳೆಯರು ಹೆಚ್ಚಾಗುತ್ತಿದ್ದಾರೆ. ಇಂತಹ ಒತ್ತಡದಲ್ಲಿ ನಿರ್ವಾಹಕರಿಗೆ ಇದನ್ನು ಭರ್ತಿ ಮಾಡುವ ಹಾಗೂ ಭರ್ತಿ ಮಾಡಿ ಟಿಕೆಟ್ ಕೊಡುವ ಕೆಲಸ ಹೆಚ್ಚಿನ ಹೊರೆಯನ್ನು ಉಂಟು ಮಾಡಿದೆ. ಪುರುಷರ ಟಿಕೆಟ್ ನಲ್ಲಿ ಎಲ್ಲಿಂದ ಎಲ್ಲಿಗೆ ಎಂಬ ಮತದ ಹಣದ ಮೂಲಕ ಸೂಚಿಸಿರುವಂತೆ ಮಹಿಳೆಯರಿಗೂ ಕೂಡ ಉಚಿತ ಟಿಕೇಟಿನಲ್ಲಿ ನಮೂದಿಸಲಾಗುವುದಿಲ್ಲ ಹಾಗಾಗಿ ಇದೆಲ್ಲವನ್ನು ಕಂಡಕ್ಟರ್ ಗಳು ಭರ್ತಿ ಮಾಡಿಕೊಡಬೇಕಾಗುತ್ತದೆ ಎಂಬುದು ಸಮಸ್ಯೆಯಾಗಿದೆ.
ಟಿಕೆಟ್ ಕೊಡುವ ಯಂತ್ರ ಏನಾದರೂ ಕೆಲಸ ಮಾಡದೇ ಇರುವ ಸಂದರ್ಭದಲ್ಲಿ ಬಸ್ಸಿನಲ್ಲಿ ಪ್ರಯಾಣ ಬೆಳೆಸುತ್ತಿರುವ ಪುರುಷರಿಗೆ ಹಾಗೂ ಮಹಿಳೆಯರಿಗೆ ವಿಭಿನ್ನವಾದ ಟಿಕೆಟ್ ಗಳನ್ನು ವಿತರಣೆ ಮಾಡಲಾಗುತ್ತದೆ. ಪುರುಷರ ಟಿಕೇಟಿನಲ್ಲಿ ಎಲ್ಲಿಂದ ಎಲ್ಲಿಗೆ ಎಂಬ ಮಾಹಿತಿಯನ್ನು ಕೂಡ ಮೊತ್ತದ ಮೂಲಕ ತಿಳಿಯಬಹುದಾಗಿರುತ್ತದೆ. ಆದರೆ, ಮಹಿಳೆಯರಿಗೆ ಹೊಸದಾಗಿ ನೀಡುವ ಪಿಂಕ್ ಟಿಕೆಟಿನಲ್ಲಿ ಸ್ವತಹ ನಿರ್ವಾಹಕರೇ ಅಲ್ಲಿ ಎಲ್ಲಿಂದ ಎಲ್ಲಿಗೆ ಎಂಬ ಮಾಹಿತಿಯನ್ನು ಕೂಡ ನಮೂದಿಸಬೇಕಾಗುತ್ತದೆ.
ಈ ಸುದ್ದಿ ಓದಿ:- Gruha Jyothi Scheme: ಗೃಹಜ್ಯೋತಿ ಫಲಾನುಭವಿಗಳಿಗೆ ಬೆಳ್ಳಂ ಬೆಳಗ್ಗೆ ಬಿಗ್ ಶಾಕದ ನೀಡಿದ ರಾಜ್ಯ ಸರ್ಕಾರ.!
ಹಾಗಾಗಿ, ಇಂಥ ಪರಿಸ್ಥಿತಿಯಲ್ಲಿ ನಿರ್ವಾಹಕರು ಕೊಟ್ಟಿರುವಂತ ಟಿಕೇಟನ್ನು ಮಹಿಳೆಯರು ಏನಾದರೂ ಅಕಸ್ಮಾತಾಗಿ ಕಳೆದುಕೊಂಡರೆ ನಿರ್ವಾಹಕರ ಮೇಲೆ ಪ್ರತಿ ಟಿಕೇಟಿನ ಮೇಲೆ 10 ರೂಪಾಯಿ ತಂಡವನ್ನು ಅಧಿಕಾರಿಗಳು ಹಾಕಲಾಗುತ್ತದೆ. ಹಾಗೂ ಈ ಕಾರಣದಿಂದಾಗಿ ಸರ್ಕಾರದ ವ್ಯವಸ್ಥಾಪಕರ ವಿರುದ್ಧ ಸಾರಿಗೆ ನೌಕರರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.