Train Ticket: ಟ್ರೈನ್ ಟಿಕೆಟ್ ಬುಕ್ ಮಾಡುವುದಕ್ಕೆ ಇಂದಿನಿಂದ ಹೊಸ ರೂಲ್ಸ್.!

Train Ticket

ನಿಮ್ಮ ಸ್ನೇಹಿತರು ಅಥವಾ ಅಪರಿಚಿತರಿಗೆ ನಿಮ್ಮ ವೈಯಕ್ತಿಕ IRCTC ಐಡಿಯ ಮೂಲಕ ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್ ಬುಕ್‌ ಮಾಡ್ತೀರಾ? ಹಾಗಿದ್ರೆ ನೀವು ಎಚ್ಚರವಾಗಿರಬೇಕು. ನೀವು ಹೀಗೆ ಯಾರ್ಯಾರಿಗೋ ನಿಮ್ಮ ಐಡಿಯಲ್ಲಿ ಟಿಕೆಟ್‌ ಬುಕ್ ಮಾಡಿದರೆ ಜೈಲು ಶಿಕ್ಷೆ ಮತ್ತು ಭಾರೀ ಮೊತ್ತದ ದಂಡವನ್ನು ವಿಧಿಸಲಾಗುತ್ತದೆ.

ಹೌದು, ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಕೆಲವು ಹೊಸ ನಿಯಮಗಳನ್ನು ತಂದಿದೆ. ರೈಲ್ವೆ ಕಾಯ್ದೆಯ ಸೆಕ್ಷನ್ 143ರ ಪ್ರಕಾರ, ಇನ್ಮುಂದೆ ಅಧಿಕೃತ ಏಜೆಂಟರು ಮಾತ್ರ 3ನೇ ವ್ಯಕ್ತಿಯ ಹೆಸರಿನಲ್ಲಿ ಕಾಯ್ದಿರಿಸುವ ಟಿಕೆಟ್ ಬುಕ್‌ ಮಾಡಬಹುದು.

WhatsApp Group Join Now
Telegram Group Join Now

ನಿಮ್ಮ ವೈಯಕ್ತಿಕ ಐಡಿ ಹೆಸರಿನಲ್ಲಿ ನಿಮ್ಮ ಕುಟುಂಬ ಸದಸ್ಯರು, ನಿಮ್ಮ ಉಪನಾಮ ಹೊಂದಿರುವವರು ಮತ್ತು ರಕ್ತ ಸಂಬಂಧಿಗಳಿಗೆ ಮಾತ್ರ ಕಾಯ್ದಿರಿಸುವ ಟಿಕೆಟ್‌ಗಳನ್ನು ಬುಕ್‌ ಮಾಡಬಹುದು. ಅದು ಬಿಟ್ಟು ನಿಮಗೆ ಗೊತ್ತಿಲ್ಲದ ಅಪರಿಚಿತರಿಗೆ ನಿಮ್ಮ ಐಡಿಯಲ್ಲಿ ಟಿಕೆಟ್‌ ಬುಕ್‌ ಮಾಡಿದರೆ ಖಂಡಿತ ನಿಮಗೆ ಸಂಕಷ್ಟ ಎದುರಾಗುತ್ತದೆ.

IRCTC ಜಾರಿಗೆ ತಂದಿರುವ ಹೊಸ ನಿಯಮಗಳನ್ನು ಉಲ್ಲಂಘಿಸುವವರಿಗೆ 10,000 ರೂ.ಗಳ ದಂಡ ಮತ್ತು ೩ ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲಾಗುತ್ತದೆ. ಇನ್ಮುಂದೆ ತಮ್ಮ ಐಡಿಗಳನ್ನು ಬೇರೆ ಯಾರಿಗೂ ನೀಡದಂತೆ ರೈಲ್ವೆ ನಾಗರಿಕರಿಗೆ ಮನವಿ ಮಾಡಿದೆ. IRCTC ಐಡಿಯೊಂದಿಗೆ ಆಧಾರ್ ಲಿಂಕ್ ಮಾಡಿದವರಿಗೆ ತಿಂಗಳಿಗೆ 24 ಟಿಕೆಟ್‌ಗಳು ಮತ್ತು ಲಿಂಕ್ ಮಾಡದವರಿಗೆ 12 ಟಿಕೆಟ್‌ಗಳನ್ನು ಬುಕ್‌ ಮಾಡುವ ಸೌಲಭ್ಯವನ್ನು IRCTC ಪರಿಚಯಿಸಿದೆ.

ಭಾರತೀಯ ರೈಲ್ವೆ ಹೇಳೋದೇನು?

ಇನ್ನೂ ಈ ಬಗ್ಗೆ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಸೋಷಿಯಲ್‌ ಮೀಡಿಯಾದಲ್ಲಿ ಹರಡುತ್ತಿರುವ ತಪ್ಪು ಮಾಹಿತಿಯ ಬಗ್ಗೆ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ IRCTC, ಪ್ರಯಾಣಿಕರು ವಿವಿಧ surname ಹೊಂದಿರುವ ಕಾರಣ ಇ-ಟಿಕೆಟ್‌ಗಳನ್ನು ಬುಕ್ ಮಾಡುವುದರ ಮೇಲಿನ ನಿರ್ಬಂಧಗಳ ಬಗ್ಗೆ‌ ಹರಡುತ್ತಿರುವ ವದಂತಿಗಳು “ಸುಳ್ಳು ಮತ್ತು ಮಿಸ್‌ ಲೀಡಿಂಗ್” ಆಗಿವೆ ಎಂದು ಹೇಳಿದೆ.

IRCTCಯ ವೈಯಕ್ತಿಕ ಐಡಿ ಮೂಲಕ ಹೆಚ್ಚಿನ ಟಿಕೆಟ್‌ ಅಥವಾ ಅಪರಿಚಿತರಿಗೆ ಟಿಕಟ್‌ ಬುಕ್‌ ಮಾಡಿದ್ರೆ ಭಾರೀ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂಬ ಫೇಕ್‌ ಸುದ್ದಿಯ ಬಗ್ಗೆ IRCTC ಈ ಸ್ಪಷ್ಟನೆ ನೀಡಿದೆ. “ವಿವಿಧ Surnameಗಳಿಂದ ಇ-ಟಿಕೆಟ್‌ಗಳ ಬುಕ್ಕಿಂಗ್‌ನಲ್ಲಿ ನಿರ್ಬಂಧದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶೇರ್‌ ಆಗುತ್ತಿರುವ ಸುದ್ದಿ ಸುಳ್ಳು ಮತ್ತು ತಪ್ಪುದಾರಿಗೆಳೆಯುವಂತಿದೆ” ಎಂದು IRCTC ತನ್ನ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದೆ.

ಹೀಗಾಗಿ ವಿವಿಧ Surname ಹೊಂದಿರುವ ಜನರಿಗೆ ನೀವು ರೈಲು ಟಿಕೆಟ್‌ಗಳನ್ನು ಬುಕ್‌ ಮಾಡಬಹುದು? ಈ ಪ್ರಶ್ನೆಗೆ ಉತ್ತರ ಹೌದು, ನೀವು ಅವರಿಗೂ ಟಿಕೆಟ್‌ಗಳನ್ನು ಬುಕ್‌ ಮಾಡಬಹುದಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಅಂದ್ರೆ, ಮಾನ್ಯವಾದ IRCTC ವೆಬ್‌ಸೈಟ್‌ ಅಥವಾ ಆಪ್‌ ಮೂಲಕ ಟಿಕೆಟ್ ಬುಕಿಂಗ್ ಮಾಡುವವರು ತಮ್ಮ ವೈಯಕ್ತಿಕ ಐಡಿ ಮೂಲಕ ಸ್ನೇಹಿತರು.

ಕುಟುಂಬ ಮತ್ತು ಸಂಬಂಧಿಕರಿಗೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಪ್ರಮಾಣಿತ ಬಳಕೆದಾರರು ತಿಂಗಳಿಗೆ ಗರಿಷ್ಠ 12 ಟಿಕೆಟ್‌ಗಳನ್ನು ಬುಕ್ ಮಾಡಬಹುದು. ತಮ್ಮ IRCTC ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ ಬಳಕೆದಾರರಿಗೆ ಈ ಮಿತಿಯು ತಿಂಗಳಿಗೆ 24 ಟಿಕೆಟ್‌ಗಳಿಗೆ ಹೆಚ್ಚಾಗುತ್ತದೆ (ಪ್ರತಿ ಟಿಕೆಟ್‌ನಲ್ಲಿ ಕನಿಷ್ಠ ಒಬ್ಬ ಪ್ರಯಾಣಿಕರ ಆಧಾರ್ ದೃಢೀಕರಣವನ್ನು ಒದಗಿಸಿದರೆ)ʼ ಎಂದು ತಿಳಿಸಿದೆ.

ಸ್ನೇಹಿತರು, ಕುಟುಂಬ ಮತ್ತು ಸಂಬಂಧಿಕರಿಗೆ ವೈಯಕ್ತಿಕ ಬಳಕೆದಾರ ಐಡಿಯಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು IRCTC ಹೇಳಿದೆ. ವೈಯಕ್ತಿಕ ಬಳಕೆದಾರ ಐಡಿಗಳನ್ನು ಬಳಸಿ ಬುಕ್ ಮಾಡಿದ ಟಿಕೆಟ್‌ಗಳು ವೈಯಕ್ತಿಕ ಬಳಕೆಗಾಗಿ ಮಾತ್ರ ಮತ್ತು ಲಾಭಕ್ಕಾಗಿ ಮಾರಾಟ ಮಾಡಬಾರದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಈ ಟಿಕೆಟ್‌ಗಳನ್ನು ವಾಣಿಜ್ಯಿಕವಾಗಿ ಮಾರಾಟ ಮಾಡುವುದು ಕಾನೂನುಬಾಹಿರವಾಗಿದ್ದು, ರೈಲ್ವೆ ಕಾಯಿದೆ, 1989ರ ಸೆಕ್ಷನ್ 143ರ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ ಎಂದು IRCTC ಎಚ್ಚರಿಕೆ ನೀಡಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment