Fastag
ನೀವು ನಿಮ್ಮ ವಾಹನಕ್ಕಾಗಿ ಫಾಸ್ಟ್ ಟ್ಯಾಗ್(Fast tag) ಕೊಂಡಿದ್ದೀರಾ? ಅದಕ್ಕಿಂತ ಮುಖ್ಯವಾಗಿ ಕಾರಿನ ಯಾವ ಭಾಗದಲ್ಲಿ ಅದನ್ನು ಅಂಟಿಸಿದ್ದೀರಿ? ಅದನ್ನು ಕಾರಿನ ಮುಂಭಾಗದ ವಿಂಡ್ ಶೀಲ್ಡ್ (ಫ್ರಂಟ್ ಗ್ಲಾಸ್) ಮೇಲೆ ಹಚ್ಚಿದ್ದೀರಿ ತಾನೇ? ಒಮ್ಮೆ ಚೆಕ್ ಮಾಡಿಕೊಳ್ಳಿ. ಒಂದು ವೇಳೆ ನೀವು ಫ್ರಂಟ್ ವಿಂಡ್ ಶೀಲ್ಟ್ ಮೇಲೆ ಫಾಸ್ಟ್ ಟ್ಯಾಗ್ ಅಂಟಿಸಿರದೇ ಇದ್ದರೆ ಹೆದ್ದಾರಿಯ ಟೋಲ್ ಪ್ಲಾಜಾಗಳಲ್ಲಿ ನಿಮ್ಮಿಂದ ಡಬಲ್ ಶುಲ್ಕವನ್ನು ವಸೂಲಿ ಮಾಡಲಾಗುತ್ತದೆ.
ಹೌದು, ಜೂ. 19ರಿಂದಲೇ ಈ ಹೊಸ ನಿಯಮ ಜಾರಿಗೆ ಬಂದಿದೆ. ಈ ಕುರಿತಂತೆ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ(Union Ministry of Transport and Highways) ಪ್ರಕಟಣೆ ನೀಡಿದೆ. ಅಷ್ಟೇ ಅಲ್ಲ, ಮುಂದಿನ ವಿಂಡ್ ಶೀಲ್ಡ್(Windshield) ಮೇಲೆ ಫಾಸ್ಟ್ ಟ್ಯಾಗ್ ಸ್ಟಿಕ್ಕರ್(Fast Tag Sticker) ಅಂಟಿಸದ ವಾಹನಗಳ ನಂಬರ್ ಪ್ಲೇಟ್(Number plate) ಸ್ಕ್ಯಾನ್ ಮಾಡಿ, ಅಂಥ ವಾಹನಗಳ ಮೇಲೆ ನಿಗಾ ಇರಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಫಾಸ್ಟ್ ಟ್ಯಾಗ್ ಸ್ಟಿಕರ್ ಗಳನ್ನು ವಾಹನಗಳ ಮೇಲ್ಮೈ ಮೇಲೆ ಎಲ್ಲಿ ಬೇಕಾದಲ್ಲಿ ಅಂಟಿಸುವುದರಿಂದ ಬೇಗನೇ ಸ್ಕ್ಯಾನ್ ಆಗದೇ ಪ್ಲಾಜಾಗಳಲ್ಲಿ ಇತರ ವಾಹನಗಳು ಕ್ಯೂ ನಿಂತು ವಿಳಂಬವಾಗುತ್ತವೆ. ಇಂಥ ಕಿರಿಕಿರಿಯನ್ನು ತಪ್ಪಿಸಲು ಕೇಂದ್ರ ಸಾರಿಗೆ ಇಲಾಖೆಯು ಫಾಸ್ಟ್ ಟ್ಯಾಗ್ ಸ್ಟಿಕರ್ ಗಳನ್ನು ವಾಹನಗಳ ಮುಂದಿನ ವಿಂಡ್ ಶೀಲ್ಡ್ (ಫ್ಲಂಟ್ ಗ್ಲಾಸ್) ಮೇಲೆ ಅಂಟಿಸಬೇಕು. ಇಲ್ಲವಾದರೆ, ಟೋಲ್ ನಲ್ಲಿ ದುಪ್ಪಟ್ಟು ಶುಲ್ಕ ತೆರಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಈ ಸುದ್ದಿ ಓದಿ:- SBI Bank Recruitment: SBI ಬ್ಯಾಂಕ್ ನೇಮಕಾತಿ 1040 ಹುದ್ದೆಗೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 80,000/-
ಸಚಿವಾಲಯವು ವಿವರಿಸಿರುವಂತೆ, ಮುಂದಿನ ಗಾಜಿನ ಮೇಲೆ ಬೇಕೆಂತಲೇ ಫಾಸ್ಟಾಗ್ ಅಂಟಿಸದಿರುವುದು ಟೋಲ್ ಪ್ಲಾಜಾಗಳಲ್ಲಿ ಅನಗತ್ಯ ವಿಳಂಬಕ್ಕೆ ಕಾರಣವಾಗುತ್ತದೆ. ಅದರಿಂದ ಸಹಜವಾಗಿ ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ತೊಂದರೆ ಉಂಟುಮಾಡುತ್ತದೆ. ಅಂಥ ತಪ್ಪುಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ಹೊಸ ನಿಯಮ ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ, ಭಾರತೀಯ ಹೆದ್ದಾರಿಗಳೊಂದಿಗೆ ಕೈ ಜೋಡಿಸಿರುವ ಅನೇಕ ಶುಲ್ಕ ವಸೂಲಾತಿ ಕೇಂದ್ರಗಳಿಗೆ ಈ ಕುರಿತಂತೆ ಸೂಚನೆ ನೀಡಲಾಗಿದೆ. ಯಾವ ವಾಹನಗಳ ಮುಂದಿನ ವಿಂಡ್ ಶೀಲ್ಡ್ ಮೇಲೆ ಫಾಸ್ಟ್ ಟ್ಯಾಗ್ ಅಂಟಿಸಿಲ್ಲವೋ ಅಂಥ ವಾಹನಗಳಿಂದ ದುಪ್ಪಟ್ಟು ದಂಡ ವಸೂಲಿಗೆ ಸೂಚಿಸಲಾಗಿದೆ. ಟೋಲ್ ಪ್ಲಾಜಾ ಗಳತ್ತ ಬರುವ ವಾಹನಗಳಿಗೆ ಈ ಕುರಿತಂತೆ ಸೂಚನಾ ಫಲಕಗಳನ್ನು ಟೋಲ್ ಪ್ಲಾಜಾ ಗಳ ಬಳಿ ಅಳವಡಿಸಬೇಕು ಎಂದೂ ಸಹ ಸೂಚಿಸಲಾಗಿದೆ. ಈ ಕುರಿತಂತೆ, ಸಾರಿಗೆ ಸಚಿವಾಲಯ ಪ್ರಕಟಣೆ ನೀಡಿದೆ.
ಟೋಲ್ ಪ್ಲಾಜಾ ಗಳಲ್ಲಿ ಶೇ.5ರಷ್ಟು ಶುಲ್ಕ ಹೆಚ್ಚಳ
ಕಳೆದ ತಿಂಗಳು ಎಲ್ಲಾ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿತ್ತು. ಈ ಆದೇಶವು ಜೂ. 3ರಿಂದಜಾರಿಗೆ ಬಂದಿದ್ದು, ಎಲ್ಲಾ ಟೋಲ್ ಶುಲ್ಕಗಳನ್ನು ಶೇ. 5ರಷ್ಟು ಹೆಚ್ಚಿಸಿತ್ತು. ಸಾಮಾನ್ಯವಾಗಿ ಟೋಲ್ ಶುಲ್ಕ ಪ್ರತಿ ವರ್ಷ ಹೆಚ್ಚಾಗುತ್ತದೆ. ಇದರಂತೆ ಏಪ್ರಿಲ್ 1ರಿಂದ ಪರಿಷ್ಕೃತ ಶುಲ್ಕ ಜಾರಿಯಾಗಬೇಕಿತ್ತು, ಆದರೆ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶುಲ್ಕ ಪರಿಷ್ಕರಣೆ ಆಗಿರಲಿಲ್ಲ. ಹಾಗಾಗಿ, ಜೂನ್ ನಿಂದ ಶುಲ್ಕ ಹೆಚ್ಚಿಸಲಾಗಿತ್ತು.
ಈ ಸುದ್ದಿ ಓದಿ:- GI Wire Fencing: ಕೃಷಿ ಹೊಂಡ ಇರುವ ಎಲ್ಲಾ ರೈತರಿಗೂ ಸರ್ಕಾರದಿಂದ ಗುಡ್ ನ್ಯೂಸ್.!
ರಾಷ್ಟ್ರೀಯ ಹೆದ್ದಾರಿ ಜಾಲದಲ್ಲಿ ಅಂದಾಜು 855 ಟೋಲ್ ಪ್ಲಾಜಾಗಳಿವೆ. ಇವುಗಳಲ್ಲಿ, 2008ರ ರಾಷ್ಟ್ರೀಯ ಹೆದ್ದಾರಿ ಶುಲ್ಕ ಕಾಯ್ದೆ ಅನುಗುಣವಾಗಿ ಶುಲ್ಕ ವಿಧಿಸಲಾಗುತ್ತದೆ. ಅಂತಾರಾಜ್ಯ ಎಕ್ಸ್ಪ್ರೆಸ್ವೇಗಳು, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಬಳಸುವ ಚಾಲಕರು ಪಾವತಿಸಬೇಕಾದ ಶುಲ್ಕಗಳು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಡಿಯಲ್ಲಿ ಬರುತ್ತವೆ. ಅಂದಹಾಗೆ, ದ್ವಿಚಕ್ರ ವಾಹನ ಸವಾರರಿಗೆ ಟೋಲ್ ಶುಲ್ಕದಿಂದ ರಿಯಾಯಿತಿ ನೀಡಲಾಗಿದೆ.
ಫಾಸ್ಟ್ಯಾಗ್ ಕೊಡುವ ಬ್ಯಾಂಕ್ಗಳಿಗೂ ಸೂಚನೆ
ಬ್ಯಾಂಕುಗಳು ಅಥವಾ ಏಜೆನ್ಸಿಗಳು ಫಾಸ್ಟ್ಯಾಗ್ ವಿತರಿಸುವ ಸಂದರ್ಭದಲ್ಲೇ ಅದನ್ನು ನಿಗದಿತ ವಾಹನದ ಮುಂಭಾಗದ ವಿಂಡ್ಶೀಲ್ಡ್ ಮೇಲೆ ಅಂಟಿಸಲಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೆದ್ದಾರಿ ಸಚಿವಾಲಯ ಆದೇಶಿಸಿದೆ.