New Rules For PGs: ಪಿಜಿಗಳಿಗೆ ಹೊಸ ರೂಲ್ಸ್.! ಈ ನಿಯಮಗಳ ಪಾಲನೆ ಕಡ್ಡಾಯ.!

New Rules for PGs

ಮಹಿಳಾ ಪಿಜಿ(Women’s PG)ಗೆ ನುಗ್ಗಿ ಯುವತಿಯ ಬ-ರ್ಬ-ರ ಹತ್ಯೆ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಬೆಂಗಳೂರು ಪೊಲೀಸರು(‌Bangalore Police) ಪಿಜಿಗಳಿಗೆ ಹೊಸ ನಿಯಮ (new rule for PGs) ಹಾಗೂ ಮಾರ್ಗಸೂಚಿ ಜಾರಿಗೊಳಿಸಿದ್ದಾರೆ. ಕೋರಮಂಗಲದ ಮಹಿಳಾ ಪಿಜಿಯಲ್ಲಿ ನಡೆದ ಯುವತಿ ಕೊಲೆ(Murder) ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು ನಗರದ ಪಿಜಿಗಳಿಗೆ ಒಟ್ಟು 13 ಅಂಶಗಳ ಕಠಿ.ಣ ಮಾರ್ಗಸೂಚಿಗಳನ್ನು ನೀಡಿದ್ದಾರೆ.

ಕೋರಮಂಗಲದ ಪಿಜಿಗೆ ಹಂ.ತಕ ಸಲೀಸಾಗಿ ನುಗ್ಗಿ ಖಾಸಗಿ ಕಂಪನಿ ಉದ್ಯೋಗಿ ಕೃತಿ ಕುಮಾರಿಯನ್ನು ಭೀಕರವಾಗಿ ಕೊ.ಲೆ ಮಾಡಿದ ದೃಶ್ಯ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಆ ದೃಶ್ಯ ಎಂಥವರನ್ನು ಭೀತಿಗೊಳಿಸುವಂತಿತ್ತು. ಹೊರಗಿನವರು ಸಲೀಸಾಗಿ ಮಹಿಳಾ ಪಿಜಿಯೊಳಗೆ ಬರಲು ಸಾಧ್ಯವೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು ಆ ಪಿಜಿಯಲ್ಲಿನ ಯುವತಿಯರ ಭದ್ರತೆಯ ಪ್ರಶ್ನೆ ಎದುರಾಗಿತ್ತು.

WhatsApp Group Join Now
Telegram Group Join Now

ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಗರದಲ್ಲಿರುವ ಎಲ್ಲಾ ಪಿಜಿಗಳ ಡೆಟಾ ಸಂಗ್ರಹಿಸುವಂತೆ ನಗರದ ಎಲ್ಲಾ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪ್ರತಿಯೊಂದು ಪಿಜಿಯ ರಕ್ಷಣೆಯ ಬಗ್ಗೆ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ.

ಈ ಸುದ್ದಿ ಓದಿ:- HSRP ನಂಬರ್ ಪ್ಲೇಟ್ ಅಳವಡಿಸದೆ ಇರುವವರಿಗೆ ಸರ್ಕಾರದಿಂದ ಕೊನೆ ಚಾನ್ಸ್.!

ನಗರದಲ್ಲಿರುವ ಎಲ್ಲಾ ಪಿಜಿಗಳನ್ನು ಗುರುತಿಸುವುದರ ಜೊತೆಗೆ ಪಿಜಿಯಲ್ಲಿ ಪಾಲಿಸಬೇಕಾದ ಹಾಗೂ ಪೊಲೀಸರು ಕ್ರಮ ಕೈಗೊಳ್ಳಬೇಕಾದ ಬಗ್ಗೆ ಒಟ್ಟು 13 ಅಂಶಗಳ ಮಾರ್ಗಸೂಚಿಯನ್ನು ಆಯುಕ್ತರು ನೀಡಿದ್ದಾರೆ. ಮಾರ್ಗ ಸೂಚಿಯಲ್ಲಿ, ಪೊಲೀಸರು ಪಿಜಿಗಳ ಟ್ರೇಡ್ ಲೈಸೆನ್ಸ್‌ಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಅನಧಿಕೃತವೆಂದು ಕಂಡು ಬಂದರೆ ಬಿಬಿಎಂಪಿಗೆ ಮಾಹಿತಿ ನೀಡಬೇಕು.

ಪಿಜಿಗಳಲ್ಲಿ ಅಕ್ರಮ, ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೆ ಮಾಹಿತಿ ಕಲೆ ಹಾಕಬೇಕು. ಬಿಬಿಎಂಪಿ ಅಧಿಕಾರಿಗಳ ಜೊತೆ ಸೇರಿ ಪ್ರಕರಣ ದಾಖಲಿಸಬೇಕು. ತಿಂಗಳಿಗೊಮೆ ಆಯಾ ಠಾಣಾ ವ್ಯಾಪ್ತಿಗಳಲ್ಲಿನ ಪಿಜಿಗಳನ್ನು ಪರಿಶೀಲನೆ ಮಾಡಬೇಕು. ಪಿಜಿಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನಚ್ಚರಿಕೆ ವಹಿಸಬೇಕು ಎಂಬ ಮಾರ್ಗಸೂಚಿಗಳನ್ನು ನೀಡಲಾಗಿದೆ.

ನಗರದಲ್ಲಿವೆ ಅನಧಿಕೃತ ಪೀಜಿಗಳು: ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಕಾರ್ಯಾಚರಣೆಗಿಳಿದಿರುವ ಪೊಲೀಸರು ನಗರದಲ್ಲಿ ಅನಧಿಕೃತ ಪಿಜಿಗಳು ಹೆಚ್ಚಾಗಿರುವ ಮಾಹಿತಿ ಕಲೆಹಾಕಿದ್ದಾರೆ. ಇಂತಹ ಪಿಜಿಗಳು ಬಿಬಿಎಂಪಿಯ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹುಟ್ಟಿಕೊಂಡಿರುವ ಪಿಜಿಗಳಾಗಿರುವುದು ಪೊಲೀಸರರ ತನಿಖೆಯಿಂದ ಗೊತ್ತಾಗಿದ್ದು.

ಈ ಸಂಬಂಧ ಬಿಬಿಎಂಪಿಗೆ ಮಾಹಿತಿ ನೀಡಲು ಪೊಲೀಸರು ಮುಂದಾಗಿದ್ದಾರೆ. ಒಟ್ಟಾರೆ ನಗರ ಪೊಲೀಸ್ ಆಯುಕ್ತರ ಈ ಹೊಸ ನಿಯಮಗಳು ಮುಂದಿನ ದಿನಗಳಲ್ಲಿ ಯಾವ ರೀತಿ ಜಾರಿಯಾಗಲಿದೆ. ಎಷ್ಟರ ಮಟ್ಟಿಗೆ ಪಿಜಿಗಳಲ್ಲಿ ಸುರಕ್ಷತಾ ಕ್ರಮ ಅನುಸರಿಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಈ ಸುದ್ದಿ ಓದಿ:- Canara Bank: ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ.! SSLC ಪಾಸ್ ಆದವರು ಅರ್ಜಿ ಸಲ್ಲಿಸಿ.!

ನಗರದ ಎಲ್ಲಾ ಪಿಜಿಗಳ ಡೇಟಾ ಸಂಗ್ರಹಕ್ಕೆ, ಭದ್ರತೆ ಬಗ್ಗೆ ಮಾಹಿತಿ ಪಡೆಯುವಂತೆ ಆಯಾ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಗಳಿಗೆ ಕಮೀಷ್ನರ್ ಬಿ.ದಯಾನಂದ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಾ ಪಿಜಿ ಗುರುತಿಸಲು ಹಾಗೂ ಭದ್ರತೆ ಬಗ್ಗೆ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಇದೇ ವೇಳೆ ಪಿಜಿಗಳು ಪಾಲಿಸಬೇಕಾದ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಅದರ ಲಿಸ್ಟ್‌ ಇಂತಿವೆ.

– ಪಿಜಿಗಳಲ್ಲಿ ಸಿಸಿಟಿವಿ ಅಳವಡಿಕೆ
– ಪಿಜಿಗಳಲ್ಲಿ ಸೆಕ್ಯೂರಿಟಿ ಗಾರ್ಡ್ ನಿಯೋಜನೆ
– ಪಿಜಿಯಲ್ಲಿ ವಾಸ ಮಾಡುವವರ ಡೇಟಾ ಕಲೆಕ್ಟ್ ಅಗತ್ಯ
– ಪಿಜಿಯಲ್ಲಿರುವವರು ಕೆವೈಸಿ ಮಾಡಿಸಬೇಕು
– ಹೊಸ ಸಾಫ್ಟ್ ವೇರ್ ನಲ್ಲಿ ಎಲ್ಲಾ ಮಾಹಿತಿ ಅಪ್ ಲೋಡ್ ಆಗಬೇಕು
– ಮಾಲೀಕರು ಸುರಕ್ಷತಾ ಕ್ರಮ ಕೈಗೊಳ್ಳಬೇಕು
– ಪಿಜಿ ಆಹಾರದ ಗುಣಮಟ್ಟದ ಬಗ್ಗೆ ಮಾಲೀಕರು ಗಮನಹರಿಸಬೇಕು
– ಪಿಜಿ ಟ್ರೇಡ್ ಲೈಸನ್ಸ್ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಬೇಕು
– ಅನಧಿಕೃತ ಪಿಜಿಗಳ ಬಗ್ಗೆ ಬಿಬಿಎಂಪಿಗೆ ಮಾಹಿತಿ
– ಅಕ್ರಮ, ಅ.ನೈತಿ.ಕ ಚಟುವಟಿಗಳು ನಡೆಯುತ್ತಿದ್ದರೆ ಮಾಹಿತಿ ನೀಡಬೇಕು
– ತಿಂಗಳಿಗೊಮ್ಮೆ ಠಾಣಾ ವ್ಯಾಪ್ತಿಯಲ್ಲಿ ಪಿಜಿಗಳ ಪರಿಶೀಲನೆ
– ಬಿಬಿಎಂಪಿ ಅಧಿಕಾರಿಗಳ ಜೊತೆ ಕೇಸ್ ದಾಖಲಿಸಬೇಕು
– ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment