Rent House: ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಹೊಸ ರೂಲ್ಸ್.! ಬಾಡಿಗೆದಾರರಿಗೆ ಮತ್ತು ಮಾಲೀಕರಿಗೆ ಹೊಸ ನಿಯಮ.!

Rent House:

ಹರಿಯುವ ನೀರು ಒಂದೇ ಕಡೆಯಲ್ಲಿ ನಿಲ್ಲೋಕಾಗಲ್ಲ, ಹುಟ್ಟಿದ ಮನುಷ್ಯ ಒಂದೇ ಊರಲ್ಲಿ ಬಾಳೋಕಾಗಲ್ಲ ಈ ಹಾಡಿನ ಸಾಲಿನಂತೆ ಒಂದು ಹಂತಕ್ಕೆ ಬೆಳೆದ ನಂತರಷಪ್ರತಿಯೊಬ್ಬರಿಗೂ ತಾವು ಹುಟ್ಟಿದ ಊರನ್ನು ಬೆಳೆದ ಮನೆಯನ್ನು ಬಿಡುವುದು ಅನಿವಾರ್ಯವಾಗಿರುತ್ತದೆ. ಅದರಲ್ಲೂ ಈಗಿನ ಕಾಲದಲ್ಲಿ ಪಟ್ಟಣ ಪ್ರದೇಶಕ್ಕೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಉದ್ಯೋಗವನ್ನು ಅರಸಿ ಮತ್ತು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೀಗೆ ಇನ್ನಿತರ ಕಾರಣಗಳಿಗಾಗಿ ಮನೆಮಕ್ಕಳು ತಮ್ಮ ಮನೆಯನ್ನು ಬಿಟ್ಟು ಬೆಂಗಳೂರಿನಂತಹ ಮಹಾ ನಗರವನ್ನು ಬದುಕಲು ಆರಿಸಿಕೊಳ್ಳುತ್ತಾರೆ. ಆದರೆ ಇಲ್ಲಿಗೆ ಬಂದ ನಂತರ ಎದುರಾಗುವ ಮೊದಲನೇ ಸವಾಲೇ ಉಳಿತುಕೊಳ್ಳುವ ವ್ಯವಸ್ಥೆ ಬಗ್ಗೆ, ಇದಕ್ಕಾಗಿ ಕೆಳ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಬಾಡಿಗೆ ಮನೆಗಳೇ ಆಧಾರವಾಗಿರುತ್ತದೆ.

WhatsApp Group Join Now
Telegram Group Join Now

ಈ ರೀತಿ ಬಾಡಿಗೆಗೆ ಹೋಗುವಾಗ ಮನೆ ಮಾಲೀಕರು ಕೆಲವು ನಿಯಮಗಳನ್ನು ಸೇರಿ ಬಾಡಿಗೆ ಕರಾರು ಒಪ್ಪಂದ ಮಾಡಿಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ಮನೆ ನೀಡಿರುವ ಮಾಲೀಕರಿಗೆ ಮಾತ್ರವಲ್ಲದೇ ಮನೆಯನ್ನು ಬಾಡಿಗೆಗೆ ಪಡೆದುಕೊಳ್ಳುವ ಬಾಡಿಗೆದಾರರಿಗೂ ಕೂಡ ಆ ಮನೆಯ ಮೇಲೆ ಕೆಲವು ಹಕ್ಕುಗಳು ಇರುತ್ತವೆ.

ಈ ಸುದ್ದಿ ಓದಿ:- Bhu Aadhaar:- ಜಮೀನು ಇರುವ ರೈತರು ʻಭೂ ಆಧಾರ್‌’ ಮಾಡಿಸುವುದು ಕಡ್ಡಾಯ.!

ಇವುಗಳನ್ನು ಸರಿಯಾಗಿ ತಿಳಿದುಕೊಳ್ಳದೆ ಇದ್ದಲ್ಲಿ ಮತ್ತು ಇದನ್ನು ನಿಮ್ಮ ಬಾಡಿಗೆ ಕರಾರು ಒಪ್ಪಂದದಲ್ಲಿ ಸೇರಿಸದೆ ಇದ್ದಲ್ಲಿ ಮುಂದೆ ನಿಮಗೆ ಮನೆ ಮಾಲೀಕರಿಂದ ಕಿರಿಕಿರಿ ಉಂಟಾಗಬಹುದು. ಹಾಗಾಗಿ ಇಂದು ಈ ಲೇಖನದಲ್ಲಿ ಈ ರೀತಿ ನಗರ ಪ್ರದೇಶಗಳಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಏನೆಲ್ಲಾ ರೈಟ್ಸ್ ಇರುತ್ತದೆ ಎನ್ನುವುದನ್ನು ತಿಳಿಸಿಕೊಡುತ್ತಿದ್ದೇವೆ.

1. ಮನೆ ಬಾಡಿಗೆಗೆ ಪಡೆಯುವಾಗ ಆ ಮನೆಗೆ ಅಡ್ವಾನ್ಸ್ ಹಾಗೂ ಪ್ರತಿ ತಿಂಗಳ ಬಾಡಿಗೆ ಎಷ್ಟು ಎಂದು ನಿರ್ಧಾರ ಆಗಿರುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ನೀರು ಹಾಗೂ ವಿದ್ಯುತ್ ಶುಲ್ಕ ಸೇರಿ ನಿಗದಿಯಾಗಿರುತ್ತದೆ. ಕೆಲವು ಕಡೆ ಇದನ್ನು ಹೊರತುಪಡಿಸಿ ನಿಗದಿಯಾಗಿರುತ್ತದೆ. ಆದರೆ ಪ್ರತಿ ತಿಂಗಳು ತಪ್ಪದೇ ಇದನ್ನು ಪಾವತಿಸಬೇಕೆಂಬ ಕಂಡೀಶನ್ ಕೂಡ ಇರುತ್ತದೆ.

ಇದೆಲ್ಲವನ್ನು ಕೂಡ ಬಾಡಿಗೆ ಕರಾರು ಒಪ್ಪಂದದಲ್ಲಿ ಸೇರಿಸಿರಬೇಕು ಮತ್ತು ನಿಯಮದಂತೆ ನೀವು ಪ್ರತಿ ತಿಂಗಳು ಇವುಗಳನ್ನು ಪಾವತಿ ಮಾಡಿಕೊಂಡು ಹೋಗಬೇಕು ಯಾವುದೋ ಅನಿವಾರ್ಯ ಸಂದರ್ಭದಲ್ಲಿ ಒಂದು ತಿಂಗಳು ಇದು ತಡವಾದರೆ ನಿಮ್ಮ ಮೂಲಭೂತ ಅವಶ್ಯಕತೆಗಳಾದ ವಿದ್ಯುತ್ ಹಾಗೂ ನೀರಿನ ಸಂಪರ್ಕವನ್ನು ಕಡಿತಗೊಳಿಸುವಂತಿಲ್ಲ ಎಂದು ಟಿನೆಂಟ್ ರೈಟ್ಸ್ ಆಕ್ಟ್ ಹೇಳುತ್ತದೆ.

ಈ ಸುದ್ದಿ ಓದಿ:- Lecturer Recruitment: ಸರ್ಕಾರಿ PU ಕಾಲೇಜ್ ಲೆಕ್ಚರರ್ ಹುದ್ದೆಗಳ ಬೃಹತ್ ನೇಮಕಾತಿ. ವೇತನ:- 43,280/- ಆಸಕ್ತರು ಅರ್ಜಿ ಸಲ್ಲಿಸಿ.!

2. ಕೆಲವೊಂದು ಕಡೆ ಬಾಡಿಗೆದಾರ ಇರುವ ಕಡೆ ಮಾಲೀಕರ ಮನೆ ಕೂಡ ಇರುತ್ತದೆ. ಹೀಗೆಂದ ಮಾತ್ರಕ್ಕೆ ಅವರು ನಿಮ್ಮ ಮನೆಗೆ ಯಾರು ಬರುತ್ತಾರೆ, ಯಾರು ಹೋಗುತ್ತಾರೆ, ಎಷ್ಟು ಹೊತ್ತಿಗೆ ನೀವು ಮನೆಗೆ ಬರುತ್ತೀರಿ. ಇದೆಲ್ಲವನ್ನು ಪ್ರಶ್ನಿಸುವ ಅಧಿಕಾರ ಅವರಿಗೆ ಇರುವುದಿಲ್ಲ ಹಾಗೂ ನಿಮ್ಮ ಮನೆಗೆ ಬಂದು ಪದೇ ಪದೇ ಅವರು ಮನೆಯನ್ನು ಪರಿಶೀಲನೆ ಮಾಡುವಂತ್ತಿಲ್ಲ. ಇದು ಗೌಪ್ಯತೆ ಗೆ ಸಂಬಂಧಪಟ್ಟ ವಿಚಾರ ಆಗಿರುತ್ತದೆ ಹಾಗಾಗಿ ಒಂದು ವೇಳೆ ಅವರು ನಿಮ್ಮ ಮನೆಗೆ ಬರಲೇಬೇಕೆಂದರೆ 24 ಗಂಟೆ ಮೊದಲೇ ನಿಮಗೆ ತಿಳಿಸಬೇಕು.

3. ಬಾಡಿಗೆ ಒಪ್ಪಂದದ ನಿಯಮಗಳು ಒಪ್ಪಂದ ಮಾಡಿಕೊಂಡ ವ್ಯಕ್ತಿಗೆ ಮಾತ್ರವಲ್ಲದೆ ಆ ಮನೆಯಲ್ಲಿ ವಾಸ ಮಾಡಿರುವ ಬಾಡಿಗೆದಾರನ ಕುಟುಂಬಕ್ಕೂ ಕೂಡ ಅನ್ವಯವಾಗುತ್ತದೆ. ಮನೆ ಬಾಡಿಗೆ ಏರಿಕೆ ವಿಚಾರದಲ್ಲೂ ಕೂಡ ಆಯಾ ಪ್ರದೇಶಕ್ಕೆ ಅನುಗುಣವಾಗಿ ಬಾಡಿಗೆ ಹೆಚ್ಚಿಸಲಾಗುತ್ತದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಪ್ರತಿ ವರ್ಷ 5%-10% ಬಾಡಿಗೆ ಹೆಚ್ಚಿಸುತ್ತಾರೆ. ಇದಕ್ಕೂ ಮೀರಿ ಹೆಚ್ಚಿಗೆ ಮಾಡಿದರೆ ನೀವು ಪ್ರಶ್ನಿಸಬಹುದು ಮತ್ತು ಬಾಡಿಗೆ ಏರಿಕೆ ವಿಚಾರವನ್ನು ಮೂರು ತಿಂಗಳ ಮೊದಲೇ ತಿಳಿಸಬೇಕು ಎಂಬುದು ನಿಮಗೆ ಗೊತ್ತಿರಲಿ

4. ಒಂದು ವೇಳೆ ನೀವು 11 ತಿಂಗಳಿಗೂ ಮೀರಿ ಅದೇ ಬಾಡಿಗೆ ಮನೆಯಲ್ಲಿ ವಾಸ ಮಾಡುವುದಾದರೆ ನಿಮ್ಮ ಬಾಡಿಗೆ ಕರಾರು ಒಪ್ಪಂದ ಪತ್ರವನ್ನು ನೋಂದಣಿ ಮಾಡಬೇಕಾಗುತ್ತದೆ ಅಥವಾ 11 ತಿಂಗಳ ಮೊದಲೇ ಖಾಲಿ ಮಾಡುವ ಮನಸ್ಸಿದ್ದರೆ ಮೂರು ತಿಂಗಳ ಒಳಗೆ ಮಾಲೀಕರಿಗೆ ತಿಳಿಸಬೇಕು ಅದೇ ರೀತಿ ಮಾಲೀಕರು ಕೂಡ ಮೂರು ತಿಂಗಳ ಒಳಗೆ ತಿಳಿಸಿ ನಿಮ್ಮನ್ನು ಮನೆ ಖಾಲಿ ಮಾಡಿಸಬೇಕಾಗುತ್ತದೆ. ಈ ನಿಯಮಗಳನ್ನು ಮೀರಿ ತೊಂದರೆಯಾದಾಗ ನೀವು ಕಾನೂನು ನೆರವು ಪಡೆಯಬಹುದು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment