Rent House
ಪ್ರಸ್ತುತ ದಿನಗಳಲ್ಲಿ ಹಣ(money) ಸಂಪಾದನೆಗಾಗಿ ಜನರು ಪಟ್ಟಣ(town) ಸೇರುತ್ತಿದ್ದಾರೆ. ಆದ್ದರಿಂದ, ಪಟ್ಟಣದಲ್ಲಿರುವ ಜನ ಸಂಖ್ಯೆಯಲ್ಲಿ ದಿನೇ ದಿನೇ ಏರಿಕೆಯಾಗಿತ್ತಿದೆ. ನಗರ ಸೇರುವ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರು ಬಾಡಿಗೆ ಮನೆ(Rented house)ಯನ್ನೇ ಆಶ್ರಯಿಸಿಕೊಂಡಿರುತ್ತಾರೆ. ಒಂದು ಮನೆ ಹುಡುಕಿ ವಾಸ ಮಾಡುತ್ತ ದಿನ ಕಳೆಯುತ್ತಿರುತ್ತಾರೆ. ಆದರೆ, ಕೆಲವೊಂದು ಸಂದರ್ಭದಲ್ಲಿ ಮನೆ ಮಾಲೀಕರ ಕಿರಿ ಕಿರಿ ವಿಪರೀತವಾಗುತ್ತದೆ. ಇದರಿಂದ ಜನರಿಗೂ ತೊಂದರೆಯಾಗುತ್ತದೆ.
ಮನೆ ಮಾಲೀಕರು ಮೆಂಟೇನೆನ್ಸ್ ಚಾರ್ಜಸ್ ತುಂಬಾ ಹೆಚ್ಚು ಮಾಡಿರೋದಲ್ಲದೇ, ಯಾವ್ಯಾವುದೋ ಹೊತ್ತಿಗೆ ಮನೆಗೆ ಬಂದು ಮನೆಗೆ ಯಾರು ಬರುತ್ತಿದ್ದಾರೆ ಹೋಗುತ್ತಿದ್ದಾರೆ ಎಂಬುದನ್ನೆಲ್ಲ ನೋಡುವುದಕ್ಕೆ ಶುರು ಮಾಡುವ ಉದಾಹರಣೆಗಳು ಇವೆ. ನಿಮಗೆ ಟೆನನ್ಸಿ ರೈಟ್ಸ್ ಬಗ್ಗೆ ಅಥವಾ ಬಾಡಿಗೆದಾರರಾಗಿ ನಿಮಗೆ ಇರುವ ಹಕ್ಕುಗಳ ಬಗ್ಗೆ ತಿಳಿವಳಿಕೆ ಇರಬೇಕು. ಹಾಗಾದ್ರೆ, ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಬಾಡಿಗೆದಾರರ ಹಕ್ಕುಗಳು ಏನು? ಎನ್ನುವುದನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಇಂದಿನ ಈ ಲೇಖನದಲ್ಲಿ ತಿಳಿಯೋಣ ಬನ್ನಿ.!
ಈ ಸುದ್ದಿ ಓದಿ:- Gas: ಕೇಂದ್ರ ಸರ್ಕಾರದಿಂದ ʻLPGʼ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಿಹಿಸುದ್ದಿ ʻಇ-ಕೆವೈಸಿʼ ಕುರಿತು ಇಲ್ಲಿದೆ ಮುಖ್ಯ ಮಾಹಿತಿ.!
ಮೊದಲನೆಯದಾಗಿ ನೀವು ಬಾಡಿಗೆ ಕೊಡುವಲ್ಲಿ ತಡ ಮಾಡಿದರೆ ವಿದ್ಯುತ್ ಮತ್ತು ನೀರು ಸಂಪರ್ಕ ನಿಲ್ಲಿಸುವ ಹಾಗೆ ಇಲ್ಲ. ಸಮಯಕ್ಕೆ ಸರಿಯಾಗಿ ಬಾಡಿಗೆ ಕಟ್ಟುವುದು ನಿಮ್ಮ ಜವಾಬ್ದಾರಿ. ಆದರೆ ಒಂದು ವೇಳೆ ಸಮಯಕ್ಕೆ ಸರಿಯಾಗಿ ಬಾಡಿಗೆ ಕಟ್ಟದೆ ಇದ್ದರೆ, ಅಗತ್ಯ ಸೇವೆಗಳಿಗೆ ಅಡ್ಡಿ ಮಾಡುವಂತಿಲ್ಲ.
ಈ ಅಗತ್ಯ ಸೇವೆಗಳಲ್ಲಿ ನಿಮ್ಮ ಗೌಪ್ಯತೆ ಹಕ್ಕು ಕೂಡ ಸೇರಿರುತ್ತದೆ ಹೀಗಾಗಿ ಎಷ್ಟು ಹೊತ್ತಿಗೆ ನಿಮ್ಮ ಮನೆಗೆ ಬಂದು ಬಾಗಿಲು ಬಡಿಯಬಹುದು ಅಂತ ನಿಮ್ಮ ಮನೆ ಮಾಲೀಕರು ಭಾವಿಸಿದ್ದರೆ ಅದು ತಪ್ಪಾಗುತ್ತದೆ. ಮನೆಗೆ ಬರುವುದಕ್ಕಿಂತಲೂ 24 ಗಂಟೆ ಮೊದಲು ನಿಮಗೆ ಅವರು ಮಾಹಿತಿ ನೀಡಬೇಕು ಎನ್ನುವ ನಿಯಮ ಸಹ ಇದೆ.
ಅಷ್ಟೇ ಅಲ್ಲ ನೀವು ಟೆನನ್ಸಿ ಹಕ್ಕುಗಳನ್ನು ಹೊಂದಿರುವ ಜೊತೆಗೆ ನಿಮ್ಮ ಜೊತೆ ವಾಸಿಸುತ್ತಿರುವ ನಿಮ್ಮ ಕುಟುಂಬದ ಸದಸ್ಯರಿಗೂ ಈ ಹಕ್ಕುಗಳು ಇರುತ್ತವೆ. ಬಾಡಿಗೆದಾರ ಮರಣ ಹೊಂದಿದರೆ ಅವರ ಮಗ, ಮಗಳು ಅಥವಾ ಸಂಗಾತಿ ಅಥವಾ ಜತೆಗೆ ಪಾಲಕರಿಗೂ ಇದೇ ಹಕ್ಕುಗಳು ಇರುತ್ತವೆ.
ಈ ಸುದ್ದಿ ಓದಿ:- Karnataka Bank: ಕರ್ನಾಟಕ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ.! ವೇತನ 93,960/- ಆಸಕ್ತರು ಅರ್ಜಿ ಸಲ್ಲಿಸಿ.!
ಈಜುಕೊಳ, ಹೆಲ್ತ್ ಕ್ಲಬ್ ಇತ್ಯಾದಿ ಎಲ್ಲರಿಗೂ ಬಳಕೆಗೆ ಅವಕಾಶವಿರುವ ಸ್ಥಳಗಳು ಇದ್ದಾಗ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಬಾಡಿಗೆದಾರರು ಮೊದಲೇ ಬಾಡಿಗೆ ನೀತಿಗಳನ್ನು ನೋಡಿಕೊಳ್ಳಬೇಕು ಮತ್ತು ಬಾಡಿಗೆ ಒಪ್ಪಂದದಲ್ಲಿ ಅಗತ್ಯ ನಿಯಮಗಳನ್ನು ಸೇರಿಸುವಂತೆ ಸೂಚಿಸಬೇಕು. ಅವಿವಾಹಿತರಿಗೆ ಬಾಡಿಗೆ ಕೊಡದೆ ಇರುವುದು, ಸೊಸೈಟಿ ಸೌಲಭ್ಯಗಳನ್ನು ಬಳಸುವುದು ಇತ್ಯಾದಿಗೆ ಸಂಬಂಧಪಟ್ಟ ನಿಯಮಗಳಿಗೆ ಇದು ವಿಶೇಷವಾಗಿ ಅನ್ವಯಿಸುತ್ತದೆ.
ಒಂದು ವರ್ಷಕ್ಕೂ ಹೆಚ್ಚು ಕಾಲದವರೆಗೆ ಬಾಡಿಗೆಗೆ ವಾಸಿಸುತ್ತೀರಿ ಎಂದಾದರೆ ಬಾಡಿಗೆ ಕರಾರನ್ನು ನೋಂದಣಿ ಮಾಡಿಕೊಳ್ಳಬೇಕು. ಅನಗತ್ಯ ಮೇಂಟೆನೆನ್ಸ್ ಚಾರ್ಜ್ ಮತ್ತು ಸೊಸೈಟಿ ಫೀ ನಿಮಗೂ ವಿಧಿಸಿದ್ದರೆ, ನೀವು ಅದನ್ನು ಪ್ರತಿರೋಧಿಸಬೇಕು. ನಿಮ್ಮ ಒಟ್ಟು ಬಾಡಿಗೆಗೆ ಹೋಲಿಸಿದರೆ 50% ಕ್ಕಿಂತ ಹೆಚ್ಚು ಹಣವನ್ನು ಮೇಂಟೆನೆನ್ಸ್‌ಗೆ ಅಂತ ವಿಧಿಸಿದ್ದರೆ ಅದು ಅಕ್ರಮ.
ಬಾಡಿಗೆದಾರರಿಂದ ಮೇಂಟೆನೆನ್ಸ್‌ಗೆ ಅಂತ ಪಡೆದ ಹಣದಿಂದ ಮಾಲೀಕರು ಲಾಭ ಮಾಡಿಕೊಳ್ಳುವಂತಿಲ್ಲ. ಯಾವುದೇ ಶುಲ್ಕವನ್ನು ಕಟ್ಟಿ ಎಂದು ಮಾಲೀಕರು ಬಾಡಿಗೆದಾರರಿಗೆ ಹೇಳುವಂತಿಲ್ಲ. ಮಾಲೀಕರು ಕಟ್ಟುವ ಫೀಗಳನ್ನು ಬಾಡಿಗೆದಾರರೂ ಕಟ್ಟಬೇಕು. ಬಾಡಿಗೆದಾರರು ಕಟ್ಟಲಿ ಅಥವಾ ಮಾಲೀಕರು ಕಟ್ಟಲಿ, ಅವೆರಡರ ಮಧ್ಯೆ ತಾರತಮ್ಯ ಇರಬಾರದು.
ಈ ಸುದ್ದಿ ಓದಿ:- Loan: ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎಂದು ತಿಳಿಯಲು ನಿಮ್ಮ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ.!
ಮಾಲೀಕರು ಬಾಡಿಗೆ ಹೆಚ್ಚಳ ಮಾಡಬೇಕು ಎಂದಾದರೆ, ಬಾಡಿಗೆದಾರರಿಗೆ 3 ತಿಂಗಳು ಮೊದಲೇ ಸೂಚನೆ ನೀಡಿದ ನಂತರವೇ ಏರಿಕೆ ಮಾಡಬಹುದು. ಒಂದೊಂದು ರಾಜ್ಯದಲ್ಲಿ ಬಾಡಿಗೆ ಏರಿಕೆ ವಿಷಯದಲ್ಲಿ ವ್ಯತ್ಯಾಸವಿದ್ದು, ಆ ರಾಜ್ಯದ ನೀತಿಗೆ ಅನುಗುಣವಾಗಿ ಅವರು ಬಾಡಿಗೆ ದರ ಏರಿಕೆ ಮಾಡಬೇಕು.
ಮಹಾರಾಷ್ಟ್ರದಲ್ಲಿ ಒಂದು ವರ್ಷದಲ್ಲಿ 24% ಕ್ಕಿಂತ ಹೆಚ್ಚು ಬಾಡಿಗೆ ಏರಿಕೆಯನ್ನು ಮಾಡುವಂತಿಲ್ಲ. ದೆಹಲಿಯಲ್ಲಿ, ಪ್ರತಿ 3 ವರ್ಷಗಳಿಗೊಮ್ಮೆ 10% ಬಾಡಿಗೆ ದರ ಏರಿಕೆ ಮಾಡಬಹುದು. ಆದರೆ, RWA ವಿಷಯದಲ್ಲಿ ಬಾಡಿಗೆದಾರರಿಗೆ ಕಡಿಮೆ ಆಯ್ಕೆಗಳಿವೆ. RWA (ರೆಸಿಡೆಂಟ್ ವೆಲ್ಪೇರ್ ಅಸೋಸಿಯೇಷನ್) ಯಲ್ಲಿ ಮಾಲೀಕರ ಮೂಲಕವೇ ಬಾಡಿಗೆದಾರರನ್ನು ಸಂಪರ್ಕಿಸಬೇಕಿರುತ್ತದೆ. ಇಲ್ಲಿ ಬಾಡಿಗೆದಾರರಿಗೆ ಹಿಂಸೆ ಮಾಡಿದರೆ, ಮಾಲೀಕರಿಗೂ ಹಿಂಸೆಯಾಗುವುದರಿಂದ, ಮಾಲೀಕರು ಕ್ರಮ ತೆಗೆದುಕೊಳ್ಳುತ್ತಾರೆ.
ಈ ಸುದ್ದಿ ಓದಿ:- Today Gold Rate: ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ಚಿನ್ನದ ಬೆಲೆ 2,200 ಇಳಿಕೆ ಇವತ್ತಿನ ರೇಟ್ ಎಷ್ಟಿದೆ ನೋಡಿ.!
ಒಟ್ಟಾರೆಯಾಗಿ, ನಿಮ್ಮ RWA ನಿಮ್ಮನ್ನು ಮನಬಂದಂತೆ ನಡೆಸಿಕೊಳ್ಳುವ ಹಾಗಿಲ್ಲ, ವಿಪರೀತ ಶುಲ್ಕವನ್ನೂ ವಿಧಿಸುವ ಹಾಗಿಲ್ಲ. ಬೆಂಗಳೂರಿನಲ್ಲಿ ವಾರ್ಷಿಕವಾಗಿ ಮನೆ ಮಾಲೀಕರು ಶೇ. 5 ರಿಂದ ಶೇ. 10 ರಷ್ಟು ಬಾಡಿಗೆ ಏರಿಕೆ ಮಾಡುತ್ತಿದ್ದಾರೆ. ವಾರ್ಷಿಕ ಮನೆ ಬಾಡಿಗೆ ಏರಿಕೆ ಬಗ್ಗೆ ರೆಂಟಲ್ ಅಗ್ರಿಮೇಂಟ್ ನಲ್ಲಿಯೇ ಉಲ್ಲೇಖ ಮಾಡಿಕೊಂಡಿರುವುದು ಒಳಿತು. ಹೀಗಾಗಿ, ಬಾಡಿಗೆದಾರರಾಗಿ ನಿಮ್ಮ ಹಕ್ಕುಗಳ ಬಗ್ಗೆ ನಿಮಗೆ ತಿಳಿದಿರಲಿ.