Note Ban: 200 ರೂಪಾಯಿ ನೋಟ್ ಬ್ಯಾನ್.?

Note ban

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India – RBI) 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು(2,000 value note) ಭಾಗಶಃ ಹಿಂಪಡೆದುಕೊಂಡಿದೆ. ಎಲ್ಲಾ 2 ಸಾವಿರ ಮುಖಬೆಲೆ ನೋಟು ತಲುಪುವ ಮೊದಲೇ ಇದೀಗ 200 ರೂ. ಮುಖಬೆಲೆ ನೋಟು ಹಿಂಪಡೆಯುವ ಕೆಲಸವನ್ನು ಆರ್‌ಬಿಐ ಮಾಡುತ್ತಿದೆ.

ಕೆಲ ವರದಿಗಳ ಪ್ರಕಾರ, ಇದುವರೆಗೆ ಆರ್‌ಬಿಐ(RBI) ಮಾರುಕಟ್ಟೆ(market)ಯಿಂದ 200 ರೂ. ಮುಖಬೆಲೆಯ ಅಂದಾಜು 137 ಕೋಟಿ ಮೌಲ್ಯದ ಹಣ (money) ಹಿಂಪಡೆದುಕೊಂಡಿದೆ. ಕಳೆದ ಆರು ತಿಂಗಳಿನಿಂದಲೇ ಆರ್‌ಬಿಐ ಹಣ ಹಿಂಪಡೆಯುವ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ವರದಿಯಾಗಿದೆ.

WhatsApp Group Join Now
Telegram Group Join Now

ಆರ್‌ಬಿಐ ಯಾಕೆ ಹಣವನ್ನು ಹಿಂಪಡೆದುಕೊಳ್ಳುತ್ತಿದೆ ಎಂಬುದರ ಬಗ್ಗೆ ಹಲವು ಪ್ರಶ್ನೆಗಳು ಮಾರುಕಟ್ಟೆಯಲ್ಲಿ ಹುಟ್ಟಿಕೊಂಡಿವೆ. ಈ ಬಗ್ಗೆ ಇಂದಿನ ಈ ಲೇಖನವನ್ನು ಓದಿ ತಿಳಿದುಕೊಳ್ಳಿ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 200 ರೂ. ನೋಟುಗಳನ್ನು ಹಿಂಪಡೆಯುವ ಹಿಂದಿನ ಉದ್ದೇಶ ಬೇರೆಯಾಗಿದೆ. ಆರ್‌ಬಿಐ ನೋಟ್‌ ಬ್ಯಾನ್ (Note Ban) ಮಾಡಲು ಹಣ ಹಿಂಪಡೆಯುತ್ತಿಲ್ಲ.

ಬದಲಾಗಿ ನೋಟುಗಳ ಕಳಪೆ ಸ್ಥಿತಿಯಿಂದ ವಾಪಸ್ ಪಡೆಯುತ್ತಿದೆ. ಆರ್‌ಬಿಐ ತನ್ನ ಅರ್ಧ ವಾರ್ಷಿಕ ವರದಿಯಲ್ಲಿ 200 ರೂಪಾಯಿ ನೋಟುಗಳ ಗುಣಮಟ್ಟ ಇಳಿಕೆಯಾಗಿದ್ದರ ಪರಿಣಾಮ ಒಟ್ಟು 137 ಕೋಟಿಯನ್ನು ಮಾರುಕಟ್ಟೆಯಿಂದ ಹಿಂದಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿಯನ್ನು ನೀಡಿದೆ.

ಕಳೆದ ವರ್ಷ ಭಾರತೀಯ ರಿಸರ್ವ್ ಬ್ಯಾಂಕ್ ಒಟ್ಟು 135 ಕೋಟಿ ಮೌಲ್ಯದ ನೋಟುಗಳನ್ನು ಮಾರುಕಟ್ಟೆಯಿಂದ ಹಿಂದಕ್ಕೆ ತೆಗೆದುಕೊಂಡಿತ್ತು. 200 ರೂ. ಮೌಲ್ಯದ ನೋಟುಗಳು ಹೆಚ್ಚು ಕೊಳಕು, ಹರಿದು ಡ್ಯಾಮೇಜ್ ಆಗಿವೆ.

500 ರೂಪಾಯಿ ಮೌಲ್ಯದ ನೋಟ್‌ಗಳೇ ಹೆಚ್ಚು ಹಾನಿಗೆ ಒಳಗಾಗಿವೆ. 2000 ರೂಪಾಯಿ ನೋಟ್ ಬಂದ್ ಆದ ನಂತರ ಮಾರುಕಟ್ಟೆಯಲ್ಲಿ 200 ರೂ. ನೋಟ್ ಹೆಚ್ಚು ಚಲಾವಣೆಯಾಗುತ್ತಿರುವ ಕಾರಣ ನೋಟಿನ ಕಾಗದ ಹೆಚ್ಚು ಡ್ಯಾಮೇಜ್‌ಗೆ ಒಳಗಾಗುತ್ತಿದೆ ಎಂದು ಬ್ಯಾಂಕಿಂಗ್ ತಜ್ಞರು ಹೇಳುತ್ತಾರೆ.

ಲಕ್ಷಾಧಿಪತಿ ಆಗಲು ಈ 5 ವ್ಯವಹಾರ ಆರಂಭಿಸಿ

ಕಳೆದ ವರ್ಷ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅತಿ ಹೆಚ್ಚು 500 ರೂಪಾಯಿಯ ಹರಿದ, ಗಲೀಜು ಆದ ನೋಟುಗಳನ್ನು ಹೆಚ್ಚು ಹಿಂಪಡೆದುಕೊಂಡಿತ್ತು. ಹಿಂದಿನ ಆರ್ಥಿಕ ವರ್ಷದಲ್ಲಿ 500 ರೂ. ಮುಖಬೆಲೆಯ 633 ಕೋಟಿ ಮೌಲ್ಯದ ನೋಟ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆದುಕೊಂಡಿತ್ತು.

ಚಾಲ್ತಿ ವರ್ಷದಲ್ಲಿ ಶೇ.50ರಷ್ಟು 500ರ ನೋಟ್ ಹಾಗೂ ಶೇ.110ರಷ್ಗಟು 200 ರೂ. ನೋಟ್‌ ಮಾರುಕಟ್ಟೆಯಿಂದ ಆರ್‌ಬಿಐ ಹಿಂದಕ್ಕೆ ತರಿಸಿಕೊಂಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವರದಿ ಪ್ರಕಾರ, ಹಾಳಾದ ಅಥವಾ ಹರಿದ ನೋಟುಗಳಲ್ಲಿ ದೊಡ್ಡ ಮೌಲ್ಯದ ನೋಟ್‌ಗಳು ಜೊತೆಯಲ್ಲಿ ಕಡಿಮೆ ಮೌಲ್ಯದ ಕರೆನ್ಸಿಯೂ ಸೇರಿದೆ.

5 ರೂ. ಮೌಲ್ಯದ 3.7 ಕೋಟಿ, 10 ರೂ ಮೌಲ್ಯದ 234 ಕೋಟಿ, 20 ರೂ ಮೌಲ್ಯದ 139 ಕೋಟಿ, 50 ರೂ ಮೌಲ್ಯದ 190 ಕೋಟಿ, 100 ರೂ ಮೌಲ್ಯದ 602 ಕೋಟಿ ರೂಪಾಯಿ ಹಿಂಪಡೆದುಕೊಳ್ಳಲಾಗಿದೆ.

2000 ರೂಪಾಯಿ ನೋಟುಗಳ ಅಮಾನ್ಯೀಕರಣದ ನಂತರ 200 ರೂಪಾಯಿ ನೋಟುಗಳ ಬಳಕೆ ಹೆಚ್ಚಾಗಿದೆ ಎನ್ನುತ್ತಾರೆ ಬ್ಯಾಂಕಿಂಗ್ ತಜ್ಞರು. ಈ ಕಾರಣದಿಂದಲೇ ಈ ಬಾರಿ 200 ರೂಪಾಯಿಯ ಕರೆನ್ಸಿ ಭಾರೀ ಪ್ರಮಾಣದಲ್ಲಿ ಹಾಳಾಗಿ ವಾಪಸ್ ಪಡೆದುಕೊಳ್ಳಲಾಗಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment