Note
ಪ್ರತಿಯೊಂದು ಹೊಸ ವಸ್ತುಗಳು (New things) ಒಂದಲ್ಲಾ ಒಂದು ದಿನ ಹಳೆ(old)ಯದಾಗುತ್ತವೆ. ಈ ಹಳೆಯ ವಸ್ತುಗ(Old things)ಳನ್ನು ಯಾರಿಗಾದರೂ ಕೊಟ್ಟುಬಿಡುತ್ತೇವೆ, ಹಾಳಾದ ಆಹಾರವನ್ನು ಪ್ರಾಣಿಗಳಿಗೆ ಹಾಕುತ್ತೇವೆ. ಆದರೆ, ಹಳೆಯದಾದ, ಹರಿದ ನೋಟು(Broken notes)ಗಳನ್ನು ಏನು ಮಾಡುವುದು? ಹೇಗೆ ಬದಲಾಯಿಸುವುದು? ಎಂಬುದರ ಬಗ್ಗೆ ಅನೇಕ ಮಂದಿಗೆ ತಿಳಿದಿರುವುದಿಲ್ಲ.
ಹಾಗಾಗಿ, ಇಂದಿನ ಈ ಲೇಖನದಲ್ಲಿ ಈ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ. ಕೊನೆವರೆಗೂ ಓದಿ ತಿಳಿದುಕೊಳ್ಳಿ. ದಿನನಿತ್ಯದ ವ್ಯವಹಾರ(business)ಗಳಲ್ಲಿ ಹಣ ಪಾವತಿಸುವಾಗ(Payment of money) ಕೆಲವೊಮ್ಮೆ ನೋಟುಗಳು (notes) ಹರಿಯುತ್ತವೆ. ಹಳೆಯ, ಹರಿದ, ಸ್ವಲ್ಪ ಸುಟ್ಟ ನೋಟುಗಳನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಹಾಗಾದರೆ ಏನು ಮಾಡಬೇಕು? ಎಂಬುದನ್ನು ಇನ್ನಿ ತಿಳಿಯೋಣ ಬನ್ನಿ….
ಹತ್ತು(10), ಇಪ್ಪತ್ತು ರೂಪಾಯಿ ನೋಟು (20) ಹರಿದರೆ ಪರವಾಗಿಲ್ಲ. ಆದರೆ ನೂರು (100), ಇನ್ನೂರು (200), ಐನೂರು ರೂಪಾಯಿ (500) ನೋಟುಗಳು ಹರಿದರೆ ಚಿಂತೆಯಾಗದೆ ಇರದು. ಹರಿದ ನೋಟುಗಳನ್ನು ಅಂಟಿಸಲು ಪ್ರಯತ್ನಿಸುತ್ತೇವೆ. ಆದರೆ, ಹತ್ತಿರದ ಯಾವುದೇ ಬ್ಯಾಂಕ್‌ನಲ್ಲಿ (bank) ಹಳೆಯ ನೋಟುಗಳನ್ನು ಕೊಟ್ಟು ಹೊಸ ನೋಟುಗಳನ್ನು ಪಡೆಯಬಹುದು. ರಿಸರ್ವ್ ಬ್ಯಾಂಕ್(Reserve Bank)ನ ಪ್ರಾದೇಶಿಕ ಕಚೇರಿ(Regional Office)ಗಳಲ್ಲೂ ಹಣವನ್ನು ಬದಲಾಯಿಸಬಹುದು.
ಹೌದು, ನಿಮ್ಮಲ್ಲಿ ಹರಿದ ಅಥವಾ ಏನಾದರು ಬರೆದಿರುವ ನೋಟುಗಳು ಇದ್ದರೆ, ಅದಕ್ಕೆ ಮೌಲ್ಯವೇ ಇಲ್ಲ ಎಂದು ಆತಂಕ ಪಡಬೇಕಾಗಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಹೊಸ ನಿಯಮದ ಪ್ರಕಾರ ಹರಿದ ಅಥವಾ ಚಲಾವಣೆಗೆ ಯೋಗ್ಯವಾಗಿಲ್ಲದ ನೋಟುಗಳನ್ನು ನೀವು ಸಮೀಪದ ಕೇಂದ್ರ ಬ್ಯಾಂಕ್‌ನ ಕಚೇರಿಗೆ ತೆರಳಿ ಬದಲಾವಣೆ ಮಾಡಿಸಿಕೊಳ್ಳಬಹುದು.
ಬದಲಾಯಿಸಬಹುದಾದ ನೋಟುಗಳು
ಹಳೆಯದಾದ, ಹರಿದ, ಬಣ್ಣ ಮಾಸಿದ ನೋಟುಗಳನ್ನು ಬದಲಾಯಿಸಬಹುದು. ಆದರೆ ನೋಟಿನಲ್ಲಿರುವ ಸಂಖ್ಯೆಗಳು ಸ್ಪಷ್ಟವಾಗಿರಬೇಕು. ಹರಿದಿದ್ದರೂ, ಮುಖ ನೋಟು ಇರಬೇಕು. ಎರಡಕ್ಕಿಂತ ಹೆಚ್ಚು ತುಂಡಾಗಿದ್ದರೂ, ಎಲ್ಲಾ ತುಂಡುಗಳು ಇದ್ದರೆ ಬದಲಾಯಿಸಬಹುದು. ಸ್ವಲ್ಪ ಸುಟ್ಟ ನೋಟುಗಳನ್ನೂ ಬದಲಾಯಿಸಬಹುದು. ಆದರೆ ತುಂಬಾ ಸುಟ್ಟು ಹೋಗಿದ್ದರೆ ಬದಲಾಯಿಸಲು ಸಾಧ್ಯವಿಲ್ಲ.
ಬದಲಾಯಿಸಲಾಗದ ನೋಟುಗಳು
PAY/PAID ಅಥವಾ REJECT ಮುದ್ರೆ ಇರುವ ನೋಟುಗಳನ್ನು ಬದಲಾಯಿಸಲಾಗುವುದಿಲ್ಲ. ಪೀಸ್ ಪೀಸ್ ಆದ ನೋಟುಗಳನ್ನು ಬ್ಯಾಂಕ್‌ಗಳು ಸ್ವೀಕರಿಸುವುದಿಲ್ಲ. ಸಂಖ್ಯೆಗಳು ಅಳಿಸಿಹೋಗಿದ್ದರೆ, ಬಣ್ಣ ಮಾಸಿ ಹೋಗಿದ್ದರೆ ನೋಟುಗಳನ್ನು ತಿರಸ್ಕರಿಸಲಾಗುತ್ತದೆ. ನೋಟುಗಳ ಮೇಲೆ ಏನನ್ನೂ ಬರೆಯಬಾರದು.
ಯಾವುದೇ ಬ್ಯಾಂಕ್‌ನಲ್ಲಿ ಹಾನಿಗೊಳಗಾದ ನೋಟುಗಳನ್ನು ಬದಲಾಯಿಸಬಹುದು. ಯಾವುದೇ ಫಾರ್ಮ್ ಭರ್ತಿ ಮಾಡಬೇಕಾಗಿಲ್ಲ, ಯಾವುದೇ ಶುಲ್ಕವಿಲ್ಲ. 5000 ರೂ. ಗಿಂತ ಹೆಚ್ಚಿನ ಮೊತ್ತದ ನೋಟುಗಳನ್ನು ಬದಲಾಯಿಸಲು ಕರೆನ್ಸಿ ಚೆಸ್ಟ್ ಶಾಖೆಗೆ ಹೋಗಬೇಕು. 5000 ರೂ. ಗಿಂತ ಕಡಿಮೆ ಮೊತ್ತದ 5 ನೋಟುಗಳನ್ನು ಯಾವುದೇ ಬ್ಯಾಂಕ್‌ನಲ್ಲಿ ಬದಲಾಯಿಸಬಹುದು.
ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳ ಕರೆನ್ಸಿ ಚೆಸ್ಟ್ ಶಾಖೆಗಳು ಸೇರಿದಂತೆ ಭಾರತದ ಯಾವುದೇ ಬ್ಯಾಂಕ್ ಶಾಖೆಯಲ್ಲಿ ನೀವು ಹಾನಿಗೊಳಗಾದ ಕರೆನ್ಸಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು.
ಹರಿದ ನೋಟು ಬದಲಾವಣೆ ಮಾಡುವುದು ಹೇಗೆ?
* ಹರಿದ ನೋಟನ್ನು ಬದಲಾವಣೆ ಮಾಡಲು ಅಥವಾ ನಿಮ್ಮ ಖಾತೆಗೆ ಜಮೆ ಮಾಡಲು ನೀವು ಸ್ಥಳೀಯ ಕೇಂದ್ರ ಬ್ಯಾಂಕ್‌ಗೆ ಭೇಟಿ ನೀಡಬೇಕು.
* ‘Triple Lock Receptacle’ (TLR) ಬಾಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿಯನ್ನು ಉಲ್ಲೇಖಿಸಬೇಕು
* ಮೊತ್ತವನ್ನು ಡೆಪಾಸಿಟ್ ಮಾಡುವುದಾದರೆ, ಖಾತೆದಾರರ ಹೆಸರು, ವಿಳಾಸ, ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ನೋಟಿನ ಮಾಹಿತಿ ಉಲ್ಲೇಖಿಸಿರಬೇಕು.
* ನೋಟುಗಳನ್ನು ಕವರ್ ಮೂಲಕ ನೀಡಬೇಕು.