NSDC Recruitment
ಕೌಶಲ್ಯಯುತ ಭಾರತೀಯರಿಗೆ(Indians) ಪ್ರಪಂಚದಾದ್ಯಂತ ಅವಕಾಶಗಳು ತೆರೆದಿವೆ. ಅದಕ್ಕೆ ಪೂರಕವಾಗಿ ಈಗ ಎಸ್‌ಎಸ್‌ಎಲ್‌ಸಿ(SSLC) ಕನಿಷ್ಠ ಪಾಸಾದವರಿಗೆ ಬರೋಬ್ಬರಿ 5000 ಹುದ್ದೆ(Job)ಗಳ ಅವಕಾಶಗಳಿದ್ದು, ಈ ಹುದ್ದೆಗಳಿಗೆ ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೋರೇಷನ್(National Skill Development Corporation) ಅರ್ಜಿ ಆಹ್ವಾನಿಸಿದೆ.
ಈ ಸುದ್ದಿ ಓದಿ:- Railway Jobs : ಭಾರತೀಯ ರೈಲ್ವೆ ಇಲಾಖೆಯಲ್ಲಿ 11,250 ಟಿಕೆಟ್ ಕಲೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಅಂದಹಾಗೆ, ಈ ಉದ್ಯೋಗಾವಕಾಶ(job opportunity) ಭಾರತ(India)ದಲ್ಲಿ ಇಲ್ಲ ಅನ್ನೋದು ಬಿಟ್ರೆ ಇನ್ನೆಲ್ಲಾ ಅನುಕೂಲಗಳು ಹೆಚ್ಚಾಗೆ ಇವೆ. ಈ ಹುದ್ದೆಗಳು ಯಾವುವು, ಅರ್ಹತೆ ಏನು, ಅರ್ಜಿ ಹಾಕುವುದು ಹೇಗೆ ಎಂಬೆಲ್ಲ ಡೀಟೇಲ್ಸ್ ಅನ್ನು ಕೆಳಗಿನಂತೆ ತಿಳಿಯೋಣ ಬನ್ನಿ…
– ಹುದ್ದೆ ಹೆಸರು : ಗೃಹ ಆಧಾರಿತ ಆರೈಕೆದಾರರು (Home Based Caregiver)
– ಒಟ್ಟು ಹುದ್ದೆಗಳ ಸಂಖ್ಯೆ : 5000
– ಉದ್ಯೋಗ ಸ್ಥಳ : ಇಸ್ರೇಲ್
– ತಿಂಗಳ ವೇತನ : 1,30,000 ರೂ.ದಿಂದ ಪ್ರಾರಂಭ
ಅರ್ಹತೆಗಳು
– ಗಂಡು, ಹೆಣ್ಣು ಯಾರಾದರು ಅರ್ಜಿ ಸಲ್ಲಿಸಬಹುದು.
– ಕನಿಷ್ಠ ಎಸ್‌ಎಸ್‌ಎಲ್‌ಸಿ / ತತ್ಸಮಾನ ವಿದ್ಯಾರ್ಹತೆ ಪಾಸ್ ಮಾಡಿರಬೇಕು.
– ಕನಿಷ್ಠ 25-45 ವರ್ಷ ವಯೋಮಾನದವರಾಗಿರಬೇಕು.
– ಪಾಸ್ ಪೋರ್ಟ್ ಮಾನ್ಯತೆ ಕನಿಷ್ಠ 3 ವರ್ಷಗಳು.
– ಎತ್ತರ /ತೂಕ : ಕನಿಷ್ಠ 5 ಅಡಿ / 45 ಕೆಜಿ ಅಥವಾ ಹೆಚ್ಚು.
– ಇಂಗ್ಲಿಷ್ ಮಾತನಾಡಲು ಬರಬೇಕು, ಗುಡ್ ಅಥವಾ ಬೇಸಿಕ್ ಇಂಗ್ಲಿಷ್ ಇದ್ದರೆ ಸಾಕು.
ಅನುಭವ ಹಾಗೂ ಇತರೆ ಅರ್ಹತೆಗಳು
– ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 990 ಗಂಟೆಗಳ ಆರೈಕೆಯ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದನ್ನು ಪ್ರದರ್ಶಿಸುವ, ಮಾನ್ಯತೆ ಪಡೆದ ಅಥವಾ ಸಂಬಂಧಿತ ಭಾರತೀಯ ಅಧಿಕಾರಿಗಳಿಂದ ಮೇಲ್ವಿಚಾರಣೆಗೊಳಪಟ್ಟ ಆರೈಕೆಯ ಸೇವೆಗಳನ್ನು ಒದಗಿಸುವಲ್ಲಿ ಅರ್ಹತೆ ಮತ್ತು ಸಮರ್ಥ ಭಾರತೀಯ ಅಧಿಕಾರಿಗಳಿಂದ ನೀಡಲಾದ ಪ್ರಮಾಣಪತ್ರವನ್ನು ಹೊಂದಿರಬೇಕು.
– ಅಥವಾ ಸಂಬಂಧಿತ ಭಾರತೀಯ ಅಧಿಕಾರಿಗಳಿಂದ ಮಾನ್ಯತೆ ಪಡೆದ ಮತ್ತು ಮಾನ್ಯತೆ ಪಡೆದ ಭಾರತೀಯ ತರಬೇತಿ ಪೂರೈಕೆದಾರರಿಂದ ಒದಗಿಸಲಾದ ನರ್ಸಿಂಗ್, ಫಿಸಿಯೋಥೆರಪಿ, ನರ್ಸ್ ಅಸಿಸ್ಟಂಟ್ ಅಥವಾ ಸೂಲಗಿತ್ತಿಯಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ಡಿಪ್ಲೊಮ ಹೊಂದಿರಬೇಕು.
GDA / ANM / GNM / BSc Nursing / Post BSc Nursing.
ಇತರೆ ಸೂಚನೆಗಳು:-
– ಅಭ್ಯರ್ಥಿಯು ಈ ಹಿಂದೆ ಇಸ್ರೇಲ್‌ನಲ್ಲಿ ಎಂದಿಗೂ ಕೆಲಸ ಮಾಡಿರಬಾರದು. ಪ್ರಸ್ತುತ ಕೆಲಸ ಮಾಡುವ ಅಥವಾ ವಾಸವಿರುವ ಸಂಗಾತಿ, ಪೋಷಕರು ಅಥವಾ ಮಕ್ಕಳನ್ನು ಹೊಂದಿರಬಾರದು.
– ಆಯ್ಕೆ ಮತ್ತು ನಿರಾಕರಣೆಯ ನಿರ್ಧಾರಗಳನ್ನು ವಿಶೇಷವಾಗಿ ಇಸ್ರೇಲಿ ಉದ್ಯೋಗದಾತರು ತೆಗೆದುಕೊಳ್ಳುತ್ತಾರೆ.
– ಎನ್‌ಎಸ್‌ಡಿಸಿ ಆರೈಕೆದಾರರ ಕಾರ್ಮಿಕರ ಉದ್ಯೋಗದಾತ ಆಗಿರುವುದಿಲ್ಲ. ಎನ್‌ಎಸ್‌ಡಿಸಿ ಕೇವಲ ಸಂಯೋಜಿತವಾಗಿರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:-
– ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಎನ್‌ಎಸ್‌ಡಿಸಿ ವೆಬ್ ಲಿಂಕ್ https://www.nsdcjobx.com/homejob_view?id=40864 ಗೆ ಭೇಟಿ ನೀಡಿ.
– Home Based Caregiver ಹುದ್ದೆ ಕುರಿತ ಡೀಟೇಲ್ಸ್, ಅರ್ಜಿಗೆ ಲಿಂಕ್ ಇರುವ ವೆಬ್ ಪೇಜ್ ತೆರೆಯುತ್ತದೆ.
– ನೀವು ಮತ್ತೊಮ್ಮೆ ಮಾಹಿತಿಗಳನ್ನು ಓದಿಕೊಳ್ಳಬಹುದು.
– ಅರ್ಜಿ ಸಲ್ಲಿಸಲು ಬಯಸಿದ್ದಲ್ಲಿ ‘Apply’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ನಂತರ ಮತ್ತೊಂದು ವೆಬ್‌ಪೇಜ್ ತೆರೆಯುತ್ತದೆ.
– ಇಲ್ಲಿ ‘New To NSDC JobX? Register Here’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಕೇಳಲಾದ ಡೀಟೇಲ್ಸ್ ನೀಡಿ ರಿಜಿಸ್ಟ್ರೇಷನ್ ಪಡೆದುಕೊಳ್ಳಿ.
ನಂತರ ಅರ್ಜಿ ಸಲ್ಲಿಸಿ.
ಈ ಸುದ್ದಿ ಓದಿ:- Indian Oil: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಉದ್ಯೋಗಾವಕಾಶ.!
ಈ ಒಂದು ಉದ್ಯೋಗ ಅವಕಾಶವೂ ವಿದೇಶದಲ್ಲಿದೆ ಎಂಬ ವಿಷಯವನ್ನು ಬಿಟ್ಟರೆ 10ನೇ ತರಗತಿ ಪಾಸಾದವರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು, ಆಯ್ಕೆಯಾದವರಿಗೆ ಬಹಳಷ್ಟು ಅನುಕೂಲಗಳು ಸಿಗಲಿವೆ.