P.M ಕಿಸಾನ್ ಯೋಜನೆ ಈ ರೈತರಿಗೆ 2,000 ಬದಲಾಗಿ 4,000 ಸಿಗಲಿದೆ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಈ ರೀತಿ ಚೆಕ್ ಮಾಡಿ.!

 

ದೇಶದಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿಯವರ (Narendra Modi) ಯವರ ಮೂರನೇ ಆಡಳಿತದ ವರ್ಷನ್ ಆರಂಭಗೊಂಡಿದೆ. ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ (Parliment Election) ಮತ್ತೊಮ್ಮೆ ಜನರ ಮತವು ಆಡಳಿತ ರೂಢಿ ಪಕ್ಷಕ್ಕೆ ದೊರಕಿದ್ದು NDA ಬಳಗದ ಬೆಂಬಲದಿಂದ ಮೋದಿಯವರು ಪ್ರಧಾನಿಯಾಗಿ ಹ್ಯಾಟ್ರಿಕ್ ದಾಖಲೆ ಬರೆದಿದ್ದಾರೆ.

WhatsApp Group Join Now
Telegram Group Join Now

ಈ ಸಂಭ್ರಮದ ನಡುವೆ ರಾಜ್ಯದ ರೈತರಿಗೂ ಕೂಡ ಖುಷಿಯಾಗುವಂತಹ ಮತ್ತೊಂದು ಸಂಗತಿ ಇದೆ. ಅದೇನೆಂದರೆ ಕೇಂದ್ರ ಸರ್ಕಾರದಿಂದ ಜಾರಿಯಾಗಿರುವ ಅನೇಕ ಕಲ್ಯಾಣ ಪ್ರಯೋಜನಗಳಲ್ಲಿ ಒಂದಾದ ರೈತರಿಗಾಗಿಯೇ ರೂಪಿಸಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pradhana Mantri Kisan Samman Nidhi) ಯೋಜನೆಯ 17ನೇ ಕಂತಿನ ಹಣ ಬಿಡುಗಡೆಯ ಸಮಯ ಬಂದಿದೆ. ಈ ಕುರಿತಾದ ಈವರೆಗಿನ ಅಪ್ಡೇಟ್ ಗಳು ಹೀಗಿವೆ.

ಎಲ್ಲರಿಗೂ ತಿಳಿದಿರುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2019ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಎನ್ನುವ ಯೋಜನೆಯನ್ನು ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರೈತರಿಗೂ ಕೂಡ ಸಹಾಯಧನ ನೀಡುವಂತಹ ಯೋಜನೆಯಾಗಿ ಜಾರಿಗೆ ತಂದರು. ಈ ಯೋಜನೆ ಮೂಲಕ ಒಂದು ಆರ್ಥಿಕ ವರ್ಷದಲ್ಲಿ ನಾಲ್ಕು ತಿಂಗಳ ಅಂತರದಲ್ಲಿ ಪ್ರತಿ ಬಾರಿಗೆ ರೂ. 2000 ಹಣವು ರೈತರ ಬ್ಯಾಂಕ್ ಖಾತೆಗಳಿಗೆ DBT ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ.

ಅಂತೆಯೇ ಯಶಸ್ವಿಯಾಗಿ ಇದುವರೆಗೂ ಕೂಡ ಒಟ್ಟು 16 ಕಂತುಗಳಲ್ಲಿ ದೇಶದ ಅರ್ಹ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹಣವನ್ನು ಪಡೆದಿದ್ದಾರೆ. ಈಗ 2024-25 ನೇ ಸಾಲಿನ PMKSY ಹಣ ಬಿಡುಗಡೆ ಬಗ್ಗೆ ಸರ್ಕಾರದ ಮೂಲಗಳು ಪ್ರಸ್ತಾಪಿಸಿದೆ. ಇದೇ ಜೂನ್ ತಿಂಗಳ 17ನೇ ತಾರೀಖಿನಂದು ಈ ಯೋಜನೆಯ 17ನೇ ಕಂತಿನ ಹಣವನ್ನು (17th installment) ಪ್ರಧಾನಿಗಳು ಬಿಡುಗಡೆಗೊಳಿಸಿದ್ದಾರೆ ಎನ್ನುವ ಮಾಹಿತಿಯು ಬಲವಾದ ಮೂಲಗಳಿಂದ ದೊರೆತಿದೆ.

ಇದರೊಂದಿಗೆ ಈ ಬಾರಿಯ ಹಣ ಪಡೆಯಲು ರೈತರಿಗೆ ಕೆಲ ಕಂಡಿಷನ್ ಗಳನ್ನು ವಿಧಿಸಿರುವುದಾಗಿ ಕೂಡ ತಿಳಿದು ಬಂದಿದೆ. ಪ್ರತಿ ಬಾರಿಯೂ ಕೂಡ ರೈತರಿಗೆ ಈ ಬಗ್ಗೆ ಎಚ್ಚರಿಕೆಯನ್ನು ಸಹಾ ನೀಡಲಾಗುತ್ತಿತ್ತು. ಅನರ್ಹರು ಕೂಡ ಸರ್ಕಾರಕ್ಕೆ ವಂಚಿಸಿ ಹಣ ಪಡೆಯುತ್ತಿರುವುದರಿಂದ ಈ ಕೂಡಲೇ ರೈತರು ಇ-ಕೆವೈಸಿ (e-KYC) ಅಪ್ಡೇಟ್ ಮಾಡಿಸಬೇಕು ಇಲ್ಲವಾದಲ್ಲಿ ಹಣ ಸ್ಥಗಿತಗೊಳಿಸಲಾಗುವುದು ಎನ್ನುವ ಸಂದೇಶವನ್ನು ಆರ್ಥಿಕ ಇಲಾಖೆ ನೀಡುತ್ತಲೇ ಬಂದಿದೆ ಈ ಬಾರಿಯೂ ಕೂಡ ಇದನ್ನೇ ಮರುಕಳಿಸಲಾಗಿದೆ.

ಲಕ್ಷಾಂತರ ರೈತರು ಇದೇ ಕಾರಣದಿಂದ ಕಳೆದ ಬಾರಿಯ 16ನೇ ಕಂತಿನ ಹಣದಿಂದ ವಂಚಿತರಾಗಿದ್ದಾರೆ. ಇ-ಕೆವೈಸಿ ಮಾಡಿಸದ ಕಾರಣ ಹಣ ಪಡೆಯಲಾಗದೆ ರೈತರು ಸಮಸ್ಯೆ ಪಟ್ಟಿದ್ದರೆ ಈ ಸಮಸ್ಯೆ ಪರಿಹರಿಸಿಕೊಂಡ ನಂತರ ಕಳೆದ ಬಾರಿ ತಡೆ ಹಿಡಿಯಲಾಗಿದ್ದ ಹಣವು ಸೇರಿದಂತೆ ಒಟ್ಟು ರೂ.4000 ಒಟ್ಟಿಗೆ ಜಮೆ ಮಾಡಲಾಗುವುದು ಎನ್ನುವ ಮಾಹಿತಿಯನ್ನು ಕೂಡ ಹಂಚಿಕೊಂಡಿದೆ. ಹಾಗಾಗಿ ತಪ್ಪದೆ ರೈತರು ಈ ಕೂಡಲೇ ಈಕೆವೈಸಿ ಅಪ್ಡೇಟ್ ಮಾಡಿಸಿ ಬಹಳ ಸರಳವಾದ ವಿಧಾನಗಳ ಮೂಲಕ ನೀವು ನಿಮ್ಮ ಮೊಬೈಲ್ ನಲ್ಲಿಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ತಿ ಗೊಳಿಸಬಹುದು.

ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆ ಈ ಕೆವೈಸಿ ಮಾಡುವ ವಿಧಾನ:-

* ಮೊದಲಿಗೆ https://pmkisan.gov.in/aadharekyc.aspx ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
* FORMERS CORNER ವಿಭಾಗಕ್ಕೆ ತೆರಳಿ e-KYC ಎನ್ನುವುದರ ಮೇಲೆ ಕ್ಲಿಕ್ ಮಾಡಿ.
* OTP ಅಥವಾ ಬಯೋಮೆಟ್ರಿಕ್ ನೀಡುವ ಮೂಲಕ ಎರಡು ವಿಧಾನದಲ್ಲೂ ಇ-ಕೆವೈಸಿ ಮಾಡಿಸಬಹುದು
* ಬಯೋಮೆಟ್ರಿಕ್ ಬೇಸ್ಡ್ ಇ-ಕೆವೈಸಿ ಮಾಡಿಸುವುದಾದರೆ ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್, CSC ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ಕೊಟ್ಟು ಪ್ರಕ್ರಿಯೆ ಪೂರ್ತಿಗೊಳಿಸಬಹುದು.

* OTP ಬೇಸ್ಡ್ ಇ-ಕೆವೈಸಿ ಮಾಡುವುದಾದರೆ ಇದಕ್ಕಾಗಿ ಆಪ್ಷನ್ ನೀಡಲಾಗಿರುತ್ತದೆ ಸೆಲೆಕ್ಟ್ ಮಾಡಿ. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP ಕೂಡ ನಮೂದಿಸಿ
* ನೀವು ಸರಿಯಾದ ವಿಧಾನದಲ್ಲಿ ಈ ಪ್ರಕ್ರಿಯೆ ಪೂರ್ತಿಗೊಳಿಸಿದ್ದರೆ ಇ-ಕೆವೈಸಿ ಯಶಸ್ವಿ ಆಗಿರುವುದರ ಕುರಿತು ಪಾಪ್ ಆಫ್ ಮೆಸೇಜ್ ಬರುತ್ತದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment