Pan Card: ಇನ್ಮುಂದೆ ಮಕ್ಕಳಿಗೂ ಪ್ಯಾನ್ ಕಾರ್ಡ್ ಕಡ್ಡಾಯ.!

Pan Card

ಎಲ್ಲರಿಗೂ ತಿಳಿದಿರುವಂತೆ ಪ್ಯಾನ್ ಕಾರ್ಡ್ (Pan Card) ಎನ್ನುವುದು ಹಣಕಾಸು ವಹಿವಾಟು ಮಾಡಲು ಒಂದು ಪ್ರಮುಖ ದಾಖಲೆಯಾಗಿದೆ. ಭಾರತೀಯ ಆದಾಯ ತೆರಿಗೆ ಇಲಾಖೆಯು (Income tax Department) ಪ್ರತಿಯೊಬ್ಬ ಅರ್ಹ ನಾಗರಿಕನಿಗೆ 10 ಅಲ್ಪ ನ್ಯೂಮರಿಕ್ ಸಂಖ್ಯೆಗಳಿರುವ ಈ ಗುರುತಿನ ಚೀಟಿಯನ್ನು ನೀಡುತ್ತದೆ. ಆದಾಯ ತೆರಿಗೆ ಪಾವತಿ ಮಾಡುವವರಿಗಂತೂ ಇದು ಅತ್ಯಗತ್ಯ ದಾಖಲೆಯಾಗಿದೆ.

ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಹಣಕಾಸು ವಹಿವಾಟು ನಡೆಸುವಾಗ ಪ್ಯಾನ್ ಕಾರ್ಡ್ ಕೇಳುತ್ತಾರೆ. ಹಾಗಾಗಿ 18 ವರ್ಷ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳು ಪಾನ್ ಕಾರ್ಡ್ ಅಪ್ಲೈ ಮಾಡಿ ಶಾಶ್ವತವಾದ ಪ್ಯಾನ್ ಸಂಖ್ಯೆ ಪಡೆಯುತ್ತಾರೆ. ಈಗ ಈ ಪ್ಯಾನ್ ಸಂಖ್ಯೆಗಳನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ (Pan-Aadhar link) ಮಾಡುವುದನ್ನು ಕಡ್ಡಾಯ ಕೂಡ ಮಾಡಲಾಗಿದೆ ಇದಾದ ಬಳಿಕ ಈ ಸಂಬಂಧಿತ ಮತ್ತೊಂದು ಅಪ್ಡೇಟ್ ಇದೆ.

WhatsApp Group Join Now
Telegram Group Join Now

ಅದೇನೆಂದರೆ ಇನ್ನು ಮುಂದೆ 18 ವರ್ಷ ವಯಸ್ಸಿನ ಒಳಗಿನ ಮಕ್ಕಳು ಕೂಡ ಪಾನ್ ಕಾರ್ಡ್ ಪಡೆದು ಕೊಳ್ಳಬೇಕಾಗುತ್ತದೆ. ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಕ್ಕೆ ವಯಸ್ಸಿನ ಮಿತಿಯ 18 ವರ್ಷ ಮೇಲ್ಪಟ್ಟು ಇದೆ ಹಾಗಾದರೆ ಮಕ್ಕಳು ಪಾನ್ ಕಾರ್ಡ್ ಪಡೆಯುವುದು ಹೇಗೆ ಮಕ್ಕಳಿಗೆ ಆದಾಯದ ಮೂಲವೇ ಇರುವುದಿಲ್ಲ ಆದರೂ ಈ ನಿಯಮ ಯಾಕೆ ಎನ್ನುವ ಗೊಂದಲಗಳು ಮೂಡಬಹುದು.

ಈ ಸುದ್ದಿ ಓದಿ:- Unemployed: ಕೆಲಸ ಬಿಟ್ಟವರಿಗೆ ಗುಡ್‌ ನ್ಯೂಸ್:‌ ಸರ್ಕಾರ ನಿಮಗೆ ತಿಂಗಳಿಗೆ ನೀಡಲಿದೆ 25,000 ರೂಪಾಯಿ.!

ಇದಕ್ಕೆಲ್ಲಾ ಸ್ಪಷ್ಟನೆಯನ್ನು ಈ ಲೇಖನದ ಮೂಲಕ ನೀಡುತ್ತಿದ್ದೇವೆ ಪೂರ್ತಿ ಮಾಹಿತಿಗಾಗಿ ಅಂಕಣವನ್ನು ಕೊನೆಯವರೆಗೂ ಓದಿ ಹಾಗೂ ಇದೊಂದು ಉಪಯುಕ್ತ ಮಾಹಿತಿಯಾಗಿರುವುದರಿಂದ ತಪ್ಪದೆ ಈ ವಿಚಾರವನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

18 ವರ್ಷ ಒಳಗಿನ ವಯಸ್ಸಿನ ಮಕ್ಕಳನ್ನು ಹೆಸರಿನಲ್ಲೂ ಕೂಡ ಪೋಷಕರು ಹೂಡಿಕೆ ಮಾಡುತ್ತಾರೆ ಅಥವಾ ತಮ್ಮ ಹೂಡಿಕೆಗಳಿಗೆ ತಮ್ಮ ಅಪ್ರಾಪ್ತ ಮಕ್ಕಳನ್ನು ನಾಮಿನಿ ಮಾಡುತ್ತಾರೆ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆ ಅಥವಾ ಸರ್ಕಾರದ ಇನ್ನಿತರ ಯೋಜನೆಗಳ ಖಾತೆ ತೆರೆಯುವ ಸಂದರ್ಭದಲ್ಲಿ ಮಗುವಿನ ಹೆಸರಿನಲ್ಲೂ ಕೂಡ ಪಾನ್ ಕಾರ್ಡ್ ಕೇಳಲಾಗುತ್ತದೆ.

ಈ ಎಲ್ಲಾ ಕಾರಣಗಳಿಂದ 18 ವರ್ಷ ವಯಸ್ಸಿನ ಒಳಗಿರುವ ಮಕ್ಕಳಿಗೂ ಕೂಡ ಪಾನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಆದಾಯ ತೆರಿಗೆ ವಿಭಾಗ ಸೆಕ್ಷನ್ 160 ಕೂಡ ಪಾನ್ ಕಾರ್ಡ್ ಹೊಂದಲು ಯಾವುದೇ ವಯಸ್ಸಿನ ಮಿತಿ ಇಲ್ಲ ಎಂದು ಹೇಳುತ್ತದೆ. ಹೀಗಾಗಿ ಅಪ್ರಾಪ್ತ ವಯಸ್ಸಿನ ಮಗು ಕೂಡ ಪಾನ್ ಕಾರ್ಡ್ ಹೊಂದಬಹುದಾಗಿದೆ.

ಈ ಸುದ್ದಿ ಓದಿ:- Indian Bank: ಇಂಡಿಯನ್ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ ಆಸಕ್ತರು ಅರ್ಜಿ ಆಹ್ವಾನ.! ವೇತನ: ₹ 48,480
ಅಪ್ಲೈ ಮಾಡುವುದು ಹೇಗೆ?

* 18 ವರ್ಷದ ವಯಸ್ಸಿನ ಒಳಗಿನ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ ಆದ್ದರಿಂದ ಅವರ ಹೆಸರಿನಲ್ಲಿ ಪಾನ್ ಕಾರ್ಡ್ ಪಡೆಯುವುದಕ್ಕೆ ಅವರ ತಂದೆ ತಾಯಿ ಅಥವಾ ಪೋಷಕರು ಅರ್ಜಿ ಸಲ್ಲಿಸಬೇಕು.
* ಪೋಷಕರು ಹತ್ತಿರದ ಯಾವುದೇ ಸೇವಾ ಸಿಂಧು ಕೇಂದ್ರ ಕೇಂದ್ರಗಳಿಗೆ ಭೇಟಿ ಕೊಟ್ಟು ಅಥವಾ ತಾವೇ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಟ್ಟು ಆನ್ಲೈನಲ್ಲಿ ಅರ್ಜಿ ಸಲ್ಲಿಸಬಹುದು

ಬೇಕಾಗುವ ದಾಖಲೆಗಳು:-

* ಮಗುವಿನ ಆಧಾರ್ ಕಾರ್ಡ್
* ಪೋಷಕರ ಆಧಾರ್ ಕಾರ್ಡ್
* ಖಾಯಂ ವಿಳಾಸ
* ಮೊಬೈಲ್ ಸಂಖ್ಯೆ
* ಇತ್ತೀಚಿನ ಭಾವಚಿತ್ರ ಮತ್ತು ಸಹಿ
* ಇನ್ನಿತರ ಪ್ರಮುಖ ದಾಖಲೆಗಳು

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment