Pan Card
ಪ್ಯಾನ್ ಕಾರ್ಡ್ (Pan Card) ಈಗ ಒಂದು ಪ್ರಮುಖ ದಾಖಲೆಯಾಗಿದೆ. ಇದು ಆರ್ಥಿಕ ರಂಗದಲ್ಲಿ ಬಹು ಮುಖ್ಯವಾದ ಪಾತ್ರ ನಿರ್ವಹಿಸುತ್ತದೆ. ಹಣಕಾಸಿನ ವಹಿವಾಟು ಮಾತ್ರವಲ್ಲದೇ ಕಾನೂನು ಮೂಲಕ ನಡೆಸಲ್ಪಡುವ ಚಟುವಟಿಕೆಗೂ ಪಾನ್ ಕಾರ್ಡ್ ಅವಶ್ಯಕ.
ಆದಾಯ ತೆರಿಗೆ ಇಲಾಖೆಯು (Income tax Department) ನೀಡುವ 10 ಅಲ್ಫಾ ನ್ಯೂಮರಿಕ್ ಸಂಖ್ಯೆಗಳುಳ್ಳ ಈ ಪಾನ್ ಕಾರ್ಡ್ ಎಂಬ ಪ್ರಮುಖ ದಾಖಲೆ ಬಗ್ಗೆ ಸರ್ಕಾರ ಆಗಾಗ ಹಳೆ ನಿಯಮಗಳ ಪರಿಷ್ಕರಣೆ ಮಾಡಿ ಭಾರತೀಯ ನಾಗರಿಕರಿಗೆ ಅನುಕೂಲವಾಗುವಂತಹ ಹೊಸ ನಿಯಮಗಳನ್ನು ಜಾರಿಗೊಳಿಸುತ್ತದೆ. ಸದ್ಯಕ್ಕೆ ಪಾನ್ ಕಾರ್ಡ್ ಕುರಿತು ಆಗಿರುವಂತಹ ಹೊಸ ಅಪ್ಡೇಟ್ ಗಳೇನು? ಮತ್ತು ಪಾನ್ ಕಾರ್ಡ್ ಪ್ರಾಮುಖ್ಯತೆಗಳು? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.
ಪ್ಯಾನ್ ಕಾರ್ಡ್ ಅನುಕೂಲತೆಗಳು:-
* ಭಾರತದಲ್ಲಿ ಈಗ ಬ್ಯಾಂಕಿಂಗ್ ಕ್ಷೇತ್ರದ ಪ್ರತಿ ಚಟುವಟಿಕೆಗೂ ಖಾತೆ ತೆರೆಯುವುದರಿಂದ ಹಿಡಿದು ಯಾವುದೇ ಸ್ಥಿರ ಠೇವಣಿ ಇಡುವುದಾಗಲಿ, ಅಥವಾ ಇನ್ನಿತರ ಹಣಕಾಸು ಸಂಸ್ಥೆಗಳ ಯಲ್ಲಿ ಮ್ಯೂಚುವಲ್ ಫಂಡ್, ಶೇರ್ ಮಾರ್ಕೆಟ್ ಈ ಬಗೆಯ ಹೂಡಿಕೆಗಳಿಗೂ ಪಾನ್ ಕಾರ್ಡ್ ಕಡ್ಡಾಯ ದಾಖಲೆಯಾಗಿ ಬೇಕೇ ಬೇಕು.
* ರೂ.50,000 ಕ್ಕಿಂತ ಹೆಚ್ಚಿನ ಮೊತ್ತದ ಹಣಕಾಸು ವಹಿವಾಟಿಗಳಿಗೂ ಕೂಡ ಪಾನ್ ಕಾರ್ಡ್ ಕಡ್ಡಾಯವಾಗಿದೆ
* ಯಾವುದೇ ಹಣಕಾಸು ಸಂಸ್ಥೆಯಿಂದ ಸಾಲ ಸೌಲಭ್ಯ ಪಡೆದುಕೊಳ್ಳಲು, ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಾಗಲು ಪ್ಯಾನ್ ಕಾರ್ಡ್ ದಾಖಲೆಯಾಗಿ ಕೇಳಲಾಗಾತ್ತದೆ
* ಅಂತರಾಷ್ಟ್ರೀಯ ಪ್ರಯಾಣಿಕ್ಕೆ ಸಂಬಂಧಿಸಿದ ಹಣಕಾಸು ವಹಿವಾಟನ್ನು ಟ್ರ್ಯಾಕ್ ಮಾಡಲು
* ನಿರ್ದಿಷ್ಟ ಮೌಲ್ಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಖರೀದಿ ಮಾಡಲು ಮಾರಾಟ ಮಾಡಲು
* ಅತೀ ಮುಖ್ಯವಾಗಿ ಆದಾಯ ತೆರಿಗೆ ಪಾವತಿ ಮಾಡಲು ಪಾನ್ ಕಾರ್ಡ್ ಬೇಕೇ ಬೇಕು, ಇಲ್ಲವಾದಲ್ಲಿ ಮೂಲ ತೆರಿಗೆ ದರಗಳು (TDS) ಹೆಚ್ಚಾಗುತ್ತದೆ, ದುಪ್ಪಟ್ಟು ಆಗಲೂಬಹುದು.
* ಭಾರತೀಯ ಸರ್ಕಾರದಿಂದ ಮಾನ್ಯತೆ ಪಡೆದ ದಾಖಲೆಯಾಗಿರುವುದರಿಂದ ಐಡೆಂಟಿಟಿ ಪ್ರೂಫ್ (POI) ಬಳಸಬಹುದು
ಬದಲಾವಣೆಗೊಂಡಿರುವ ನಿಯಮಗಳು:-
* ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಜೋಡಣೆ ವಿಷಯ ಕಳೆದ ವರ್ಷ ಬಹಳ ಸುದ್ದಿಯಾಗಿತ್ತು, ಶೇಕಡವಾರು ಈ ಪ್ರಕ್ರಿಯೆ ಪೂರ್ತಿಯಾಗಿದ್ದರು ಇನ್ನು ಲಕ್ಷಾಂತರ ಮಂದಿ ನಿಯಮ ಪಾಲಿಸಿಲ್ಲ. ಹಾಗಾಗಿ ಈ ಕೂಡಲೇ ರೂಂ. 1000 ದಂಡಸಹಿತ ಆಧಾರ್ – ಪಾನ್ ಕಾರ್ಡ್ ಲಿಂಕ್ (Adhar-Pan link) ನಿಷ್ಕ್ರಿಯಗೊಂಡು ನೀವುಅನೇಕ ರೀತಿಯ ನಷ್ಟ ಅನುಭವಿಸಬೇಕಾಗುತ್ತದೆ.
* ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಹಾಗೂ ನವೀಕರಿಸುವ ಶುಲ್ಕವನ್ನು ಹೆಚ್ಚಿಗೆ ಮಾಡಲಾಗಿದೆ, ಭಾರತೀಯ ಪ್ರಜೆಗಳಿಗೆ ರೂ. 91, ವಿದೇಶಿ ಪ್ರಜೆಗಳಿಗೆ ಇನ್ನು ಹೆಚ್ಚಿಗೆ ಇದೆ.
* ಭೌತಿಕ ಪ್ಯಾನ್ ಕಾರ್ಡ್ ಜೊತೆಗೆ ನೀವು ಈಗ ಇ-ಪ್ಯಾನ್ (e-pan) ಕೂಡ ಪಡೆಯಬಹುದಾಗಿದೆ. ಪ್ಯಾನ್ ಕಾರ್ಡ್ ಗೆ ಪರ್ಯಾಯವಾಗಿ ಇದನ್ನು ಬಳಸಬಹುದು, ಇದು ಕೂಡ ಎಲ್ಲೆಡೆ ಪಾನ್ ಕಾರ್ಡ್ ನಂತೆ ಮಾನ್ಯವಾಗುತ್ತದೆ.
* ಪ್ಯಾನ್ ಕಾರ್ಡ್ ಗೆ ಆಫ್ ಲೈನ್ ಮಾತ್ರವಲ್ಲ ನೇರವಾಗಿ ಆನ್ಲೈನ್ ನಲ್ಲಿಯೂ ಅರ್ಜಿ ಸಲ್ಲಿಸಬಹುದು
* ಭಾರತದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳು ಕೂಡ ಪಾನ್ ಕಾರ್ಡ್ ಪಡೆದಿರಬೇಕು
* ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಗಳನ್ನು ಹೊಂದಿರುವುದು ವಂಚನೆ ಎಂದು ಪರಿಗಣಿಸಲಾಗಿದೆ, ಹೀಗಾಗಿ ಒಂದೇ ವ್ಯಕ್ತಿ ಹೆಚ್ಚು ಪಾನ್ ಕಾರ್ಡ್ ಬಳಸುತ್ತಿದ್ದರೆ ದಂಡ ವಿಧಿಸಲಾಗುತ್ತದೆ.
* ಪ್ಯಾನ್ ಕಾರ್ಡ್ ಕಳೆದು ಹೋದರೆ ಹೊಸ ಪಾನ್ ಸಿಗುವುದಿಲ್ಲ, ಜೀವನದಲ್ಲಿ ಒಂದು ಬಾರಿಗೆ ಮಾತ್ರ ಪಾನ್ ಸಂಖ್ಯೆ ನೀಡುವುದು. ಕಳೆದು ಹೋಗಿದ್ದರೆ ಆನ್ಲೈನ್ ನಲ್ಲಿಯೇ ನಕಲಿ ಪಾನ್ ಕಾರ್ಡ್ ಗೆ ಅರ್ಜಿ ಹಾಕಬಹುದು, ಆನ್ಲೈನ್ ನಲ್ಲಿ ಕಾಲಕಾಲಕ್ಕೆ ಉಚಿತವಾಗಿ ಅರ್ಜಿ ಸ್ಟೇಟಸ್ ಕೂಡ ಚೆಕ್ ಮಾಡಬಹುದು.
* ಪಾನ್ ಕಾರ್ಡ್ ಕುರಿತ ಯಾವುದೇ ಹೆಚ್ಚಿನ ಮಾಹಿತಿಗೆ ಅಥವಾ ಅರ್ಜಿ ಸಲ್ಲಿಸಲು ಅಥವಾ ಇನ್ನಿತರ ದೂರುಗಳಿಗಾಗಿ ಸಂಪರ್ಕಿಸಬಹುದಾದ ವೆಬ್ಸೈಟ್ ವಿಳಾಸ:-
https://incometax.gov.in
https://www.incometax.gov.in