Pension
80 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಯಕರು (Senior Citizen) ನಿಮ್ಮ ಮನೆಯಲ್ಲಿದ್ದರೆ ಹಾಗೂ ಅವರು ಸರ್ಕಾರದ ಪಿಂಚಣಿ ಯೋಜನೆಯ (Pension Scheme) ಫಲಾನುಭವಿಗಳಾಗಿದ್ದರೆ ಈ ಲೇಖನದ ಮಾಹಿತಿ ನಿಮಗೆ ಬಹಳ ಮುಖ್ಯವಾಗುತ್ತದೆ ಯಾಕೆಂದರೆ ಸರ್ಕಾರದ ಪಿಂಚಣಿ ನಿಯಮವು ಬದಲಾಗಿದೆ.
ನವೆಂಬರ್ ತಿಂಗಳ ಅಂತ್ಯದೊಳಗೆ ಈ ಮೇಲೆ ತಿಳಿಸಿದ ವಯೋಮಾನದ ಹಿರಿಯ ನಾಯಕರು ಪಿಂಚಣಿ ಪ್ರಾಧಿಕಾರದ ಮುಂದೆ ತಮ್ಮ ಜೀವಂತಿಕೆಯನ್ನು ಜೀವನ್ ಪ್ರಮಾಣ ಪತ್ರ ಅಥವಾ ಲೈಫ್ ಸರ್ಟಿಫಿಕೇಟ್ (Life Certificate) ನೀಡುವ ಮೂಲಕ ಸಾಬೀತು ಪಡಿಸಿಕೊಳ್ಳಬೇಕಾಗಿದೆ.
ಇಲ್ಲದೆ ಇದ್ದಲ್ಲಿ ಡಿಸೆಂಬರ್ ತಿಂಗಳಿಂದ ಅವರ ಪಿಂಚಣಿ ಬಂದ್ ಆಗಲಿದೆ. ಈ ಸರ್ಟಿಫಿಕೇಟ್ ಪಡೆಯುವುದು ಹೇಗೆ? ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಇತ್ಯಾದಿ ಹೆಚ್ಚಿನ ವಿವರಕ್ಕಾಗಿ ಅಂಕಣವನ್ನು ಕೊನೆಯವರೆಗೂ ಓದಿ ಮತ್ತು ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಲೈಫ್ ಸರ್ಟಿಫಿಕೇಟ್ ಎನ್ನುವುದು ಐಟಿ ಕಾಯ್ದೆ ಮಾನ್ಯತೆ ಪಡೆದ ಅದರ್ ಆಧಾರಿತ ಬಯೋಮೆಟ್ರಿಕ್ ಮಾಹಿತಿಗಳನ್ನು ಒಳಗೊಂಡ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಆಗಿದೆ ಇದನ್ನು ಕೇಂದ್ರ ಸರ್ಕಾರದಿಂದ ಪಿಂಚಣಿ ಪಡೆಯುವ ಪಿಂಚಣಿದಾರರು ಪ್ರಾಧಿಕಾರಕ್ಕೆ ಪ್ರತಿ ವರ್ಷಕ್ಕೊಮ್ಮೆ ಸಲ್ಲಿಸಬೇಕೆನ್ನುವ ನಿಯಮವಿದೆ.
ಸಾಮಾನ್ಯವಾಗಿ ನವೆಂಬರ್ ತಿಂಗಳಿನಲ್ಲಿ ಆರಂಭವಾಗಿ ನವೆಂಬರ್ ಅಂತ್ಯದವರೆಗೂ ಸಲ್ಲಿಸಲು ಸರ್ಕಾರ ಕಾಲಾವಕಾಶ ನೀಡುತ್ತಿತ್ತು. ಆದರೆ ಈ ಬಾರಿ ಅಕ್ಟೋಬರ್ 1ರಿಂದಲೇ ಪಿಂಚಣಿದಾರರಿಗೆ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಅನುಮತಿ ಮಾಡಿಕೊಡಲಾಗಿದೆ ಮತ್ತು ನವೆಂಬರ್ 31 ವರೆಗೆ ಕೊನೆ ಅವಕಾಶವಿದೆ. ಒಂದು ವರ್ಷದವರೆಗೆ ಈ ಸರ್ಟಿಫಿಕೇಟ್ ಮಾನ್ಯವಾಗಿರುತ್ತದೆ.
ಲೈಫ್ ಸರ್ಟಿಫಿಕೇಟ್ ಸಲ್ಲಿಸುವ ವಿಧಾನಗಳು:-
1. ಜೀವನ್ ಪ್ರಮಾಣ ಪೋರ್ಟಲ್
2. UMANG ಮೊಬೈಲ್ ಅಪ್ಲಿಕೇಶನ್
3. ಡೋರ್ ಸ್ಟೆಪ್ ಬ್ಯಾಂಕಿಂಗ್ (DSB)
4. ಅಂಚೆ ಕಚೇರಿಯ ಬಯೋಮೆಟ್ರಿಕ್ ಸಾಧನಗಳ ಮೂಲಕ
5. ವಿಡಿಯೋ ಆಧಾರಿತ ಗ್ರಾಹಕರ ಗುರುತಿಸುವಿಕೆ ಪ್ರಕ್ರಿಯೆಯ ಮೂಲಕ
6. ಫೇಸ್ ಅಂಥೆಂಟಿಕೇಷನ್ ಮೂಲಕ
7. ನೇರವಾಗಿ ಬ್ಯಾಂಕ್ ಗಳಿಗೆ ಭೇಟಿ ನೀಡಿ ಸರ್ಟಿಫಿಕೇಟ್ ಸಲ್ಲಿಸುವ ಮೂಲಕ
ಸ್ಮಾರ್ಟ್ ಫೋನ್ ನಲ್ಲಿ ಫೇಸ್ ಅಥೆಂಟಿಕೇಶನ್ ಬಳಸಿಕೊಂಡು ಡಿಜಿಟಲ್ ಪ್ರಮಾಣ ಪತ್ರ ಪಡೆಯುವ ವಿಧಾನ:-
* 5MP ಮತ್ತು ಇಂಟರ್ನೆಟ್ ಸೌಲಭ್ಯವನ್ನು ಹೊಂದಿರುವ ಸ್ಮಾರ್ಟ್ ಫೋನ್ ನಿಮ್ಮೊಂದಿಗಿರಬೇಕು
* ಪಿಂಚಣಿ ವಿತರಣಾ ಪ್ರಾಧಿಕಾರದಿಂದ ನೀವು ಪಡೆದಿರುವ ಪಿಂಚಣಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಖಾತೆಗೆ ಜಮೆಯಾಗುತ್ತಿದ್ದರೂ ಆ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು. ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪ್ರಮಾಣ ಪತ್ರ ಪಡೆಯಲು ಆಧಾರ್ VID ಅತ್ಯಗತ್ಯ.
* ನಂತರ ಗೂಗಲ್ ಪ್ಲೇ ಸ್ಟೋರ್ ನಿಂದ AadharFaceRD ಮತ್ತು ಜೀವನ್ ಪ್ರಮಾಣ ಫೇಸ್ ಆಪ್ ಇನ್ಸ್ಟಾಲ್ ಮಾಡಿಕೊಳ್ಳಿ
* ಆಪ್ ನಲ್ಲಿ ನೀಡುವ ಸೂಚನೆಗಳಂತೆ ಆಪರೇಟರ್ ಧೃಡೀಕರಣ ನಿರ್ವಹಿಸಿ, ನಿಮ್ಮ ಫೇಸ್ ಅಥೆಂಟಿಕೇಶನ್ ಗಾಗಿ ಫೇಸ್ ಸ್ಕ್ಯಾನ್ ಕೇಳುತ್ತದೆ ಮುಂದುವರೆಯಿರಿ, ಮುಂಭಾಗದ ಕ್ಯಾಮರಾದೊಂದಿಗೆ ಫೋಟೋರಾಫ್ ಪಡೆದು ಸಲ್ಲಿಸಿ ಮತ್ತು ನಿಮ್ಮ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಸಬ್ಮಿಟ್ ಮಾಡಿ
* ಪ್ರಮಾಣ ಪತ್ರ ಡೌನ್ಲೋಡ್ ಮಾಡಲು ಸಂಬಂಧಪಟ್ಟ ಲಿಂಕ್ ನ್ನು ನಿಮ್ಮ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.