PF Account
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಭಾರತ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಭಾರತದಲ್ಲಿ ಭವಿಷ್ಯ ನಿಧಿ ನಿರ್ವಹಣೆ ಮಾಡುತ್ತಿರುವ ಸಂಸ್ಥೆಯು ಕಡ್ಡಾಯ ಭವಿಷ್ಯ ನಿಧಿ, ಮೂಲ ಪಿಂಚಣಿ ಯೋಜನೆ, ಅಂಗವಿಕಲ/ ಮರಣ ವಿಮಾ ಯೋಜನೆ ಒಳಗೊಂಡಿರುವ ವಿದ್ಯಾರ್ಥಿಗಳ ನಿವೃತ್ತಿ ಯೋಜನೆಯನ್ನು ಕೂಡ ಸಂಸ್ಥೆ ನಿರ್ವಹಿಸುತ್ತದೆ.
ಭವಿಷ್ಯ ನಿಧಿಗಳ ಸಂಗ್ರಹಣೆ ಹಾಗೂ ನಿರ್ವಹಣೆಯ ವಿಷಯದಲ್ಲಿ ಪ್ರಮುಖ ಜವಾಬ್ದಾರಿ ಸ್ಥಾನದಲ್ಲಿರುವ EPFO ಇದೀಗ ತನ್ನಲ್ಲಿ ಖಾತೆ ತೆರೆದಿರುವ ಗ್ರಾಹಕರಿಗೆಲ್ಲರಿಗೂ ದೀಪಾವಳಿ ಪ್ರಯುಕ್ತ ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಹೊಸ ಘೋಷಣೆಯೊಂದನ್ನು ನೀಡಿದೆ. ಅದರ ವಿವರ ಇಂತಿದೆ ನೋಡಿ.
ನೌಕರರ ಭವಿಷ್ಯ ನಿಧಿ ಸಂಘಟನೆಯು PF ಖಾತೆ ಹೊಂದಿರುವ ಎಲ್ಲಾ ಸದಸ್ಯರಿಗೂ ನೌಕರರ ಠೇವಣಿ ಲಿಂಕ್ ಇರುವ ಇನ್ಸೂರೆನ್ಸ್ ಯೋಜನೆಗಳನ್ನು ನೀಡುತ್ತಿದೆ, ಉದಾಹರಣೆಗೆ IDLI Scheme. ಇದೀಗ IDLI ಸ್ಕೀಮ್ ನ ವಿಮಾ ಸೌಲಭ್ಯ ವಿಸ್ತರಣೆ ಬಗ್ಗೆ ಅಪ್ಡೇಟ್ ದೊರೆತಿದೆ. ಈ ಬಗ್ಗೆ ಕೇಂದ್ರ ಸಚಿವರಾದ ಮನ್ಸುಕ್ ಮಾಂಡವಿಯರವರು ಕೂಡ ಅನುಮತಿ ನೀಡಿದ್ದಾರೆ.
ಇದರಿಂದ ಸುಮಾರು 6 ಕೋಟಿಗೂ ಹೆಚ್ಚು ಸದಸ್ಯರಿರುವ PF ಖಾತೆದಾರರಿಗೆ ಬಹಳ ದೊಡ್ಡ ಮೊತ್ತದ ಅನುಕೂಲವಾಗುತ್ತಿದೆ. EDLI ಯೋಜನೆಯ ವಿಮಾ ಮೊತ್ತವನ್ನು ಗರಿಷ್ಠ ರೂ.7 ದವರೆಗೆ ವಿಸ್ತರಣೆ ಮಾಡಿದೆ. 28 ಏಪ್ರಿಲ್, 2024 ಕ್ಕೂ ಮುನ್ನ PF ಖಾತೆ ಹೊಂದಿದ್ದ ಗ್ರಾಹಕರಿಗೆ ಈ ಯೋಜನೆ ಪ್ರಯೋಜನ ಸಿಗಲಿದೆ.
IDLI ಯೋಜನೆಯ ಬಗ್ಗೆ ಹೇಳುವುದಾದರೆ ಅನೇಕ ಕುಟುಂಬಕ್ಕೆ ಬೆಳಕಾದ ಯೋಜನೆ ಅಂತ ಹೇಳಬಹುದು. ಈ ಯೋಜನೆಯು 1976ರಲ್ಲಿ ಜಾರಿಗೆ ಬಂದಿತು. EPFO ಖಾತೆದಾರರ ಮಿಥುನದ ಸಂದರ್ಭದಲ್ಲಿ ಕುಟುಂಬಕ್ಕೆ ನೆರವಾಗಬೇಕು, ಆರ್ಥಿಕ ಬೆಂಬಲ ಸಹ ನೀಡಬೇಕು ಎನ್ನುವ ಉದ್ದೇಶದಿಂದಲೇ ಈ ಯೋಚನೆ ಸ್ಥಾಪಿಸಲಾಯಿತಂತೆ.
2018ರಲ್ಲಿ 1.5 ಲಕ್ಷ ಕನಿಷ್ಠ ವಿಮಾ ರಕ್ಷಣೆ ಅನುಕೂಲತೆ ನೀಡಲಾಯಿತು, ಆದರೆ ಆ ಬಳಿಕವೂ 2021ರ ವರೆಗೆ ಮರಣಿಸಿದ ಸದಸ್ಯರ ಕಾನೂನು ಬದ್ಧ ಉತ್ತರಾಧಿಕಾರಿಗಳೊಂದಿಗೆ ಈ ವಿಮೆ ಮೊತ್ವನ್ನು ರೂ.6 ಲಕ್ಷಕ್ಕೆ ಹೆಚ್ಚಿಸಲಾಯಿತು. ಏಪ್ರಿಲ್ 28, 2021ರ ದಿನಾಂಕದ ನಂತರ ಸರ್ಕಾರದ ಅಧಿಸೂಚನೆ ಪ್ರಕಾರವಾಗಿ ಈ ಯೋಜನೆಯ ಕನಿಷ್ಠ ಪ್ರಯೋಜನವನ್ನು ಹೆಚ್ಚಿಸಲಾಗಿದೆ.
ಆ ಪ್ರಕಾರವಾಗಿ ಇದುವರೆಗೂ ಕನಿಷ್ಠ ವಿಮಾ ಮೊತ್ತ ರೂ.2.5 ಲಕ್ಷವಿದ್ದದನ್ನು ಗರಿಷ್ಠ ವಿಮಾ ಮೊತ್ತವು ರೂ.7 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಕಾಲ ಮಿತಿಯೊಳಗೆ ಒಂದು ವೇಳೆ ಉದ್ಯೋಗಿಗಳು ತಮ್ಮ ಕೆಲಸ ಸ್ಥಳ ಬದಲಾಯಿಸಿದರು ಕೂಡ ಯಾವುದೇ ಲೋಪವಾಗದೆ ಯೋಜನೆಯ ಲಾಭಾ ಪಡೆಯುವಂತಾಗಲು ಕ್ರಮ ಕೈಗೊಳ್ಳಲಾಗಿದೆ.
ಇದಕ್ಕಾಗಿ ಒಂದೇ ಕಂಪನಿಯಲ್ಲಿ 12 ತಿಂಗಳ ಕಾಲ ಕಾರ್ಯ ನಿರ್ವಹಿಸಬೇಕು ಎಂದು ನಿಯಮವನ್ನು ಕೂಡ ಸಡಿಲಗೊಳಿಸಲಾಗಿದೆ. ಹೀಗಾಗಿ PF ಖಾತೆ ಹೊಂದಿರುವಂತಹ ಎಲ್ಲಾ ಖಾತೆದಾರರಿಗೂ ಯೋಜನೆ ಪ್ರಯೋಜನ ಸಿಗಲಿದೆ. ಈ ಬಗ್ಗೆ ಕೇಂದ್ರ ಕಾನೂನು ಸಚಿವ ಮನ್ಸುಕ್ ಮಾಂಡವೀಯರವರೇ ನಿರ್ಧರಿಸಿ ಘೋಷಣೆ ಮಾಡಿದ್ದಾರೆ. ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ಜನರೊಡನೆ ಶೇರ್ ಮಾಡುವ ಮೂಲಕ EPF ಖಾತೆ ಹೊಂದಿರುವ ಎಲ್ಲರಿಗೂ ಯೋಜನೆ ಪ್ರಯೋಜನ ಸಿಗುವಲ್ಲಿ ನೆರವಾಗಿ.